News Kadaba Desk

ಅರಿಯಡ್ಕ: ಪೊಲೀಸರೆಂದು ನಂಬಿಸಿ ವ್ಯಕ್ತಿಯ ಅಪಹರಣ ಪ್ರಕರಣಕ್ಕೆ ಹೊಸ ತಿರುವು ► ತಾನೇ ಹೆಣೆದ ವಂಚನೆಯ ಬಲೆಗೆ ಬಿದ್ದ ಆರೋಪಿ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.29. ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಪುತ್ತೂರಿನ ಅರಿಯಡ್ಕದಿಂದ ವ್ಯಕ್ತಿಯೋರ್ವರನ್ನು ಅಪಹರಿಸಿದ್ದಾರೆಂದು ಹೇಳಲಾಗಿದ್ದ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಜಮೀನು ವಿಚಾರದಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ನಾಪತ್ತೆಯಾಗಿದ್ದ ವ್ಯಕ್ತಿ ತಾನೇ ಹೆಣೆದ ನಾಟಕವಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕುತ್ಯಾಡಿ ಶ್ರೀಧರ ಎಂಬವರ ಮನೆಗೆ ಸೋಮವಾರ ರಾತ್ರಿ ಪೊಲೀಸ್ ಡ್ರೆಸ್ ಧರಿಸಿ ಇಬ್ಬರು ಬಂದಿದ್ದು, ಬಂದವರು ಸಂಪ್ಯ ಪೊಲೀಸ್ ಠಾಣೆಯಿಂದ ಬಂದಿರುತ್ತೇವೆ ನೀವು ಠಾಣೆಗೆ ಬನ್ನಿ ಎಂದು ತುಳು ಭಾಷೆಯಲ್ಲಿ ಹೇಳಿ […]

ಅರಿಯಡ್ಕ: ಪೊಲೀಸರೆಂದು ನಂಬಿಸಿ ವ್ಯಕ್ತಿಯ ಅಪಹರಣ ಪ್ರಕರಣಕ್ಕೆ ಹೊಸ ತಿರುವು ► ತಾನೇ ಹೆಣೆದ ವಂಚನೆಯ ಬಲೆಗೆ ಬಿದ್ದ ಆರೋಪಿ Read More »

ಕರಾವಳಿ

ಪಣಂಬೂರು: ನಿಲ್ಲಿಸಿದ್ದ ಲಾರಿಗೆ ಇನ್ನೋವಾ ಢಿಕ್ಕಿ ► ಓರ್ವ ಮೃತ್ಯು, ಹಲವರು ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.29. ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಟ್ಯಾಂಕರ್‌ಗೆ ಇನ್ನೋವಾ ಕಾರೊಂದು ಢಿಕ್ಕಿಯಾದ ಪರಿಣಾಮ ಓರ್ವ ಮೃತಪಟ್ಟು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರದಂದು ಪಣಂಬೂರಿನಲ್ಲಿ‌ ನಡೆದಿದೆ. ಮೃತ ವ್ಯಕ್ತಿಯನ್ನು ಇನ್ನೋವಾ ಕಾರು ಚಾಲಕ ಬೆಳಗಾವಿಯ ಹನುಮಂತಯ್ಯ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಮೂಲದವರು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಗೆ ಢಿಕ್ಕಿ ಹೊಡೆದಿದ್ದರಿಂದಾಗಿ ಈ ಅವಘಡ

ಪಣಂಬೂರು: ನಿಲ್ಲಿಸಿದ್ದ ಲಾರಿಗೆ ಇನ್ನೋವಾ ಢಿಕ್ಕಿ ► ಓರ್ವ ಮೃತ್ಯು, ಹಲವರು ಗಂಭೀರ Read More »

ಕರಾವಳಿ

ಸುಳ್ಯ: ಅಕ್ರಮ ಗಾಂಜಾ ಪತ್ತೆ ► ಇಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.29. ಅಕ್ರಮ ಗಾಂಜಾವನ್ನು ವಶಪಡಿಸಿಕೊಂಡಿರುವ ಸುಳ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಸುಳ್ಯದಲ್ಲಿ ಬುಧವಾರದಂದು ನಡೆದಿದೆ. ಬಂಧಿತ ಆರೋಪಿಗಳನ್ನು ಸುಳ್ಯ ಕಸಬಾ ನಿವಾಸಿ ಮಹಮ್ಮದ್ ಕಲ್ಲಮಟ್ಟು ಎಂಬವರ ಪುತ್ರ ಪಿ.ಎಂ ಮೊಯ್ದಿನ್(35) ಹಾಗೂ ಸುಳ್ಯ ಕಲ್ಲುಮುಟ್ಟು ನಿವಾಸಿ ಚಿನ್ನ ಮುತ್ತು ಎಂಬವರ ಪುತ್ರ ಮುರಳಿ ಸಿ.(23) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಸುಳ್ಯ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಸುಳ್ಯ ಠಾಣಾ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ನಡೆಸುತ್ತಿದ್ದ

