ಬ್ರೇಕಿಂಗ್ ನ್ಯೂಸ್

ತೆಲಂಗಾಣ ಶಾಸಕ ಪ್ರಯಾಣಿಸುತ್ತಿದ್ದ ವಾಹನ ಕಾರ್ಕಳದಲ್ಲಿ ಅಪಘಾತ..!

(ನ್ಯೂಸ್ ಕಡಬ) newskadaba.com ಕಾರ್ಕಳ, ಜೂ. 24. ತೆಲಂಗಾಣದ ಶಾಸಕರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾದ ಘಟನೆ ಮಿಯ್ಯಾರು ಸೇತುವೆ ಬಳಿಯ ಮುಡಾರು- ನಲ್ಲೂರು ಕ್ರಾಸ್ ಬಳಿ ನಡೆದಿದೆ. ತೆಲಂಗಾಣದ ಟೆಂಡೂರ್ ಕ್ಷೇತ್ರದ ಶಾಸಕ ಪಂಚುಗುಲ ರೋಹಿತ್‌ ರೆಡ್ಡಿ ಮಂಗಳೂರಿನಿಂದ ಶೃಂಗೇರಿ ಕ್ಷೇತ್ರಕ್ಕೆ ತೆರಳುತ್ತಿದ್ದ ವೇಳೆ ಮುಡಾರು- ನಲ್ಲೂರು ಕ್ರಾಸ್ ಬಳಿ ತಲುಪುತ್ತಿದ್ದಂತೆ ಕಾರಿನ ಟಯರ್ ಸ್ಪೋಟಗೊಂಡು ಅಪಘಾತ ಸಂಭವಿಸಿದೆ. ಘಟನೆಯಿಂದ ಶಾಸಕರಿಗೆ ಯಾವುದೇ ಗಾಯಗಳಾಗಿಲ್ಲ. ಅಪಘಾತದ ವೇಳೆ ಕಾರು ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಮರವೊಂದರ […]

ತೆಲಂಗಾಣ ಶಾಸಕ ಪ್ರಯಾಣಿಸುತ್ತಿದ್ದ ವಾಹನ ಕಾರ್ಕಳದಲ್ಲಿ ಅಪಘಾತ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಬಾಡಿಗೆಗೆ ಕಾರನ್ನು ಪಡೆದು ಮಾರಾಟ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 24. ನಗರದ ಫಳ್ನೀ ರ್ ನಲ್ಲಿರುವ ಸಂಸ್ಥೆಯೊಂದರಿಂದ ಬಾಡಿಗೆ ಕಾರು ಪಡೆದು ಅದನ್ನು ಮಾರಾಟ ಮಾಡಿದ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳದ ಯಕ್ಷಿತ್ ಎಂಬಾತ ಕಾರೊಂದನ್ನು ಆನ್‌ ಲೈನ್ ಮೂಲಕ ಬುಕ್ ಮಾಡಿ 25 ಸಾವಿರ ರೂ. ಆನ್ಲೈನ್ ಮೂಲಕ ಪಾವತಿಸಿ, ಬಾಕಿ ಇರುವ 50 ಸಾವಿರ ರೂ. ಹಣವನ್ನು ನಗದು ರೂಪದಲ್ಲಿ ನೀಡಿ, ಅದರೊಂದಿಗೆ ಆಧಾರ್ ಕಾರ್ಡ್, ಲೈಸೆನ್ಸ್ ಮತ್ತು 3 ಬ್ಯಾಂಕ್ ಚೆಕ್‌

