News Kadaba Desk

ಹಗಲು ಐಎಎಸ್ ಅಧಿಕಾರಿಯ ಕಾರು ಚಾಲಕ, ರಾತ್ರಿ ಸ್ನೇಹಿತರೊಡನೆ ಸರ ಕಳ್ಳತನ ► ಖತರ್ನಾಕ್ ಕಳ್ಳ ಇದೀಗ ಪೊಲೀಸರ ಅತಿಥಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.19. ಹಗಲಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಕಾರು ಚಾಲಕನಾಗಿ ಕೆಲಸ ಮಾಡುತ್ತಾ ರಾತ್ರಿ ಹೊತ್ತು ಚಿನ್ನದ ಸರ ಎಗರಿಸುವ ಖತರ್ನಾಕ್ ಕಳ್ಳನನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ ಘಟನೆ ಗುರುವಾರದಂದು ನಡೆದಿದೆ. ಖತರ್ನಾಕ್ ಕಳ್ಳನನ್ನು ಬೆಂಗಳೂರಿನ ಕೆಂಗೇರಿ ನಿವಾಸಿ ಪೊರೋಷತ್ತಮ್ ಎಂದು ಗುರುತಿಸಲಾಗಿದೆ. ಬೆಳಗ್ಗೆ ಎದ್ದು ಸೀರಿಯಸ್ ಆಗಿ ಆ ಅಧಿಕಾರಿಯ ಕಾರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುರುಷೋತ್ತಮ್ ಡ್ಯೂಟಿ ಮುಗಿಯುತ್ತಿದ್ದಂತೆ ಸ್ನೇಹಿತರಾದ ಪ್ರದೀಪ್, ಪ್ರಜ್ವಲ್ ಜೊತೆ ಸೇರಿ ಕಳ್ಳತನಕ್ಕೆ ಇಳಿಯುತ್ತಿದ್ದ. […]

ಹಗಲು ಐಎಎಸ್ ಅಧಿಕಾರಿಯ ಕಾರು ಚಾಲಕ, ರಾತ್ರಿ ಸ್ನೇಹಿತರೊಡನೆ ಸರ ಕಳ್ಳತನ ► ಖತರ್ನಾಕ್ ಕಳ್ಳ ಇದೀಗ ಪೊಲೀಸರ ಅತಿಥಿ Read More »

ಕರ್ನಾಟಕ

► ದಕ್ಷಿಣ ಕನ್ನಡದ ನೂತನ ಜಿಲ್ಲಾಧಿಕಾರಿಯಾಗಿ ಶಶಿಕಾಂತ್ ಸೆಂಥಿಲ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.19. ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದ ಶಶಿಕಾಂತ್ ಸೆಂಥಿಲ್ ಗುರುವಾರ ಅಧಿಕಾರ ಸ್ವೀಕರಿಸಿದರು. ಪ್ರಭಾರ ಜಿಲ್ಲಾಧಿಕಾರಿ ಕುಮಾರ್ ಅವರು ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ, ಸ್ವಾಗತಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ, ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್, ಜಿ.ಪಂ. ಉಪ ಕಾರ್ಯದರ್ಶಿ ಎನ್.ಆರ್. ಉಮೇಶ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

► ದಕ್ಷಿಣ ಕನ್ನಡದ ನೂತನ ಜಿಲ್ಲಾಧಿಕಾರಿಯಾಗಿ ಶಶಿಕಾಂತ್ ಸೆಂಥಿಲ್ ಅಧಿಕಾರ ಸ್ವೀಕಾರ Read More »

