ಬ್ರೇಕಿಂಗ್ ನ್ಯೂಸ್

ಮರ್ಧಾಳ: ಪೇಟೆಯ ಸಮೀಪ ಮತ್ತೆ ಮತ್ತೆ ಪ್ರತ್ಯಕ್ಷವಾಗುತ್ತಿರುವ ಕಾಡಾನೆಗಳು ➤ ಇಬ್ಬರನ್ನು ಬಲಿ ಪಡೆದ ಘಟನೆ ಮಾಸುವ ಮುನ್ನವೇ ಮತ್ತೆ ಆತಂಕದಲ್ಲಿ ಸಾರ್ವಜನಿಕರು

(ನ್ಯೂಸ್ ಕಡಬ) newskadaba.com ಕಡಬ, ಜೂ.27. ಕಳೆದ ಎರಡು ತಿಂಗಳ ಹಿಂದೆ ಇಬ್ಬರನ್ನು ಕೊಂದು ಅಟ್ಟಹಾಸ ಮೆರೆದಿದ್ದ ಕಾಡಾನೆಗಳು ಮತ್ತೆ ಕಾಡಿನಿಂದ ರಸ್ತೆಗಿಳಿಯುತ್ತಿದ್ದು, ಕಳೆದ ನಾಲ್ಕೈದು ದಿನಗಳಿಂದ ಮರ್ಧಾಳ ಸಮೀಪ ರಾಜ್ಯ ಹೆದ್ದಾರಿಯ ಆಸುಪಾಸಿನಲ್ಲಿ ಕಾಡಾನೆಗಳು ಕಂಡು ಬರುತ್ತಿವೆ. ಮರ್ಧಾಳ ಸಮೀಪದ, ಭ್ರಾಂತಿಕಟ್ಟೆ, ಕೊಡೆಂಕೀರಿ, ಐತ್ತೂರು, ಆಜನ ಭಾಗದಲ್ಲಿ ಕಾಡಾನೆಗಳು ಸಂಚರಿಸಿ ಕೃಷಿ ನಾಶ ಮಾಡಿರುವುದಲ್ಲದೆ, ಮರ್ದಾಳ ಪೇಟೆಯ ಸಮೀಪ ಇರುವ ವಿಶೇಷ ಶಾಲೆಯ ಬಳಿಯ ತೋಟಕ್ಕೆ ಕಾಡಾನೆಗಳು ಲಗ್ಗೆ ಇಟ್ಟಿವೆ. ಮೊದಲೆಲ್ಲಾ ಕಾಡಿನಲ್ಲಿದ್ದ ಕಾಡಾನೆಗಳು ಇದೀಗ […]

ಮರ್ಧಾಳ: ಪೇಟೆಯ ಸಮೀಪ ಮತ್ತೆ ಮತ್ತೆ ಪ್ರತ್ಯಕ್ಷವಾಗುತ್ತಿರುವ ಕಾಡಾನೆಗಳು ➤ ಇಬ್ಬರನ್ನು ಬಲಿ ಪಡೆದ ಘಟನೆ ಮಾಸುವ ಮುನ್ನವೇ ಮತ್ತೆ ಆತಂಕದಲ್ಲಿ ಸಾರ್ವಜನಿಕರು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Crime

ಕೆಲಸ ಕೊಟ್ಟ ಮಾಲಕನಿಗೆ ಕೊಳ್ಳಿ ಇಟ್ಟ ಚಾಲಕ – ಅಪರಿಚಿತ ಹೆಣ್ಣಿನೊಂದಿಗೆ ಫೊಟೋ ತೆಗೆಸಿ ‘ಹನಿಟ್ರ್ಯಾಪ್

