News Kadaba Desk

ಭಾರೀ ಗಾಳಿ – ಮಳೆಗೆ ಕಾರಿನ ಮೇಲೆ ಬಿದ್ದ ಬೃಹತ್ ಮರ ► ತಾಯಿ – ಮಗಳು ಸ್ಥಳದಲ್ಲೇ ಮೃತ್ಯು, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಹಾಸನ, ಎ.23. ಜಿಲ್ಲೆಯ ವಿವಿಧೆಡೆ ಸುರಿದ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ತಾಯಿ – ಮಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಸಕಲೇಶಪುರದಲ್ಲಿ ಭಾನುವಾರದಂದು ನಡೆದಿದೆ. ಮೃತ ದುರ್ದೈವಿಗಳನ್ನು ಸಕಲೇಶಪುರ ತಾಲೂಕಿನ ಕುನಿಗನಹಳ್ಳಿ ಗ್ರಾಮದ ಚಿನ್ನಮ್ಮ ಹಾಗೂ ಪುತ್ರಿ ಪ್ರಫುಲ್ಲಾ ಎಂದು ಗುರುತಿಸಲಾಗಿದೆ. ಇವರು ಆಲ್ಟೋ ಕಾರಿನಲ್ಲಿ ತೆರಳುತ್ತಿದ್ದಾಗ ಕೊಡ್ಲಿಪೇಟೆ – ಬಾಳ್ಳುಪೇಟೆ ರಸ್ತೆಯಲ್ಲಿದ್ದ ಬೃಹತ್ ಮರವು ಇವರಿದ್ದ ಕಾರಿನ ಮೇಲೆ ಬಿದ್ದು ಈ […]

ಭಾರೀ ಗಾಳಿ – ಮಳೆಗೆ ಕಾರಿನ ಮೇಲೆ ಬಿದ್ದ ಬೃಹತ್ ಮರ ► ತಾಯಿ – ಮಗಳು ಸ್ಥಳದಲ್ಲೇ ಮೃತ್ಯು, ಓರ್ವ ಗಂಭೀರ Read More »

ಕರ್ನಾಟಕ

ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕರಾವಳಿಗೆ ► ಏಪ್ರಿಲ್ 27 ರಂದು ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.22. ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಭರ್ಜರಿ ರೋಡ್‌ ಶೋ ನಡೆಸಲು ಸಿದ್ಧತೆ ನಡೆಸಿದ್ದಾರೆ. ಏಪ್ರಿಲ್ 26 ಹಾಗೂ 27 ರಂದು ಎರಡು ದಿನದ ಪ್ರವಾಸಕ್ಕಾಗಿ ರಾಜ್ಯಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿಯವರು ಎಪ್ರಿಲ್ 27 ರಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿದ್ದಾರೆ. ಆ ಬಳಿಕ ಕೊಡಗಿನ ಗೋಣಿಕೊಪ್ಪಲಿನಲ್ಲಿ ಕಾರ್ಯಕರ್ತರ ಸಭೆ ನಡೆಸಿದ ನಂತರ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ರೋಡ್‌ ಶೋ

ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕರಾವಳಿಗೆ ► ಏಪ್ರಿಲ್ 27 ರಂದು ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ Read More »

ಕರಾವಳಿ

ಕಲ್ಲುಗುಂಡಿ: ಬಸ್ ನಿಲ್ದಾಣದಲ್ಲಿ ಅನಾಥ ವೃದ್ಧೆಯ ಮೃತದೇಹ ► ವಿಲೇವಾರಿ ನಡೆಸಿದ ಎಸ್ಕೆಎಸ್ಸೆಸ್ಸೆಫ್ ಎಮರ್ಜೆನ್ಸಿ ತಂಡದ ಸದಸ್ಯರು

