News Kadaba Desk

ಮರ್ಧಾಳ: ನೂತನವಾಗಿ ಆರಂಭಗೊಳ್ಳಲಿರುವ ಶರೀಅತ್ ಮಹಿಳಾ ಕಾಲೇಜಿಗೆ ದಾಖಲಾತಿ ಆರಂಭ ► ವಾಣಿಜ್ಯ ವಿಭಾಗದ ಎಲ್ಲಾ ವಿಷಯಗಳಿಗೆ ಉಪನ್ಯಾಸಕರು ಬೇಕಾಗಿದ್ದಾರೆ

(ನ್ಯೂಸ್ ಕಡಬ) newskadaba.com ಕಡಬ, ಎ.04. ಮರ್ಧಾಳ ತಕ್ವೀಯತ್ತುಲ್ ಇಸ್ಲಾಂ ಎಜುಕೇಶನಲ್ ಟ್ರಸ್ಟ್ ವತಿಯಿಂದ ನೂತನವಾಗಿ ಆರಂಭಗೊಳ್ಳಲಿರುವ ಮಹಿಳಾ ಶರೀಅತ್ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ವರ್ಷದ ಪದವಿ ಪೂರ್ವ ವಾಣಿಜ್ಯ ವಿಭಾಗಕ್ಕೆ ಮಹಿಳಾ ಉಪನ್ಯಾಸಕರಿಂದ ಅರ್ಜಿ ಆಹ್ವಾನಿಸಲಾಗಿದೆ‌. ವಾಣಿಜ್ಯ ವಿಭಾಗದ ಎಲ್ಲಾ ವಿಷಯಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅನುಭವಿ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ನೂತನವಾಗಿ ಆರಂಭಗೊಳ್ಳಲಿರುವ ಪ್ರಥಮ ಹಾಗೂ ದ್ವಿತೀಯ ತರಗತಿಗಳಿಗೆ ದಾಖಲಾತಿಯು ಆರಂಭಗೊಂಡಿದ್ದು, ಹೆಚ್ಚಿನ ಮಾಹಿತಿಗಾಗಿ 9620333155, 9611229255, 9663035906 ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಮರ್ಧಾಳ: ನೂತನವಾಗಿ ಆರಂಭಗೊಳ್ಳಲಿರುವ ಶರೀಅತ್ ಮಹಿಳಾ ಕಾಲೇಜಿಗೆ ದಾಖಲಾತಿ ಆರಂಭ ► ವಾಣಿಜ್ಯ ವಿಭಾಗದ ಎಲ್ಲಾ ವಿಷಯಗಳಿಗೆ ಉಪನ್ಯಾಸಕರು ಬೇಕಾಗಿದ್ದಾರೆ Read More »

ಕರಾವಳಿ

ಯಕ್ಷಗಾನದಲ್ಲಿ ರಾಹುಲ್‌ ಗಾಂಧಿ ಹೇಳಿದ್ದ ‘ಇವನರ್ವ’ ಶಬ್ದ ಬಳಕೆ ► ಯಕ್ಷಗಾನ ಕಲಾವಿದನನ್ನು ವಜಾಗೊಳಿಸುವಂತೆ ಚುನಾವಣಾ ಆಯೋಗದಿಂದ ನೋಟಿಸ್

(ನ್ಯೂಸ್ ಕಡಬ) newskadaba.com ಮಂಗಳೂರು, ಎ.04. ಇತ್ತೀಚೆಗೆ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಬಸವಣ್ಣನ ವಚನವನ್ನು ಉಲ್ಲೇಖಿಸುತ್ತಾ ನೀಡಿದ್ದ ‘ಇವನರ್ವ’ ಹೇಳಿಕೆಯನ್ನು ಯಕ್ಷಗಾನದಲ್ಲಿ ಬಳಕೆ ಮಾಡಿದ ಆರೋಪದಲ್ಲಿ ಯಕ್ಷಗಾನ ಕಲಾವಿದರೊಬ್ಬರಿಗೆ ನೀತಿ ಸಂಹಿತೆ ಉಲ್ಲಂಘನೆಯ ಆರೋಪದಡಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಚುನಾವಣಾ ಅಧಿಕಾರಿ ನೋಟಿಸ್ ಜಾರಿಗೊಳಿಸಿದ ಘಟನೆ ಬುಧವಾರದಂದು ನಡೆದಿದೆ. ಪೂರ್ಣೇಶ್ ಎಪ್ರಿಲ್ 1ರಂದು ಮೂಡುಬಿದಿರೆಯ ಪಡುಮಾರ್ನಾಡಿನ ಬನ್ನಡ್ಕ ಎಂಬಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ರಾಜಕೀಯ ಪ್ರೇರಿತ ಶಬ್ದ ಬಳಸಿದ್ದಾರೆ. ಆದ್ದರಿಂದ

