News Kadaba Desk

ಮುಖ್ಯಮಂತ್ರಿಗೂ ತಟ್ಟಿದ ಕಳ್ಳತನದ ಬಿಸಿ ► ಸಿಎಂ ಕಾರನ್ನೇ ಹೊತ್ತೊಯ್ದ ಕಳ್ಳರು

(ನ್ಯೂಸ್ ಕಡಬ) newskadaba.com ನವದೆಹಲಿ, ಅ.12. ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಾರನ್ನು ದೆಹಲಿ ಸಚಿವಾಲಯದ ಬಳಿಯಿಂದಲೇ ಎಗರಿಸುವ ಮೂಲಕ ಕಳ್ಳರು ಮುಖ್ಯಮಂತ್ರಿಯವರಿಗೇ ಕಳ್ಳತನದ ಬಿಸಿ ಮುಟ್ಟಿಸಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಕೇಜ್ರಿವಾಲ್ ಸಾಮಾನ್ಯವಾಗಿ ಉಪಯೋಗಿಸುತ್ತಿದ್ದ ನೀಲಿ ಬಣ್ಣದ ವ್ಯಾಗನರ್ ಕಾರನ್ನು ಕಳವು ಮಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಡುತ್ತಿದ್ದಾರೆ. ಕಾರ್ ಕಳವಾಗುವ ಸ್ಥಳದಲ್ಲಿನ ದೃಶ್ಯಗಳು ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋದ ಗುಣಮಟ್ಟ ಸರಿಯಿಲ್ಲದೇ ಮಂಕಾಗಿದೆ. ಮುಖ್ಯಮಂತ್ರಿಯ […]

ಮುಖ್ಯಮಂತ್ರಿಗೂ ತಟ್ಟಿದ ಕಳ್ಳತನದ ಬಿಸಿ ► ಸಿಎಂ ಕಾರನ್ನೇ ಹೊತ್ತೊಯ್ದ ಕಳ್ಳರು Read More »

ರಾಷ್ಟ್ರೀಯ ನ್ಯೂಸ್

ಪ್ರಧಾನಿ ಮೋದಿಗೆ ಕಾದಿದೆಯೇ ಗಂಡಾಂತರ…! ► ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ

(ನ್ಯೂಸ್ ಕಡಬ) newskadaba.com ಹಾಸನ, ಅ.12. ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದ್ದು, ಪ್ರಧಾನಿಯ ಈ ಗಂಡಾಂತರಕ್ಕೆ ವೃಶ್ಚಿಕ ರಾಶಿ ದೋಷವೇ ಕಾರಣ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಅವರು ಭವಿಷ್ಯ ನುಡಿದಿದ್ದಾರೆ. ಹಾಸನಾಂಬಾ ದೇಗುಲದ ದರ್ಶನಕ್ಕೆ ಆಗಮಿಸಿರುವ ಬ್ರಹ್ಮಾಂಡ ಗುರೂಜಿ, ಪ್ರಧಾನಿಯವರು ದೇವರ ಮೊರೆ ಹೋಗಿ ಪೂಜೆ, ಹೋಮ ಮಾಡಿ ಪರಿಹಾರ ಕಂಡುಕೊಳ್ಳದೇ ಇದ್ದರೆ ಮೃತ್ಯು ಕೂಡ ಎದುರಾಗಬಹುದು ಎಂದಿದ್ದಾರೆ. ರಾಜ್ಯ ರಾಜಕೀಯದ ಬಗ್ಗೆ ಪ್ರಸ್ತಾಪಿಸಿ ಸಿಎಂ‌ ಸಿದ್ದರಾಮಯ್ಯರಿಗೆ ಉತ್ತಮ ಯೋಗವಿದ್ದು,

ಪ್ರಧಾನಿ ಮೋದಿಗೆ ಕಾದಿದೆಯೇ ಗಂಡಾಂತರ…! ► ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ Read More »

