News Kadaba Desk

ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಸಂತ್ರಸ್ತರಿಗೆ ನ್ಯಾಯ ಕೊಡಿ – ಹಾಜಿ ಸೈಯದ್ ಮೀರಾ ಸಾಹೇಬ್

(ನ್ಯೂಸ್ ಕಡಬ) newskadaba.com ಕಡಬ, ಎ.21. ಜಮ್ಮು ಕಾಶ್ಮೀರದಲ್ಲಿ 8 ವರ್ಷದ ಅಪ್ರಾಪ್ತ ಬಾಲಕಿಯ ಅತ್ಯಾಚಾರಗೈದು ಕೊಲೆ ಮಾಡಿರುವ ಕ್ರೂರಿಗಳನ್ನು ಕೂಡಲೆ ಗಲ್ಲಿಗೇರಿಸುವ ಮುಖಾಂತರ ಮಹಿಳೆಯರು ಹಾಗು ಹೆಣ್ಣುಮಕ್ಕಳನ್ನು ನೆಮ್ಮದಿಯಿಂದ ಬದುಕಲು ಬಿಡಬೇಕೆಂದು ಕರ್ನಾಟಕ ರಾಜ್ಯ ಮುಸ್ಲಿಂ ಕೌನ್ಸಿಲ್ನ ಪ್ರಧಾನ ಕಾರ್ಯದರ್ಶಿ ಹಾಜಿ ಸೈಯದ್ ಮೀರಾ ಸಾಹೇಬ್ ಒತ್ತಾಯಿಸಿದ್ದಾರೆ. ಅವರು ಅಪ್ರಾಪ್ತೆ ಆಸೀಫಾಳ ಅತ್ಯಾಚಾರ ಮಾಡಿ ಕೊಲೆಗೈದ ಕ್ರೂರ ಕೃತ್ಯವನ್ನು ಖಂಡಿಸಿ ಕಡಬ ಕೇಂದ್ರ ಜುಮ್ಮಾ ಮಸೀದಿಯ ವಠಾರದಲ್ಲಿ ಎ.20ರಂದು ಹಮ್ಮಿಕೊಂಡಿದ್ದ ಶಾಂತ ಪ್ರತಿಭಟನೆಯಲ್ಲಿ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ […]

ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಸಂತ್ರಸ್ತರಿಗೆ ನ್ಯಾಯ ಕೊಡಿ – ಹಾಜಿ ಸೈಯದ್ ಮೀರಾ ಸಾಹೇಬ್ Read More »

ಕರಾವಳಿ

ಹೊಸ್ಮಠ ಸೇತುವೆ ಬಳಿ ವಾಹನ ತೊಳೆದು ನೀರು ಕಲುಷಿತಗೊಳಿಸುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಎ.21. ಇಲ್ಲಿನ ಹೊಸ್ಮಠ ಸೇತುವೆಯ ಬಳಿ ಗುಂಡ್ಯ ಹೊಳೆಗೆ ವಾಹನಗಳನ್ನು ಇಳಿಸಿ ತೊಳೆಯುತ್ತಿರುವುದರಿಂದಾಗಿ ನೀರು ಕಲುಷಿತಗೊಂಡು ಹೊಳೆಯ ನೀರನ್ನು ಉಪಯೋಗಿಸುತ್ತಿರುವವರಿಗೆ ತೊಂದರೆಯಾಗುತ್ತಿರುವುದರಿಂದ ಸಂಬಂಧ ಪಟ್ಟವರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಬಿರು ಬೇಸಗೆಯಾಗಿರುವುದರಿಂದ ಹೊಳೆಯಲ್ಲಿ ನೀರಿನ ಹರಿವು ಕೂಡ ಕಡಿಮೆಯಾಗಿದೆ. ಹೊಳೆಯ ಬದಿಯ ನಿವಾಸಿಗಳು ತಮ್ಮ ಬಾವಿಗಳಲ್ಲಿ ನೀರಿನ ಕೊರತೆ ಎದುರಾಗಿರುವುದರಿಂದ ಕುಡಿಯುವುದಕ್ಕಾಗಿಯೂ ಹೊಳೆಯ ನೀರನ್ನು ಉಪಯೋಗಿಸುತ್ತಿದ್ದಾರೆ. ಅಡುಗೆಗೆ, ಜಾನುವಾರುಗಳಿಗೆ ಹಾಗೂ ಬಟ್ಟೆ ಒಗೆಯುವುದು ಇತ್ಯಾದಿಗಳಿಗೂ ಹೊಳೆಯ ನೀರನ್ನೇ