(ನ್ಯೂಸ್ ಕಡಬ) newskadaba.com ಕಡಬ, ಜೂ.26. ತನಗೆ ಚಾಲಕ ಕೆಲಸ ನೀಡಿದ್ದ ತನ್ನ ಮಾಲಕನನ್ನೇ ಆರೋಪಿ ಚಾಲಕನೋರ್ವ ಮತ್ತಿಬ್ಬರ ಸಹಕಾರದೊಂದಿಗೆ ಹನಿಟ್ರ್ಯಾಪ್ ನಡೆಸಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಕಡಬ ತಾಲೂಕಿನ ಹೊಸ್ಮಠ ನಿವಾಸಿ, ಪ್ರಸ್ತುತ ಮಂಗಳೂರಿನ ಬಲ್ಮಠದಲ್ಲಿ ವಾಸವಾಗಿರುವ ಕೃಷಿಕರೋರ್ವರು ಜೂನ್ 14 ರಂದು ತನ್ನ ಕಾರಿನಲ್ಲಿ ಚಾಲಕನ ಜೊತೆಗೆ ಮಂಗಳೂರಿನಿಂದ ಹೊಸ್ಮಠದ ತನ್ನ ಮನೆಗೆ ಆಗಮಿಸಿ ಮಧ್ಯಾಹ್ನದ ವೇಳೆಗೆ ಬಟ್ಟೆ ಬದಲಾಯಿಸಿ ತೋಟಕ್ಕೆ ತೆರಳಲು ಸಿದ್ಧರಾಗಿದ್ದ ಸಮಯದಲ್ಲಿ ಅಪರಿಚಿತ ಮುಸ್ಲಿಂ ಯುವತಿಯೋರ್ವಳು

ಕೆಲಸ ಕೊಟ್ಟ ಮಾಲಕನಿಗೆ ಕೊಳ್ಳಿ ಇಟ್ಟ ಚಾಲಕ – ಅಪರಿಚಿತ ಹೆಣ್ಣಿನೊಂದಿಗೆ ಫೊಟೋ ತೆಗೆಸಿ ‘ಹನಿಟ್ರ್ಯಾಪ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಾಜಿ ಶಾಸಕ ಸಾ.ರಾ.ಮಹೇಶ್ ಪುತ್ರ ಹಾಗೂ ಪತ್ರಕರ್ತನ ಮಗನ ನಡುವೆ ಗಲಾಟೆ

(ನ್ಯೂಸ್ ಕಡಬ) newskadaba.com ಮೈಸೂರು, ಜೂ. 26. ಮಾಜಿ ಸಚಿವ ಸಾ.ರಾ.ಮಹೇಶ್‌ ಪುತ್ರ ಹಾಗೂ ಮೈಸೂರಿನ ಖ್ಯಾತ ಪತ್ರಕರ್ತ ಗುರುರಾಜ್ ಪುತ್ರನ ನಡುವೆ ಕುವೆಂಪು ನಗರದ ಕೆಫೆ ಬಿರಿಯಾನಿ ಹೋಟೆಲ್‌ ಮುಂದೆ ಮಾರಾಮಾರಿ ನಡೆದಿರುವ ಕುರಿತು ವರದಿಯಾಗಿದೆ. ಇಬ್ಬರು ಕೂಡಾ ಪರಸ್ಪರ ಕೈಕೈ ಮಿಲಾಯಿಸಿಕೊಂಡಿರುವ ದೃಶ್ಯ ವೈರಲ್‌ ಆಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನು ಕೂಡ ಠಾಣೆಗೆ ಕರೆದೊಯ್ದು ಮುಚ್ಚಳಿಕೆ ಪತ್ರ ಬರೆದು ಬುದ್ದಿ ಹೇಳಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಗಲಾಟೆಗೆ ಕಾರಣವೇನೆಂಬುದು ಇನ್ನೂ ತಿಳಿದು ಬಂದಿಲ್ಲ.

ಮಾಜಿ ಶಾಸಕ ಸಾ.ರಾ.ಮಹೇಶ್ ಪುತ್ರ ಹಾಗೂ ಪತ್ರಕರ್ತನ ಮಗನ ನಡುವೆ ಗಲಾಟೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿತ್ರೀಕರಣದ ವೇಳೆ ಗಾಯ ➤ ಮಲಯಾಳಂ ನಟ ಪೃಥ್ವಿರಾಜ್ ಗೆ ಇಂದು ಶಸ್ತ್ರಕ್ರಿಯೆ