(ನ್ಯೂಸ್ ಕಡಬ) newskadaba.com ಸುಳ್ಯ, ಎ.22. ತಾಲೂಕಿನ ಕಲ್ಲುಗುಂಡಿ ಕೂಲಿಶೆಡ್ ಬಳಿಯ ಬಸ್ ನಿಲ್ದಾಣದಲ್ಲಿ ಶನಿವಾರ ರಾತ್ರಿ ಅನಾಥ ವೃದ್ಧರೋರ್ವರು ಮೃತಪಟ್ಟಿದ್ದು, ಭಾನುವಾರದಂದು ಗೂನಡ್ಕದ ಎಸ್ಕೆಎಸ್ಸೆಸ್ಸೆಫ್ ಎಮರ್ಜೆನ್ಸಿ ಟೀಮ್ ಸದಸ್ಯರು ಮೃತದೇಹದ ದಫನ ಕಾರ್ಯ ನಡೆಸಿದರು. ಕಲ್ಲುಗುಂಡಿಯ‌ ಬಸ್ ನಿಲ್ದಾಣದಲ್ಲಿ ಅನಾಥ ವೃದ್ಧರೋರ್ವರ ಮೃತದೇಹವಿದ್ದು, ವಿಲೇವಾರಿಗೆ ಸಹಕರಿಸಬೇಕೆಂಬ ಕಲ್ಲುಗುಂಡಿ ಪೊಲೀಸ್ ಠಾಣೆ ಸಿಬ್ಬಂದಿಯ ಕರೆಯ ಮೇರೆಗೆ ಸ್ಥಳಕ್ಕೆ ತೆರಳಿದ ಎಸ್ಕೆಎಸ್ಸೆಸ್ಸೆಫ್ ಸುಳ್ಯ ವಲಯ ವಿಖಾಯ ಕಾರ್ಯದರ್ಶಿ, ಎಸ್ಕೆಎಸ್ಸೆಸ್ಸೆಫ್ ಎಮರ್ಜೆನ್ಸಿ ತಂಡದ ನಿರ್ವಾಹಕ, ನವಶಕ್ತಿ ಕರ್ನಾಟಕ ಇದರ ಜಿಲ್ಲಾಧ್ಯಕ್ಷರಾದ

ಕಲ್ಲುಗುಂಡಿ: ಬಸ್ ನಿಲ್ದಾಣದಲ್ಲಿ ಅನಾಥ ವೃದ್ಧೆಯ ಮೃತದೇಹ ► ವಿಲೇವಾರಿ ನಡೆಸಿದ ಎಸ್ಕೆಎಸ್ಸೆಸ್ಸೆಫ್ ಎಮರ್ಜೆನ್ಸಿ ತಂಡದ ಸದಸ್ಯರು Read More »

ಕರಾವಳಿ

ಸುಬ್ರಹ್ಮಣ್ಯ: ಟೆಂಪೋ ಟ್ರಾವೆಲ್ಲರ್ – ಇಂಡಿಕಾ ಕಾರು ನಡುವೆ ಢಿಕ್ಕಿ ► ಮಗು ಸೇರಿದಂತೆ ಐವರು ಗಂಭೀರ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಎ.22. ಇಂಡಿಕಾ ಕಾರು ಹಾಗೂ ಟೆಂಪೋ ಟ್ರಾವೆಲ್ಲರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಐವರು ಗಂಭೀರ ಗಾಯಗೊಂಡ ಘಟನೆ ಭಾನುವಾರದಂದು ಸುಬ್ರಹ್ಮಣ್ಯದಲ್ಲಿ ನಡೆದಿದೆ. ಕುಕ್ಕೇ ಸುಬ್ರಹ್ಮಣ್ಯ ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ಟೆಂಪೋ ಟ್ರಾವೆಲ್ಲರ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಇಂಡಿಕಾ ಕಾರು ನಡುವೆ ಸುಬ್ರಹ್ಮಣ್ಯದ ಇಂಜಾಡಿ ಎಂಬಲ್ಲಿ ಮುಖಾಮುಖಿ ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಮಗು ಸೇರಿ ಐವರ ಸ್ಥಿತಿ ಗಂಭೀರವಾಗಿದ್ದು, 108 ಆಂಬ್ಯುಲೆನ್ಸ್‌ ಮೂಲಕ

ಸುಬ್ರಹ್ಮಣ್ಯ: ಟೆಂಪೋ ಟ್ರಾವೆಲ್ಲರ್ – ಇಂಡಿಕಾ ಕಾರು ನಡುವೆ ಢಿಕ್ಕಿ ► ಮಗು ಸೇರಿದಂತೆ ಐವರು ಗಂಭೀರ Read More »