ಯಕ್ಷಗಾನದಲ್ಲಿ ರಾಹುಲ್‌ ಗಾಂಧಿ ಹೇಳಿದ್ದ ‘ಇವನರ್ವ’ ಶಬ್ದ ಬಳಕೆ ► ಯಕ್ಷಗಾನ ಕಲಾವಿದನನ್ನು ವಜಾಗೊಳಿಸುವಂತೆ ಚುನಾವಣಾ ಆಯೋಗದಿಂದ ನೋಟಿಸ್ Read More »

ಕರಾವಳಿ

ಸುಳ್ಯ – ಭಾಗಮಂಡಲ ಕಚ್ಚಾ ರಸ್ತೆಯ ತೊಡಿಕಾನದ ಪಟ್ಟಿ ಎಂಬಲ್ಲಿ ಗೇಟ್ ಗೆ ಹಾಕಲಾಗಿದ್ದ ಬೀಗ ತೆರವು ► ಸಾರ್ವಜನಿಕರಿಗೆ ತೊಂದರೆ ಆಗುವುದನ್ನು ಮನಗಂಡು ಬೀಗ ತೆರವುಗೊಳಿಸಿದ ಅರಣ್ಯ ಇಲಾಖೆ

(ನ್ಯೂಸ್ ಕಡಬ) newskadaba.com ಸುಳ್ಯ, ಎ.04. ಸುಳ್ಯದಿಂದ ತಲಕಾವೇರಿಗೆ ತೊಡಿಕಾನ – ಪಟ್ಟಿ – ಭಾಗ ಮಂಡಲ ಮೂಲಕ ಅತ್ಯಂತ ಹತ್ತಿರದ ಸಂಪರ್ಕ ರಸ್ತೆಯ ಪಟ್ಟಿ ಎಂಬಲ್ಲಿ ಗೇಟ್‌ಗೆ ಹಾಕಲಾಗಿದ್ದ ಬೀಗವನ್ನು ಕೊಡಗು ಅರಣ್ಯ ಇಲಾಖೆಯ ಅಧಿಕಾರಿಗಳು ಕೊನೆಗೂ ತೆರವುಗೊಳಿಸಿದ್ದಾರೆ. ಪಟ್ಟಿ ಅರಣ್ಯಕ್ಕೆ ಮೇಲಾಧಿಕಾರಿಗಳು ಬಂದಿದ್ದ ಸಂದರ್ಭದಲ್ಲಿ ವಾಹನವೊಂದು ಈ ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ಕಂಡು, ಗೇಟ್‌ಗೆ ಬೀಗ ಜಡಿಯಬೇಕೆಂದು ಆದೇಶಿದ್ದರು. ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಈ ಮಾರ್ಗವಾಗಿ ಸಂಚಾರಕ್ಕೆ ಅವಕಾಶ ಕೊಡಬಾರದು. ಅಂಥವರು ಕಂಡುಬಂದಲ್ಲಿ ಕಾನೂನು ಕ್ರಮ

ಸುಳ್ಯ – ಭಾಗಮಂಡಲ ಕಚ್ಚಾ ರಸ್ತೆಯ ತೊಡಿಕಾನದ ಪಟ್ಟಿ ಎಂಬಲ್ಲಿ ಗೇಟ್ ಗೆ ಹಾಕಲಾಗಿದ್ದ ಬೀಗ ತೆರವು ► ಸಾರ್ವಜನಿಕರಿಗೆ ತೊಂದರೆ ಆಗುವುದನ್ನು ಮನಗಂಡು ಬೀಗ ತೆರವುಗೊಳಿಸಿದ ಅರಣ್ಯ ಇಲಾಖೆ Read More »

