ಬ್ರೇಕಿಂಗ್ ನ್ಯೂಸ್

ಐಫೋನ್ ಬದಲು ಎಣ್ಣೆ ಪಾರ್ಸೆಲ್! ಫ್ಲಿಪ್‌ಕಾರ್ಟ್‌ಗೆ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

(ನ್ಯೂಸ್‌ ಕಡಬ) newskadaba.com,  ಜು.24: ಆನ್‌ಲೈನ್‌ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಐಫೋನ್ ಆರ್ಡರ್ ಮಾಡಿದ ಗ್ರಾಹಕನಿಗೆ ಫೋನ್ ಬದಲಿಗೆ ‘ಗಡ್ಡ ಬೆಳೆಸುವ ಎಣ್ಣೆ’ಕಳುಹಿಸಿದ್ದ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ಗೆ ಮುಂಬೈನ ಗ್ರಾಹಕ ನ್ಯಾಯಾಲಯ ಭಾರಿ ದಂಡ ವಿಧಿಸಿದೆ. ಏಪ್ರಿಲ್ 2023ರಲ್ಲಿ ಮುಂಬೈನ ಪೊವೈ ನಿವಾಸಿಯೊಬ್ಬರು ಫ್ಲಿಪ್‌ಕಾರ್ಟ್‌ನಲ್ಲಿ ₹1,11,793 ಮೌಲ್ಯದ ಆ್ಯಪಲ್ ಐಫೋನ್ 14 ಪ್ರೊ ಆರ್ಡರ್ ಮಾಡಿದ್ದರು. ಆದರೆ, ಪಾರ್ಸೆಲ್ ಓಪನ್ ಮಾಡಿದಾಗ ಅದರಲ್ಲಿ ಫೋನ್ ಬದಲು ಗಡ್ಡದ ಎಣ್ಣೆ ಬಾಟಲಿ ಪತ್ತೆಯಾಗಿತ್ತು. ಗ್ರಾಹಕ ಸಾಕ್ಷ್ಯಗಳೊಂದಿಗೆ ದೂರು ನೀಡಿದರೂ, […]

ಐಫೋನ್ ಬದಲು ಎಣ್ಣೆ ಪಾರ್ಸೆಲ್! ಫ್ಲಿಪ್‌ಕಾರ್ಟ್‌ಗೆ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಕಲಿ PhD ಪ್ರಮಾಣಪತ್ರ ನೀಡಿ ಉದ್ಯೋಗ: 249 ಅತಿಥಿ ಉಪನ್ಯಾಸಕರ ವಿರುದ್ಧ ಕ್ರಿಮಿನಲ್ ಕೇಸ್

(ನ್ಯೂಸ್‌ ಕಡಬ) newskadaba.com,  ಜು.24:  ಕರ್ನಾಟಕದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ನಕಲಿ PhD ಪ್ರಮಾಣಪತ್ರ ನೀಡಿ ಉದ್ಯೋಗ ಪಡೆದಿದ್ದ 249 ಅತಿಥಿ ಉಪನ್ಯಾಸಕರ ವಂಚನೆ ಬೆಳಕಿಗೆ ಬಂದಿದೆ.ಸಂಬಂಧಿತ ಉಪನ್ಯಾಸಕರನ್ನು ತಕ್ಷಣವೇ ಸೇವೆಯಿಂದ ಬಿಡುಗಡೆಗೊಳಿಸಿ, ಭವಿಷ್ಯದ ನೇಮಕಾತಿಗಳಿಂದ ಕಪ್ಪುಪಟ್ಟಿಗೆ ಸೇರಿಸಲು ಆದೇಶಿಸಲಾಗಿದೆ. ಇಲಾಖೆಯ ಆಯುಕ್ತರು ಎಲ್ಲಾ 249 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, 1 ವಾರದೊಳಗೆ ಅನುಪಾಲನಾ ವರದಿ ಸಲ್ಲಿಸುವಂತೆ ಕಾಲೇಜು ಪ್ರಾಂಶುಪಾಲರಿಗೆ ಸೂಚಿಸಿದ್ದಾರೆ.ಒಟ್ಟು 249 ಪ್ರಕರಣಗಳಲ್ಲಿ 148 ಪ್ರಕರಣಗಳು ಕಲ್ಯಾಣ ಕರ್ನಾಟಕ ಭಾಗದಲ್ಲೇ ವರದಿಯಾಗಿವೆ. ಕಲಬುರಗಿ