ಕರಾವಳಿ

ರಾಜ್ಯ ಪ್ರೌಢಶಿಕ್ಷಣ ಮಂಡಳಿಯ ಚಿತ್ರಕಲಾ ಪರೀಕ್ಷೆ 2017-18 ► ಸೈಂಟ್ ಜೋಕಿಮ್ಸ್‌, ಸೈಂಟ್ ಆನ್ಸ್‌, ಸರಸ್ವತಿ ಶಾಲೆಗಳಿಗೆ ಶೇಕಡ 100 ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಎ.22. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷೆ ಮಂಡಳಿಯ 2017-18ನೇ  ಸಾಲಿನ ಚಿತ್ರಕಲಾ ಗ್ರೇಡ್ ಪರೀಕ್ಷೆಗಳಲ್ಲಿ ಲೋಯರ್ ಮತ್ತು ಹೈಯರ್ ಗ್ರೇಡ್ ವಿಭಾಗದಲ್ಲಿ, ಕಡಬ ಸೈಂಟ್ ಜೋಕಿಮ್ಸ್, ಸೈಂಟ್ ಆನ್ಸ್‌, ಸರಸ್ವತಿ ವಿದ್ಯಾಲಯ, ಸ್ಯಾಂತೋಮ್ ಪ್ರೌಢ ಶಾಲೆ, ಬೆಸ್ಟ್‌ ಕುರಿಯಕ್ರೋಸ್ ಪ್ರೌಢಶಾಲೆ, ವಿದ್ಯಾಬೋಧಿನಿ ಬಾಳಿಲ ಪ್ರಗತಿ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಏನೆಕಲ್, ಸರ್ಕಾರಿ ಪ್ರೌಡಶಾಲೆ ಎಡಮಂಗಲ ಈ ಎಲ್ಲಾ ಶಾಲೆಗಳಿಗೆ ಶೇಕಡ 100 ಫಲಿತಾಂಶ ಲಭಿಸಿದೆ. ಸೈಂಟ್ ಜೋಕಿಮ್ಸ್‌ ಪ್ರೌಢಶಾಲೆ ಕಡಬ: ಲೋಯರ್

ರಾಜ್ಯ ಪ್ರೌಢಶಿಕ್ಷಣ ಮಂಡಳಿಯ ಚಿತ್ರಕಲಾ ಪರೀಕ್ಷೆ 2017-18 ► ಸೈಂಟ್ ಜೋಕಿಮ್ಸ್‌, ಸೈಂಟ್ ಆನ್ಸ್‌, ಸರಸ್ವತಿ ಶಾಲೆಗಳಿಗೆ ಶೇಕಡ 100 ಫಲಿತಾಂಶ Read More »

ಕರಾವಳಿ

ಹೊಸ್ಮಠ ಸೇತುವೆ ಬಳಿ ವಾಹನ ತೊಳೆದು ನೀರು ಕಲುಷಿತಗೊಳಿಸದಂತೆ ಕ್ರಮ ► ಹೊಳೆಗೆ ಇಳಿಯುವ ಮಾರ್ಗ ಬಂದ್ ಮಾಡಿ ಎಚ್ಚರಿಕೆ ಫಲಕ ಹಾಕಿದ ಪಂಚಾಯತ್

(ನ್ಯೂಸ್ ಕಡಬ) newskadaba.com ಕಡಬ, ಎ.21. ಇಲ್ಲಿನ ಹೊಸ್ಮಠ ಸೇತುವೆಯ ಬಳಿ ಗುಂಡ್ಯ ಹೊಳೆಗೆ ವಾಹನಗಳನ್ನು ಇಳಿಸಿ ತೊಳೆಯುತ್ತಿರುವುದರಿಂದಾಗಿ ನೀರು ಕಲುಷಿತಗೊಂಡು ಹೊಳೆಯ ನೀರನ್ನು ಉಪಯೋಗಿಸುತ್ತಿರುವವರಿಗೆ ತೊಂದರೆಯಾಗುತ್ತಿದೆ ಎನ್ನುವ ಸಚಿತ್ರ ವರದಿ ಮಾಧ್ಯಮಗಳಲ್ಲಿ ಪ್ರಕಟಗೊಂಡ ಬೆನ್ನಲ್ಲೇ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವತಿಯಿಂದ ಹೊಳೆಗೆ ಇಳಿಯುವ ಮಾರ್ಗ ಬಂದ್ ಮಾಡಿ ನೀರು ಮಲಿನಗೊಳಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ಫಲಕ ನೆಡಲಾಗಿದೆ. ಹೊಳೆಯ ಬದಿಯ ನಿವಾಸಿಗಳು ತಮ್ಮ ಬಾವಿಗಳಲ್ಲಿ ನೀರಿನ ಕೊರತೆ ಎದುರಾಗಿರುವುದರಿಂದ ಕುಡಿಯುವುದಕ್ಕಾಗಿಯೂ ಹೊಳೆಯ ನೀರನ್ನು

