ವಿದ್ಯುತ್ ಅವಘಡ: ಲಕ್ಷಾಂತರ ರೂಪಾಯಿ ನೋಟುಗಳ ಜೊತೆ ಮನೆ ಸಂಪೂರ್ಣ ಭಸ್ಮ..!

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಜ. 19. ವಿದ್ಯುತ್ ಅವಘಡದಿಂದಾಗಿ ಲಕ್ಷಾಂತರ ರೂ. ನೋಟುಗಳು ಸುಟ್ಟು ಕರಕಲಾದ ಘಟನೆ ತಾಲೂಕಿನ ಸುಳ್ಳ ಗ್ರಾಮದ ಮನೆಯೊಂದರಲ್ಲಿ ನಡೆದಿದೆ.

ಘಟನೆಯಿಂದ ಸುಳ್ಳ ಗ್ರಾಮದ ಈಶ್ವರಪ್ಪ ವಾಲಿ ಹಾಗೂ ಶಿವಬಸಪ್ಪ ವಾಲಿ ಅವರ ಮನೆಗೆ ಬೆಂಕಿ ತಾಗಿಕೊಂಡಿದ್ದು, ಪರಿಣಾಮ ಮನೆಯಲ್ಲಿದ್ದ ಖಜಾನೆಗೂ ಬೆಂಕಿ ಹೊತ್ತಿಕೊಂಡಿದೆ. ಮನೆಯಲ್ಲಿ ಬ್ಯಾಂಕ್ ನಿಂದ ತಂದಿಟ್ಟ 100, 200 ಹಾಗೂ 500 ರೂ ಮುಖಬೆಲೆಯ ಲಕ್ಷಾಂತರ ರೂಪಾಯಿಯ ನೋಟುಗಳು ಸುಟ್ಟು ಹೋಗಿವೆ. ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top