News Kadaba Desk

2018ರ ಜನವರಿಯಿಂದ ದಕ್ಷಿಣ ಕನ್ನಡದಲ್ಲೂ 10 ಇಂದಿರಾ ಕ್ಯಾಂಟೀನ್ ► ಎಲ್ಲೆಲ್ಲಿ ಕ್ಯಾಂಟೀನ್ ಆರಂಭವಾಗುತ್ತದೆ ಗೊತ್ತೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ಅ.16. 2018 ರ ಜನವರಿ 1 ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಇಂದಿರಾ ಕ್ಯಾಂಟೀನ್ ಗಳನ್ನು ತೆಗೆಯಲಾಗುವುದು ಎಂದು ರಾಜ್ಯ ಆಹಾರ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಅವರು ಸೋಮವಾರದಂದು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದ.ಕ.ಜಿಲ್ಲೆಯಲ್ಲಿ 10 ಹೊಸ ಕ್ಯಾಂಟೀನ್ ಗಳು ಆರಂಭವಾಗಲಿದ್ದು, ಅದರಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 5, ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ 1, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿಯಲ್ಲಿ ತಲಾ […]

2018ರ ಜನವರಿಯಿಂದ ದಕ್ಷಿಣ ಕನ್ನಡದಲ್ಲೂ 10 ಇಂದಿರಾ ಕ್ಯಾಂಟೀನ್ ► ಎಲ್ಲೆಲ್ಲಿ ಕ್ಯಾಂಟೀನ್ ಆರಂಭವಾಗುತ್ತದೆ ಗೊತ್ತೇ..? Read More »

ಕರಾವಳಿ

ಚಿಕ್ಕಮಗಳೂರು: ಬೈಕ್ ಕಾರು ಢಿಕ್ಕಿ ► ಕಡಬದ ವ್ಯಕ್ತಿ ಗಂಭೀರ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಅ.16. ಬೈಕ್ ಹಾಗೂ ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಚಾರ್ಮಾಡಿ ಘಾಟ್ ನಲ್ಲಿ ಸೋಮವಾರದಂದು ನಡೆದಿದೆ. ಗಂಭೀರ ಗಾಯಗೊಂಡ ಗಾಯಾಳುವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಡಬ ಸಮೀಪದ ಕುಟ್ರುಪ್ಪಾಡಿ ಗ್ರಾಮದ ಕಾಡುಮನೆ ನಿವಾಸಿ ಕೃಷ್ಣಪ್ಪ ಗೌಡ ಎಂಬವರ ಪುತ್ರ ನಾಗೇಶ್ ಎಂದು ಗುರುತಿಸಲಾಗಿದೆ. ಇವರು ತನ್ನ ಪಲ್ಸರ್ ಬೈಕಿನಲ್ಲಿ ಚಾರ್ಮಾಡಿ ಘಾಟ್ ನಲ್ಲಿ ತೆರಳುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬಂದ ಟೊಯೋಟಾ

ಚಿಕ್ಕಮಗಳೂರು: ಬೈಕ್ ಕಾರು ಢಿಕ್ಕಿ ► ಕಡಬದ ವ್ಯಕ್ತಿ ಗಂಭೀರ Read More »

ಕರ್ನಾಟಕ

ನಂಬಿ ಬರುತ್ತಿರುವ ದಲಿತರಿಗೆ ದ್ರೋಹ ಬಗೆಯುತ್ತಿರುವ ಕಾಂಗ್ರೆಸ್ – ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ರಾಜು ಹೊಸ್ಮಠ