ಸುಳ್ಯ: ಅಕ್ರಮ ಗಾಂಜಾ ಪತ್ತೆ ► ಇಬ್ಬರು ಆರೋಪಿಗಳ ಬಂಧನ Read More »

ಕರಾವಳಿ

ಬಂಟ್ವಾಳ: ಪ್ರೀತಿಗೆ ಅಡ್ಡ ಬರುತ್ತಿದ್ದಾನೆ ಎಂದು ತನ್ನ ಸ್ನೇಹಿತನ ಕೊಲೆ ► ಕಬಡ್ಡಿಗೆ ತೆರಳುವ ನೆಪದಲ್ಲಿ ನೀರಿಗೆ ದೂಡಿ ಹಾಕಿದ ಭೂಪ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.29. ಹುಡುಗಿಯ ವಿಚಾರದಲ್ಲಿ ಅಡ್ಡ ಬರುತ್ತಿದ್ದಾನೆಂಬ ಕಾರಣಕ್ಕಾಗಿ ತನ್ನ ಸ್ನೇಹಿತನನ್ನೇ ನೀರಿಗೆ ತಳ್ಳಿ ಕೊಲೆಗೈದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಮೃತ ಯುವಕನನ್ನು ನರಿಕೊಂಬು ಗ್ರಾಮದ ನಾರಾಯಣ ಎಂಬವರ ಪುತ್ರ ಯತೀಶ್ ಎಂದು ಗುರುತಿಸಲಾಗಿದೆ. ಯತೀಶ್ ನ ಸ್ನೇಹಿತ ಶಶಿಧರ್ ಬೆಳ್ತಂಗಡಿಯ ಯುವತಿಯೋರ್ವಳನ್ನು ಪ್ರೀತಿಸುವ ವಿಚಾರದಲ್ಲಿ ಸಣ್ಣಪುಟ್ಟ ಗಲಾಟೆ ನಡೆದಿದೆಯೆನ್ನಲಾಗಿದೆ. ತನ್ನ ಪ್ರೀತಿಗೆ ಸ್ನೇಹಿತ ಯತೀಶ್ ಅಡ್ಡಬರುತ್ತಿದ್ದು, ಆತನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಶಶಿಧರ್ ತನ್ನ ಸ್ನೇಹಿತರಲ್ಲಿ ಹೇಳುತ್ತಿದ್ದನೆನ್ನಲಾಗಿದೆ. ಮಾರ್ಚ್ 24 ರಂದು

ಬಂಟ್ವಾಳ: ಪ್ರೀತಿಗೆ ಅಡ್ಡ ಬರುತ್ತಿದ್ದಾನೆ ಎಂದು ತನ್ನ ಸ್ನೇಹಿತನ ಕೊಲೆ ► ಕಬಡ್ಡಿಗೆ ತೆರಳುವ ನೆಪದಲ್ಲಿ ನೀರಿಗೆ ದೂಡಿ ಹಾಕಿದ ಭೂಪ Read More »

ಕರಾವಳಿ

ಬಂಟ್ವಾಳ: ಅಕ್ರಮ ಮರಳು ಅಡ್ಡೆಗೆ ದಾಳಿ ► 48 ಬೋಟ್ ಗಳು ಸೇರಿ 60 ಲಕ್ಷ ರೂ‌. ಮೌಲ್ಯದ ಸ್ವತ್ತು ವಶ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.28. ಖಚಿತ ಮಾಹಿತಿ ಆಧರಿಸಿ ಅಕ್ರಮ ಮರಳು ಅಡ್ಡೆಗೆ ದಾಳಿ ಮಾಡಿರುವ ಪೊಲೀಸರು 48 ಬೋಟ್ ಗಳ ಸಹಿತ 60 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಬುಧವಾರದಂದು ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗಬೆಳ್ಳೂರು ಎಂಬಲ್ಲಿ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ ಎಂದು ಬಂದ ಖಚಿತ ಮಾಹಿತಿಯ ಮೆರೆಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ| ರವಿಕಾಂತೇಗೌಡರವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಪೊಲೀಸರು

ಬಂಟ್ವಾಳ: ಅಕ್ರಮ ಮರಳು ಅಡ್ಡೆಗೆ ದಾಳಿ ► 48 ಬೋಟ್ ಗಳು ಸೇರಿ 60 ಲಕ್ಷ ರೂ‌. ಮೌಲ್ಯದ ಸ್ವತ್ತು ವಶ Read More »

