ಬ್ರೇಕಿಂಗ್ ನ್ಯೂಸ್

ಮೀನುಗಾರನ ಅದೃಷ್ಟ ಬದಲಾಯಿಸಿದ ಮೀನು..!

(ನ್ಯೂಸ್ ಕಡಬ) newskadaba.com ಜೂ. 21. ಮೀನು ಹಿಡಿಯಲೆಂದು ಬಲೆ ಬೀಸಿದ ಮೀನುಗಾರನಿಗೆ ಸಿಕ್ಕಿದ ತಿಲಿಯಾ ಭೋಮಾ ಹೆಸರಿನ ಮೀನುಗಳಿಂದ ಒಡಿಶಾದ ಬಾಲಸೋರ್‌ನ ನಾನಿ ಗೋಪಾಲ್‌ ಎನ್ನುವ ಮೀನುಗಾರರನ ಬಾಳಲ್ಲಿ ಅದೃಷ್ಟ ಒಲಿದಿದೆ. ಅಷ್ಟಕ್ಕೂ ಈ ಮೀನು ಈ ಮೀನುಗಾರ ಬಲೆಗೆ ಬಿದ್ದಿರುವುದು ಒಂದೆರಡಲ್ಲ ಭರ್ಜರಿ 29 ಮೀನುಗಳು. ಪ್ರತಿ ಮೀನು ಬರೋಬ್ಬರಿ 20 ಕೆಜಿಗಿಂತ ಹೆಚ್ಚು ತೂಗುತ್ತದೆ. ಈ ಮೀನುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದು, ಇವುಗಳನ್ನು ಖರೀದಿ ಮಾಡಲು ವ್ಯಾಪಾರಿಗಳು ಭಾರೀ ಪೈಪೋಟಿ ಮಾಡುತ್ತಾರೆ. ಅಂದ […]

ಮೀನುಗಾರನ ಅದೃಷ್ಟ ಬದಲಾಯಿಸಿದ ಮೀನು..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ 7 ಪಿಎಸ್ಐ, 31 ಹೆಚ್.ಸಿ, 78 ಪಿಸಿಗಳ ಸಹಿತ ಜಿಲ್ಲೆಯ 116 ಸಿಬ್ಬಂದಿಗಳ ವರ್ಗಾವಣೆ

(ನ್ಯೂಸ್ ಕಡಬ) newskadaba.com ಜೂ. 20. ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಗುರಿಯನ್ನು ಹೊಂದಿರುವ ಮಹತ್ವದ ಆಡಳಿತಾತ್ಮಕ ಸುಧಾರಣೆಯಲ್ಲಿ ಮಂಗಳೂರು ನಗರ ಕಮಿಷನರೇಟ್ ಮತ್ತು ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಕಡಬ, ವಿಟ್ಲ, ಬೆಳ್ಳಾರೆ ಹಾಗೂ ಸುಬ್ರಹ್ಮಣ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿನ 7 ಮಂದಿ ಎ.ಎಸ್.ಐ, 31 ಮಂದಿ ಹೆಡ್‌ಕಾನ್‌ಸ್ಟೇಬಲ್ ಮತ್ತು 78 ಮಂದಿ ಕಾನ್‌ಸ್ಟೇಬಲ್‌ಗಳನ್ನು ವರ್ಗಾವಣೆಗೊಳಿಸಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್

ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ 7 ಪಿಎಸ್ಐ, 31 ಹೆಚ್.ಸಿ, 78 ಪಿಸಿಗಳ ಸಹಿತ ಜಿಲ್ಲೆಯ 116 ಸಿಬ್ಬಂದಿಗಳ ವರ್ಗಾವಣೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಯಾವುದೇ ದೋಷಗಳಿರಲಿಲ್ಲ ಸಿಇಒ ಕ್ಯಾಂಪ್ ಬೆಲ್ ವಿಲ್ಸನ್

(ನ್ಯೂಸ್ ಕಡಬ) newskadaba.com ಜೂ. 20. ಗುಜರಾತಿನ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್‌ಇಂಡಿಯಾ ವಿಮಾನದಲ್ಲಿ ಯಾವುದೇ ದೋಷಗಳಿರಲಿಲ್ಲ, ವಿಮಾನದಲ್ಲಿ ನಿಯಮಿತ ತಪಾಸಣೆಗಳನ್ನು ಮಾಡಲಾಗುತ್ತಿತ್ತು ಎಂದು ಏರ್‌ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್‌ ವಿಲ್ಸನ್‌ ಹೇಳಿದ್ದಾರೆ. ಈ ಕುರಿತು ಕೇಂದ್ರ ವಾಯುಯಾನ ಸಚಿವಾಲಯ ನಿರ್ಧಾರ ಮಾಡಲಿದೆ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.   ದುರಂತಕ್ಕೀಡಾದ ಏರ್ ಇಂಡಿಯಾದ ಕೊನೆಯ ತಪಾಸಣೆ 2023 ರ ಜೂನ್‌ನಲ್ಲಿ ನಡೆದಿತ್ತು. ಮುಂದಿನ ತಪಾಸಣೆ ಡಿಸೆಂಬರ್‌ ತಿಂಗಳಿನಲ್ಲಿ ಆಗಬೇಕಿತ್ತು. ಬಲಭಾಗದ ಎಂಜಿನ್‌ನ ದುರಸ್ತಿ ಕಾರ್ಯ ಮಾರ್ಚ್‌ನಲ್ಲಿ ನಡೆಸಲಾಗಿತ್ತು.

ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಯಾವುದೇ ದೋಷಗಳಿರಲಿಲ್ಲ ಸಿಇಒ ಕ್ಯಾಂಪ್ ಬೆಲ್ ವಿಲ್ಸನ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮರದ ಕೊಂಬೆ ಬಿದ್ದು ಯುವಕ ಮೃತ್ಯು- ಕಣ್ಣುಗಳನ್ನು ದಾನ ಮಾಡಿದ ಕುಟುಂಬ

(ನ್ಯೂಸ್ ಕಡಬ) newskadaba.com ಜೂ. 20. ಮರದ ಕೊಂಬೆ ಬಿದ್ದ ಪರಿಣಾಮ ಪ್ರಜ್ಞೆ ಕಳೆದುಕೊಂಡು ಕೋಮಾಸ್ಥಿತಿಯಲ್ಲಿದ್ದ ಯುವಕ ಅಕ್ಷಯ್‌ ಮೃತಪಟ್ಟಿದ್ದು, ಈ ಬೆನ್ನಲ್ಲೇ ಆತನ ಕುಟುಂಬಸ್ಥರು ಕಣ್ಣು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಜೂನ್‌ 15 ರಂದು ಬೆಂಗಳೂರಿನ ಬನಶಂಕರಿ ಬಳಿ ಅಕ್ಷಯ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ಆತನ ತಲೆಯ ಮೇಲೆ ಮರದ ಕೊಂಬೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಲೆಗೆ ತೀವ್ರತರದ ಪೆಟ್ಟು ಬಿದ್ದಿದ್ದರಿಂದ ಆತನ ಬ್ರೈನ್‌ ಡೆಡ್‌ ಆಗಿದೆ ಎಂದು ವೈದ್ಯರು ಘೋಷಣೆ ಮಾಡಿದ್ದು, ಆದರೆ

ಮರದ ಕೊಂಬೆ ಬಿದ್ದು ಯುವಕ ಮೃತ್ಯು- ಕಣ್ಣುಗಳನ್ನು ದಾನ ಮಾಡಿದ ಕುಟುಂಬ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಿಎಂ ಸಿದ್ದರಾಮಯ್ಯಗೆ ಕೋರ್ಟ್ ನೋಟೀಸ್..!

(ನ್ಯೂಸ್ ಕಡಬ) newsksdaba.com ಜೂ. 19. ಅತಿಹೆಚ್ಚು ಅಪರಾಧ ಕೃತ್ಯಗಳಾಗುತ್ತಿರುವುದೇ ಆರಸ್ಸೆಸ್​ ಮತ್ತು ಬಜರಂಗದಳದಿಂದ ಎಂದು ಸಿಎಂ ಸಿದ್ದರಾಮಯ್ಯರವರು ಸದನದಲ್ಲೇ ಬಹಿರಂಗವಾಗಿ ಟೀಕಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯವು ಸಿಎಂ ಗೆ ನೋಟಿಸ್ ಜಾರಿ ಮಾಡಿದ್ದು, ಜೂನ್ 26ರೊಳಗೆ ಕೋರ್ಟ್ ನೋಟಿಸ್​ ಗೆ ಉತ್ತರಿಸಬೇಕು ಎಂದು ಹೇಳಲಾಗಿದೆ.   ಅತಿಹೆಚ್ಚು ಅಪರಾಧ ಕೃತ್ಯಗಳಾಗುತ್ತಿರುವುದೇ ಆರ್‌ಎಸ್‌ಎಸ್‌ ಬಜರಂಗದಳದಿಂದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲೇ ಹೇಳಿಕೆ ನೀಡಿದ್ದರಿಂದ ಇಡೀ ಸದನವೇ ಅಲ್ಲೋಲ ಕಲ್ಲೋಲವಾಗಿತ್ತು. ಅಲ್ಲದೇ ಬಿಜೆಪಿ ಶಾಸಕರು