ನಕಲಿ PhD ಪ್ರಮಾಣಪತ್ರ ನೀಡಿ ಉದ್ಯೋಗ: 249 ಅತಿಥಿ ಉಪನ್ಯಾಸಕರ ವಿರುದ್ಧ ಕ್ರಿಮಿನಲ್ ಕೇಸ್ Read More »

ಉದ್ಯೋಗ, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕೇಂದ್ರ ಮಾಸ್ಟರ್ ಪ್ಲಾನ್: ಶಿಕ್ಷೆ ಅವಧಿ 10 ವರ್ಷಕ್ಕೆ ಏರಿಕೆ ಸಾಧ್ಯತೆ!

(ನ್ಯೂಸ್‌ ಕಡಬ) newskadaba.com,  ಜು. 24:ದೇಶದಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳನ್ನು ತಡೆಯಲು ಹಾಲಿ ಇರುವ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ 2024 ಕ್ಕೆ ತಿದ್ದುಪಡಿ ತರಲು ಯೋಜನೆ ರೂಪಿಸಲಾಗಿದ್ದು, ಕೇಂದ್ರ ಸಚಿವ ಸಂಪುಟದ ಅನುಮೋದನೆ ಸಿಗುವ ಸಾಧ್ಯತೆಯಿದೆ. ಹಾಲಿ ನಿಯಮವು 3 ರಿಂದ 5 ವರ್ಷ ಜೈಲು ಶಿಕ್ಷೆ ಮತ್ತು ₹10 ಲಕ್ಷದವರೆಗೆ ದಂಡ  ಇತ್ತು.ಆದರೆ ಪ್ರಸ್ತಾವಿತ ತಿದ್ದುಪಡಿಯಲ್ಲಿ 5 ರಿಂದ 10 ವರ್ಷ ಜೈಲು

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕೇಂದ್ರ ಮಾಸ್ಟರ್ ಪ್ಲಾನ್: ಶಿಕ್ಷೆ ಅವಧಿ 10 ವರ್ಷಕ್ಕೆ ಏರಿಕೆ ಸಾಧ್ಯತೆ! Read More »

ಉದ್ಯೋಗ, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಾರ್ಮಾಡಿ ಘಾಟ್ ನಲ್ಲಿ ಚಿರತೆ ಪ್ರತ್ಯಕ್ಷ: ಕ್ಯಾಮೆರಾದಲ್ಲಿ ದೃಶ್ಯ ಸೆರೆ

(ನ್ಯೂಸ್ ಕಡಬ) newskadaba.com ಜು. 24. ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್‌ನಲ್ಲಿ ರಾತ್ರಿ ವೇಳೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷಗೊಂಡಿದ್ದು, ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಚಾರ್ಮಾಡಿ ಘಾಟ್‌ನ 11 ನೇ ಹೇರ್‌ ಪಿನ್ ತಿರುವಿನಲ್ಲಿ ರಸ್ತೆಬದಿಯ ತಡೆಗೋಡೆಯ ಮೇಲೆ ಕುಳಿತಿದ್ದ ಚಿರತೆ, ಬಳಿಕ ರಸ್ತೆಬದಿಯಲ್ಲಿ ಸಂಚರಿಸಿದೆ. ಈ ದೃಶ್ಯಗಳನ್ನು ಹಾದುಹೋಗುತ್ತಿದ್ದ ವಾಹನ ಸವಾರರು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಕಳೆದ ತಿಂಗಳು ಈ ಸ್ಥಳದಿಂದ ಸುಮಾರು 6 ಕಿ.ಮೀ ದೂರದ ಘಾಟ್ ಭಾಗದಲ್ಲಿ

