ಬ್ರೇಕಿಂಗ್ ನ್ಯೂಸ್

snowfall

ಭಾರೀ ಹಿಮಪಾತ- 17 ಮಂದಿ ಮೃತ್ಯು

(ನ್ಯೂಸ್ ಕಡಬ) bewskadaba.com ಟೋಕಿಯೊ, ಡಿ. 27. ಭಾರೀ ಹಿಮಪಾತದಿಂದಾಗಿ 17 ಮಂದಿ ಮೃತಪಟ್ಟು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡ ಕುರಿತು ಜಪಾನ್ ನಲ್ಲಿ ವರದಿಯಾಗಿದೆ. ಈ ಕುರಿತು ಮಾಹಿತಿ ನೀಡಿದ ಅಲ್ಲಿನ ವಿಪತ್ತು ನಿರ್ವಹಣಾ ಅಧಿಕಾರಿಗಳು, ಹಿಮದಿಂದಾಗಿ 17 ಮಂದಿ ಜೀವ ಕಳೆದುಕೊಂಡಿದ್ದು, ಹಲವು ಮನೆಗಳ ವಿದ್ಯುತ್ ಸಂಪರ್ಕವೂ ಕಳೆದುಕೊಂಡಿದೆ ಎಂದರು. ಕಳೆದ ವಾರ ಜಪಾನ್‌ನ ಉತ್ತರ ಭಾಗದಲ್ಲಿ ಹಿಮಪಾತವಾಗಿ 11 ಮಂದಿ ಮೃತಪಟ್ಟಿದ್ದರು. ಅಲ್ಲದೆ ಮನೆ ಮೇಲೆ ಬಿದ್ದ ಹಿಮ ಸ್ವಚ್ಚಗೊಳಿಸುವ ವೇಳೆ ಜಾರಿ […]

ಭಾರೀ ಹಿಮಪಾತ- 17 ಮಂದಿ ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಟೊಮೇಟೊ ಬೆಲೆಯಲ್ಲಿ ಭಾರಿ ಕುಸಿತ ➤ ರೈತರು ಕಂಗಾಲು..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 26.  ಟೊಮೇಟೊ ದರ ಕುಸಿತವಾಗಿದ್ದು, ಚಿಲ್ಲರೆ ವ್ಯಾಪಾರದಲ್ಲಿ ಒಂದು ಕೆ.ಜಿ. ಗುಣಮಟ್ಟದ ಟೊಮೇಟೊ 8 ರಿಂದ 10 ರೂ.ಗೆ ಮಾರಾಟವಾಗುತ್ತಿದೆ. ಆದರೆ ಅದನ್ನು ಕಷ್ಟಪಟ್ಟು ಬೆಳೆದ ರೈತರಿಗೆ ಒಂದು ಕೆ.ಜಿಗೆ ಕೇವಲ 2 ರಿಂದ 3 ರೂಪಾಯಿ ಸಿಗುತ್ತಿದೆ. ತೈಲ ಬೆಲೆ, ಅಡುಗೆ ಎಣ್ಣೆ, ದಿನಸಿ ಕಾಳುಗಳ ಬೆಲೆ ದಿನೇ ದಿನೆ ಏರುತ್ತಿದೆಯಾದರೂ ಸೊಪ್ಪು ತರಕಾರಿಗಳ ಬೆಲೆಗಳು ಕೈಗೆಟುಕುವ ದರದಲ್ಲಿಯೇ ಉಳಿದಿವೆ. ಭಾರೀ ಮಳೆಯಿಂದಾಗಿ ಕಳೆದ ಕೆಲವು ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ

ಟೊಮೇಟೊ ಬೆಲೆಯಲ್ಲಿ ಭಾರಿ ಕುಸಿತ ➤ ರೈತರು ಕಂಗಾಲು..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತಂಡದಿಂದ ಚೂರಿ ಇರಿತ ➤ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24. ಅಪರಿಚಿತ ತಂಡದಿಂದ ಚೂರಿ ಇರಿತಕ್ಕೊಳಗಾಗಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತ ವ್ಯಕ್ತಿಯನ್ನು ಕೃಷ್ಣಾಪುರ ನಿವಾಸಿ ಜಲೀಲ್ ಎಂದು ಗುರುತಿಸಲಾಗಿದೆ. ಕೃಷ್ಣಾಪುರದ ನೈತಂಗಡಿ ಎಂಬಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಜಲೀಲ್ ಗೆ ಶನಿವಾರ ರಾತ್ರಿ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಚೂರಿಯಿಂದ ಇರಿದು ಪರಾರಿಯಾಗಿದ್ದರು. ಗಂಭೀರ ಗಾಯಗೊಂಡಿದ್ದ ಜಲೀಲ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸುರತ್ಕಲ್ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.