ಹೊಸ್ಮಠ ಸೇತುವೆ ಬಳಿ ವಾಹನ ತೊಳೆದು ನೀರು ಕಲುಷಿತಗೊಳಿಸದಂತೆ ಕ್ರಮ ► ಹೊಳೆಗೆ ಇಳಿಯುವ ಮಾರ್ಗ ಬಂದ್ ಮಾಡಿ ಎಚ್ಚರಿಕೆ ಫಲಕ ಹಾಕಿದ ಪಂಚಾಯತ್ Read More »

ಕರಾವಳಿ

ರಕ್ತದ ಕ್ಯಾನ್ಸರ್ ಗೆ ತುತ್ತಾಗಿರುವ ಪೂಜಾಶ್ರೀಗೆ ಧನ ಸಹಾಯ ► ನೊಂದವರಿಗೆ ಬೆಳಕಾಗುತ್ತಿರುವ ಬೆಳ್ಳಾರೆಯ ಜ್ಞಾನದೀಪ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಎ.22. ರಕ್ತದ ಕ್ಯಾನ್ಸರ್ (ಲ್ಯುಕೇಮಿಯಾ) ಗೆ ತುತ್ತಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಳ್ಯ ತಾಲೂಕಿನ ಬಳ್ಪ ಗ್ರಾಮದ ಹೊಪ್ಪಾಳೆ ನಿವಾಸಿ ಪೂಜಾಶ್ರೀಗೆ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ಸಂಸ್ಥೆಯು ಸಹಾಯ ಧನ ನೀಡಿ ನೆರವಾಗಿದೆ. ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿರುವ ಪೂಜಾಶ್ರೀ ಕೆಲವು ಸಮಯಗಳ ಹಿಂದೆ ರಕ್ತದ ಕ್ಯಾನ್ಸರ್ ಗೆ ತುತ್ತಾಗಿ ಇದೀಗ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೂಲಿ ಕೆಲಸ ಮಾಡಿ

ರಕ್ತದ ಕ್ಯಾನ್ಸರ್ ಗೆ ತುತ್ತಾಗಿರುವ ಪೂಜಾಶ್ರೀಗೆ ಧನ ಸಹಾಯ ► ನೊಂದವರಿಗೆ ಬೆಳಕಾಗುತ್ತಿರುವ ಬೆಳ್ಳಾರೆಯ ಜ್ಞಾನದೀಪ Read More »

ಕರಾವಳಿ

ಕಡಲ ಚಿಪ್ಪು ಅಕ್ರಮ ಮಾರಾಟ ಯತ್ನ ► ನೆಲ್ಯಾಡಿ ನಿವಾಸಿ ಸೇರಿದಂತೆ ಏಳು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.22. ಕಡಲ ಚಿಪ್ಪನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸಿಸಿಬಿ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಡಬ ತಾಲೂಕಿನ ನೆಲ್ಯಾಡಿ ನಿವಾಸಿ ಇಸ್ಮಾಈಲ್(40), ನೆಲ್ಯಾಡಿಯ ದೋಂತಿಲ ನಿವಾಸಿ ಜಾರ್ಜ್ ವಿ.ಕೆ. (35), ಅಡ್ಡೂರು ಗ್ರಾಮದ ಕೋಡಿಬೆಟ್ಟು ಮುಹಮ್ಮದ್ ಮನ್ಸೂರ್(27), ಬಡಗುಳಿಪಾಡಿ ಗ್ರಾಮದ ನಾಡಾಜೆ ರಸ್ತೆ ನಿವಾಸಿ ಇಬ್ರಾಹೀಂ(35), ಕಳವಾರು ಗ್ರಾಮದ ಕುಪ್ಪೆಪದವು ಅಟ್ಟಿಪದವು ನಿವಾಸಿ ದಿನೇಶ್ (29), ಪಾವೂರು ಗ್ರಾಮದ ಹರೇಕಳ ಮುಹಮ್ಮದ್ ಮುಖ್ತಾರ್(19), ಕಳವಾರು

ಕಡಲ ಚಿಪ್ಪು ಅಕ್ರಮ ಮಾರಾಟ ಯತ್ನ ► ನೆಲ್ಯಾಡಿ ನಿವಾಸಿ ಸೇರಿದಂತೆ ಏಳು ಮಂದಿಯ ಬಂಧನ Read More »

ಕರಾವಳಿ

ಬಹಳ ವಿಜೃಂಭಣೆಯಿಂದ ನಡೆದ ಕಡಬದ ಆಯನ ► ಕಡಂಬಳಿತ್ತಾಯ ದೈವದ ನೇಮೋತ್ಸವ, ಶ್ರೀಪುರುಷ ದೈವದ ಪೇಟೆ ಸವಾರಿ