ಚಾರ್ಮಾಡಿ ಘಾಟ್ ನಲ್ಲಿ ಚಿರತೆ ಪ್ರತ್ಯಕ್ಷ: ಕ್ಯಾಮೆರಾದಲ್ಲಿ ದೃಶ್ಯ ಸೆರೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಅಪೂರ್ಣ ರಸ್ತೆ ಕಾಮಗಾರಿಗೆ ಬಲಿಯಾದ ವಾಹನ: ಸೇಡಿಯಾಪು ಕಾಪುವಿನಲ್ಲಿ ಟಾಟಾ ಏಸ್ ಮಗುಚಿ ಅಪಘಾತ

(ನ್ಯೂಸ್‌ ಕಡಬ) newskadaba.com,  ಜು. 24: ಉಪ್ಪಿನಂಗಡಿ ಸಮೀಪದ ಸೇಡಿಯಾಪು ಕಾಪು ಎಂಬಲ್ಲಿ ಜುಲೈ 23ರಂದು ಟಾಟಾ ಏಸ್ ಸರಕು ಸಾಗಣೆ ವಾಹನವೊಂದು ಪಲ್ಟಿಯಾಗಿ 11 ವರ್ಷದ ಬಾಲಕ ಗಾಯಗೊಂಡಿದ್ದಾನೆ. ಕೊಯಿಲಾದ ಸನ್ಯಾಸಿಗುಡ್ಡೆ ನಿವಾಸಿ ಅಬ್ದುಲ್ ಮಜೀದ್ ಅವರು ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಚಲಾಯಿಸುತ್ತಿದ್ದ ವಾಹನದ ಚಕ್ರ ರಸ್ತೆಯಂಚಿಗೆ ಇಳಿದು ಈ ಅಪಘಾತ ಸಂಭವಿಸಿದೆ. ಪರಿಣಾಮ ವಾಹನದಲ್ಲಿದ್ದ ಅವರ ಪುತ್ರ ಗಾಯಗೊಂಡಿದ್ದಾರೆ. ಇತ್ತೀಚೆಗೆ ಪೂರ್ಣಗೊಂಡ ಕಾಂಕ್ರೀಟ್ ರಸ್ತೆ ಕಾಮಗಾರಿಯ ಬಳಿಕ ರಸ್ತೆಯಂಚಿಗೆ ಮಣ್ಣು ಹಾಕದ ಕಾರಣ ಆಳವಾದ

ಅಪೂರ್ಣ ರಸ್ತೆ ಕಾಮಗಾರಿಗೆ ಬಲಿಯಾದ ವಾಹನ: ಸೇಡಿಯಾಪು ಕಾಪುವಿನಲ್ಲಿ ಟಾಟಾ ಏಸ್ ಮಗುಚಿ ಅಪಘಾತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಡಿತರ ದಾರರ ಗಮನಕ್ಕೆ: ರಾಜ್ಯಾದ್ಯಂತ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಪಡಿತರ ಅಂಗಡಿ ಓಪನ್‌!

(ನ್ಯೂಸ್‌ ಕಡಬ) newskadaba.com,  ಜು. 24: ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ನ್ಯಾಯಬೆಲೆ (ಪಡಿತರ) ಅಂಗಡಿಗಳು ಪ್ರತಿದಿನ ಬೆಳಿಗ್ಗೆ 6:00 ರಿಂದ ರಾತ್ರಿ 10:00 ಗಂಟೆಯವರೆಗೆ ಕಡ್ಡಾಯವಾಗಿ ತೆರೆದಿರಬೇಕು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶಿಸಿದೆ. ದಾಸ್ತಾನು ತಲುಪಿದ್ದರೂ ಫಲಾನುಭವಿಗಳಿಗೆ ಪಡಿತರ ಸಿಗಲು ವಿಳಂಬವಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜುಲೈ ತಿಂಗಳ ಪಡಿತರ ವಿತರಣೆಯನ್ನು ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ.ಈ ನಿರ್ದೇಶನವನ್ನು ಮಳಿಗೆಗಳ ವಿತರಕರು ಉಲ್ಲಂಘಿಸಿದರೆ ಅಥವಾ ನಿಗದಿತ