ರಾಷ್ಟ್ರೀಯ ನ್ಯೂಸ್

ಜನವರಿ 1 ರಿಂದ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ► ನೂತನವಾಗಿ ಆರಂಭವಾಗಲಿದೆ 246 ಕ್ಯಾಂಟೀನ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.12. ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳು ಮಾತ್ರವಲ್ಲದೆ, ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣ ಪ್ರದೇಶಗಳಲ್ಲೂ ಬೆಂಗಳೂರು ಮಾದರಿಯಲ್ಲಿಯೇ 2018 ರ ಜ.1 ರಿಂದ ‘ಇಂದಿರಾ ಕ್ಯಾಂಟೀನ್’ ಪ್ರಾರಂಭಿಸಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಬುಧವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಬಡ-ಕೂಲಿ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಆಹಾರ ಒದಗಿಸುವ ಮಹತ್ವದ ಈ ಯೋಜನೆಯ ಅನುಷ್ಠಾನಕ್ಕೆ ನವೆಂಬರ್

ಜನವರಿ 1 ರಿಂದ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ► ನೂತನವಾಗಿ ಆರಂಭವಾಗಲಿದೆ 246 ಕ್ಯಾಂಟೀನ್ Read More »

ಕರ್ನಾಟಕ

ದ.ಕ. ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ವರ್ಗಾವಣೆ ► ನೂತನ ಜಿಲ್ಲಾಧಿಕಾರಿಯಾಗಿ ಶಶಿಕಾಂತ್ ಸೆಂತಿಲ್ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.10. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ರವರನ್ನು ರಾಜ್ಯ ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ನಿರ್ದೇಶಕರಾಗಿ ವರ್ಗಾಯಿಸಿ ರಾಜ್ಯ ಸರ್ಕಾರ ಮಂಗಳವಾರದಂದು ಆದೇಶಿಸಿದೆ. ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ನಿರ್ದೇಶಕರಾಗಿ ಕರ್ತವ್ಯದಲ್ಲಿದ್ದ 2009ರ ಬ್ಯಾಚ್ ನ ಐಎಎಸ್‌ ಅಧಿಕಾರಿ ಶಶಿಕಾಂತ್ ಸೆಂತಿಲ್ ಎಸ್.ರವರನ್ನು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಿದೆ.

ದ.ಕ. ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ವರ್ಗಾವಣೆ ► ನೂತನ ಜಿಲ್ಲಾಧಿಕಾರಿಯಾಗಿ ಶಶಿಕಾಂತ್ ಸೆಂತಿಲ್ ನೇಮಕ Read More »

ಕರಾವಳಿ

ಕಲ್ಲುಗುಡ್ಡೆ: ಮದ್ಯದಂಗಡಿ ಪುನರಾರಂಭ ► ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

(ನ್ಯೂಸ್ ಕಡಬ) newskadaba.com ಕಡಬ, ಅ.08. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಸರಕಾರಿ ಜಮೀನಿನಲ್ಲಿರುವ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಮದ್ಯದಂಗಡಿಯನ್ನು ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ದ.ಕ. ಜಿಲ್ಲಾಧಿಕಾರಿ ಕಟ್ಟಡ ತೆರವಿಗೆ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಆರು ವಾರಗಳ ಕಾಲ ತಡೆಯಾಜ್ಞೆ ನೀಡಿದೆ. ಅದರಂತೆ ಭಾನುವಾರದಂದು ಮದ್ಯದಂಗಡಿ ತೆರೆಯಲಾಗಿದೆ‌. ಸೆಪ್ಟೆಂಬರ್ 11 ರಂದು ಪ್ರಾರಂಭಗೊಂಡ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಲಿತ ಸಂಘಟನೆ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಹಲವು ದಿನಗಳ

ಕಲ್ಲುಗುಡ್ಡೆ: ಮದ್ಯದಂಗಡಿ ಪುನರಾರಂಭ ► ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ Read More »