(ನ್ಯೂಸ್ ಕಡಬ) newskadaba.com ಕಡಬ, ಎ.22. ಕಡಬದ ಆಯನದಲ್ಲಿ ರಾಜ ದೈವಗಳೆಂದೇ ಪ್ರಸಿದ್ದಿ ಪಡೆದ ಶ್ರೀ ಕಡಂಬಳಿತ್ತಾಯ ಸ್ವಾಮಿ ಮತ್ತು ಶ್ರೀ ಪುರುಷ ದೈವದ ಹಾಗೂ ಇತರ ದೈವಗಳ ನೇಮೋತ್ಸವವು ಶನಿವಾರದಂದು ಬಹಳ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ಶ್ರೀಕಡಂಬಳಿತ್ತಾಯ ದೈವದ ಭಂಡಾರ ತೆಗೆದು ಮಾಡದಿಂದ ಪ್ರಧಾನ ಆಡಳಿತದಾರ ರಾಜೇಂದ್ರ ಹೆಗ್ಡೆಯವರ ನೇತೃತ್ವದಲ್ಲಿ ಸಾವಿರಾರು ಭಕ್ತಾದಿಗಳೊಂದಿಗೆ ಮುಡಿಯಾಗುವ ಮಜಲಿಗೆ ಹೋಗಿ ಅಲ್ಲಿ ಶ್ರೀಕಡಂಬಳಿತ್ತಾಯ ಸ್ವಾಮಿ ಮುಡಿಯಾಗುವುದರೊಂದಿಗೆ ಕಡಬ ಪೇಟೆಯಲ್ಲಿ ದೈವದ ಕಟ್ಟೆಯಲ್ಲಿ ಕಟ್ಟೆ ಪೂಜೆ ನಡೆದು ಬಳಿಕ ರಾಜ

ಬಹಳ ವಿಜೃಂಭಣೆಯಿಂದ ನಡೆದ ಕಡಬದ ಆಯನ ► ಕಡಂಬಳಿತ್ತಾಯ ದೈವದ ನೇಮೋತ್ಸವ, ಶ್ರೀಪುರುಷ ದೈವದ ಪೇಟೆ ಸವಾರಿ Read More »

ಕರಾವಳಿ

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ವಿಧೇಯಕಕ್ಕೆ ಸಹಿ ಹಾಕಿದ ಕೇಂದ್ರ ಸರಕಾರ ► ಈ ಹಿಂದಿನ ಕಾನೂನಿಗೆ ತಿದ್ದುಪಡಿ

(ನ್ಯೂಸ್ ಕಡಬ) newskadaba.com ನವದೆಹಲಿ, ಎ.21. ಹನ್ನೆರಡು ವರ್ಷ ಪ್ರಾಯದೊಳಗಿನ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸುವ ವಿಧೇಯಕಕ್ಕೆ ಶನಿವಾರದಂದು ಕೇಂದ್ರ ಸರಕಾರ ಸಹಿ ಹಾಕುವ ಮೂಲಕ ಕಾಮುಕರ ವಿರುದ್ಧ ಮಹತ್ವದ ಹೆಜ್ಜೆಯಿಟ್ಟಿದೆ. ಐದು ದಿನಗಳ ವಿದೇಶ ಪ್ರವಾಸ ಮುಗಿಸಿ ಶನಿವಾರದಂದು ಸ್ವದೇಶಕ್ಕೆ ಮರಳಿದ ಕೆಲವೇ ಗಂಟೆಗಳಲ್ಲಿ ತುರ್ತು ಸಚಿವ ಸಂಪುಟದ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಬಾಲಕಿಯರ ಲೈಂಗಿಕ ಶೋಷಣೆಯ ವಿರುದ್ಧ ಕಾಮುಕರಿಗೆ ಕಠಿಣ ಶಿಕ್ಷೆಯನ್ನು ವಿಧಿಸುವ ಕಾನೂನಿಗೆ ತಿದ್ದುಪಡಿ ತಂದರು. ಜಮ್ಮು ಕಾಶ್ಮೀರದ

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ವಿಧೇಯಕಕ್ಕೆ ಸಹಿ ಹಾಕಿದ ಕೇಂದ್ರ ಸರಕಾರ ► ಈ ಹಿಂದಿನ ಕಾನೂನಿಗೆ ತಿದ್ದುಪಡಿ Read More »

ರಾಷ್ಟ್ರೀಯ ನ್ಯೂಸ್
Scroll to Top