ಮಂಗಳೂರು: ಬಾಡಿಗೆಗೆ ಕಾರನ್ನು ಪಡೆದು ಮಾರಾಟ ➤ ದೂರು ದಾಖಲು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ನಾಯಿಯನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 23. ನಾಯಿಯೊಂದು ರಸ್ತೆಗೆ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿದ ಸ್ಕೂಟರ್ ಡಿವೈಡರ್ ಗೆ ಢಿಕ್ಕಿ ಹೊಡೆದು, ಗಂಭೀರ ಗಾಯಗೊಂಡ ಸವಾರ ಮೃತಪಟ್ಟ ಘಟನೆ ಯೆಯ್ಯಾಡಿ ಸಮೀಪದ ಶರ್ಬತ್ ಕಟ್ಟೆ ಎಂಬಲ್ಲಿ ಇಂದು ನಡೆದಿದೆ.   ಮೃತರನ್ನು ಮರೋಳಿ ಬಜ್ಜೋಡಿ ನಿವಾಸಿ ನರಸಿಂಹ ಗಟ್ಟಿ (67) ಎಂದು ಗುರುತಿಸಲಾಗಿದೆ. ಇವರು ಇಂದು ಬೆಳಗ್ಗೆ ಮನೆಯಿಂದ ಯೆಯ್ಯಾಡಿ ಕಡೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದ ಸಂದರ್ಭ ನಾಯಿಯೊಂದು ಅಡ್ಡದಾಟಿದ ಪರಿಣಾಮ ನಿಯಂತ್ರಣ ತಪ್ಪಿದ ಸ್ಕೂಟರ್

ನಾಯಿಯನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ➤ ಸವಾರ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮದ್ಯ ಸೇವಿಸಿ ಫುಲ್ ಟೈಟಾದ ಪೊಲೀಸರು ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ರಾಮನಗರ, ಜೂ. 23. ಕರ್ತವ್ಯ ನಿರತ ಮಾಗಡಿ ಪೊಲೀಸರು ಕಂಠಪೂರ್ತಿ ಕುಡಿದುಬಂದು ಸಾರ್ವಜನಿಕರೊಂದಿಗೆ ಕಿರಿಕ್ ಮಾಡಿದ ಪ್ರಸಂಗ ರಾಮನಗರದಲ್ಲಿ ನಡೆದಿದೆ. ಮಾಗಡಿ ಠಾಣೆಯ ಎಎಸ್ಐ ಮತ್ತು ಕ್ರೈಂ ಪಿಸಿ ಸಹಿತ ಮತ್ತಿಬ್ಬರು ಮೋಜುಮಸ್ತಿ ಮಾಡಿದ್ದಾರೆ. ಮಾಗಡಿ ಠಾಣೆಯಲ್ಲಿದ್ದ ಕೈದಿಯನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಬಿಡಲು ಬಂದಿದ್ದ ಪೊಲೀಸರು ಮಾಗಡಿಗೆ ಹಿಂತಿರುಗುವಾಗ ಫುಲ್ ಟೈಟ್ ಆಗಿದ್ದು, ಮೈಮೇಲೆ ಪ್ರಜ್ಞೆ ಇಲ್ಲದ ಪೊಲೀಸರು ಸಮವಸ್ತ್ರವನ್ನು ಕಳಚಿಟ್ಟಿದ್ದರು. ಈ ವೇಳೆ ಕಾರು ಚಾಲಕನೊಂದಿಗೆ ಕಿರಿಕ್ ಮಾಡಿದ್ದ ಇವರು,

ಮದ್ಯ ಸೇವಿಸಿ ಫುಲ್ ಟೈಟಾದ ಪೊಲೀಸರು ➤ ವಿಡಿಯೋ ವೈರಲ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಿಧಿಯಾಸೆಗೆ 15 ಅಡಿ ಆಳದ ಗುಂಡಿ ತೋಡಿದ ಕಿಡಿಗೇಡಿಗಳು ➤ ಸ್ಥಳದಲ್ಲಿ ಉಡುಪಿ ನೋಂದಣಿಯ ಕಾರು ಪತ್ತೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜೂ. 23. ನಿಧಿ ಶೋಧದ ತಂಡವೊಂದು ನಿರ್ಜನ ಪ್ರದೇಶದಲ್ಲಿ ಸುಮಾರು 10 ಅಡಿ ಅಗಲ, 15 ಅಡಿ ಆಳದ ಗುಂಡಿ ತೋಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಆಣೂರು ಸಮೀಪದ ಕೆಸರಿಕೆ‌ ಗ್ರಾಮದಲ್ಲಿ ನಡೆದಿದೆ.   ಗುಂಡಿ ತೋಡಲು ನಿಧಿ ಶೋಧ ತಂಡವು ಉಡುಪಿ ನೋಂದಣಿ ಸಂಖ್ಯೆ ಇರುವ ಎರಡು ಕಾರಿನಲ್ಲಿ ಬಂದಿದ್ದು, ಕೆಸರಿಕೆ ಗ್ರಾಮದಲ್ಲಿ ಪೂಜೆ ನಡೆಸಿದ್ದು, ಇನ್ನು ಘಟನಾ ಸ್ಥಳದಲ್ಲಿ ಅರಿಶಿಣ-ಕುಂಕುಮ, ಕುಂಬಳಕಾಯಿ, ಕೋಳಿ, ಕಾಯಿ, ಸೇರಿ ವಿವಿಧ ವಸ್ತುಗಳು