ಕರಾವಳಿ

ಇಂದು ರಾತ್ರಿ ಕಡಬ ಅನುಗ್ರಹ ಸಭಾ ಭವನದಲ್ಲಿ ನೃತ್ಯ ವೈವಿಧ್ಯ ಕಾರ್ಯಕ್ರಮ ► ಹಿರಿಯ ಉದ್ಯಮಿ ಸಿ.ಫಿಲಿಪ್ ರವರಿಗೆ ಕದಂಬಶ್ರೀ ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ಕಡಬ, ಅ.07. ಜೇಸಿಐ ಕಡಬ ಕದಂಬ ಮತ್ತು ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಜೇಸಿ ಸಪ್ತಾಹ ಕಾರ್ಯಕ್ರಮ ಕದಂಬೋತ್ಸವ – 2017 ಸಮಾರೋಪ ಸಮಾರಂಭವು ಇಂದು ಸಂಜೆ ಕಡಬದ ಅನುಗ್ರಹ ಸಭಾ ಭವನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಹಿರಿಯ ಉದ್ಯಮಿ, ಕಡಬ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷರಾದ ಶ್ರೀ ಸಿ.ಫಿಲಿಪ್ ರವರಿಗೆ ಕದಂಬಶ್ರೀ – 2017 ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ಆಲಂಕಾರು ದೇವಿ ನಗರದ ನಕ್ಷತ್ರ ಕಲಾ

ಇಂದು ರಾತ್ರಿ ಕಡಬ ಅನುಗ್ರಹ ಸಭಾ ಭವನದಲ್ಲಿ ನೃತ್ಯ ವೈವಿಧ್ಯ ಕಾರ್ಯಕ್ರಮ ► ಹಿರಿಯ ಉದ್ಯಮಿ ಸಿ.ಫಿಲಿಪ್ ರವರಿಗೆ ಕದಂಬಶ್ರೀ ಪ್ರಶಸ್ತಿ ಪ್ರದಾನ Read More »

ಕರಾವಳಿ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ► ಕಡಬದ ಓರ್ವನ ಸಹಿತ ಐವರು ಶಂಕಿತರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.07. ವಿಚಾರವಾದಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆಯ ಜೊತೆ ನಂಟು ಹೊಂದಿರುವ ಹಾಗೂ ಈಗ ತಲೆಮರೆಸಿಕೊಂಡಿರುವ ಐದು ಮಂದಿ ಪ್ರಮುಖ ಶಂಕಿತರಾಗಿ ಮೂಡಿಬಂದಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಶಂಕಿತರನ್ನು ಮಂಗಳೂರು ಮೂಲದ ಕಡಬದ ಜಯಪ್ರಕಾಶ್, ಕೊಲ್ಹಾಪುರದ ಪ್ರವೀಣ್ ಲಿಮ್ಕರ್, ಪುಣೆಯ ಸಾರಂಗ್ ಅಕೋಲ್ಕರ್, ಸಾಂಗ್ಲಿಯ ರುದ್ರ ಪಾಟೀಲ್ ಹಾಗು ಸತಾರದ ವಿನಯ್ ಪವಾರ್ ಎಂದು ಹೇಳಲಾಗಿದೆ. ಈ ಪೈಕಿ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ► ಕಡಬದ ಓರ್ವನ ಸಹಿತ ಐವರು ಶಂಕಿತರು Read More »

ಕರ್ನಾಟಕ

ಪುತ್ತೂರು: ಮಾಹಿತಿ ಹಕ್ಕಿನಲ್ಲಿ ಮಾಹಿತಿ ನೀಡಲು ನಿರಾಕರಣೆ ► ಕಾರ್ಮಿಕ ಇಲಾಖಾ ಅಧಿಕಾರಿ ವಿರುದ್ಧ ದೂರು

