News Kadaba Desk

ಪಾಸ್ಪೋರ್ಟ್: SIR ನ ಪ್ರಮುಖ ಅಧಿಕೃತ ದಾಖಲೆ

(ನ್ಯೂಸ್ ಕಡಬ) newskadaba.com ಜೂ. 27. ಸದ್ಯ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಮತದಾರರು ಸಲ್ಲಿಸಬಹುದಾದ 12 ಮಾನ್ಯ ದಾಖಲೆಗಳಲ್ಲಿ ಒಂದಾಗಿ ಭಾರತೀಯ ಪಾಸ್‌ಪೋರ್ಟ್ ಮುಂದುವರಿಯಲಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪಾಸ್‌ ಪೋರ್ಟ್ ಕಾಯ್ದೆ 1967ರ ಅಡಿಯಲ್ಲಿ ಪಾಸ್‌ ಪೋರ್ಟ್ ಪೌರತ್ವದ ಪುರಾವೆಯಲ್ಲ ಎಂಬ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯಿಂದ ಉಂಟಾಗಿದ್ದ ವಿವಾದದ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಿದ್ದಿದೆ. ಬಿಹಾರ ಮತ್ತು ಅಸ್ಸಾಂನ ವಿಶೇಷ ಪರಿಷ್ಕರಣೆ […]

ಪಾಸ್ಪೋರ್ಟ್: SIR ನ ಪ್ರಮುಖ ಅಧಿಕೃತ ದಾಖಲೆ Read More »

ಕರಾವಳಿ

ಜುಲೈ 9ರಂದು ಆಟೋರಿಕ್ಷಾ ದರ ಪರಿಷ್ಕರಣೆ ಸಭೆ

(ನ್ಯೂಸ್ ಕಡಬ) newskadaba.com ಜೂ. 27. ಆಟೋರಿಕ್ಷಾ ದರ ಪರಿಷ್ಕರಣೆಗೆ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಸಭೆಯನ್ನು ಜುಲೈ 9ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜುಲೈ 9ರಂದು ಆಟೋರಿಕ್ಷಾ ದರ ಪರಿಷ್ಕರಣೆ ಸಭೆ Read More »

ಕರಾವಳಿ

ಅಲ್ಪಸಂಖ್ಯಾತರ ಶುಲ್ಕ ಮರುಪಾವತಿ ಯೋಜನೆ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಜೂ. 27. ಕರ್ನಾಟಕ ರಾಜ್ಯದ ಅರ್ಹ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (SSP)ಯಲ್ಲಿ ಮೆಟ್ರಿಕ್ ನಂತರದ ಹಾಗೂ ಮೆರಿಟ್-ಕಂ-ಮೀನ್ಸ್ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಯೋಜನೆಗೆ ಅನ್‍ ಲೈನ್ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಕರ್ನಾಟಕದ ನಿವಾಸಿಯಾಗಿರಬೇಕು. ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು ಹಾಗೂ ಕುಟುಂಬದ ವಾರ್ಷಿಕ ಆದಾಯ

ಅಲ್ಪಸಂಖ್ಯಾತರ ಶುಲ್ಕ ಮರುಪಾವತಿ ಯೋಜನೆ: ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಮುಂಗಾರು ಬೆಳೆ ವಿಮೆ ಯೋಜನೆ: ರೈತರ ನೋಂದಣಿಗೆ ಆಗಸ್ಟ್ 14 ಕೊನೆಯ ದಿನ

(ನ್ಯೂಸ್ ಕಡಬ) newskadaba.com ಜೂ. 27. ಪ್ರಸಕ್ತ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಈ ಯೋಜನೆಯನ್ನು ಅನುಷ್ಠಾನ ಮಾಡಲು ಇಂಡಸ್ ಇಂಡ್ ಜನರಲ್ ಇನ್ಸುರೆನ್ಸ್ ಕಂಪನಿ ಲಿ. (ರಿಲಯನ್ಸ್ ಜನರಲ್ ಇನ್ಶುರೆನ್ಸ್ ಕಂಪನಿ ಲಿ.) ಅನ್ನು  ನಿಗಧಿಪಡಿಸಲಾಗಿರುತ್ತದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಭತ್ತದ ಬೆಳೆಗೆ ನೋಂದಣಿ ಪ್ರಾರಂಭವಾಗಿದ್ದು ಆಗಸ್ಟ್