(ನ್ಯೂಸ್ ಕಡಬ) newskadaba.com ಕಡಬ, ಅ.16. ಜ್ಯಾತತೀತ ನಿಲುವಿನೊಂದಿಗೆ ದಲಿತರನ್ನು ಉದ್ಧಾರ ಮಾಡುತ್ತಾ ಬಂದಿರುವ ಕಾಂಗ್ರೆಸ್ ಈಗಿನ ಜಿಲ್ಲಾ ಉಸ್ತುವಾರಿ ಸಚಿವರಂತಹ ದಲಿತ ವಿರೋಧಿ ನಾಯಕರಿಂದ ದೀನ ದಲಿತರ ಕಡೆಗಣನೆ ನಡೆಯುತ್ತಿದ್ದು ಡಿ.ಸಿ.ಮನ್ನಾ ಭೂಮಿಯಲ್ಲಿ ಕೂಡ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ನಾಯಕರ ಬಗ್ಗೆ ದಲಿತರು ಎಚ್ಚರವಾಗಬೇಕಾಗಿದೆ ಎಂದು ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ರಾಜು ಹೊಸ್ಮಠ ಹೇಳಿದರು. ಅವರು ಅಲಂಕಾರು ರೈತ ಭವನದಲ್ಲಿ ಅ.15 ರಂದು ನಡೆದ ದಲಿತ್ ಸೇವಾ ಸಮಿತಿ ಮಾಸಿಕ ಸಭೆಯಲ್ಲಿ ಡಾ. ಬಾಬಾಸಾಹೇಬ್

ನಂಬಿ ಬರುತ್ತಿರುವ ದಲಿತರಿಗೆ ದ್ರೋಹ ಬಗೆಯುತ್ತಿರುವ ಕಾಂಗ್ರೆಸ್ – ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ರಾಜು ಹೊಸ್ಮಠ Read More »

ಕರಾವಳಿ

ಭಾರತವು ಕೊಲೆಗಡುಕರ ರಾಷ್ಟ್ರವಾಗಿ ಪ್ರಸಿದ್ಧಿಯಾಗುತ್ತಿದೆ ► ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.15. ಭಾರತವು ಸುಳ್ಳಿನ ಸಾಮ್ರಾಜ್ಞವಾಗಿದ್ದು, ಕೊಲೆಗಡುಕರ ರಾಷ್ಟ್ರವಾಗಿ ಪ್ರಸಿದ್ಧಿಯಾಗುತ್ತಿದೆ. ದನ ಕಡಿದವರನ್ನು ಬಂಧಿಸುತ್ತಾರೆ ಆದರೆ ಜನರನ್ನು ಕೊಂದವರನ್ನು ಬಂಧಿಸುವುದಿಲ್ಲ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.   ಅವರು ಭಾನುವಾರದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ನಡೆದ ‘ನಮಗೂ ಹೇಳಲಿಕ್ಕಿದೆ’ ಸಮಾವೇಶದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಭಾರತವು ದನಗಳ ಭಾರತವಾಗಬಾರದು. ಜನಗಳ ಭಾರತವಾಗಬೇಕು. ಕನ್ನಡದ ಹುಲಿ, ಕ್ರಾಂತಿ ವೀರ ಟಿಪ್ಪು

ಭಾರತವು ಕೊಲೆಗಡುಕರ ರಾಷ್ಟ್ರವಾಗಿ ಪ್ರಸಿದ್ಧಿಯಾಗುತ್ತಿದೆ ► ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ Read More »

ಕರ್ನಾಟಕ

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಕಾರು ► ಪತ್ರಕರ್ತ ಸೇರಿದಂತೆ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಮೈಸೂರು, ಅ.15. ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪತ್ರಕರ್ತ ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ಭಾನುವಾರ ಸಂಜೆ ತಿ.ನರಸೀಪುರ ಸಮೀಪದ ತಲಕಾಡು ಎಂಬಲ್ಲಿ ನಡೆದಿದೆ. ಮೃತರನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯ, ವಿಜಯವಾಣಿ ಪತ್ರಿಕೆಯ ಉಪ ಸಂಪಾದಕ ಎಂ.ಜಿ. ರಾಜೇಶ್ ಹಾಗೂ ಸಂಬಂಧಿ ಮಹಿಮಾ ಎಂದು ಗುರುತಿಸಲಾಗಿದೆ. ಇವರು ತನ್ನ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಕಾರು ► ಪತ್ರಕರ್ತ ಸೇರಿದಂತೆ ಇಬ್ಬರು ಮೃತ್ಯು Read More »