ಕರಾವಳಿ

ಶಾಲಾ ಆವರಣದಲ್ಲಿಯೇ ಶಿಕ್ಷಕಿ ಹಾಗೂ ಸಂಸ್ಥೆಯ ಅಧ್ಯಕ್ಷನ ಕಾಮಕೇಳಿ ► ರೊಮ್ಯಾನ್ಸ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

(ನ್ಯೂಸ್ ಕಡಬ) newskadaba.com ಬೀದರ್, ಎ.04.  ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷನೋರ್ವ ಶಾಲಾ ಕಟ್ಟಡದಲ್ಲಿಯೇ ಶಿಕ್ಷಕಿಯೊಂದಿಗೆ ಕಾಮಕೇಳಿ ನಡೆಸಿರುವ ಘಟನೆಯು ಬೀದರ್ ನಲ್ಲಿ ನಡೆದಿದ್ದು, ಈ  ದೃಶ್ಯವು  ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಶಿಕ್ಷಕಿ ಮತ್ತು ಸಂಸ್ಥೆಯ ಅಧ್ಯಕ್ಷರ ರೊಮ್ಯಾನ್ಸ್ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದಿದೆಯೆನ್ನಲಾಗಿದ್ದು,  ಶಾಲಾ ಕಟ್ಟಡದಲ್ಲಿ ಅಳವಡಿಸಿದ್ದ ಸಿಸಿಟಿವಿ ಯಲ್ಲಿ ಸೆರೆಯಾಗಿವೆ. ಈ ದೃಶ್ಯವನ್ನು ಯಾರೋ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ಸ್ಥಳೀಯರ ಮೊಬೈಲ್ ನಲ್ಲಿ ಹರಿದಾಡುತ್ತಿದೆ. ಶಿಕ್ಷನ ಕಲಿಸಿಕೊಡಬೇಕಾಗಿದ್ದ ಶಾಲಾ

ಶಾಲಾ ಆವರಣದಲ್ಲಿಯೇ ಶಿಕ್ಷಕಿ ಹಾಗೂ ಸಂಸ್ಥೆಯ ಅಧ್ಯಕ್ಷನ ಕಾಮಕೇಳಿ ► ರೊಮ್ಯಾನ್ಸ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read More »

ಕರ್ನಾಟಕ

ಪುತ್ತೂರು: ಕೆಎಸ್ಸಾರ್ಟಿಸಿ ಬಸ್ ಗೆ ಕಲ್ಲು ತೂರಾಟ ಪ್ರಕರಣ ► ಮೂವರು ಆರೋಪಿಗಳು ಖುಲಾಸೆ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.04. ಬೆಂಗಳೂರಿನಲ್ಲಿ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದ ಪ್ರಕರಣವನ್ನು ಖಂಡಿಸಿ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನ್ಯಾಯಾಲಯವು ದೋಷಮುಕ್ತಗೊಳಿಸಿ ಆದೇಶಿಸಿದೆ. 2012 ರಲ್ಲಿ ಶ್ರೀರಾಮಸೇನೆಯ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್ ಬೆಂಗಳೂರಿನ ಟಿ.ವಿ. ಚಾನೆಲೊಂದರ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ವೇಳೆ ಅವರ ಮುಖಕ್ಕೆ ಗುಂಪೊಂದು ಮಸಿ ಬಳಿದಿತ್ತು. ಈ ಪ್ರಕರಣವನ್ನು ಖಂಡಿಸಿ

ಪುತ್ತೂರು: ಕೆಎಸ್ಸಾರ್ಟಿಸಿ ಬಸ್ ಗೆ ಕಲ್ಲು ತೂರಾಟ ಪ್ರಕರಣ ► ಮೂವರು ಆರೋಪಿಗಳು ಖುಲಾಸೆ Read More »

ಕರಾವಳಿ

ಬುಡೋಳಿ: ರಸ್ತೆ ಅಪಘಾತ ► ಬೈಕ್ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಎ.02. ಬೈಕೊಂದು ಸ್ಕಿಡ್ ಆಗಿ ಮಗುಚಿ ಬಿದ್ದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಬೈಕ್‌ ಸವಾರ ಪೆರ್ನೆ ನಿವಾಸಿ ಲಾರೆನ್ಸ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣವೇ ಲಾರೆನ್ಸ್ ರನ್ನು ರಿಕ್ಷಾ ಮೂಲಕ ಮಾಣಿಗೆ ಕರೆದುಕೊಂಡು ಹೋಗಿ ಬಳಿಕ ಮಾಣಿಯ 108 ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಬುಡೋಳಿ: ರಸ್ತೆ ಅಪಘಾತ ► ಬೈಕ್ ಸವಾರ ಗಂಭೀರ Read More »