ನಿಧಿಯಾಸೆಗೆ 15 ಅಡಿ ಆಳದ ಗುಂಡಿ ತೋಡಿದ ಕಿಡಿಗೇಡಿಗಳು ➤ ಸ್ಥಳದಲ್ಲಿ ಉಡುಪಿ ನೋಂದಣಿಯ ಕಾರು ಪತ್ತೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗುಂಡ್ಯ: ಕಂಟೇನರ್ ಹಾಗೂ ಕಾರಿನ ನಡುವೆ ಅಪಘಾತ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ. 22. ಕಂಟೇನರ್ ಹಾಗೂ ಕಾರಿನ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮೂವರು ಗಾಯಗೊಂಡ ಘಟನೆ ಮಂಗಳೂರು- ಬೆಂಗಳೂರು ರಾ. ಹೆದ್ದಾರಿಯ ಗುಂಡ್ಯದಲ್ಲಿ ನಡೆದಿದೆ. ಧರ್ಮಸ್ಥಳದಿಂದ ಗುಂಡ್ಯ ಮೂಲಕ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕಾರು ಹಾಗೂ ಕಂಟೇನರ್ ನಡುವೆ ಗುಂಡ್ಯ ಸಮೀಪ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಗುಂಡ್ಯ: ಕಂಟೇನರ್ ಹಾಗೂ ಕಾರಿನ ನಡುವೆ ಅಪಘಾತ ➤ ಮೂವರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೋವಿನ್ ಪೋರ್ಟಲ್ ನಿಂದ ಮಾಹಿತಿ ಸೋರಿಕೆ ಆರೋಪ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 22. ಕೋವಿನ್ ಪೋರ್ಟಲ್‌ ನಿಂದ ಡೇಟಾ ಸೋರಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಿಹಾರದಲ್ಲಿ ಬಂಧಿಸಿದ್ದಾರೆ. ಪ್ರಮುಖ ಆರೋಪಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಇತರರ ಸೂಕ್ಷ್ಮ ವೈಯಕ್ತಿಕ ವಿವರಗಳನ್ನು ಸಾಮಾಜಿಕ ಮಾಧ್ಯಮ ಟೆಲಿಗ್ರಾಮ್‌ ನಲ್ಲಿ ಸೋರಿಕೆ ಮಾಡಿದ್ದಾನೆ ಎಂಬ ಆರೋಪವಿದ್ದು, ಇನ್ನೋರ್ವ ಆರೋಪಿ ಬಾಲಾಪರಾಧಿಯಾಗಿದ್ದಾನೆಂದು ತಿಳಿದುಬಂದಿದೆ. ನಾಗರಿಕರ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡ ಟೆಲಿಗ್ರಾಮ್ ಬಾಟ್ ಅನ್ನು ರಚಿಸಿದ ನಂತರ ಆರೋಪಿಯನ್ನು ಆತನ ನಿವಾಸದಿಂದ ಬಂಧಿಸಲಾಗಿದೆ ಎಂದು

ಕೋವಿನ್ ಪೋರ್ಟಲ್ ನಿಂದ ಮಾಹಿತಿ ಸೋರಿಕೆ ಆರೋಪ ➤ ಇಬ್ಬರ ಬಂಧನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