ಪಡಿತರ ದಾರರ ಗಮನಕ್ಕೆ: ರಾಜ್ಯಾದ್ಯಂತ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಪಡಿತರ ಅಂಗಡಿ ಓಪನ್‌! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಂತಾರಾಷ್ಟ್ರೀಯ ಗಡಿ ಉಲ್ಲಂಘನೆ: ಶ್ರೀಲಂಕಾ ನೌಕಾಪಡೆಯಿಂದ 9 ಭಾರತೀಯ ಮೀನುಗಾರರ ಬಂಧನ

(ನ್ಯೂಸ್‌ ಕಡಬ) newskadaba.com,  ಜು.23 “ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆ ಉಲ್ಲಂಘಿಸಿ ಮೀನುಗಾರಿಕೆ ನಡೆಸುತ್ತಿದ್ದ 9 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.” “ಬುಧವಾರ ಸಂಜೆ ತಲೈಮನ್ನಾರ್‌ ಉತ್ತರ ಭಾಗದ ಶ್ರೀಲಂಕಾ ಜಲಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಲಂಕಾ ನೌಕಾಪಡೆ, ಮೀನುಗಾರರೊಂದಿಗೆ ಅವರ ಟ್ರಾಲರ್ ದೋಣಿಯನ್ನೂ ವಶಕ್ಕೆ ಪಡೆದುಕೊಂಡಿದೆ. ಕಾರ್ಯಾಚರಣೆ ವೇಳೆ 50ಕ್ಕೂ ಹೆಚ್ಚು ಭಾರತೀಯ ಬೋಟ್‌ಗಳು ಗಡಿ ದಾಟಿರುವುದು ಪತ್ತೆಯಾಗಿದೆ ಎಂದು ನೌಕಾಪಡೆ ತಿಳಿಸಿದೆ.” “ಬಂಧಿತ ಮೀನುಗಾರರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮನ್ನಾರ್ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ

ಅಂತಾರಾಷ್ಟ್ರೀಯ ಗಡಿ ಉಲ್ಲಂಘನೆ: ಶ್ರೀಲಂಕಾ ನೌಕಾಪಡೆಯಿಂದ 9 ಭಾರತೀಯ ಮೀನುಗಾರರ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ಬ್ಯಾಂಕ್ ಮೇಲ್ಛಾವಣಿ ಕೊರೆದು ಕಳವಿಗೆ ಯತ್ನಿಸಿದ್ದ ಆರೋಪಿ ಪೋಲಿಸರ ವಶಕ್ಕೆ

(ನ್ಯೂಸ್‌ ಕಡಬ) newskadaba.com,  ಜು.23 ಬಂಟ್ವಾಳ: ಫರಂಗಿಪೇಟೆಯ ಕೆನರಾ ಬ್ಯಾಂಕ್‌ನಲ್ಲಿ ಮೇಲ್ಛಾವಣಿ ಕೊರೆದು ಹಣ ಹಾಗೂ ಚಿನ್ನಾಭರಣ ಕಳವು ಮಾಡಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಾರಿಪಳ್ಳ ನಿವಾಸಿ ಮೊಹಮ್ಮದ್ ಶಾಖಿರ್ (33) ಎಂದು ಗುರುತಿಸಲಾಗಿದೆ.ಕಳೆದ ಜುಲೈ 13ರಂದು ಕೆನರಾ ಬ್ಯಾಂಕ್ ಕಟ್ಟಡದ ಮೇಲ್ಛಾವಣಿ ಕೊರೆದು ಕಳವಿಗೆ ಯತ್ನಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ಜುಲೈ 22ರಂದು

