News Kadaba Desk

ಕಡಬ: ಹೃದಯಾಘಾತಕ್ಕೊಳಗಾದ ಮೆಸ್ಕಾಂ ಉದ್ಯೋಗಿ ► ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಎ.01. ಮೆಸ್ಕಾಂ ಉದ್ಯೋಗಿಯೊಬ್ಬರು ಕರ್ತವ್ಯದಲ್ಲಿರುವಾಗಲೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಭಾನುವಾರದಂದು ಸುಬ್ರಹ್ಮಣ್ಯದಲ್ಲಿ ನಡೆದಿದೆ. ಸುಬ್ರಹ್ಮಣ್ಯ ಮೆಸ್ಕಾಂ ಕಛೇರಿಯಲ್ಲಿ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಡಬ ಸಮೀಪದ ಕೋಡಿಂಬಾಳ ಗ್ರಾಮದ ಕೊಡೆಂಕೀರಿ ನಿವಾಸಿ ದಿ| ಸಾಂತಪ್ಪ ಗೌಡ ಎಂಬವರ ಪುತ್ರ ಚಂದ್ರಶೇಖರ್(52) ಭಾನುವಾರದಂದು ಕರ್ತವ್ಯದಲ್ಲಿರುವಾಗಲೇ ಹೃದಯಾಘಾತಕ್ಕೊಳಗಾಗಿದ್ದು, ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಕಡಬ: ಹೃದಯಾಘಾತಕ್ಕೊಳಗಾದ ಮೆಸ್ಕಾಂ ಉದ್ಯೋಗಿ ► ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತ್ಯು Read More »

ಕರಾವಳಿ

ಪದವು: ಶಾರ್ಟ್ ಸರ್ಕ್ಯೂಟ್ ನಿಂದಾಗಿ ವಾಹನಕ್ಕೆ ಬೆಂಕಿ

(ನ್ಯೂಸ್ ಕಡಬ) newskadaba.com ಕಡಬ, ಎ.01. ಶಾರ್ಟ್ ಸರ್ಕ್ಯೂಟ್ ಕಾರಣದಿಂದಾಗಿ ವಾಹನದಲ್ಲಿ ಬೆಂಕಿಯುಂಟಾಗಿದ್ದು, ಊರವರು ಬೆಂಕಿಯನ್ನು ನಂದಿಸಿದ್ದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿದ ಘಟನೆ ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಸಮೀಪದ ಪದವು ಎಂಬಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಕ್ಯಾಟರಿಂಗ್ ಸಂಸ್ಥೆಗೆ ಸೇರಿದ ಟಾಟಾ ಏಸ್ ವಾಹನವು ಆಹಾರಗಳನ್ನು ತುಂಬಿಸಿಕೊಂಡು ಕಡಬ ಕಡೆಗೆ ತೆರಳುತ್ತಿದ್ದಾಗ ಪದವು ಸಮೀಪ ತಲುಪಿದಾಗ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ‌ ಕಾಣಿಸಿಕೊಂಡಿದೆ. ತಕ್ಷಣವೇ ನೀರು ಸುರಿದು ಬೆಂಕಿ ನಂದಿಸಲು ಸಹಕರಿಸಿದ್ದರಿಂದಾಗಿ ಹೆಚ್ಚಿನ ಅನಾಹುತ

ಪದವು: ಶಾರ್ಟ್ ಸರ್ಕ್ಯೂಟ್ ನಿಂದಾಗಿ ವಾಹನಕ್ಕೆ ಬೆಂಕಿ Read More »

ಕರಾವಳಿ

ಹುಟ್ಟೂರಿಗೆ ಆಗಮಿಸಿದ ಲಷ್ಕರ್ – ಎ – ತೋಯ್ಬಾ ಉಗ್ರರನ್ನು ಸದೆಬಡಿದಿದ್ದ ತುಳುನಾಡಿನ ವೀರ ಯೋಧ ► ಕಡಬ ತಾಲೂಕಿಗೆ ಹೆಮ್ಮೆಯ ಗರಿಯನ್ನು ತಂದಿತ್ತ ಝುಬೈರ್ ನೇರೆಂಕಿಗೆ ಹುಟ್ಟೂರ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಎ.01. ಕಳೆದ ಫೆಬ್ರವರಿ ತಿಂಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿ ಊರಿಗೆ ಆಗಮಿಸಿದ ತುಳುನಾಡಿನ ವೀರ ಯೋಧನಿಗೆ ಹುಟ್ಟೂರ ಸನ್ಮಾನ ಭಾನುವಾರದಂದು ಆತೂರಿನಲ್ಲಿ ನಡೆಯಿತು. ಫೆಬ್ರವರಿ ತಿಂಗಳ ಎರಡನೇ ವಾರದಲ್ಲಿ ಜಮ್ಮು ಕಾಶ್ಮೀರದ ಕರಣ್ ನಗರಕ್ಕೆ ರಣ ಹೇಡಿಗಳಂತೆ ನುಗ್ಗಿದ ಲಷ್ಕರ್-ಎ-ತೋಯ್ಬಾ ಭಯೋತ್ಪಾದಕರನ್ನು ಅಟ್ಟಾಡಿಸಿ ಮುಲಾಜಿಲ್ಲದೇ ಹೊಡೆದುರುಳಿಸಿ ತನ್ನ ಹುದ್ದೆಗೆ ಗೌರವ ಸಲ್ಲಿಸಿದ್ದ ತಂಡದಲ್ಲಿದ್ದ ಕಡಬ ತಾಲೂಕಿನ ಆತೂರು ಸಮೀಪದ ಬಜತ್ತೂರು ಗ್ರಾಮದ ನೇರೆಂಕಿಯ ಮೇಲೂರು