ಸಿಎಂ ಸಿದ್ದರಾಮಯ್ಯಗೆ ಕೋರ್ಟ್ ನೋಟೀಸ್..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಏರ್ ಇಂಡಿಯಾ ಕೋ-ಪೈಲಟ್ ಕ್ಲೈವ್ ಕುಂದರ್ ಅಂತ್ಯಕ್ರಿಯೆ- ಕುಟುಂಬದಿಂದ ಅಂತಿಮ ವಿದಾಯ

(ನ್ಯೂಸ್ ಕಡಬ) newsksdaba.com ಜೂ. 19. ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದಲ್ಲಿ ಮೃತಪಟ್ಟ ವಿಮಾನದ ಸಹ ಪೈಲಟ್ ಕ್ಲೈವ್ ಕುಂದರ್ ಅವರ ಮೃತದೇಹವನ್ನು ಗುರುವಾರದಂದು ಬೆಳಗ್ಗೆ ಮುಂಬೈನಲ್ಲಿರುವ ಅವರ ಮನೆಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಹ-ಪೈಲಟ್ ಮೃತದೇಹವನ್ನು ಹೊತ್ತ ಶವಪೆಟ್ಟಿಗೆಯನ್ನು ಮುಂಬೈ ವಿಮಾನ ನಿಲ್ದಾಣಕ್ಕೆ ತಲುಪಿಸಿ, ಗೋರೆಗಾಂವ್ (ಪಶ್ಚಿಮ)ನ ರಾಮ ಮಂದಿರ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ತರಲಾಯಿತು. ಕ್ಲೈವ್ ಕುಂದರ್ ತಮ್ಮ ವೃದ್ಧ ಪೋಷಕರು ಮತ್ತು ತಂಗಿಯೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದು, ಪಾರ್ಥಿವ ಶರೀರವನ್ನು ಕ್ಲೈವ್

ಏರ್ ಇಂಡಿಯಾ ಕೋ-ಪೈಲಟ್ ಕ್ಲೈವ್ ಕುಂದರ್ ಅಂತ್ಯಕ್ರಿಯೆ- ಕುಟುಂಬದಿಂದ ಅಂತಿಮ ವಿದಾಯ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತಂದೆ-ಮಗ ಒಟ್ಟಿಗೇ ಕಾನ್ ಸ್ಟೇಬಲ್ ಗಳಾಗಿ ಆಯ್ಕೆ

(ನ್ಯೂಸ್ ಕಡಬ) newsksdaba.com ಮಂಗಳೂರು, ಜೂ. 19. ಪೊಲೀಸ್ ಪರೀಕ್ಷೆಯಲ್ಲಿ ತಂದೆ ಮತ್ತು ಮಗ ಇಬ್ಬರೂ ಒಟ್ಟಿಗೆ ಪಾಸಾಗಿದ್ದು, ಅಲ್ಲದೆ ಇಬ್ಬರೂ ಜೊತೆಯಾಗಿ ನೇಮಕಾತಿಯನ್ನು ಪಡೆದಿರುವ ಅಪರೂಪದ ವಿದ್ಯಮಾನವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಹಾಪುರದ ನಿವೃತ್ತ ಯೋಧ ಯಶ್ಪಾಲ್ ಸಿಂಗ್ ಮತ್ತು ಅವರ 21 ವರ್ಷದ ಮಗ ಶೇಖರ್ ಎರಡೂವರೆ ವರ್ಷಗಳ ತಯಾರಿಯ ನಂತರ ಯುಪಿ ಪೊಲೀಸ್ ಪರೀಕ್ಷೆಯನ್ನು ಒಟ್ಟಿಗೆ ಪಾಸ್ ಮಾಡಿ ಇದೀಗ ಪೊಲೀಸ್ ಕಾನ್ಸ್ಟೇಬಲ್‌ಗಳಾಗಿ ಆಯ್ಕೆಯಾಗಿದ್ದಾರೆ. ಇವರಿಬ್ಬರೂ ಲಕ್ನೋದಲ್ಲಿ ನಡೆದ ಸಮಾರಂಭದಲ್ಲಿ ಗೃಹ

ತಂದೆ-ಮಗ ಒಟ್ಟಿಗೇ ಕಾನ್ ಸ್ಟೇಬಲ್ ಗಳಾಗಿ ಆಯ್ಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಪರೇಷನ್ ಸಿಂಧು ಯುದ್ದಪೀಡಿತ ಇರಾನ್ ನಿಂದ 110 ಭಾರತೀಯರ ರಕ್ಷಣೆ