ತಂಡದಿಂದ ಚೂರಿ ಇರಿತ ➤ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Crime

ಮಂಗಳೂರು: ಅಪರಿಚಿತ ತಂಡದಿಂದ ಚೂರಿ ಇರಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24. ಇಬ್ಬರು ದುಷ್ಕರ್ಮಿಗಳು ವ್ಯಕ್ತಿಯೋರ್ವರಿಗೆ ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ನಗರದ ಹೊರವಲಯದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಚೂರಿ ಇರಿತಕ್ಕೊಳಗಾದವರನ್ನು ಕೃಷ್ಣಾಪುರ ನಿವಾಸಿ ಜಲೀಲ್ ಎಂದು ಗುರುತಿಸಲಾಗಿದೆ. ಕೃಷ್ಣಾಪುರದ ನೈತಂಗಡಿ ಎಂಬಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಜಲೀಲ್ ಗೆ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಸುರತ್ಕಲ್ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.  

ಮಂಗಳೂರು: ಅಪರಿಚಿತ ತಂಡದಿಂದ ಚೂರಿ ಇರಿತ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ರಸ್ತೆ ದಿಢೀರ್ ಕುಸಿತ ➤ ಹಣ್ಣು ತರಕಾರಿಗಳು ಮಣ್ಣುಪಾಲು

(ನ್ಯೂಸ್ ಕಡಬ) newskadaba.com ಹೈದರಾಬಾದ್‌, ಡಿ. 24. ನಗರದ ಗೋಶಾಮಹಲ್ ಪ್ರದೇಶದಲ್ಲಿ ರಸ್ತೆಯೊಂದು ದಿಢೀರ್ ಕುಸಿದ ಪರಿಣಾಮ ವಾಹನಗಳು, ಹಣ್ಣು, ತರಕಾರಿ ತುಂಬಿದ್ದ ಚೀಲಗಳು ಮಣ್ಣಿನಡಿ ಸಿಲುಕಿಕೊಂಡ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ ನಲ್ಲಿ ನಡೆದಿದೆ.   ಪೊಲೀಸರ ಪ್ರಕಾರ, ಗೋಶಾಮಹಲ್ ಪ್ರದೇಶದಲ್ಲಿ ಚರಂಡಿಯ ಮೇಲೆ ರಸ್ತೆ ನಿರ್ಮಿಸಲಾಗಿದ್ದು, ಹಣ್ಣು ಮತ್ತು ತರಕಾರಿಗಳ ಮಾರಾಟ ಮಾಡುತ್ತಿದ್ದ ಜನರು ಈ ಭೂಕುಸಿತದಿಂದಾಗಿ ನೆಲಕ್ಕೆ ಬಿದ್ದಿದ್ದಾರೆ. ಇದ್ದಕ್ಕಿದ್ದಂತೆ ದೊಡ್ಡ ಶಬ್ದ ಕೇಳಿಸಿಕೊಂಡಿದ್ದು ರಸ್ತೆ ಮಧ್ಯೆ ಒಡೆದುಹೋಗಿದೆ. ಹಣ್ಣುಗಳು ಮತ್ತು ತರಕಾರಿಗಳನ್ನು ತುಂಬಿದ