ಹುಟ್ಟೂರಿಗೆ ಆಗಮಿಸಿದ ಲಷ್ಕರ್ – ಎ – ತೋಯ್ಬಾ ಉಗ್ರರನ್ನು ಸದೆಬಡಿದಿದ್ದ ತುಳುನಾಡಿನ ವೀರ ಯೋಧ ► ಕಡಬ ತಾಲೂಕಿಗೆ ಹೆಮ್ಮೆಯ ಗರಿಯನ್ನು ತಂದಿತ್ತ ಝುಬೈರ್ ನೇರೆಂಕಿಗೆ ಹುಟ್ಟೂರ ಸನ್ಮಾನ Read More »

ಕರಾವಳಿ

ಪುತ್ತೂರು: ಕೆಎಸ್ಸಾರ್ಟಿಸಿ ಬಸ್ – ಕಾರು ಢಿಕ್ಕಿ ► ಯುವ ವಕೀಲೆ ಮೃತ್ಯು, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.01. ವ್ಯಾಗನರ್ ಕಾರು ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಯುವ ವಕೀಲೆ ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಸಂಪ್ಯದಲ್ಲಿ ಶನಿವಾರದಂದು ನಡೆದಿದೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ಕಂಟ್ರಮಜಲು ನಿವಾಸಿ ಜಿನ್ನಪ್ಪ‌ ಗೌಡ ಎಂಬವರ ಪುತ್ರಿ ಮಂಗಳೂರಿನ ಯುವ ವಕೀಲೆ ಗಾಯತ್ರಿ (23) ಎಂದು ಗುರುತಿಸಲಾಗಿದೆ. ಇವರು ಪುತ್ತೂರಿನಿಂದ ಕುಂಬ್ರ ಕಡೆಗೆ ತೆರಳುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಇವರಿದ್ದ

ಪುತ್ತೂರು: ಕೆಎಸ್ಸಾರ್ಟಿಸಿ ಬಸ್ – ಕಾರು ಢಿಕ್ಕಿ ► ಯುವ ವಕೀಲೆ ಮೃತ್ಯು, ಓರ್ವ ಗಂಭೀರ Read More »

ಕರಾವಳಿ

ಕಡಬ: ನೆಲ್ಯಾಡಿಗೆಂದು ತೆರಳಿದ್ದ ಯುವಕ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಮಾ.31. ಕೆಲಸಕ್ಕೆಂದು ತೆರಳಿದ ಯುವಕನೋರ್ವ ಮೂರು ದಿನಗಳಾದರೂ ಮನೆಗೆ ಬರದೆ ನಾಪತ್ತೆಯಾಗಿರುವ ಘಟನೆ ಕಡಬದಲ್ಲಿ ನಡೆದಿದೆ. ನಾಪತ್ತೆಯಾಗಿರುವ ಯುವಕನನ್ನು ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಕಾರ್ಕಳ ನಿವಾಸಿ ಮಣಿ ಎಂಬವರ ಪುತ್ರ ಶ್ರೀಜಿತ್(24) ಎಂದು ಗುರುತಿಸಲಾಗಿದೆ. ಈತ ಬುಧವಾರದಂದು ನೆಲ್ಯಾಡಿಗೆಂದು ಕೆಲಸಕ್ಕೆ ತೆರಳಿದ್ದು, ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದಾರೆ ಎಂದು ಮಣಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ: ನೆಲ್ಯಾಡಿಗೆಂದು ತೆರಳಿದ್ದ ಯುವಕ ನಾಪತ್ತೆ Read More »

