ಮರವೂರು ಸೇತುವೆ ಮೇಲೆ ಕೀ, ಹೆಲ್ಮೆಟ್ ಸಹಿತ ಬೈಕ್ ಪತ್ತೆ..!! ➤ ಆತ್ಮಹತ್ಯೆ ಶಂಕೆ



(ನ್ಯೂಸ್ ಕಡಬ) newskadaba.com ಮಂಗಳೂರು, ಜು. 06. ಇಲ್ಲಿನ ವಿಮಾನ ನಿಲ್ದಾಣ ರಸ್ತೆಯ ಮರವೂರು ಸೇತುವೆ ಮೇಲೆ ಇಂದು ಬೆಳಗ್ಗೆ ಬೈಕ್, ಕೀ ಮತ್ತು ಹಲ್ಮೆಟ್ ಪತ್ತೆಯಾಗಿದ್ದು, ಯಾರೋ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.








ಸೇತುವೆ ಮೇಲೆ ಬೈಕ್, ಕೀ ಮತ್ತು ಹೆಲ್ಮೆಟ್ ಕಂಡುಬಂದಿದ್ದು, ತುಂಬಾ ಹೊತ್ತಾದರೂ ಯಾರೂ ಬೈಕ್ ಕೊಂಡೊಯ್ಯಲು ಬಾರದೇ ಇದ್ದುದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೈಕ್ ನ್ನು ಸೇತುವೆ ಮೇಲೆ ನಿಲ್ಲಿಸಿ ಸವಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.






error: Content is protected !!
Scroll to Top