ಕರ್ನಾಟಕ

ನೆಲ್ಯಾಡಿ: ಬೈಕ್ – ಲಾರಿ ಢಿಕ್ಕಿ ► ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, 15. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಬೆದ್ರೋಡಿ ಎಂಬಲ್ಲಿ ಈಚರ್ ಹಾಗೂ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರದಂದು ನಡೆದಿದೆ. ಮೃತ ಸವಾರನನ್ನು ಕೊಕ್ಕಡ ನಿವಾಸಿ ಬಾಳಪ್ಪ ಗೌಡ ಎಂಬವರ ಪುತ್ರ ಪೂವಪ್ಪ ಗೌಡ(44) ಎಂದು ಗುರುತಿಸಲಾಗಿದೆ. ಇವರು ತನ್ನ ಬೈಕಿನಲ್ಲಿ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬಂದ ಈಚರ್ ಲಾರಿಯು ಢಿಕ್ಕಿ ಹೊಡೆದಿದ್ದು, ರಸ್ತೆಗೆ ಎಸೆಯಲ್ಪಟ್ಟ

ನೆಲ್ಯಾಡಿ: ಬೈಕ್ – ಲಾರಿ ಢಿಕ್ಕಿ ► ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಲೈಸೆನ್ಸ್ ಇಲ್ಲದೆ ಮಕ್ಕಳು ವಾಹನ ಚಲಾಯಿಸಿದರೆ ಹೆತ್ತವರು ಹೊಣೆ ► ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.15. ಅಪ್ರಾಪ್ತ ವಯಸ್ಸಿನ ಶಾಲಾ ವಿದ್ಯಾರ್ಥಿಗಳು ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಲಾಯಿಸುವಷ್ಟೇ ಅಪರಾಧ ಅವರಿಗೆ ವಾಹನ ಕೊಡುವ ಪೋಷಕರದ್ದಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ. ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಬಿ ಸಿ ರೋಡಿನ ರೋಟರಿ ಭವನದಲ್ಲಿ ಶನಿವಾರ ಸಂಜೆ ಕಾಲೇಜು ಮುಖ್ಯಸ್ಥರಿಗೆ ನಡೆದ ಸಭೆಯಲ್ಲಿ ಮಾತನಾಡಿ, ಕೆಲವು ಅಪ್ರಾಪ್ತ ಬಾಲಕರು ಎಲ್ಲೆಂದರಲ್ಲಿ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸಿ

ಲೈಸೆನ್ಸ್ ಇಲ್ಲದೆ ಮಕ್ಕಳು ವಾಹನ ಚಲಾಯಿಸಿದರೆ ಹೆತ್ತವರು ಹೊಣೆ ► ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ Read More »

ಕರಾವಳಿ

ಗೌರಿ ಲಂಕೇಶ್ ಹತ್ಯೆ ಪ್ರಕರಣ ► ಶಂಕಿತ ಆರೋಪಿಗಳ ರೇಖಾಚಿತ್ರ ಬಿಡುಗಡೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.14. ಪ್ರಗತಿಪರ ಚಿಂತಕಿ, ವಿಚಾರವಾದಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಆರೋಪಿಗಳ ರೇಖಾಚಿತ್ರವನ್ನು ವಿಶೇಷ ತನಿಖಾ ತಂಡ ಶನಿವಾರದಂದು ಬಿಡುಗಡೆಗೊಳಿಸಿದೆ. ನಗರದ ಪ್ಯಾಲೇಸ್ ರಸ್ತೆಯಲ್ಲಿರುವ ಸಿಐಡಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್.ಐ.ಟಿ. ಮುಖ್ಯಸ್ಥ ಬಿ.ಕೆ.ಸಿಂಗ್, ತನಿಖಾಧಿಕಾರಿ ಎಂ.ಎನ್. ಅನುಚೇತ್ ಅವರು ಗೌರಿ ಹಂತಕರ ಶಂಕಿತ ರೇಖಾಚಿತ್ರವನ್ನು ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆಗೊಳಿಸಿದರು. ತನಿಖಾ ತಂಡವು ಇಲ್ಲಿಯವರೆಗಿನ ತನಿಖೆಯಲ್ಲಿ ಲಭಿಸಿರುವ ಮಾಹಿತಿಯ ಆಧಾರದಲ್ಲಿ