2 ಬಲ್ಬ್ ಇರುವ ಮನೆಗೆ ಒಂದು ಲಕ್ಷ ರೂ. ಕರೆಂಟ್ ಬಿಲ್ ➤ ಆತಂಕಕ್ಕೊಳಗಾದ ವೃದ್ದೆ

(ನ್ಯೂಸ್ ಕಡಬ) newskadaba.com ಕೊಪ್ಪಳ, ಜೂ. 22. ವೃದ್ಧೆಯೊಬ್ಬರ 2 ಬಲ್ಬ್ ಇರುವ ತಗಡಿನ ಶೆಡ್‍ನ ಮನೆಗೆ ಜೆಸ್ಕಾಂ ಸಿಬ್ಬಂದಿ 1 ಲಕ್ಷದ 3 ಸಾವಿರದ 315 ರೂ. ಬಿಲ್ ನೀಡಿದ ಕುತೂಹಲಕಾರಿ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಿರಿಜಮ್ಮ ಎಂಬವರು ಮನೆಗೆ ಭಾಗ್ಯ ಜ್ಯೋತಿ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದು, ಇವರಿಗೆ ಪ್ರತಿ ತಿಂಗಳು 70 ರೂ. ನಿಂದ 80 ರೂ. ಬಿಲ್ ಬರುತ್ತಿತ್ತು. ಅದರೆ ಈಗ ಇದ್ದಕ್ಕಿದ್ದಂತೆ ಇಷ್ಟು ಬಿಲ್ ನ್ನು ನೋಡಿ ವೃದ್ಧೆ ಹಾಗೂ

2 ಬಲ್ಬ್ ಇರುವ ಮನೆಗೆ ಒಂದು ಲಕ್ಷ ರೂ. ಕರೆಂಟ್ ಬಿಲ್ ➤ ಆತಂಕಕ್ಕೊಳಗಾದ ವೃದ್ದೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಲಿಂಗ ಬದಲಾಯಿಸಲು ನಿರ್ಧರಿಸಿದ ಮಾಜಿ ಸಿಎಂ ಪುತ್ರಿ

(ನ್ಯೂಸ್ ಕಡಬ) newskadaba.com ಕೋಲ್ಕತ್ತಾ, ಜೂ. 22. ಲಿಂಗ ಬದಲಾವಣೆಗೆ ನಿರ್ಧರಿಸಿರುವ  ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ಪುತ್ರಿ ಸುಚೇತನಾ ಭಟ್ಟಾಚಾರ್ಯ ಎಂಬವರು “ಟ್ರಾನ್ಸ್ ಮ್ಯಾನ್” ಆಗಿ ಬದಲಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇತ್ತೀಚೆಗೆ LGBTQ ಸಮುದಾಯದ ಜೀವನೋಪಾಯದ ಕುರಿತಂತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಅವರು, ನಾನು ದೈಹಿಕವಾಗಿ ಪುರುಷನಾಗಲು ಇಚ್ಛಿಸುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ (ಎಸ್‌ಆರ್‌ಎಸ್) ಒಳಗಾಗುವುದಾಗಿ ಹೇಳಿದ್ದಾರೆ.        

ಲಿಂಗ ಬದಲಾಯಿಸಲು ನಿರ್ಧರಿಸಿದ ಮಾಜಿ ಸಿಎಂ ಪುತ್ರಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಂಟ್ವಾಳ: ಸವಾದ್ ಕೊಲೆ ಪ್ರಕರಣ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 22. ಬಂಟ್ವಾಳದ ಸವಾದ್ ಎಂಬಾತನನ್ನು ಕೊಲೆ‌ ಮಾಡಿ ಮೂಡಿಗೆರೆ ಪ್ರವಾಸಿ ತಾಣ ದೇವರಮನೆ ಗಡ್ಡೆಯ ಬಳಿ ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳ ಮೂಲದ ರಿಜ್ವಾನ್ ಮತ್ತು ಝೈನುಲ್ಲಾ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮೃತದೇಹದ ಪತ್ತೆಯ ಬಳಿಕ ಪ್ರಕರಣದ ತನಿಖೆ ಕೈಗೊಂಡಿದ್ದ ಮೂಡಿಗೆರೆ ವೃತ್ತ ನಿರೀಕ್ಷಕ ಸೋಮಶೇಖರ್ ಮತ್ತು ಬಣಕಲ್ ಎಸ್.ಐ.

ಬಂಟ್ವಾಳ: ಸವಾದ್ ಕೊಲೆ ಪ್ರಕರಣ ➤ ಇಬ್ಬರ ಬಂಧನ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top