ಬಂಟ್ವಾಳ: ಬ್ಯಾಂಕ್ ಮೇಲ್ಛಾವಣಿ ಕೊರೆದು ಕಳವಿಗೆ ಯತ್ನಿಸಿದ್ದ ಆರೋಪಿ ಪೋಲಿಸರ ವಶಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಹೆಲಿಕಾಪ್ಟರ್ ಹಾರಾಟ ಕಂಡು ಆತಂಕಗೊಂಡ ಜನ; NSG ಮಾಕ್‌ಡ್ರಿಲ್ ಎಂದು ಅಧಿಕಾರಿಗಳ ಸ್ಪಷ್ಟನೆ

(ನ್ಯೂಸ್‌ ಕಡಬ) newskadaba.com,  ಜು.23: ಮಂಗಳೂರಿನ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಬಹುಮಹಡಿ ಕಟ್ಟಡಗಳ ಸಮೀಪ ಹೆಲಿಕಾಪ್ಟರ್ ತೀರ ಕಡಿಮೆ ಎತ್ತರದಲ್ಲಿ ಸಂಚರಿಸಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಇದು ರಾಷ್ಟ್ರೀಯ ಭದ್ರತಾ ಪಡೆ (NSG) ನಡೆಸುತ್ತಿರುವ ಭಯೋತ್ಪಾದನಾ ವಿರೋಧಿ ಅಣಕು ಕಾರ್ಯಾಚರಣೆಯ ಭಾಗವಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಂಜೆ ನಡೆಯಲಿರುವ ಪೂರ್ಣ ಪ್ರಮಾಣದ ಕವಾಯತಿಗೆ ಮುನ್ನ ಸನ್ನದ್ಧತೆ ಹಾಗೂ ಭದ್ರತಾ ಸಂಸ್ಥೆಗಳ ನಡುವಿನ ಸಮನ್ವಯತೆಯನ್ನು ಪರಿಶೀಲಿಸಲು ಈ ಪರೀಕ್ಷಾರ್ಥ ಹಾರಾಟ ನಡೆಸಲಾಗಿದೆ.ತುರ್ತು ಸಂದರ್ಭಗಳನ್ನು ಎದುರಿಸುವ

ಮಂಗಳೂರು: ಹೆಲಿಕಾಪ್ಟರ್ ಹಾರಾಟ ಕಂಡು ಆತಂಕಗೊಂಡ ಜನ; NSG ಮಾಕ್‌ಡ್ರಿಲ್ ಎಂದು ಅಧಿಕಾರಿಗಳ ಸ್ಪಷ್ಟನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅರಂತೋಡು: ಬೈಕ್ – ಕಾರು ನಡುವೆ ಭೀಕರ ಅಪಘಾತ; ಸವಾರ ಗಂಭೀರ, ಆಸ್ಪತ್ರೆಗೆ ದಾಖಲು

(ನ್ಯೂಸ್‌ ಕಡಬ) newskadaba.com, ಜು.23  : ಅರಂತೋಡು ಕುಲ್ಚಾರ್ ಸಮೀಪ ಬೈಕ್ ಕಾರು ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಬೈಕ್ ಸವಾರನನ್ನು ಅರಂತೋಡು ಗ್ರಾಮದ ಬಿಳಿಯಾರು ಬನ ಸುಬ್ರಾಯ ಅವರ ಮಗ ಸಂತೋಷ್ ಎಂದು ಗುರುತಿಸಲಾಗಿದೆ….. ಅಪಘಾತದಲ್ಲಿ ಬೈಕ್ ಸವಾರ ಸಂತೋಷ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಗಾಯಾಳುವನ್ನು ತಕ್ಷಣವೇ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರಂತೋಡು: ಬೈಕ್ – ಕಾರು ನಡುವೆ ಭೀಕರ ಅಪಘಾತ; ಸವಾರ ಗಂಭೀರ, ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top