ಕರಾವಳಿ

ನೀತಿ ಸಂಹಿತೆ ಜಾರಿಯಲ್ಲಿದ್ದರೂ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವ ಅಗತ್ಯವಿಲ್ಲ ► ಜಿಲ್ಲಾಧಿಕಾರಿ ಡಾ| ಸಸಿಕಾಂತ್ ಸೆಂಥಿಲ್ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.02. ವಿಧಾನಸಭಾ  ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿದ್ದರೂ, ಖಾಸಗಿ ಸ್ಥಳಗಳಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಲು ಸಾರ್ವಜನಿಕರು ಅರ್ಜಿ ಸಲ್ಲಿಸಬೇಕಾದ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಅವರು ಸೋಮವಾರದಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಚುನಾವಣಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮದುವೆ, ಹುಟ್ಟುಹಬ್ಬ ಆಚರಣೆ ಸೇರಿದಂತೆ ರಾಜಕೀಯ ಉದ್ದೇಶವಿಲ್ಲದ ಖಾಸಗಿ ಕಾರ್ಯಕ್ರಮಗಳಿಗೆ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕಾಗಿಲ್ಲ. ಆದರೆ ಸಾರ್ವಜನಿಕ

ನೀತಿ ಸಂಹಿತೆ ಜಾರಿಯಲ್ಲಿದ್ದರೂ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವ ಅಗತ್ಯವಿಲ್ಲ ► ಜಿಲ್ಲಾಧಿಕಾರಿ ಡಾ| ಸಸಿಕಾಂತ್ ಸೆಂಥಿಲ್ ಸ್ಪಷ್ಟನೆ Read More »

ಕರಾವಳಿ

ದುಷ್ಕೃತ್ಯ ನಡೆಸುವ ಉದ್ದೇಶದಿಂದ ಮನೆಯೊಂದರಲ್ಲಿ ಆಯುಧ ಶೇಖರಣೆ ► ತಲವಾರು ಸಹಿತ ನಾಲ್ವರ ಸೆರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.02. ದುಷ್ಕೃತ್ಯ ನಡೆಸುವ ಸಲುವಾಗಿ ಮನೆಯೊಂದರಲ್ಲಿ ತಲವಾರುಗಳನ್ನು ಬಚ್ಚಿಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪಣಂಬೂರು ಎಸಿಪಿ ರಾಜೇಂದ್ರ ಡಿ.ಎಸ್. ನೇತೃತ್ವದ ರೌಡಿ ನಿಗ್ರಹ ದಳದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಮೂರು ತಲವಾರುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಸೋಮವಾರದಂದು ನಡೆದಿದೆ. ಬಂಧಿತರನ್ನು ಪ್ರಮುಖ ಆರೋಪಿ ಸಂದೀಪ್, ಉಡುಪಿಯ ಆಕಾಶ್, ಫರಂಗಿಪೇಟೆಯ ಚರಣ್‌ರಾಜ್, ಧರ್ಮಸ್ಥಳದ ರಕ್ಷಿತ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಎರಡು ನಾಡ ಪಿಸ್ತೂಲ್ ಹಾಗು 10 ಮದ್ದುಗುಂಡುಗಳನ್ನು

ದುಷ್ಕೃತ್ಯ ನಡೆಸುವ ಉದ್ದೇಶದಿಂದ ಮನೆಯೊಂದರಲ್ಲಿ ಆಯುಧ ಶೇಖರಣೆ ► ತಲವಾರು ಸಹಿತ ನಾಲ್ವರ ಸೆರೆ Read More »

ಕರಾವಳಿ

‘ನಾನು ಪ್ರೀತಿಯಲ್ಲಿ ಬಿದ್ದಿರುವುದರಿಂದ ನನಗೆ ಓದಲು ಆಗಲಿಲ್ಲ. ದಯವಿಟ್ಟು ಪಾಸ್ ಮಾಡಿ’ ► ಉತ್ತರದ ಬದಲಿಗೆ ಲವ್ ಲೆಟರ್ ಬರೆದು ಮನವಿ ಮಾಡಿಕೊಂಡ ಕಾಲೇಜು ವಿದ್ಯಾರ್ಥಿ

