ಫರಂಗಿಪೇಟೆ: ಝಿಯಾ, ಫಯಾಝ್ ಕೊಲೆ ಪ್ರಕರಣ ► ಏಳು ಮಂದಿ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ.13. ಇತ್ತೀಚೆಗೆ ಫರಂಗಿಪೇಟೆಯ ಪೊಲೀಸ್ ಹೊರ ಠಾಣೆಯ ಎದುರಿನ ರಿಕ್ಷಾ ನಿಲ್ದಾಣದ ಬಳಿ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು 7 ಜನ ಆರೋಪಿಗಳನ್ನು ಬಂಧಿಸಿದ ಘಟನೆ ಶುಕ್ರವಾರದಂದು ನಡೆದಿದೆ.

ಅಡ್ಯಾರ್-ಕಣ್ಣೂರು ನಿವಾಸಿ ಫಯಾಝ್ ಹಾಗೂ ಝಿಯಾ ಎಂಬವರನ್ನು ರಾತ್ರಿ ವೇಳೆ ಕಡಿದು ಕೊಲೆ ಮಾಡಲಾಗಿತ್ತು. ಘಟನೆಯಲ್ಲಿ ಅಡ್ಯಾರ್ ನಿವಾಸಿ ಹನೀಸ್, ಮುಸ್ತಫಾ ಹಾಗೂ ನಜ್ಮಾನ್ ಎಂಬವರು ಗಂಭೀರ ಗಾಯಗೊಂಡಿದ್ದರು. ಪ್ರಕರಣದ ಬಗ್ಗೆ ವಿವಿಧ ತಂಡಗಳನ್ನು ರಚಿಸಿ ತೀವ್ರ ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ನೌಫಾಲ್, ಆರೋಪಿಗಳಾದ ಅಮೀರ್ ಸುಹೈಲ್, ಮಹಮ್ಮದ್ ಫಾಝಿಲ್, ಅಬ್ದುಲ್ ರಹಿಮಾನ್, ಮಿಚ್ಚ, ತಸ್ಲೀಂ ಹಾಗೂ ಅರ್ಶಾದ್ ಎಂಬವರನ್ನು ಬಂಧಿಸಿದ್ದಾರೆ.

Scroll to Top