ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ಹೊಸ ವರ್ಷದ ಮೊದಲ ದಿನವೇ ಭೀಕರ ಅಪಘಾತ ➤ ಬಸ್ – ಇನ್ನೋವಾ ಢಿಕ್ಕಿ: ಕರಾವಳಿಯ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ.01. ಹೊಸ ವರ್ಷದ ಮೊದಲ ದಿನವೇ ದಕ್ಷಿಣ ಕನ್ನಡದಲ್ಲಿ ನಡೆದ ಭೀಕರ ಅಪಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಮೂಡುಬಿದಿರೆಯಿಂದ ಬೆಳ್ತಂಗಡಿ ಮಾರ್ಗವಾಗಿ ಉಪ್ಪಿನಂಗಡಿಗೆ ತೆರಳುತ್ತಿದ್ದ ಖಾಸಗಿಬಸ್ ಹಾಗೂ ಇನ್ನೋವಾ ಕಾರಿನ ನಡುವೆ ವೇಣೂರು ಸಮೀಪದ ಗೋಳಿಯಂಗಡಿ ಎಂಬಲ್ಲಿ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಕಾರು ಚಾಲಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ನ ಅಧ್ಯಕ್ಷರಾದ ನೌಶಾದ್ ಸೂರಲ್ಪಾಡಿ ಹಾಗೂ ಕಾರು ಚಾಲಕ ಮುಷರ್ರಫ್ ಎಂದು ಗುರುತಿಸಲಾಗಿದೆ. ಹೆಚ್ಚಿನ […]

ಬೆಳ್ತಂಗಡಿ: ಹೊಸ ವರ್ಷದ ಮೊದಲ ದಿನವೇ ಭೀಕರ ಅಪಘಾತ ➤ ಬಸ್ – ಇನ್ನೋವಾ ಢಿಕ್ಕಿ: ಕರಾವಳಿಯ ಇಬ್ಬರು ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಗೊಂದಲ ➤ ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೆಸ್ ಹೊಯಿ-ಕೈ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 31. ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಕೆಗೆ ಸಂಬಂಧಿಸಿ, ಮಾಜಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕೆಪಿಸಿಸಿ ಕಛೇರಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಮೂಲ, ವಲಸಿಗರು ಎಂಬ ವಿಚಾರಕ್ಕೆ ಚರ್ಚೆ ನಡೆದು ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿ, ಹೊಯಿ- ಕೈ ಆದ ಘಟನೆ ವರದಿಯಾಗಿದೆ. ಸ್ಥಳೀಯರಲ್ಲದವರು ಟಿಕೆಟ್ ಗೆ ಅರ್ಜಿ ಹಾಕಿದ್ದು, ಅಂತವರಿಗೆ ಟಿಕೆಟ್ ನೀಡುವುದು ಬೇಡ. ಮನೋಹರ್, ಪದ್ಮಾವತಿ ಸ್ಥಳೀಯರು. ಅವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಪಟ್ಟು

ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಗೊಂದಲ ➤ ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೆಸ್ ಹೊಯಿ-ಕೈ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ ಪ್ರಕರಣ ➤ ಚಾಲಕನ ವಿರುದ್ಧ FIR

(ನ್ಯೂಸ್ ಕಡಬ) newskadaba.com ಮೈಸೂರು, ಡಿ. 31. ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಚಾಲಕನ ಮೇಲೆ ಎಫ್ಐಆರ್ ದಾಖಲಿಕೊಂಡಿದ್ದಾರೆ. ಡಿ. 27ರಂದು ಪ್ರಹ್ಲಾದ್ ಮೋದಿ ಹಾಗೂ ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಕಾರು ಮೈಸೂರಿನ ಕಟಕೋಳದಲ್ಲಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಚಾಲಕ ಸೇರಿದಂತೆ ಐವರು ಗಾಯಗೊಂಡಿದ್ದರು. ಈ ಅಪಘಾತಕ್ಕೆ ಸಂಬಂಧಿಸಿ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಕಾರಣವೆಂದು ಚಾಲಕ ಎನ್.ಸತ್ಯನಾರಾಯಣ ವಿರುದ್ಧ ಐಪಿಸಿ ಕಲಂ

ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ ಪ್ರಕರಣ ➤ ಚಾಲಕನ ವಿರುದ್ಧ FIR Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪ್ರಧಾನಿ ನರೇಂದ್ರ ಮೋದಿಯವರ ತಾಯಿ ವಿಧಿವಶ ➤ ಕೊನೆಯುಸಿರೆಳೆದ ಹೀರಾಬೆನ್ ಮೋದಿ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.30. ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿಯವರು ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 100 ವರ್ಷ ವಯಸ್ಸಾಗಿತ್ತು. ಹೀರಾ ಬೆನ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅಹಮದಾಬಾದ್‌ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರದಂದು ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಪ್ರಧಾನಿ ಮೋದಿಯವರು ಆಸ್ಪತ್ರೆಗೆ ದೌಡಾಯಿಸಿದ್ದರು‌. ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ‌.  

ಪ್ರಧಾನಿ ನರೇಂದ್ರ ಮೋದಿಯವರ ತಾಯಿ ವಿಧಿವಶ ➤ ಕೊನೆಯುಸಿರೆಳೆದ ಹೀರಾಬೆನ್ ಮೋದಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಂಟ್ವಾಳ: ಅಯ್ಯಪ್ಪ ಮಾಲಾಧಾರಿಗೆ ನಿಂದನೆ ಆರೋಪ ➤ ಮೀನು ವ್ಯಾಪಾರಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 28. ಪಾರ್ಸೆಲ್ ನೀಡಲು ಬಂದಿದ್ದ ಅಯ್ಯಪ್ಪ ವೃತಧಾರಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ ಘಟಬೆ ವರದಿಯಾಗಿದೆ‌. ಬಂಧಿತ ಆರೋಪಿಯನ್ನು ಗೂಡಿನಬಳಿ ನಿವಾಸಿ ಮೀನು ವ್ಯಾಪಾರಿ ಇಕ್ಬಾಲ್ ಎಂದು ಗರುತುಸಲಾಗಿದೆ. ಯಶ್ವಿತ್ ಎಂಬಾತ ಅಯ್ಯಪ್ಪ ಮಾಲಾಧಾರಿಯಾಗಿದ್ದು, ಸ್ನೇಹಿತನ ಜೊತೆ ಟಂಪೋದಲ್ಲಿ ಪಾರ್ಸೆಲ್ ಸರ್ವಿಸ್ ಮಾಡುತ್ತಿದ್ದ ಸಂದರ್ಭ ಆರೋಪಿ ಇಕ್ಬಾಲ್, ಇದು ನಮ್ಮ ಏರಿಯಾ. ಈ ಭಾಗಕ್ಕೆ ಹಿಂದೂಗಳು ಬರಬಾರದು ಎಂದಿದ್ದಲ್ಲದೇ ಅಯ್ಯಪ್ಪ

ಬಂಟ್ವಾಳ: ಅಯ್ಯಪ್ಪ ಮಾಲಾಧಾರಿಗೆ ನಿಂದನೆ ಆರೋಪ ➤ ಮೀನು ವ್ಯಾಪಾರಿಯ ಬಂಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದ.ಕ ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪತ್ತೆ…!! ➤ ವಿದೇಶದಿಂದ ಬಂದ ವ್ಯಕ್ತಿಗೆ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 28. ಸೌದಿ ಅರೇಬಿಯದಿಂದ ಆಗಮಿಸಿದ ಮಂಗಳೂರು ಮೂಲದ ವ್ಯಕ್ತಿಗೆ ಕೋವಿಡ್‌ ದೃಢಪಟ್ಟಿದ್ದು, ಈ ಮೂಲಕ ದ.ಕ ಜಿಲ್ಲೆಯಲ್ಲಿ ಮೊದಲ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಂಗಳೂರಿನ ವ್ಯಕ್ತಿಯನ್ನು ಅಲ್ಲಿ ಕೋವಿಡ್‌ ತಪಾಸಣೆಗೆ ಒಳಪಡಿಸಿದಾಗ ಕೋವಿಡ್‌ ದೃಢಪಟ್ಟಿತ್ತು. ಅವರ ಗಂಟಲ ದ್ರವ ಮಾದರಿಯನ್ನು ಜಿನೋಮಿಕ್‌ ಸೀಕ್ವೆನ್ಸಿಂಗ್‌ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಯಾವುದೇ ಗುಣಲಕ್ಷಣ ಹೊಂದಿರದ ಕಾರಣ ಅವರನ್ನು ಮಂಗಳೂರಿನ ಅವರ ಮನೆಯಲ್ಲಿ ಗೃಹ ನಿಗಾವಣೆಯಲ್ಲಿರಿಸಲಾಗಿದೆ ಎಂದು ಮೂಲಗಳು