ಕರಾವಳಿ

ಅರಿಯಡ್ಕ: ಪೊಲೀಸರೆಂದು ಹೇಳಿ ಮನೆಗೆ ಬಂದ ಅಪರಿಚಿತರು ► ಠಾಣೆಗೆ ಬರಬೇಕೆಂದು ನಂಬಿಸಿ ವ್ಯಕ್ತಿಯ ಅಪಹರಣ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.27. ಪೊಲೀಸರೆಂದು ನಂಬಿಸಿ ವ್ಯಕ್ತಿಯೋರ್ವರನ್ನು ಅಪಹರಿಸಿದ ಘಟನೆ ತಾಲೂಕಿನ ಅರಿಯಡ್ಕ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕುತ್ಯಾಡಿ ಶ್ರೀಧರ ಎಂಬವರ ಮನೆಗೆ ಸೋಮವಾರ ರಾತ್ರಿ ಪೊಲೀಸ್ ಡ್ರೆಸ್ ಧರಿಸಿ ಇಬ್ಬರು ಬಂದಿದ್ದು, ಬಂದವರು ಸಂಪ್ಯ ಪೊಲೀಸ್ ಠಾಣೆಯಿಂದ ಬಂದಿರುತ್ತೇವೆ ನೀವು ಠಾಣೆಗೆ ಬನ್ನಿ ಎಂದು ತುಳು ಭಾಷೆಯಲ್ಲಿ ಹೇಳಿ ಶ್ರೀಧರರವರನ್ನು ಕರೆದುಕೊಂಡು ಹೋಗಿದ್ದಾರೆನ್ನಲಾಗಿದೆ. ಈ ಬಗ್ಗೆ ಮಂಗಳವಾರದಂದು ಸಂಪ್ಯ ಠಾಣೆಯಲ್ಲಿ ಬಂದು ವಿಚಾರಿಸಿದಾಗ ಠಾಣೆಗೆ ಕರೆದುಕೊಂಡು

ಅರಿಯಡ್ಕ: ಪೊಲೀಸರೆಂದು ಹೇಳಿ ಮನೆಗೆ ಬಂದ ಅಪರಿಚಿತರು ► ಠಾಣೆಗೆ ಬರಬೇಕೆಂದು ನಂಬಿಸಿ ವ್ಯಕ್ತಿಯ ಅಪಹರಣ Read More »

ಕರಾವಳಿ

ಉಪ್ಪಿನಂಗಡಿ: ಹಾಡುಹಗಲೇ ವಿಷ ಸೇವಿಸಿ ಆತ್ಮಹತ್ಯೆಗೈದ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಲರ್ಕ್

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.27. ಇಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಲರ್ಕ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರದಂದು ಉಪ್ಪಿನಂಗಡಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಬೆಳ್ತಂಗಡಿ ತಾಲೂಕಿನ ರೆಖ್ಯ ನಿವಾಸಿ ಜಾಯ್ ಥಾಮಸ್ (50) ಎಂದು ಗುರುತಿಸಲಾಗಿದೆ. ಅವರು ಮಂಗಳವಾರದಂದು ಉಪ್ಪಿನಂಗಡಿ ಪೇಟೆಯಿಂದ ವಿಷ ಪದಾರ್ಥ ಖರೀದಿಸಿ ಉಪ್ಪಿನಂಗಡಿಯ ಆದಿತ್ಯ ಹೋಟೆಲ್ ಸಮೀಪ ಸೇವಿಸಿ ಕುಸಿದು ಬಿದ್ದಿದ್ದಾರೆನ್ನಲಾಗಿದೆ. ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದರಾದರೂ ಅದಾಗಲೇ ಅವರು ಮೃತಪಟ್ಟಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣ

ಉಪ್ಪಿನಂಗಡಿ: ಹಾಡುಹಗಲೇ ವಿಷ ಸೇವಿಸಿ ಆತ್ಮಹತ್ಯೆಗೈದ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಲರ್ಕ್ Read More »