ಮುಂಗಾರು ಬೆಳೆ ವಿಮೆ ಯೋಜನೆ: ರೈತರ ನೋಂದಣಿಗೆ ಆಗಸ್ಟ್ 14 ಕೊನೆಯ ದಿನ Read More »

ಕರಾವಳಿ

ಉದ್ಯಮಿ ವೈಶಾಖ್ ಆತ್ಮಹತ್ಯೆ ಪ್ರಕರಣ: ಪೊಲೀಸರಿಗೆ ನಟಿ ಕೃಷಿ ತಾಪಂಡ ಅಧಿಕೃತ ಹೇಳಿಕೆ

(ನ್ಯೂಸ್‌ ಕಡಬ) newskadaba.com,  ಜೂ.26  ಬೆಂಗಳೂರು: ಆರ್.ಆರ್. ನಗರದ ಎಲಿಗೇಟ್ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಗೆಳತಿ ಹಾಗೂ ನಟಿ ಕೃಷಿ ತಾಪಂಡ ಪೊಲೀಸರಿಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. ಕೃಷಿ ತಾಪಂಡ ಅವರು ವೈಯಕ್ತಿಕ ಕಾರಣಗಳಿಗಾಗಿ ಮೂರು ದಿನಗಳ ಕಾಲ ‘ಕ್ಷೇಮವನ’ಕ್ಕೆ ತೆರಳಿದ್ದರು. ಬುಧವಾರ ರಾತ್ರಿ 11 ಗಂಟೆಗೆ ಫ್ಲ್ಯಾಟ್‌ಗೆ ಮರಳಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ತಮ್ಮ ಬಳಿಯಿದ್ದ ಪರ್ಯಾಯ ಕೀ ಬಳಸಿ ಒಳಹೋದಾಗ ವೈಶಾಖ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು

ಉದ್ಯಮಿ ವೈಶಾಖ್ ಆತ್ಮಹತ್ಯೆ ಪ್ರಕರಣ: ಪೊಲೀಸರಿಗೆ ನಟಿ ಕೃಷಿ ತಾಪಂಡ ಅಧಿಕೃತ ಹೇಳಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ

ರೆನಾಲ್ಟ್ ಕೈಗರ್ ಹೊಸ ಆವೃತ್ತಿ ಲಾಂಚ್

(ನ್ಯೂಸ್‌ ಕಡಬ) newskadaba.com,  ಜೂ.26 :ಫ್ರೆಂಚ್ ಆಟೋಮೊಬೈಲ್ ಸಂಸ್ಥೆ ರೆನಾಲ್ಟ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ‘ಕೈಗರ್’ ಅನ್ನು ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆ ಮಾಡಿದೆ. ಟರ್ಬೊ ಪೆಟ್ರೋಲ್ ಪ್ರಿಯರಿಗಾಗಿ ಕಂಪನಿ ಕೈಗೆಟುಕುವ ಬೆಲೆಯಲ್ಲಿ ಹೊಸ ವೇರಿಯೆಂಟ್‌ಗಳನ್ನು ಪರಿಚಯಿಸಿದೆ. ಎವಲ್ಯೂಷನ್ ಟರ್ಬೊ (ಹೊಸದು): ₹7.89 ಲಕ್ಷ. (ಹಳೆಯ ಆರಂಭಿಕ ಬೆಲೆ ₹9.33 ಲಕ್ಷಕ್ಕೆ ಹೋಲಿಸಿದರೆ ₹1.46 ಲಕ್ಷ ಉಳಿತಾಯ) ಎವಲ್ಯೂಷನ್ ಪ್ಲಸ್ (0L ನ್ಯಾಚುರಲಿ ಆಸ್ಪಿರೇಟೆಡ್): ₹6.99 ಲಕ್ಷ. ಟೆಕ್ನೋ ಟರ್ಬೊ ಮ್ಯಾನುವಲ್: ₹8.45 ಲಕ್ಷ. (ಇದು