ದ.ಕ ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪತ್ತೆ…!! ➤ ವಿದೇಶದಿಂದ ಬಂದ ವ್ಯಕ್ತಿಗೆ ಕೋವಿಡ್ ದೃಢ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಪ್ರಧಾನಿ ಮೋದಿ ತಾಯಿ ಆರೋಗ್ಯದಲ್ಲಿ ಏರುಪೇರು ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಅಹಮದಬಾದ್, ಡಿ. 28. ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಹಮದಬಾದ್‌ ನ ಖಾಸಗಿ ಆಸ್ಪತ್ರೆಯಲ್ಲಿ ಮೋದಿ ಅವರ ತಾಯಿ ಹೀರಾಬೆನ್‌ ಅವರನ್ನು ದಾಖಲಿಸಲಾಗಿದ್ದು, ಅವರ ಆರೋಗ್ಯವನ್ನು ವಿಚಾರಿಸಲು ಮೋದಿ ಅವರು ಆಸ್ಪತ್ರೆಗೆ ತೆರಳಲಿದ್ದಾರೆ ಎಂದು ವರದಿ ತಿಳಿಸಿದೆ. ಹಿರಾಬೆನ್‌ ಅವರಿಗೆ 100 ವರ್ಷ ವಯಸ್ಸಾಗಿದ್ದು, ಇದಕ್ಕೂ ಮೊದಲು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವರದಿ ತಿಳಿಸಿದೆ.

ಪ್ರಧಾನಿ ಮೋದಿ ತಾಯಿ ಆರೋಗ್ಯದಲ್ಲಿ ಏರುಪೇರು ➤ ಆಸ್ಪತ್ರೆಗೆ ದಾಖಲು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಖ್ಯಾತ ಯೂಟ್ಯೂಬರ್ ಲೀನಾ ನಾಗವಂಶಿ ನೇಣಿಗೆ ಶರಣು…?

(ನ್ಯೂಸ್ ಕಡಬ) newskadaba.com ಛತ್ತೀಸ್ ಗಡ, ಡಿ. 28. ಖ್ಯಾತ ಯೂಟ್ಯೂಬರ್ ಓರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತ್ತೀಸ್ ಗಡದ ಚಕ್ರಧರ್ ನಗರದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಬಿ.ಕಾಂ ವಿದ್ಯಾರ್ಥಿನಿ 22 ವರ್ಷದ ಲೀನಾ ನಾಗವಂಶಿ ಎಂದು ಗುರುತಿಸಲಾಗಿದೆ. ಯೂಟ್ಯೂಬ್‌, ಫೇಸ್‌ ಬುಕ್‌ ಹಾಗೂ ಇನ್ಸ್ಟಾಗ್ರಾಮ್‌ ನಲ್ಲಿ ತನ್ನ ರೀಲ್ಸ್‌ ಹಾಗೂ ಶಾರ್ಟ್ಸ್‌ ವಿಡಿಯೋಗಳಿಂದ 10 ಸಾವಿರ ಫೋಲೋವರ್ಸ್ ಗಳನ್ನು ಹೊಂದಿದ್ದ ಈಕೆ ಕ್ರಿಸ್ ಮಸ್ ಬಳಿಕ ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿರುವುದಾಗಿ ವರದಿ ತಿಳಿಸಿದೆ.