(ನ್ಯೂಸ್ ಕಡಬ) newskadaba.com ಕೊಚ್ಚಿ, ಜೂ. 26. ಕೇರಳದ ಇಡುಕ್ಕಿ ಮರಯೂರ್‌ ಎಂಬಲ್ಲಿ ಮಲಯಾಳಂ ಚಿತ್ರ “ವಿಲಾಯತ್‌ ಬುದ್ಧ” ಇದರ ಚಿತ್ರೀಕರಣದ ವೇಳೆ ಕಾಲುಜಾರಿ ಬಿದ್ದು ಗಾಯಗೊಂಡಿದ್ದ ನಟ ಪೃಥ್ವಿರಾಜ್ ಅವರಿಗೆ ಇಂದು ಶಸ್ತ್ರಕ್ರಿಯೆ ನಡೆಯಲಿದೆ. ಬಸ್‌ ತಂಗುದಾಣವೊಂದರಲ್ಲಿ ಫೈಟ್‌ ದೃಶ್ಯದ ಚಿತ್ರೀಕರಣ ವೇಳೆ ಹಾರುವಾಗ ಕಾಲುಜಾರಿ ಬಿದ್ದ ಪೃಥ್ವಿರಾಜ್ ಅವರ ಕಾಲಿನ ಲಿಗಮೆಂಟ್‌ಗೆ ಗಾಯವಾಗಿದ್ದು ಅವರನ್ನು ಇಡುಕ್ಕಿಯ ಹತ್ತಿರದ ಆಸ್ಪತ್ರೆಗೆ ಮೊದಲು ದಾಖಲಿಸಿ, ನಂತರ ಅಲ್ಲಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಅವರಿಗೆ ಕೀಹೋಲ್‌

ಚಿತ್ರೀಕರಣದ ವೇಳೆ ಗಾಯ ➤ ಮಲಯಾಳಂ ನಟ ಪೃಥ್ವಿರಾಜ್ ಗೆ ಇಂದು ಶಸ್ತ್ರಕ್ರಿಯೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್, ಸಿನಿಮಾ

ಮಂಗಳೂರು: ಶಾಲಾ- ಕಾಲೇಜುಗಳ ವ್ಯಾಪ್ತಿಯಲ್ಲಿ ಅಮಲು ಪದಾರ್ಥ ಮಾರಾಟ ➤ ದಿಢೀರ್ ದಾಳಿ ನಡೆಸಿ ದಂಡ ವಿಧಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 26. ನಗರದ ಕಮೀಷನರೇಟ್ ವ್ಯಾಪ್ತಿಯ ಶಾಲಾ ಕಾಲೇಜುಗಳ ಬಳಿ ಗುಟ್ಕಾ, ತಂಬಾಕು ಸಹಿತ ಅಮಲು ಪದಾರ್ಥ ಮಾರಾಟ ಮಾಡುತ್ತಿದ್ದ 153 ಅಂಗಡಿಗಳ ಮೇಲೆ ಮಂಗಳೂರು ನಗರ ಪೊಲೀಸರು ದಿಢೀರ್ ದಾಳಿ ನಡೆಸಿ ಪ್ರಕರಣ ದಾಖಲಿಸಿ ದಂಡ ವಿಧಿಸಿದ ಘಟನೆ ವರದಿಯಾಗಿದೆ. ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿದ್ದ ಒಟ್ಟು 348 ಅಂಗಡಿಗಳಿಗೆ ಪೊಲೀಸರು ಧಿಡೀರ್‌ ದಾಳಿ ನಡೆಸಿದ್ದು, ಈ ವೇಳೆ 153 ಅಂಗಡಿಗಳಲ್ಲಿ ಅಮಲು ಪದಾರ್ಥಗಳು ಸಿಕ್ಕಿವೆ. ಈ ಹಿನ್ನೆಲೆ ಅಂಗಡಿಗಳ ವಿರುದ್ಧ