ಕರಾವಳಿ

ಮೇ 12 ರಂದು ಕರ್ನಾಟಕ ವಿಧಾನಸಭೆಗೆ ಏಕಹಂತದ ಚುನಾವಣೆ ► ಇಂದಿನಿಂದಲೇ ನೀತಿ ಸಂಹಿತೆ ಜಾರಿ

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ.27. ಮುಂಬರುವ ಮೇ ತಿಂಗಳ 12 ರಂದು ಕರ್ನಾಟಕ ವಿಧಾನಸಭೆ ಚುನಾವಣೆಯು ಏಕಹಂತದಲ್ಲಿ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಓಂ ಪ್ರಕಾಶ್ ರಾವತ್ ತಿಳಿಸಿದ್ದಾರೆ. ಮಂಗಳವಾರದಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಾಜ್ಯದ ಒಟ್ಟು 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 12 ರಂದು ಏಕಹಂತದಲ್ಲಿ ಮತದಾನ ನಡೆಯಲಿದ್ದು, ಮೇ 18 ರಂದು ಮತ ಎಣಿಕೆ ನಡೆಯಲಿದೆ. 2 ಕೋಟಿ 51 ಲಕ್ಷ ಪುರುಷ ಮತದಾರರು ಹಾಗೂ 2 ಕೋಟಿ

ಮೇ 12 ರಂದು ಕರ್ನಾಟಕ ವಿಧಾನಸಭೆಗೆ ಏಕಹಂತದ ಚುನಾವಣೆ ► ಇಂದಿನಿಂದಲೇ ನೀತಿ ಸಂಹಿತೆ ಜಾರಿ Read More »

ಕರ್ನಾಟಕ

ಕರಾಯ: ಭೀಕರ ರಸ್ತೆ ಅಪಘಾತ ► ಬಸ್ಸಿನ ಚಕ್ರ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.27. ಖಾಸಗಿ ಬಸ್ ಹಾಗೂ ಬೈಕ್‌ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಕರಾಯ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಕೊಲ್ಯ ನಿವಾಸಿ ಚಂದ್ರಶೇಖರ(34) ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿಯಿಂದ ಕಕ್ಕೆಪದವು ತೆರಳುತ್ತಿದ್ದ ಜೀವನ್ ಜ್ಯೋತಿ ಖಾಸಗಿ ಬಸ್ ಹಾಗೂ ಟಿವಿಎಸ್ ವೇಗೋ ಸ್ಕೂಟಿ ನಡುವೆ ಢಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಸವಾರನ ಮೇಲೆ ಬಸ್ಸಿನ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕರಾಯ: ಭೀಕರ ರಸ್ತೆ ಅಪಘಾತ ► ಬಸ್ಸಿನ ಚಕ್ರ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ರಾಜಕೀಯದ ಮೇಲಾಟವೋ…? ಸರಕಾರದ ಇಚ್ಚಾಶಕ್ತಿಯ ಕೊರತೆಯೋ..? ► ಅಂತೂ ಕಡಬ ತಾಲೂಕು ಉದ್ಘಾಟನೆಗೆ ಬಿತ್ತು ಬ್ರೇಕ್….!!

(ನ್ಯೂಸ್ ಕಡಬ) newskadaba.com ಕಡಬ, ಮಾ.27. ಕಳೆದ ಹಲವು ದಶಕಗಳ ಬೇಡಿಕೆಯಾಗಿದ್ದ ನೂತನ ಕಡಬ ತಾಲೂಕು ರಚನೆಯ ಕನಸು ನನಸಾಗುವ ಹಂತಕ್ಕೆ ತಲುಪಿದ್ದರೂ ಇದೀಗ ರಾಜಕೀಯದ ಮೇಲಾಟದಿಂದಲೋ..? ಸರಕಾರದ ಇಚ್ಚಾಶಕ್ತಿಯ ಕೊರತೆಯಿಂದಲೋ..? ಕಡಬ ತಾಲೂಕು ಉದ್ಘಾಟನೆಗೆ ಬ್ರೇಕ್ ಬಿದ್ದಿದೆ. ಎರಡೆರಡು ಬಾರಿ ದಿನಾಂಕ ನಿಗದಿಯಾಗಿ ಕಾರಣಾಂತರಗಳಿಂದಾಗಿ ಮುಂದೂಡಲಾಗಿದ್ದ ಕಡಬ ತಾಲೂಕು ಉದ್ಘಾಟನೆಯು ಮಾರ್ಚ್ 27 ರಂದು ನಡೆಯಲಿದೆ ಎಂದು ಜಿಲ್ಲಾಡಳಿತದ ವತಿಯಿಂದ ಅಧಿಕೃತ ದಿನಾಂಕ ಘೋಷಣೆಯಾದ ನಂತರ ಕಡಬದಲ್ಲಿ ಸಮಾಧಾನಕರ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ

ರಾಜಕೀಯದ ಮೇಲಾಟವೋ…? ಸರಕಾರದ ಇಚ್ಚಾಶಕ್ತಿಯ ಕೊರತೆಯೋ..? ► ಅಂತೂ ಕಡಬ ತಾಲೂಕು ಉದ್ಘಾಟನೆಗೆ ಬಿತ್ತು ಬ್ರೇಕ್….!! Read More »

ಕರಾವಳಿ
Scroll to Top