ವಿಟ್ಲ: ಮನೆ ಮೇಲೆ ಉರುಳಿಬಿದ್ದ ಮರ- ಮನೆಗೆ ಹಾನಿ

(ನ್ಯೂಸ್ ಕಡಬ) newskadaba.com ವಿಟ್ಲ, ಜು. 06. ಕೊಳ್ನಾಡು ಗ್ರಾಮದ ಸೆರ್ಕಳ ಸಂಕಪ್ಪ ಸಫಲ್ಯ ಎಂಬವರ ಮನೆ ಮೇಲೆ ಅತ್ತಿ ಮರವೊಂದು ಉರುಳಿಬಿದ್ದ ಘಟನೆ ವರದಿಯಾಗಿದೆ.


ಘಟನೆಯಿಂದ ಮನೆ ಮಾಲಿಕ ಸಂಕಪ್ಪ ಸಫಲ್ಯ ಎಂಬವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಅಂದಾಜು 30,000 ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಕೊಳ್ನಾಡು ಗ್ರಾಮಕರಣಿಕ ಮಂಜುನಾಥ, ಪಿಡಿಒ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.

Scroll to Top