ರೆನಾಲ್ಟ್ ಕೈಗರ್ ಹೊಸ ಆವೃತ್ತಿ ಲಾಂಚ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯಾದ್ಯಂತ ಶನಿವಾರದ ಶಾಲಾ ಅವಧಿಯಲ್ಲಿ ಮಹತ್ವದ ಬದಲಾವಣೆ ಏಕರೂಪದ ವೇಳಾಪಟ್ಟಿ ಜಾರಿ

(ನ್ಯೂಸ್‌ ಕಡಬ) newskadaba.com,  ಜೂ.26 :ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮಹತ್ವದ ಸಿಹಿಸುದ್ದಿ ನೀಡಿದ್ದು, ಶನಿವಾರದ ಶಾಲಾ ಅವಧಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ರಾಜ್ಯದಾದ್ಯಂತ ಈ ಹಿಂದೆ ಇದ್ದ ಗೊಂದಲಗಳಿಗೆ ತೆರೆ ಎಳೆದು, ಎಲ್ಲಾ ಜಿಲ್ಲೆಗಳ ಶಾಲೆಗಳಿಗೂ ಅನ್ವಯವಾಗುವಂತೆ ಏಕರೂಪದ ವೇಳಾಪಟ್ಟಿಯನ್ನು ಜಾರಿಗೆ ತರಲಾಗಿದೆ. ಇನ್ನು ಮುಂದೆ ಶನಿವಾರದ ತರಗತಿಗಳು ಬೆಳಗ್ಗೆ 8:30 ರಿಂದ ಮಧ್ಯಾಹ್ನ 12:30 ರವರೆಗೆ ನಡೆಯಲಿವೆ.ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಕಡ್ಡಾಯವಾಗಿ ಇದೇ ಸಮಯವನ್ನು

ರಾಜ್ಯಾದ್ಯಂತ ಶನಿವಾರದ ಶಾಲಾ ಅವಧಿಯಲ್ಲಿ ಮಹತ್ವದ ಬದಲಾವಣೆ ಏಕರೂಪದ ವೇಳಾಪಟ್ಟಿ ಜಾರಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಗಾರದ ಬೆಲೆಯಲ್ಲಿ ಕೊಂಚ ಚೇತರಿಕೆ

(ನ್ಯೂಸ್‌ ಕಡಬ) newskadaba.com,  ಜೂ.26 ಹಲವು ದಿನಗಳಿಂದ ಭಾರೀ ಇಳಿಕೆಯಲ್ಲಿದ್ದ ಚಿನ್ನದ ದರದಲ್ಲಿಂದು ಕೊಂಚ ಏರಿಕೆ ಕಂಡು ಬಂದಿದೆ. ಶುಕ್ರವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದಲ್ಲಿ 25 ರೂ. ಏರಿಕೆಯಾಗಿ 12,980 ರೂ ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 27 ರೂ. ಏರಿಕೆಯಾಗಿ 14,160 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,03,840 ರೂ. ಇದ್ದರೆ, 10 ಗ್ರಾಂಗೆ 1,29,800 ರೂ. ಮತ್ತು 100 ಗ್ರಾಂ ಚಿನ್ನಕ್ಕೆ

ಬಂಗಾರದ ಬೆಲೆಯಲ್ಲಿ ಕೊಂಚ ಚೇತರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾರಿನಲ್ಲಿ ದಂಪತಿಯ ನಿಗೂಢ ಸಾವು: ಘಟನಾ ಸ್ಥಳದಲ್ಲಿ ಪಿಸ್ತೂಲ್, ರಕ್ತಸಿಕ್ತ ಕೊಡಲಿ ಪತ್ತೆ; ಪೊಲೀಸರ ತನಿಖೆ ತೀವ್ರ

