(ನ್ಯೂಸ್ ಕಡಬ) newskadaba.com ಮಂಗಳೂರು, ಜು. 28. ರಸ್ತೆಯಲ್ಲಿನ ಹಂಪ್ಸ್ ಗೆ ಸಿಲುಕಿ ದ್ವಿಚಕ್ರ ವಾಹನ ಸವಾರನೋರ್ವ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಗರದ ಫಳ್ನೀರ್ ನಲ್ಲಿ ನಡೆದಿದೆ.

ಮೃತ ಯುವಕನನ್ನು ಶಕ್ತಿನಗರದ ಮುತ್ತುರಾಜ್ (20)ಎಂದು ಗುರುತಿಸಲಾಗಿದೆ. ಈತ ರಾತ್ರಿ ಸುಮಾರು 8.30ಕ್ಕೆ ಕಂಕನಾಡಿಯಿಂದ ವೆನ್ಲಾಕ್ ಕಡೆಗೆ ದ್ವಿಚಕ್ರದಲ್ಲಿ ತೆರಳುತ್ತಿದ್ದ ಸಂದರ್ಭ ಫಳ್ನೀರ್ ನ ಹೈಲ್ಯಾಂಡ್ ಆಸ್ಪತ್ರೆ ಮುಂಬಾಗದಲ್ಲಿ ಅಳವಡಿಸಲಾದ ಹಂಪ್ಸ್ ಗೆ ಸಿಲುಕಿ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಈತನನ್ನು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.