ಹೊಸ್ಮಠ ಸೇತುವೆ ಬಳಿ ವಾಹನ ತೊಳೆದು ನೀರು ಕಲುಷಿತಗೊಳಿಸುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹ Read More »

ಕರಾವಳಿ

ಪುತ್ತೂರು: ಲಾರಿ – ಕಾರು ಢಿಕ್ಕಿ ► ಐವರು ಗಂಭೀರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ.21. ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಐವರು ಗಂಭೀರ ಗಾಯಗೊಂಡ ಘಟನೆ ವಿಟ್ಲ – ಪುತ್ತೂರು ರಸ್ತೆಯ ಚಂದಳಿಕೆ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ. ಕುಂಬಳೆಯ ಕೆದೂರು ಸಮೀಪದ ಪಾದೆಕಲ್ಲು ನಿವಾಸಿ ಸದಾಶಿವ ಶೆಟ್ಟಿ ಎಂಬವರು ತನ್ನ ಕುಟುಂಬ ಸಮೇತ ಪುತ್ತೂರಿಗೆ ಆಗಮಿಸುತ್ತಿದ್ದ ವೇಳೆ ವಿಟ್ಲ ಸಮೀಪದ ಚಂದಳಿಕೆ ತಿರುವಿನಲ್ಲಿ ಪುತ್ತೂರು ಕಡೆಯಿಂದ ಬರುತ್ತಿದ್ದ ಕಲ್ಲು ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಇವರಿದ್ದ ಕಾರಿಗೆ

ಪುತ್ತೂರು: ಲಾರಿ – ಕಾರು ಢಿಕ್ಕಿ ► ಐವರು ಗಂಭೀರ Read More »

ಕರಾವಳಿ

ಎಂಟರ ಹರೆಯದ ಬಾಲಕಿ ಆಸಿಫಾಳ ಹತ್ಯೆ ಪ್ರಕರಣ ► ಕಡಬ ವಲಯ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ತಾಲೂಕು ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಎ.20. ಇತ್ತೀಚೆಗೆ ಜಮ್ಮು ಕಾಶ್ಮೀರದ ಕಥುವಾದಲ್ಲಿ ನಡೆದ ಎಂಟರ ಬಾಲೆ ಆಸಿಫಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಎಸ್ಕೆಎಸ್ಸೆಸ್ಸೆಫ್‌ ಕಡಬ ವಲಯದ ವತಿಯಿಂದ ಕಡಬ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆಯು ಶುಕ್ರವಾರ ಅಪರಾಹ್ನ ನಡೆಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಕೇರಳದ ಜಾಮಿಯಾ ನೂರಿಯಾ ಅರೇಬಿಯಾ ವಿದ್ಯಾರ್ಥಿ ನಹೀಮ್ ಮುಕ್ವೆ ಮಾತನಾಡಿ, ದೇಶದಲ್ಲಿ ಅಮಾಯಕ ಹೆಣ್ಣುಮಕ್ಕಳು ದಿನನಿತ್ಯ ಲೈಂಗಿಕ ಶೋಷಣೆಗೊಳಗಾಗುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಬೇಕಿದೆ. ಹೆಣ್ಣುಮಕ್ಕಳನ್ನು ರಕ್ಷಿಸಬೇಕಾದ ಸರಕಾರವೇ ಆರೋಪಿಗಳಿಗೆ ರಕ್ಷಣೆಯನ್ನು ನೀಡುತ್ತಿದೆ.