(ನ್ಯೂಸ್‌ ಕಡಬ) newskadaba.com,  ಜೂ.26 ಮಧ್ಯಪ್ರದೇಶದ ಅಶೋಕನಗರದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ದಂಪತಿಯ ಮೃತದೇಹಗಳು ಶಂಕಾಸ್ಪದ ರೀತಿಯಲ್ಲಿ ಪತ್ತೆಯಾಗಿವೆ. ಮೃತರನ್ನು ಸ್ಥಳೀಯ ನಿವಾಸಿಗಳಾದ ರಿತಿಕ್ ಸೋನಿ ಮತ್ತು ಮುಸ್ಕಾನ್ ಎಂದು ಗುರುತಿಸಲಾಗಿದೆ. ಕಾರಿನ ಚಾಲಕನ ಸೀಟಿನಲ್ಲಿದ್ದ ರಿತಿಕ್ ಶವದ ತಲೆಯಲ್ಲಿ ಗುಂಡೇಟು ಹಾಗೂ ಮುಖದ ಮೇಲೆ ಸುಟ್ಟ ಗಾಯಗಳಿದ್ದರೆ, ಪಕ್ಕದ ಸೀಟಿನಲ್ಲಿದ್ದ ಮುಸ್ಕಾನ್ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.ಬುಧವಾರ ಜಿಮ್‌ಗೆ ಹೋದ ಮುಸ್ಕಾನ್ ನಾಪತ್ತೆಯಾಗಿದ್ದಳು. ರಿತಿಕ್ 15 ದಿನಗಳ ಹಿಂದಷ್ಟೇ ಇಂದೋರ್‌ನಿಂದ ಮರಳಿದ್ದ. ಇವರಿಬ್ಬರೂ ಹಿಂದೆ ಇಂದೋರ್‌ನ ಖಾಸಗಿ

ಕಾರಿನಲ್ಲಿ ದಂಪತಿಯ ನಿಗೂಢ ಸಾವು: ಘಟನಾ ಸ್ಥಳದಲ್ಲಿ ಪಿಸ್ತೂಲ್, ರಕ್ತಸಿಕ್ತ ಕೊಡಲಿ ಪತ್ತೆ; ಪೊಲೀಸರ ತನಿಖೆ ತೀವ್ರ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜೂನ್ 28 ರಿಂದ ಭಾರತ-ಬಾಂಗ್ಲಾ ಪ್ರವಾಸಿ ವೀಸಾ ಪುನರಾರಂಭ: ಹೈಕಮಿಷನರ್ ದಿನೇಶ್ ತ್ರಿವೇದಿ

(ನ್ಯೂಸ್‌ ಕಡಬ) newskadaba.com,  ಜೂ.26 ಬಾಂಗ್ಲಾದೇಶದ ನಾಗರಿಕರಿಗೆ ಪ್ರವಾಸಿ ವೀಸಾ ವಿತರಣೆ ಪುನರಾರಂಭಿಸುವುದಾಗಿ ಭಾರತ ಸರ್ಕಾರ ಪ್ರಕಟಿಸಿದೆ.2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ರಾಜಕೀಯ ದಂಗೆ ಹಾಗೂ ಭಾರತೀಯ ರಾಯಭಾರ ಕಚೇರಿಗಳ ಮೇಲಿನ ದಾಳಿಯ ಬಳಿಕ, ಸುರಕ್ಷತೆಯ ದೃಷ್ಟಿಯಿಂದ ಕಳೆದ ಸುಮಾರು 2 ವರ್ಷಗಳಿಂದ ಪ್ರವಾಸಿ ವೀಸಾ ಸೇವೆಗಳನ್ನ ಸ್ಥಗಿತಗೊಳಿಸಲಾಗಿತ್ತು. ಇದೀಗ ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹಾಗೂ ಜನರ ನಡುವಿನ ಸಂಪರ್ಕ ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಜೂನ್ 28 ರಿಂದ ಪ್ರವಾಸಿ ವೀಸಾಗಳನ್ನ ಪುನರಾರಂಭಿಸಲು ಭಾರತ ಸರ್ಕಾರ ನಿರ್ಧರಿಸಿದೆ.  ಢಾಕಾದ

ಜೂನ್ 28 ರಿಂದ ಭಾರತ-ಬಾಂಗ್ಲಾ ಪ್ರವಾಸಿ ವೀಸಾ ಪುನರಾರಂಭ: ಹೈಕಮಿಷನರ್ ದಿನೇಶ್ ತ್ರಿವೇದಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top