ಖ್ಯಾತ ಯೂಟ್ಯೂಬರ್ ಲೀನಾ ನಾಗವಂಶಿ ನೇಣಿಗೆ ಶರಣು…? Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಲ್ಪೆ ಬೀಚ್ ನಲ್ಲಿ ಸಿಕ್ಕಿದ 22 ಕೆಜಿ ತೂಕದ ಗೋಳಿ ಮೀನು ➤ ಬರೋಬ್ಬರಿ 2.34 ಲಕ್ಷ ರೂ. ಗೆ ಹರಾಜು…!

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 27. ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಗೋಳಿ ಮೀನು ಬರೋಬ್ಬರಿ 2,34,080 ರೂಪಾಯಿಗೆ ಮಾರಾಟವಾಗಿದೆ. ಮಲ್ಪೆ ಬಂದರಿನ ಮೀನುಗಾರರ ಬಲೆಗೆ ಸಿಕ್ಕ 22 ಕೆ.ಜಿ. ತೂಕದ ಈ ಮೀನು ಮೀನುಗಾರರ ಪಾಲಿಗೆ ಲಾಭದಾಯಕವಾಗಿದೆ. ಹಾಗಾದರೆ ಕೇವಲ 22 ಕೆ.ಜಿ. ತೂಕದ ಮೀನಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿದ್ರಾ ಎಂದು ಉಬ್ಬೇರಿಸಬೇಡಿ. ಇದು ಗೋಳಿ ಮೀನು. ಔಷಧಕ್ಕೆ ಬಳಕೆಯಾಗುವ ಗೋಳಿ ಮೀನಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚು. ಆಳಸಮುದ್ರ ಮೀನುಗಾರಿಕಾ ಬೋಟ್‌ನ

ಮಲ್ಪೆ ಬೀಚ್ ನಲ್ಲಿ ಸಿಕ್ಕಿದ 22 ಕೆಜಿ ತೂಕದ ಗೋಳಿ ಮೀನು ➤ ಬರೋಬ್ಬರಿ 2.34 ಲಕ್ಷ ರೂ. ಗೆ ಹರಾಜು…! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಿಗ್ ಬಾಸ್-9 ರ ಗ್ರ್ಯಾಂಡ್ ಫಿನಾಲೆ ಪ್ರವೇಶಿಸಿದ ರೂಪೇಶ್ ಶೆಟ್ಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 27. ಕನ್ನಡ ಕಿರುತೆರೆಯ ಹಿಟ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ರ ಗ್ರ್ಯಾಂಡ್ ಫಿನಾಲೆಗೆ ಇನ್ನು ಒಂದು ವಾರ ಬಾಕಿಯಿದ್ದು, ಇಬ್ಬರು ಫೈನಲಿಸ್ಟ್ ಗಳನ್ನು ನಿರೂಪಕ ಕಿಚ್ಚ ಸುದೀಪ್ ಘೋಷಿಸಿದ್ದಾರೆ. ಬಿಗ್ ಬಾಸ್ ಸೀಸನ್ 9 ರ ಗ್ರ್ಯಾಂಡ್ ಫಿನಾಲೆಗೂ ಮುನ್ನ ಕೊನೆಯ ವಾರದಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದು, ಮಂಗಳೂರಿನ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಫಿನಾಲೆಗೆ ಪ್ರವೇಶಿಸಿದ್ದಾರೆ. ಚಲನಚಿತ್ರ ನಿರ್ದೇಶಕ, ನಟ ಮತ್ತು

ಬಿಗ್ ಬಾಸ್-9 ರ ಗ್ರ್ಯಾಂಡ್ ಫಿನಾಲೆ ಪ್ರವೇಶಿಸಿದ ರೂಪೇಶ್ ಶೆಟ್ಟಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top