ಕರಾವಳಿ

ಉಪ್ಪಿನಂಗಡಿ ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಅಡಿಕೆ ಕಳ್ಳರು ಅಂದರ್ ► ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಅಡಿಕೆ ವಶ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.31. ಕೆಲ ದಿನಗಳ ಹಿಂದೆ ನಡೆದ ಅಡಿಕೆ ಕಳವು ಪ್ರಕರಣವೊಂದನ್ನು ವಾರದೊಳಗೆ ಬೇಧಿಸಿರುವ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸುವ ಮೂಲಕ ಮತ್ತೊಮ್ಮೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಬಂಧಿತ ಆರೋಪಿಯನ್ನು ಕೌಕ್ರಾಡಿ ಗ್ರಾಮದ ನೆಲ್ಯಾಡಿ ಬಳಿಯ ಕುಂಡಡ್ಕ ನಿವಾಸಿ ಸರ್ಫ್‌ರಾಜ್ ಯಾನೆ ಹುಸೈನ್ ಸರ್ಫ್‌ರಾಜ್(30) ಎಂದು ಗುರುತಿಸಲಾಗಿದೆ. ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿ ಸರ್ಫ್‌ರಾಜ್‌ನ ನೆರೆಮನೆಯವನಾದ ಅಶ್ಫಾಕ್ ಎಂಬಾತ ಪೊಲೀಸರ ಕಾರ್ಯಾಚರಣೆ ವೇಳೆ ಓಡಿ ತಪ್ಪಿಸಿಕೊಂಡಿದ್ದಾನೆ. ಆರೋಪಿಗಳು ನೆಲ್ಯಾಡಿಯಲ್ಲಿರುವ ಎಚ್.ಎನ್. ಸುಪಾರಿ ಟ್ರೇಡರ್ಸ್

ಉಪ್ಪಿನಂಗಡಿ ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಅಡಿಕೆ ಕಳ್ಳರು ಅಂದರ್ ► ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಅಡಿಕೆ ವಶ Read More »

ಕರಾವಳಿ

ಅಕ್ರಮ ಮರಳು ಅಡ್ಡೆಗೆ ದಾಳಿ ► ಯಾಂತ್ರೀಕೃತ ದೋಣಿ ಸಹಿತ 10 ಲಕ್ಷ ರೂ. ಮೌಲ್ಯದ ಸ್ವತ್ತು ವಶ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.30. ಅಕ್ರಮ ಮರಳುಗಾರಿಕೆ ಅಡ್ಡೆಯೊಂದಕ್ಕೆ ದಾಳಿ ನಡೆಸಿರುವ ಬಂಟ್ವಾಳ ಪೊಲೀಸರು ಯಾಂತ್ರೀಕೃತ ದೋಣಿ ಸಹಿತ ಲಕ್ಷಾಂತರ ರೂ. ಮೌಲ್ಯದ ಮರಳನ್ನು ವಶಪಡಿಸಿಕೊಂಡ ಘಟನೆ ಸಜೀಪ ಮುನ್ನೂರು ಗ್ರಾಮದ ಕೊಪ್ಪಳ ಎಂಬಲ್ಲಿ ಶುಕ್ರವಾರದಂದು ನಡೆದಿದೆ. ಸಜೀಪ ಮುನ್ನೂರು ಗ್ರಾಮದ ಕೊಪ್ಪಳ ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ನದಿ ತೀರದಲ್ಲಿ ದಾಸ್ತಾನು ಇರಿಸಲಾಗಿದ್ದ ಮರಳು, ಯಾಂತ್ರೀಕೃತ ದೋಣಿ ಹಾಗೂ ಲಾರಿ ಸೇರಿದಂತೆ ಹಲವು ಸಾಮಗ್ರಿಗಳನ್ನು

ಅಕ್ರಮ ಮರಳು ಅಡ್ಡೆಗೆ ದಾಳಿ ► ಯಾಂತ್ರೀಕೃತ ದೋಣಿ ಸಹಿತ 10 ಲಕ್ಷ ರೂ. ಮೌಲ್ಯದ ಸ್ವತ್ತು ವಶ Read More »

ಕರಾವಳಿ

ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲೇ ಕಾಲೇಜು‌ ವಿದ್ಯಾರ್ಥಿಗಳ ಲವ್ವಿ – ಡವ್ವಿ ► ಕ್ಯಾಮೆರಾದಲ್ಲಿ ಸೆರೆಯಾಯ್ತು ಅಸಭ್ಯ ದೃಶ್ಯ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ.31. ಕಾಲೇಜೊಂದರ ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳದಲ್ಲೇ ಮುತ್ತಿನ ಮಳೆಗರೆಯುತ್ತಾ ಮೈ ಮೇಲೆ ಕೈ ಹಾಕುತ್ತಾ ಅಶ್ಲೀಲವಾಗಿ ವರ್ತಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದ್ದು, ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬೆಳ್ತಂಗಡಿಯ ಖಾಸಗಿ ತಾಂತ್ರಿಕ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಕಾಲೇಜಿನ ಹಿಂಭಾಗದಲ್ಲಿನ ಖಾಲಿ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಅಸಭ್ಯವಾಗಿ ವರ್ತಿಸುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಕಾಲೇಜು ಪ್ರಿನ್ಸಿಪಾಲರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದ್ದು, ಕೊನೆಗೆ ಸಾರ್ವಜನಿಕರೇ ಅಸಭ್ಯ ವರ್ತನೆಯ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ

ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲೇ ಕಾಲೇಜು‌ ವಿದ್ಯಾರ್ಥಿಗಳ ಲವ್ವಿ – ಡವ್ವಿ ► ಕ್ಯಾಮೆರಾದಲ್ಲಿ ಸೆರೆಯಾಯ್ತು ಅಸಭ್ಯ ದೃಶ್ಯ Read More »

ಕರಾವಳಿ

ಉಪ್ಪಿನಂಗಡಿ: ಮಗುವಿಗೆ ಆಟವಾಡಲೆಂದು ಕಟ್ಟಿದ್ದ ಹಗ್ಗ ಕುತ್ತಿಗೆಗೆ ಬಿಗಿದು ಬಾಲಕಿ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.30. ಮಗುವಿಗೆ ಆಟವಾಡಲೆಂದು ಕಟ್ಟಿದ್ದ ಹಗ್ಗಕ್ಕೆ ಸಿಲುಕಿ ಬಾಲಕಿಯೋರ್ವಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಉಪ್ಪಿನಂಗಡಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮೃತ ಬಾಲಕಿಯನ್ನು ಉಪ್ಪಿನಂಗಡಿ ಶ್ರೀ ರಾಮ ವಿದ್ಯಾಲಯದ 7 ನೇ ತರಗತಿಯ ವಿದ್ಯಾರ್ಥಿನಿ, ಮೂಲತಃ ಉತ್ತರ ಪ್ರದೇಶ ನಿವಾಸಿ ಪ್ರಸ್ತುತ ಉಪ್ಪಿನಂಗಡಿಯಲ್ಲಿ ವಾಸ್ತವ್ಯವಿರುವ ರಾಜಕುಮಾರ್ ಚೌಹಾನ್ ಎಂಬವರ ಪುತ್ರಿ ಅಂಜಲಿ ಚೌಹಾನ್(13) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ತನ್ನ ತಮ್ಮ ಹಾಗೂ ಅಮ್ಮನ ಜೊತೆ ಆಟವಾಡಿದ್ದ ಅಂಜಲಿ ವೇಗವಾಗಿ ಮನೆಯೊಳಗೆ

ಉಪ್ಪಿನಂಗಡಿ: ಮಗುವಿಗೆ ಆಟವಾಡಲೆಂದು ಕಟ್ಟಿದ್ದ ಹಗ್ಗ ಕುತ್ತಿಗೆಗೆ ಬಿಗಿದು ಬಾಲಕಿ ಮೃತ್ಯು Read More »

ಕರಾವಳಿ

ಇಂದು (ಮಾ.30) ಕೆಸಿಎಫ್ ವತಿಯಿಂದ ದುಬೈನಲ್ಲಿ ಕರ್ನಾಟಕ ಫ್ಯಾಮಿಲಿ ಫೆಸ್ಟ್ – 2018

(ನ್ಯೂಸ್ ಕಡಬ) newskadaba.com ದುಬೈ, ಮಾ.30. ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ಐದನೇ ವರ್ಷಾಚರಣೆಯ ಪ್ರಯುಕ್ತ ಗಲ್ಫ್ ಅನಿವಾಸಿ ಕನ್ನಡಿಗರ ಕರ್ನಾಟಕ ಫ್ಯಾಮಿಲಿ ಫೆಸ್ಟ್-18 ಇದೇ ಬರುವ ಮಾರ್ಚ್ 30 ರಂದು ಅಜ್ಮಾನ್ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (ತುಂಬೆ ಮೈದಾನ) ಯಲ್ಲಿ ನಡೆಯಲಿದೆ. ಬೆಳಿಗ್ಗೆ 8 ರಿಂದ ರಾತ್ರಿ 10 ರ ವರೆಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಟೋಟ ಸ್ಪರ್ಧೆಗಳು ನಡೆಯಲಿದೆ. ಖಿರಾಅತ್, ಬುರ್ದಾ, ಆಧ್ಯಾತ್ಮಿಕತೆ, ಭಾಷಣ ಸ್ಪರ್ಧೆಗಳು, ಆಟೋಟಗಳು, ಐತಿಹಾಸಿಕ ಪ್ರವಾಸ, ಆರೋಗ್ಯ

ಇಂದು (ಮಾ.30) ಕೆಸಿಎಫ್ ವತಿಯಿಂದ ದುಬೈನಲ್ಲಿ ಕರ್ನಾಟಕ ಫ್ಯಾಮಿಲಿ ಫೆಸ್ಟ್ – 2018 Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top