(ನ್ಯೂಸ್ ಕಡಬ) newskadaba.com ಮುಜಾಫರ್‌ ನಗರ, ಎ.02. ಕಷ್ಟಪಟ್ಟು ಕಲಿತು ಪರೀಕ್ಷೆ ಎದುರಿಸಬೇಕಿದ್ದ ವಿದ್ಯಾರ್ಥಿಯೋರ್ವ ಉತ್ತರ ಪತ್ರಿಕೆಯಲ್ಲಿ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಯುಪಿ ಬೋರ್ಡ್‌ನ ಮಧ್ಯಂತರ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ಉತ್ತರಗಳನ್ನು ಬರೆದಿದ್ದು, ವಿದ್ಯಾರ್ಥಿಗಳು ನೀಡಿರುವ ಉತ್ತರಗಳು ಹಾಸ್ಯಾಸ್ಪದ ಎನ್ನಿಸಿದರೂ, ಅವರ ಮುಂದಿನ ಭವಿಷ್ಯ ಎತ್ತ ಸಾಗುತ್ತಿದೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ. ರಾಸಾಯನಶಾಸ್ತ್ರ ಪರೀಕ್ಷೆಯಲ್ಲಿ‌ ವಿದ್ಯಾರ್ಥಿಯೋರ್ವ ತನ್ನ ಪ್ರೇಮ‌ ನಿವೇದನೆಯನ್ನೇ ಬರೆದಿದ್ದು, ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ. ‘ನಾನು ಪೂಜಾ ಎಂಬ

‘ನಾನು ಪ್ರೀತಿಯಲ್ಲಿ ಬಿದ್ದಿರುವುದರಿಂದ ನನಗೆ ಓದಲು ಆಗಲಿಲ್ಲ. ದಯವಿಟ್ಟು ಪಾಸ್ ಮಾಡಿ’ ► ಉತ್ತರದ ಬದಲಿಗೆ ಲವ್ ಲೆಟರ್ ಬರೆದು ಮನವಿ ಮಾಡಿಕೊಂಡ ಕಾಲೇಜು ವಿದ್ಯಾರ್ಥಿ Read More »

ರಾಷ್ಟ್ರೀಯ ನ್ಯೂಸ್

ವಿಟ್ಲ: ಆಟವಾಡಲೆಂದು ಬಾವಿಗೆ ಇಳಿದ ವಿದ್ಯಾರ್ಥಿಗಳು ► ನೀರಿನಲ್ಲಿ ಮುಳುಗಿ‌ ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ, ಎ.01. ಈಜಾಡಲೆಂದು ಬಾವಿಗೆ ಇಳಿದ ಮೂವರು ಬಾಲಕರ ಪೈಕಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವಿಟ್ಲದ ಮುಡ್ನೂರು ಎಂಬಲ್ಲಿ ಭಾನುವಾರದಂದು ನಡೆದಿದೆ. ಮೃತ ಬಾಲಕನನ್ನು ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಪಿಲಿಂಜ ನಿವಾಸಿ, ಪುಣಚ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ದಕ್ಷಣ್ ಎಂದು ಗುರುತಿಸಲಾಗಿದೆ. ಈತ ಭಾನುವಾರದಂದು ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ತನ್ನ ಸ್ನೇಹಿತರ ಜೊತೆ ಆಟವಾಡಲೆಂದು ಬಾವಿಯ ಬಳಿಗೆ ತೆರಳಿದ್ದು, ಬಳಿಕ ನೀರಿನಲ್ಲಿ ಆಟವಾಡಲೆಂದು ಇಳಿದಿದ್ದಾನೆ.

ವಿಟ್ಲ: ಆಟವಾಡಲೆಂದು ಬಾವಿಗೆ ಇಳಿದ ವಿದ್ಯಾರ್ಥಿಗಳು ► ನೀರಿನಲ್ಲಿ ಮುಳುಗಿ‌ ಓರ್ವ ಮೃತ್ಯು Read More »

ಕರಾವಳಿ
Scroll to Top