ಗೌರಿ ಲಂಕೇಶ್ ಹತ್ಯೆ ಪ್ರಕರಣ ► ಶಂಕಿತ ಆರೋಪಿಗಳ ರೇಖಾಚಿತ್ರ ಬಿಡುಗಡೆ Read More »

ಕರ್ನಾಟಕ

ಫರಂಗಿಪೇಟೆ: ಝಿಯಾ, ಫಯಾಝ್ ಕೊಲೆ ಪ್ರಕರಣ ► ಏಳು ಮಂದಿ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ.13. ಇತ್ತೀಚೆಗೆ ಫರಂಗಿಪೇಟೆಯ ಪೊಲೀಸ್ ಹೊರ ಠಾಣೆಯ ಎದುರಿನ ರಿಕ್ಷಾ ನಿಲ್ದಾಣದ ಬಳಿ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು 7 ಜನ ಆರೋಪಿಗಳನ್ನು ಬಂಧಿಸಿದ ಘಟನೆ ಶುಕ್ರವಾರದಂದು ನಡೆದಿದೆ. ಅಡ್ಯಾರ್-ಕಣ್ಣೂರು ನಿವಾಸಿ ಫಯಾಝ್ ಹಾಗೂ ಝಿಯಾ ಎಂಬವರನ್ನು ರಾತ್ರಿ ವೇಳೆ ಕಡಿದು ಕೊಲೆ ಮಾಡಲಾಗಿತ್ತು. ಘಟನೆಯಲ್ಲಿ ಅಡ್ಯಾರ್ ನಿವಾಸಿ ಹನೀಸ್, ಮುಸ್ತಫಾ ಹಾಗೂ ನಜ್ಮಾನ್ ಎಂಬವರು ಗಂಭೀರ ಗಾಯಗೊಂಡಿದ್ದರು. ಪ್ರಕರಣದ ಬಗ್ಗೆ ವಿವಿಧ ತಂಡಗಳನ್ನು ರಚಿಸಿ ತೀವ್ರ ತನಿಖೆ ನಡೆಸಿದ

ಫರಂಗಿಪೇಟೆ: ಝಿಯಾ, ಫಯಾಝ್ ಕೊಲೆ ಪ್ರಕರಣ ► ಏಳು ಮಂದಿ ಆರೋಪಿಗಳ ಬಂಧನ Read More »

ಕರಾವಳಿ

ಸಂಪ್ಯ: ನಾಲ್ವರು ಖತರ್ನಾಕ್ ಕಳ್ಳರ ಬಂಧನ ► ಆರ್ಲಪದವು ಕಾಳುಮೆಣಸು ಕಳವು ಪ್ರಕರಣ ಬೇಧಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಪುತ್ತೂರು, ಅ.13. ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಆರ್ಲಪದವು ಎಂಬಲ್ಲಿನ ಮಳಿಗೆಯೊಂದರಲ್ಲಿ ಸೆಪ್ಟೆಂಬರ್ 24 ರಂದು ನಡೆದಿದ್ದ ಲಕ್ಷಾಂತರ ಮೌಲ್ಯದ ಕಾಳುಮೆಣಸು ಕಳವು ಪ್ರಕರಣವನ್ನು ಭೇದಿಸಿರುವ ಸಂಪ್ಯ ಠಾಣಾ ಪೊಲೀಸರು ಎರಡು ಕಾರು, ನಾಲ್ವರು ಆರೋಪಿಗಳೊಂದಿಗೆ 741 ಕೆಜಿ ಕಾಳುಮೆಣಸನ್ನು ವಶಪಡಿಸಿಕೊಂಡಿದ್ದಾರೆ. ಬೊಲೆರೋ ವಾಹನದಲ್ಲಿ ಏನೋ ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ‌ ದಾಳಿ ನಡೆಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ ಆರ್ಲಪದವು ಕಳವು ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ

ಸಂಪ್ಯ: ನಾಲ್ವರು ಖತರ್ನಾಕ್ ಕಳ್ಳರ ಬಂಧನ ► ಆರ್ಲಪದವು ಕಾಳುಮೆಣಸು ಕಳವು ಪ್ರಕರಣ ಬೇಧಿಸಿದ ಪೊಲೀಸರು Read More »

ಕರಾವಳಿ
Scroll to Top