(ನ್ಯೂಸ್ ಕಡಬ) newskadaba.com ಪುತ್ತೂರು, ಅ.07. ಪುತ್ತೂರು ತಾಲೂಕಿನ ಕಾರ್ಮಿಕ ಇಲಾಖಾ ಹಿರಿಯ ಅಧಿಕಾರಿಯಲ್ಲಿ ಇಲಾಖಾ ಮಾಹಿತಿ ಕೋರಿ ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿದ್ದ ಮಾಹಿತಿ ಹಕ್ಕು ಕಾರ್ಯಕರ್ತರೋರ್ವರಿಗೆ ಅಧಿಕಾರಿಯು ಮಾಹಿತಿ ನಿರಾಕರಿಸಿದ್ದಾರೆ. ಈ ಬಗ್ಗೆ ಕಾರ್ಯಕರ್ತ ಮೇಲಾಧಿಕಾರಿಗೆ ಅಫೀಲು ಮಾಡಿದ ಹಿನ್ನೆಲೆಯಲ್ಲಿ ಅದೇ ಅಧಿಕಾರಿ ಮತ್ತೆ ಮಾಹಿತಿ ನೀಡಿದ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ಕಬಕ ಸಂಜೀವ ಎಂಬುವವರು ಕಾರ್ಮಿಕ ಇಲಾಖೆಯಲ್ಲಿನ ಕೆಲವು ಮಾಹಿತಿಯನ್ನು ಕೋರಿ ಅಗೋಸ್ತು.26 ರಂದು ಮಾಹಿತಿ ಅರ್ಜಿ ಹಾಕಿದ್ದರು. ಆದರೆ ಅವರಿಗೆ ಕೋರಿದ

ಪುತ್ತೂರು: ಮಾಹಿತಿ ಹಕ್ಕಿನಲ್ಲಿ ಮಾಹಿತಿ ನೀಡಲು ನಿರಾಕರಣೆ ► ಕಾರ್ಮಿಕ ಇಲಾಖಾ ಅಧಿಕಾರಿ ವಿರುದ್ಧ ದೂರು Read More »

ಕರಾವಳಿ

ಉಳ್ಳಾಲ: ಯುವಕರಿಬ್ಬರಿಗೆ ಚೂರಿ ಇರಿತ ► ಓರ್ವ ಮೃತ್ಯು, ಇನ್ನೋರ್ವ ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.03. ಮುಸುಕುಧಾರಿಗಳ ತಂಡವೊಂದು ಯುವಕರಿಬ್ಬರ ಮೇಲೆ ತಲವಾರಿನಿಂದ ದಾಳಿ ನಡೆಸಿದ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಉಳ್ಳಾಲ ಸಮೀಪದ ಮುಕ್ಕಚ್ಚೇರಿ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಮೃತ ಯುವಕನನ್ನು ಜುಬೈರ್ ಎಂದು ಗುರುತಿಸಲಾಗಿದ್ದು, ಜತೆಗಿದ್ದ ಇಲ್ಯಾಸ್ ಎಂಬವರ ಕೈ, ಕಾಲು ಸೇರಿದಂತೆ ಹಲವೆಡೆ ಇರಿಯಲಾಗಿದೆ. ದುಷ್ಕರ್ಮಿಗಳ ದಾಳಿಗೆ ಒಳಗಾದ ಜುಬೈರ್ ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ‌. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ

ಉಳ್ಳಾಲ: ಯುವಕರಿಬ್ಬರಿಗೆ ಚೂರಿ ಇರಿತ ► ಓರ್ವ ಮೃತ್ಯು, ಇನ್ನೋರ್ವ ಗಂಭೀರ Read More »

ಕರಾವಳಿ

► ಯಕ್ಷಗಾನ ದಿಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಮಣಿಪಾಲ, ಅ.04. ಬಡಗುತಿಟ್ಟು ಯಕ್ಷಗಾನದ ಮೇರು ಕಲಾವಿದ ಹಾಗೂ ವಿವಿಧ ಪಾತ್ರಗಳಲ್ಲಿ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸುತ್ತಿದ್ದ ಹಿರಿಯ ಯಕ್ಷಗಾನ ಕಲಾವಿದ, ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ (84) ಅವರು ಮಂಗಳವಾರ ರಾತ್ರಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಚಿಟ್ಟಾಣಿಯವರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ತೀವ್ರ ಜ್ವರದ ಕಾರಣ ಕಳೆದ ಶುಕ್ರವಾರ ರಾತ್ರಿ ಕೆಎಂಸಿಗೆ ದಾಖಲಾಗಿದ್ದ ಚಿಟ್ಟಾಣಿಯವರು ನ್ಯುಮೋನಿಯಾ ಸಂಬಂಧಿ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ ಎಂದು

► ಯಕ್ಷಗಾನ ದಿಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆ ಇನ್ನಿಲ್ಲ Read More »

ಕರ್ನಾಟಕ
Scroll to Top