ಮಂಗಳೂರು: ಶಾಲಾ- ಕಾಲೇಜುಗಳ ವ್ಯಾಪ್ತಿಯಲ್ಲಿ ಅಮಲು ಪದಾರ್ಥ ಮಾರಾಟ ➤ ದಿಢೀರ್ ದಾಳಿ ನಡೆಸಿ ದಂಡ ವಿಧಿಸಿದ ಪೊಲೀಸರು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ವಿದ್ಯುತ್ ಶಾಕ್- ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 26. ವಿದ್ಯುತ್‌ ತಗುಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸಾಕ್ಷಿ ಅಹುಜಾ ಎಂದು ಗುರುತಿಸಲಾಗಿದೆ. ಇವರು ಭೋಪಾಲ್‌ಗೆ ಹೋಗಲೆಂದು ತನ್ನ ಸಹೋದರಿ ಮತ್ತು ಮೂವರು ಮಕ್ಕಳೊಂದಿಗೆ ನವದೆಹಲಿ ರೈಲು ನಿಲ್ದಾಣಕ್ಕೆ ಬಂದಿದ್ದು, ಈ ವೇಳೆ ಮಳೆ ಬರುತ್ತಿದ್ದರಿಂದ ಆಧಾರವಾಗಿ ವಿದ್ಯುತ್‌ ಕಂಬವನ್ನು ಹಿಡಿದಿದ್ದರು. ಈ ವೇಳೆ ಕಂಬದಿಂದ ಸಾಕ್ಷಿ ಅವರಿಗೆ ವಿದ್ಯುತ್‌ ಪ್ರವಹಿಸಿದೆ. ತಕ್ಷಣವೇ ಸ್ಥಳೀಯರು ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಸಾಕ್ಷಿ ಮೃತಪಟ್ಟಿದ್ದರು

ವಿದ್ಯುತ್ ಶಾಕ್- ಮಹಿಳೆ ಮೃತ್ಯು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ಎಥನಾಲ್ ವಾಹನಗಳು ➤ ಸಾರಿಗೆ ಸಚಿವ ನಿತಿನ್ ಗಡ್ಕರಿ

(ನ್ಯೂಸ್ ಕಡಬ) newskadaba.com ನಾಗಪುರ, ಜೂ. 26. ದೇಶದಲ್ಲಿ ಶೀಘ್ರದಲ್ಲೇ ಸಂಪೂರ್ಣ ಎಥನಾಲ್‌ ಇಂಧನದಿಂದ ಸಂಚರಿಸುವ ವಾಹನಗಳು ರಸ್ತೆಗಿಳಿಯಲಿವೆ ಎಂದು ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಈ ಕುರಿತು ನಾಗಪುರದಲ್ಲಿ ಮಾತನಾಡಿದ ಅವರು, ಸಂಪೂರ್ಣವಾಗಿ 100% ಬಯೋಎಥೆನಾಲ್‌ ನಲ್ಲಿ ಚಲಿಸಬಲ್ಲ ವಾಹನಗಳನ್ನು ಬಜಾಜ್‌, ಟಿವಿಎಸ್‌ ಹಾಗೂ ಹೀರೋ ಸ್ಕೂಟರ್‌ ಕಂಪನಿಗಳು ತಯಾರಿಸಲಿವೆ. ಪ್ರತಿ ಲೀಟರ್‌ ಎಥನಾಲ್‌ ಗೆ 60ರೂ. ಇದ್ದರೆ ಪೆಟ್ರೋಲ್‌ಗೆ 100 ರೂ. ಇದೆ. ಅಲ್ಲದೇ ಎಥನಾಲ್‌ ಶೇ.40ರಷ್ಟು ವಿದ್ಯುತ್‌ ಉತ್ಪಾದನೆ ಮಾಡುವುದರಿಂದ ಪ್ರತಿ

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ಎಥನಾಲ್ ವಾಹನಗಳು ➤ ಸಾರಿಗೆ ಸಚಿವ ನಿತಿನ್ ಗಡ್ಕರಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರತದ ಮಾಜಿ ಹಾಕಿ ಆಟಗಾರ ಮೃತ್ಯು