(ನ್ಯೂಸ್ ಕಡಬ) newskadaba.com ಜೂ. 19. ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಿಂದ ಅತಂತ್ರ ಸ್ಥಿತಿಯಲ್ಲಿದ್ದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ಹಮ್ಮಿಕೊಂಡಿರುವ ಆಪರೇಷನ್ ಸಿಂಧು ಕಾರ್ಯಾಚರಣೆಯ ಮೊದಲ ಭಾಗವಾಗಿ, ಇರಾನ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ 110 ಮಂದಿ ಭಾರತೀಯ ವಿದ್ಯಾರ್ಥಿಗಳನ್ನು ಗುರುವಾರ ಮುಂಜಾನೆ ಅರ್ಮೇನಿಯಾದ ಯೆರೆವಾನ್ ನಿಂದ ದೆಹಲಿಗೆ ಕರೆ ತರಲಾಯಿತು. ಭಾರತೀಯ ರಾಜತಾಂತ್ರಿಕ ಕಚೇರಿಯ ಸಂಘಟಿತ ಪ್ರಯತ್ನದ ಫಲವಾಗಿ ಟೆಹರಾನ್ ನಲ್ಲಿ ವಾಸವಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರಲಾಗಿದೆ ಎಂದು ವಿದೇಶಾಂಗ

ಆಪರೇಷನ್ ಸಿಂಧು ಯುದ್ದಪೀಡಿತ ಇರಾನ್ ನಿಂದ 110 ಭಾರತೀಯರ ರಕ್ಷಣೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

FASTag ಆಧಾರಿತ ವಾರ್ಷಿಕ ಪಾಸ್ ಘೋಷಿಸಿದ ಕೇಂದ್ರ ಸರಕಾರ ಆ.15ರಿಂದ ಜಾರಿಗೆ

(ನ್ಯೂಸ್ ಕಡಬ) newskadaba.com ಜೂ. 18. ಇನ್ನುಮುಂದೆ ಹೆದ್ದಾರಿಯಲ್ಲಿ ಯಾವುದೇ ತೊಂದರೆಯಿಲ್ಲದೇ ಪ್ರಯಾಣಕ್ಕೆ ಅನುಕೂಲವಾಗುವಂತೆ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿರುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬುಧವಾರದಂದು ಘೋಷಣೆ ಮಾಡಿದೆ. ಈ ಕುರಿತು X ನಲ್ಲಿ ಪೋಸ್ಟ್ ಮಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, 2025ರ ಆಗಸ್ಟ್ 15ರಿಂದ ಜಾರಿಗೆ ಬರುವಂತೆ ಒಂದು ವರ್ಷಕ್ಕೆ ಈ ಪಾಸ್‌ ನ ಬೆಲೆ 3,000 ರೂ.ಗಳಾಗಿರುತ್ತದೆ ಎಂದು ಹೇಳಿದ್ದಾರೆ. ಇತ್ತೀಚಿನ ಫಾಸ್ಟ್ಟ್ಯಾಗ್ ಪಾಸ್ ಕಾರುಗಳು, ಜೀಪ್

FASTag ಆಧಾರಿತ ವಾರ್ಷಿಕ ಪಾಸ್ ಘೋಷಿಸಿದ ಕೇಂದ್ರ ಸರಕಾರ ಆ.15ರಿಂದ ಜಾರಿಗೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜ್ವಾಲಾಮುಖಿ ಸ್ಫೋಟ- ದೆಹಲಿಗೆ ವಾಪಸಾದ ಏರ್ ಇಂಡಿಯಾ

(ನ್ಯೂಸ್ ಕಡಬ) newskadaba.com ಜೂ. 18. ಬಾಲಿ ವಿಮಾನ ನಿಲ್ದಾಣದ ಬಳಿ ಜ್ವಾಲಾಮುಖಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ದೆಹಲಿಯಿಂದ ಬಾಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮತ್ತೆ ದೆಹಲಿಗೆ ವಾಪಸ್ ಆಗಿದೆ. ಪ್ರಯಾಣಿಕರ ಸುರಕ್ಷತಾ ಹಿತದೃಷ್ಟಿಯಿಂದ ದೆಹಲಿಗೆ ಹಿಂತಿರುಗುವಂತೆ ಸೂಚಿಸಲಾಯಿತು. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್ ಆಗಿದ್ದು, ದೆಹಲಿ ಏರ್ ಪೋರ್ಟ್ ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಇನ್ನೊಂದೆಡೆ ಬಾಲಿಗೆ ತೆರಳಬೇಕಿದ್ದ ಏರ್ ಇಂಡಿಯಾ, ಸಿಂಗಾಪುರ್ ಏರ್ ಲೈನ್ಸ್, ಏರ್ ನ್ಯೂಜಿಲ್ಯಾಂಡ್, ಜೆಟ್ ಸ್ಟಾರ್,

ಜ್ವಾಲಾಮುಖಿ ಸ್ಫೋಟ- ದೆಹಲಿಗೆ ವಾಪಸಾದ ಏರ್ ಇಂಡಿಯಾ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top