ಕರಾವಳಿ

ಅ.22: ತೆಗೆರ್ ತುಳುಕೂಟದಿಂದ ದೀಪಾವಳಿ ಪ್ರಯುಕ್ತ ► ರೆಂಜಿಲಾಡಿಯಲ್ಲಿ ‘ಬೆನ್ನಿದ ಕಂಡೊಡ್ ನಮ್ಮ ಜವನೆರ್’ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಅ.19. ನೂಜಿಬಾಳ್ತಿಲ ಗ್ರಾಮದ ನೂಜಿಬೈಲ್ ತೆಗೆರ್ ತುಳುಕೂಟೊ ವತಿಯಿಂದ ದೀಪಾವಳಿ ಪ್ರಯುಕ್ತ ಮಾರಪ್ಪೆ ದಿ| ಜಿನ್ನಪ್ಪ ಗೌಡರ ಸ್ಮರಣಾರ್ಥ ಅ.22 ರಂದು ಶ್ರೀ ನೂಜಿ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿನ ಕೇಪುಂಜ ಗದ್ದೆಯಲ್ಲಿ ಬೆನ್ನಿದ ಕಂಡೊಡ್ ನಮ್ಮ ಜವನೆರ್ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಕೂಟವನ್ನು ಪ್ರಗತಿಪರ ಕೃಷಿಕರಾದ ಮೃತ್ಯುಂಜಯ ಭಿಡೆ ಕೆರೆತೋಟ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ನೂಜಿಶ್ರೀ ಉಳ್ಳಾಲ್ತಿ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ ಗೌಡ ಎಲುವಾಳೆ ವಹಿಸಲಿದ್ದು . ಪುತ್ತೂರು ಕೋಟಿಚೆನ್ನಯ ಕಂಬಳ ಸಮಿತಿ

ಅ.22: ತೆಗೆರ್ ತುಳುಕೂಟದಿಂದ ದೀಪಾವಳಿ ಪ್ರಯುಕ್ತ ► ರೆಂಜಿಲಾಡಿಯಲ್ಲಿ ‘ಬೆನ್ನಿದ ಕಂಡೊಡ್ ನಮ್ಮ ಜವನೆರ್’ ಕಾರ್ಯಕ್ರಮ Read More »

ಕರಾವಳಿ

ಬಿಜೈ: ಲಾಂಡ್ರಿ ಬೆಂಕಿಗಾಹುತಿ ► ದುಬಾರಿ ಸೀರೆ ಸೇರಿ ಲಕ್ಷಕ್ಕೂ ಅಧಿಕ ನಷ್ಟ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.19. ಇಲ್ಲಿನ ಬಿಜೈನಲ್ಲಿರುವ ಲಾಂಡ್ರಿ ಅಂಗಡಿಯೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಅಪಾರ ಹಾನಿ ಸಂಭವಿಸಿದ್ದು, ಒಂದು ಲಕ್ಷ ರೂ. ನಷ್ಟು ನಷ್ಟ ಉಂಟಾದ ಘಟನೆ ಬುಧವಾರ ಬೆಳಗ್ಗಿನ ಜಾವ ನಡೆದಿದೆ. ರೆನ್ವಿಕ್ ಎಂಬವರ ಮಾಲಕತ್ವದ ಆಧುನಿಕ ತಂತ್ರಜ್ಞಾನವಿರುವ ಮೈ ಆಂಗರ್ ಲಾಂಡ್ರಿಗೆ ಬೆಂಕಿ ಹೊತ್ತಿಕೊಂಡು ದುಬಾರಿ ಮೌಲ್ಯದ ಸೀರೆಗಳು ಸೇರಿದಂತೆ ಇತರ ಸೊತ್ತುಗಳು ಬೆಂಕಿಗಾಹುತಿಯಾಗಿವೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಕದ್ರಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು

ಬಿಜೈ: ಲಾಂಡ್ರಿ ಬೆಂಕಿಗಾಹುತಿ ► ದುಬಾರಿ ಸೀರೆ ಸೇರಿ ಲಕ್ಷಕ್ಕೂ ಅಧಿಕ ನಷ್ಟ Read More »

ಕರಾವಳಿ

ಮರ್ಧಾಳ: ಬೈಕ್ – ಕಾರು ಢಿಕ್ಕಿ ► ಮಹಿಳೆ ಸೇರಿ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಅ.18 ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಎಂಬಲ್ಲಿ ಆಮ್ನಿ ಕಾರು ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದೆ. ಕಡಬದಿಂದ ಕೊಂಬಾರು ಕಡೆಗೆ ತೆರಳುತ್ತಿದ್ದ ಬೈಕ್ ಮತ್ತು ವಿರುದ್ಧ ದಿಕ್ಕಿನಿಂದ ಆಗಮಿಸಿದ ಕಾರು ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಕೊಂಬಾರು ಗ್ರಾಮದ ಕೆರೆಂದೇಲು ನಿವಾಸಿ ಬಾಲಕೃಷ್ಣ ಗೌಡ ಮತ್ತು ಸಂಬಂಧಿ ಮೋಹಿನಿ ಎಂಬವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪುತ್ತೂರು ಖಾಸಗಿ