(ನ್ಯೂಸ್ ಕಡಬ) newskadaba.com ವಾರಣಾಸಿ, ಜೂ. 24. ಭಾರತದ ಮಾಜಿ ಜೂನಿಯರ್ ಹಾಕಿ ಆಟಗಾರ ರಾಜೀವ್ ಕುಮಾರ್ ಮಿಶ್ರಾ (46) ಅವರು ವಾರಣಾಸಿಯ ಸರ್ಸೌಲಿ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ, ರಾಜೀವ್ ಕೆಲವು ದಿನಗಳ ಹಿಂದೆ ಮೃತಪಟ್ಟಿರಬೇಕು ಮತ್ತು ಅವರ ಮನೆಯಿಂದ ದುರ್ವಾಸನೆ ಬರುತ್ತಿದ್ದ ಕಾರಣ ಅವರ ನೆರೆಹೊರೆಯವರು ಪೊಲೀಸರಿಗೆ ನೀಡಿದ ಮಾಹಿತಿಯಂತೆ ಪರಿಶೀಲಿಸಿದಾಗ ವಿಷಯ ಬೆಳಕಿಗೆ ಬಂದಿದೆ. 1997 ರಲ್ಲಿ ನಡೆದ ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ಬೆಳ್ಳಿ ಪದಕವನ್ನು ಗಳಿಸುವಲ್ಲಿ

ಭಾರತದ ಮಾಜಿ ಹಾಕಿ ಆಟಗಾರ ಮೃತ್ಯು Read More »

ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಟ್ರ್ಯಾಕ್ಟರ್ ಗೆ ಢಿಕ್ಕಿ ಹೊಡೆದು ಹಳಿತಪ್ಪಿದ ಗೂಡ್ಸ್ ರೈಲು ➤ 6 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಜೂ. 24. ಟ್ರ್ಯಾಕ್ಟರ್​ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿ ಶನಿವಾರ ನಡೆದಿದೆ. ಇಂದು ಬೆಳಗ್ಗೆ ಬಂಸಿಪಹಾರ್‌ಪುರ-ರೂಪ್ ಬಾಸ್ ರೈಲು ವಿಭಾಗದಲ್ಲಿ ಗೂಡ್ಸ್ ರೈಲೊಂದು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು, ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ಆರು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಿಂದ ಹೆಚ್ಚಿನ ಹಾನಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಟ್ರ್ಯಾಕ್ಟರ್ ಗೆ ಢಿಕ್ಕಿ ಹೊಡೆದು ಹಳಿತಪ್ಪಿದ ಗೂಡ್ಸ್ ರೈಲು ➤ 6 ಮಂದಿಗೆ ಗಾಯ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೇರಳದ 13 ಯೂಟ್ಯೂಬರ್ಸ್ ಗಳ ಮನೆಮೇಲೆ ಐಟಿ ದಾಳಿ ➤ 25 ಕೋಟಿ ರೂ. ತೆರಿಗೆ ವಂಚನೆ

(ನ್ಯೂಸ್ ಕಡಬ) newskadaba.com ಕೊಚ್ಚಿ, ಜೂ. 24.  ಕೇರಳದ ಕೆಲ ಯೂಟ್ಯೂಬರ್ಸ್​ ಮನೆಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಇದೀಗ ತೆರಿಗೆ ವಂಚನೆ ಆರೋಪದಡಿಯಲ್ಲಿ ಕೆಲ ಯೂಟ್ಯೂಬರ್ಸ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ದಾಳಿಯ ವೇಳೆ ಸುಮಾರು 25 ಕೋಟಿ ರೂ. ತೆರಿಗೆಯನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಕೆಲವರು 2 ಕೋಟಿ ರೂಪಾಯಿವರೆಗೂ ತೆರಿಗೆ ಕಟ್ಟಬೇಕಿದ್ದು, ಆದಾಗ್ಯೂ ಕೆಲವರು ಈವರೆಗೂ ಒಂದೇ ಒಂದು ರೂಪಾಯಿ ತೆರಿಗೆ ಹಣ ಕಟ್ಟಿಲ್ಲ ಎಂದು ಐಟಿ ಇಲಾಖೆ ಸ್ಪಷ್ಟಪಡಿಸಿದೆ. ಈ

ಕೇರಳದ 13 ಯೂಟ್ಯೂಬರ್ಸ್ ಗಳ ಮನೆಮೇಲೆ ಐಟಿ ದಾಳಿ ➤ 25 ಕೋಟಿ ರೂ. ತೆರಿಗೆ ವಂಚನೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top