ರಸ್ತೆ ದಿಢೀರ್ ಕುಸಿತ ➤ ಹಣ್ಣು ತರಕಾರಿಗಳು ಮಣ್ಣುಪಾಲು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಟ್ವೀಟ್ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 22. ಇಲ್ಲಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಹಾಕುವುದಾಗಿ ಟ್ವೀಟ್ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ‌. ಬಂಧಿತನನ್ನು ಬೆಂಗಳೂರಿನ ಕೂಡ್ಲುಗೇಟ್ ನಿವಾಸಿ ವೈಭವ್ ಗಣೇಶ್ ಎಂದು ಗುರುತಿಸಲಾಗಿದೆ. ಈತ ಡಿ. 10ರಂದು ತನ್ನ ಟ್ವಿಟರ್ ಖಾತೆಯಲ್ಲಿ, ನಾನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಹಾಕುವುದಾಗಿ ಟ್ವೀಟ್ ಮಾಡಿದ್ದ. ಅಲ್ಲದೇ ಇದನ್ನು ವಿಮಾನ ನಿಲ್ದಾಣದ ಅಧಿಕೃತ ಟ್ವಿಟರ್ ಗೂ ಟ್ಯಾಗ್ ಮಾಡಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಅಧಿಕಾರಿಗಳು ದೂರು ದಾಖಲಿಸಿದ್ದರು.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಟ್ವೀಟ್ ➤ ಆರೋಪಿ ಅರೆಸ್ಟ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬ್ರಹ್ಮಪುತ್ರ ನದಿಯಲ್ಲಿ ಸತತ 10 ಗಂಟೆಗಳ ಕಾಲ ಈಜಾಡಿದ ಹುಲಿ ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಅಸ್ಸಾಂ, ಡಿ. 22. ಬ್ರಹ್ಮಪುತ್ರ ನದಿಯಲ್ಲಿ ಹುಲಿಯೊಂದು ಸತತ ಹತ್ತು ಗಂಟೆಗಳ ಕಾಲ ಈಜಾಡಿ ಸುಮಾರು 120 ಕಿ.ಮೀ. ದೂರದ ದ್ವೀಪ ತಲುಪಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ವಿಡಿಯೋದಲ್ಲಿ ಹುಲಿಯು ವೇಗವಾಗಿ ಬ್ರಹ್ಮಪುತ್ರ ನದಿಯಲ್ಲಿ ಈಜಾಡುತ್ತಿರುವುದು ಕಂಡುಬಂದಿದ್ದು, ಬಳಿಕ ಗುವಾಹಟಿ ಸಮೀಪದ ನವಿಲು ದ್ವೀಪದ ಗುಹೆ ಒಂದರಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ದ್ವೀಪವು ಉಮಾನಂದ ದೇಗುಲದಿಂದ ಪ್ರಖ್ಯಾತವಾಗಿದ್ದು, ಹುಲಿಯನ್ನು ಕಂಡು ದೇಗುಲದ ಸಿಬ್ಬಂದಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಬ್ರಹ್ಮಪುತ್ರ ನದಿಯಲ್ಲಿ ಸತತ 10 ಗಂಟೆಗಳ ಕಾಲ ಈಜಾಡಿದ ಹುಲಿ ➤ ವಿಡಿಯೋ ವೈರಲ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಟ್ವಿಟ್ಟರ್ ಸಿಇಒ ಹುದ್ದೆಗೆ ಶೀಘ್ರವೇ ರಾಜೀನಾಮೆ ➤ ಎಲೆನ್ ಮಸ್ಕ್ ಘೋಷಣೆ

(ನ್ಯೂಸ್ ಕಡಬ) newskadaba.com ಸ್ಯಾನ್ ಫ್ರಾನಿಸ್ಕೋ, ಡಿ. 21. ಟ್ವಿಟರ್ ಮುಖ್ಯಸ್ಥ ಎಲೆನ್ ಮಸ್ಕ್ ಶೀಘ್ರದಲ್ಲೇ ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. “ಟ್ವಿಟರ್ ನ ಕೆಲಸವನ್ನು ಮಾಡುವಂತಹ ಯಾರಾದರೂ ಸಿಕ್ಕಿದರೆ ರಾಜೀನಾಮೆ ನೀಡುತ್ತೇನೆ. ನಂತರ, ನಾನು ಸಾಫ್ಟ್‌ ವೇರ್ ಮತ್ತು ಸರ್ವರ್‌ ಗಳ ತಂಡಗಳನ್ನು ಮುನ್ನಡೆಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ. ಟ್ವಿಟರ್ ಸಿಇಓ ಹುದ್ದೆ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮಸ್ಕ್ ಅವರು ಪದತ್ಯಾಗದ ಸುಳಿವು ನೀಡಿದ್ದಾರೆ. ಎಲಾನ್ ಮಸ್ಕ್ ಅವರು ತಾವು