ಮರ್ಧಾಳ: ಬೈಕ್ – ಕಾರು ಢಿಕ್ಕಿ ► ಮಹಿಳೆ ಸೇರಿ ಇಬ್ಬರಿಗೆ ಗಾಯ Read More »

ಕರಾವಳಿ

ಉಪ್ಪಿನಂಗಡಿ: ಬೈಕ್ – ಬಸ್ ಢಿಕ್ಕಿ ► ದಂಪತಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.17. ಬೈಕ್ ಹಾಗೂ ಬಸ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಗಂಡ-ಹೆಂಡತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಉಪ್ಪಿನಂಗಡಿ ನೇತ್ರಾವತಿ ಸೇತುವೆಯ ಮೇಲೆ ನಡೆದಿದೆ. ಮೃತಪಟ್ಟ ದಂಪತಿಯನ್ನು ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕೊಯಿಲತಡ್ಡ ನಿವಾಸಿ ಶೀನಪ್ಪ ಆಚಾರ್ಯ ಹಾಗೂ ಅವರ ಪತ್ನಿ ವಿಶಾಲಾಕ್ಷಿ ಎಂದು ಗುರುತಿಸಲಾಗಿದೆ. ಇವರು ಉಪ್ಪಿನಂಗಡಿಯಿಂದ ಗುರುವಾಯನಕೆರೆ ಕಡೆಗೆ ತೆರಳುತಿದ್ದಾಗ ಉಪ್ಪಿನಂಗಡಿಯಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ವರುಣ್ ಟ್ರಾವೆಲ್ಸ್ ಎಂಬ ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿದ್ದು, ಢಿಕ್ಕಿಯ

ಉಪ್ಪಿನಂಗಡಿ: ಬೈಕ್ – ಬಸ್ ಢಿಕ್ಕಿ ► ದಂಪತಿ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ವಿಟ್ಲ: ವಿದ್ಯುತ್ ಶಾಕ್‍ನಿಂದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ, ಅ.17. ವಿದ್ಯುತ್ ಶಾಕ್ ಹೊಡೆದುರ ಪರಿಣಾಮ  ಮೆಡಿಕಲ್ ಶಾಪ್ ಮಾಲಕರೋರ್ವರು ಮೃತಪಟ್ಟ ಘಟನೆ ವಿಟ್ಲದ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ಮಂಗಳವಾರದಂದು ನಡೆದಿದೆ. ಮೃತರನ್ನು ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಕರೈ ನಿವಾಸಿ ದೇವಪ್ಪ ಬಂಗೇರ ಎಂಬವರ ಪುತ್ರ ರಾಜಶೇಖರ ಎಂದು ಗುರುತಿಸಲಾಗಿದೆ. ಇವರು ತೊಕ್ಕೊಟ್ಟಿನಲ್ಲಿ ಧನ್ವಂತರಿ ಆಯುರ್ವೇದ ಔಷಧಾಲಯವನ್ನು ಹೊಂದಿದ್ದು, ಇಂದು  ತನ್ನ ನಿವಾಸದ ಸಮೀಪದಲ್ಲಿನ ತನ್ನದೇ ಕೋಳಿ ಫಾರಂ ಒಳಗೆ ಏನೋ ಕೆಲಸ ಮಾಡುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದಿದೆ.

ವಿಟ್ಲ: ವಿದ್ಯುತ್ ಶಾಕ್‍ನಿಂದ ವ್ಯಕ್ತಿ ಮೃತ್ಯು Read More »

ಕರಾವಳಿ

ಕೋಡಿಂಬಾಳ – ಪಂಜ ಹೆದ್ದಾರಿ ಅಗಲೀಕರಣಕ್ಕೆ 5 ಕೋಟಿ ಬಿಡುಗಡೆ ► ಸುಳ್ಯ ಶಾಸಕ ಎಸ್.ಅಂಗಾರರಿಂದ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಅ.17. ಪಂಜ – ಕಡಬ ರಾಜ್ಯ ಹೆದ್ದಾರಿಯ ಓಂತ್ರಡ್ಕದಿಂದ ಪಂಜವರೆಗೆ 5.7 ಕಿ.ಮೀ. ಅಗಲೀಕರಣಗೊಂಡು ಮರು ಡಾಮರೀಕರಣಕ್ಕೆ 5 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು. ಅವರು ಅ.17 ರಂದು ಪಂಜ ಕಡಬ ರಸ್ತೆಯ ಕೋಡಿಂಬಾಳದಲ್ಲಿ ರಸ್ತೆ ಕಾಮಗಾರಿಗೆ ತೆಂಗಿನ ಕಾಯಿ ಒಡೆದು ಗುದ್ದಲಿ ಪುಜೆ ನಡೆಸಿ ಮಾತನಾಡಿದರು. ಕಡಬದಿಂದ ಓಂತ್ರಡ್ಕ ತನಕ ಈಗಾಗಲೇ 3 ಕೋಟಿ ರೂ.ಅನುದಾನದಲ್ಲಿ ಅಗಲೀಕರಣಗೊಂಡು ಮರುಡಾಮರೀಕರಣಗೊಂಡಿದ್ದು ಅಲ್ಲಿಂದ ಮುಂದೆ ಕೋಡಿಂಬಾಳದಿಂದ ಪಂಜ ರಸ್ತೆಯಲ್ಲಿ

ಕೋಡಿಂಬಾಳ – ಪಂಜ ಹೆದ್ದಾರಿ ಅಗಲೀಕರಣಕ್ಕೆ 5 ಕೋಟಿ ಬಿಡುಗಡೆ ► ಸುಳ್ಯ ಶಾಸಕ ಎಸ್.ಅಂಗಾರರಿಂದ ಚಾಲನೆ Read More »

ಕರಾವಳಿ

ಆರೋಪ ಸಾಬೀತದ ನಂತರ ಪುಟ್ಟಸ್ವಾಮಿ ಆತ್ಮಹತ್ಯೆ ಮಾಡಿಕೊಳ್ಳಲಿ ► ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಮೈಸೂರು,ಅ.16. ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿಯವರು ನನ್ನ ಮೇಲೆ ಮಾಡಿರುವ ಸುಳ್ಳು ಆರೋಪವನ್ನು ಸಾಬೀತು ಪಡಿಸಿದ ನಂತರ ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನಗರದಲ್ಲಿನ ತನ್ನ ನಿವಾಸದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ವಿರುದ್ಧದ ಆರೋಪ ಸುಳ್ಳಾದರೇ ವಿಧಾನಸೌಧ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ ವಿಧಾನ ಪರಿಷತ್ ಸದಸ್ಯ ಬಿ.ಜೆ ಪುಟ್ಟಸ್ವಾಮಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಮೊದಲು ಸುಳ್ಳು ಆರೋಪವನ್ನು ಸಾಬೀತು ಮಾಡಲಿ, ಆಮೇಲೆ

ಆರೋಪ ಸಾಬೀತದ ನಂತರ ಪುಟ್ಟಸ್ವಾಮಿ ಆತ್ಮಹತ್ಯೆ ಮಾಡಿಕೊಳ್ಳಲಿ ► ಸಿದ್ದರಾಮಯ್ಯ Read More »

ಕರ್ನಾಟಕ

ಅಕ್ರಮ ಡಿನೋಟಿಫೈ ಆರೋಪ: ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು ► ಆರೋಪ ಸುಳ್ಳಾದರೆ ವಿಧಾನಸೌಧದ ಎದುರು ನೇಣು ಹಾಕುತ್ತೇನೆ: ಪುಟ್ಟಸ್ವಾಮಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.16. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಕ್ರಮವಾಗಿ ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ದೂರು ನೀಡಿದ್ದಾರೆ. ನನ್ನ ಆರೋಪ ಸುಳ್ಳು ಎಂದಾದರೆ ವಿಧಾನಸೌಧದ ಮುಂದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬಿ.ಜೆ.ಪುಟ್ಟಸ್ವಾಮಿ ಹೇಳಿದ್ದಾರೆ. ಅವರು ಸೋಮವಾರದಂದು ನಗರದ ರೇಸ್‌ಕೋರ್ಸ್ ರಸ್ತೆಯ ಎಸಿಬಿ ಪ್ರಧಾನ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಭೂಪಸಂದ್ರದಲ್ಲಿ 6.36

ಅಕ್ರಮ ಡಿನೋಟಿಫೈ ಆರೋಪ: ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು ► ಆರೋಪ ಸುಳ್ಳಾದರೆ ವಿಧಾನಸೌಧದ ಎದುರು ನೇಣು ಹಾಕುತ್ತೇನೆ: ಪುಟ್ಟಸ್ವಾಮಿ Read More »

ಕರ್ನಾಟಕ
Scroll to Top