ಟ್ವಿಟ್ಟರ್ ಸಿಇಒ ಹುದ್ದೆಗೆ ಶೀಘ್ರವೇ ರಾಜೀನಾಮೆ ➤ ಎಲೆನ್ ಮಸ್ಕ್ ಘೋಷಣೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಹೆಚ್ಚುತ್ತಿದೆ ಚರ್ಮಗಂಟು ರೋಗದ ಹಾವಳಿ ➤ ರಾಜ್ಯ ರಾಜಧಾನಿಯಲ್ಲಿ 21 ಸಾವಿರ ಜಾನುವಾರುಗಳು ಬಲಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 21. ರಾಜ್ಯದಲ್ಲಿ  ಚರ್ಮಗಂಟು ರೋಗದಿಂದ ಸುಮಾರು 21,305 ಜಾನುವಾರುಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಸುಮಾರು 230 ತಾಲೂಕುಗಳಲ್ಲಿ ಈವರೆಗೆ 2,37,194 ಜಾನುವಾರುಗಳಿಗೆ ಚರ್ಮಗಂಟು ರೋಗ ಬಾಧಿಸಿವೆ. ಇದರ ಪೈಕಿ 1.64 ಲಕ್ಷ ಜಾನುವಾರುಗಳು ಚೇತರಿಸಿಕೊಂಡಿವೆ ಎನ್ನಲಾಗಿದೆ. ಇನ್ನುಳಿದ ಜಾನುವಾರುಗಳಿಗೆ ಸರಕಾರದಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟ ಜಾನುವಾರುಗಳ ಮಾಲಕರಿಗೆ ಈಗಾಗಲೇ ಮುಖ್ಯಮಂತ್ರಿಗಳು 37 ಕೋಟಿ ರೂ ಪರಿಹಾರ ಧನ ಬಿಡುಗಡೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುತ್ತಿದೆ ಚರ್ಮಗಂಟು ರೋಗದ ಹಾವಳಿ ➤ ರಾಜ್ಯ ರಾಜಧಾನಿಯಲ್ಲಿ 21 ಸಾವಿರ ಜಾನುವಾರುಗಳು ಬಲಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

➤ ದ.ಕ ಕೋಟಿ ರೂ. ದಾಟಿದ ಜಿಎಸ್ ಟಿ ಸಂಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 20 ಮಂಗಳೂರು ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಭರ್ಜರಿಯಾಗಿ ಏರಿಕೆ ಕಾಣುತ್ತಿದ್ದು, ಕೋವಿಡ್ ಬಳಿಕ ನಿರಂತರವಾಗಿ  ಹೆಚ್ಚುತ್ತಲೆ ಇದೆ. ದ.ಕ , ಉಡುಪಿ, ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿ ಹೊಂದಿರುವ ಮಂಗಳೂರು ಕೇಂದ್ರೀಯ ತೆರಿಗೆಗಳ ಆಯುಕ್ತಾಲಯದ ಮಾಹಿತಿ ಪ್ರಕಾರ 2021-22 ಸಾಲಿನಲ್ಲಿ ಗುರಿ ಮೀರಿದ ಸಾಧನೆಯಾಗಿದೆ. ಜಿಎಸ್ ಟಿ ಸಂಗ್ರಹದಲ್ಲಿ ಪೆಟ್ರೋಲಿಯಂ ಉತ್ಪನ್ನಗಳದ್ದೇ ಸಿಂಹ ಪಾಲು. 2021 -22ರಲ್ಲಿ 696.69 ಕೋಟಿ  ರೂ. ಇದ್ದ ಸಂಗ್ರಹವು 2022-23 ನೇ ಸಾಲಿನ ಅಕ್ಟೋಬರ್

➤ ದ.ಕ ಕೋಟಿ ರೂ. ದಾಟಿದ ಜಿಎಸ್ ಟಿ ಸಂಗ್ರಹ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top