ಎಂಟರ ಹರೆಯದ ಬಾಲಕಿ ಆಸಿಫಾಳ ಹತ್ಯೆ ಪ್ರಕರಣ ► ಕಡಬ ವಲಯ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ತಾಲೂಕು ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ Read More »

ಕರಾವಳಿ

ಸುಳ್ಯ ವಿಧಾನಸಭಾ ಕ್ಷೇತ್ರದ ಎಸ್ಡಿಪಿಐ ಅಭ್ಯರ್ಥಿಯಾಗಿ ಆನಂದ್ ಮಿತ್ತಬೈಲ್ ► ಎಪ್ರಿಲ್ 24 ರಂದು ನಾಮಪತ್ರ ಸಲ್ಲಿಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಎ.20. ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಕಾವು ರಂಗೇರಿರುವಂತೆಯೇ ಸುಳ್ಯ ಕ್ಷೇತ್ರದ ಎಸ್ಡಿಪಿಐ ಅಭ್ಯರ್ಥಿಯಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ, ದಲಿತ ಮುಖಂಡ ಆನಂದ ಮಿತ್ತಬೈಲ್ ಆಯ್ಕೆಯಾಗಿದ್ದಾರೆ. ಸುಳ್ಯ ಮೀಸಲು ಕ್ಷೇತ್ರದಲ್ಲಿ ಎಸ್ಡಿಪಿಐ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂಬ ಮಾತು ಕೇಳಿ ಬಂದಿತ್ತಾದರೂ ಇದೀಗ ಜಿಲ್ಲಾ ಉಪಾಧ್ಯಕ್ಷರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿ ಜಾತ್ಯಾತೀತ ಪಕ್ಷಗಳಿಗೆ ಇನ್ನಿತರ ಪಕ್ಷಗಳಿಗೆ ಸಡ್ಡು ಹೊಡೆದಿದೆ. ಎಪ್ರಿಲ್ 24 ಮಂಗಳವಾರದಂದು ಪೂರ್ವಾಹ್ನ 10.30

ಸುಳ್ಯ ವಿಧಾನಸಭಾ ಕ್ಷೇತ್ರದ ಎಸ್ಡಿಪಿಐ ಅಭ್ಯರ್ಥಿಯಾಗಿ ಆನಂದ್ ಮಿತ್ತಬೈಲ್ ► ಎಪ್ರಿಲ್ 24 ರಂದು ನಾಮಪತ್ರ ಸಲ್ಲಿಕೆ Read More »

ಕರಾವಳಿ

ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಿಂದ ಸ್ಪರ್ಧಿಸುವ ಹಿನ್ನೆಲೆ ► ಪೇಜಾವರ ಸ್ವಾಮಿಯನ್ನು ಭೇಟಿಯಾಗಿ ಆಶಿರ್ವಾದ ಪಡೆದ ಸಂಜೀವ ಮಠಂದೂರು

(ನ್ಯೂಸ್ ಕಡಬ) newskadaba.com ಪುತ್ತೂರು, ಎ.20. ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಸಂಜೀವ ಮಠಂದೂರುರವರು ಗುರುವಾರದಂದು ಪೇಜಾವರ ಸ್ವಾಮಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಗುರುವಾರದಂದು ಉಡುಪಿಯ ಪೇಜಾವರ ಮಠಕ್ಕೆ ತೆರಳಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರನ್ನು ಮಠದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಮೊದಲಾದವರು ಉಪಸ್ಥಿತರಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಿಂದ ಸ್ಪರ್ಧಿಸುವ ಹಿನ್ನೆಲೆ ► ಪೇಜಾವರ ಸ್ವಾಮಿಯನ್ನು ಭೇಟಿಯಾಗಿ ಆಶಿರ್ವಾದ ಪಡೆದ ಸಂಜೀವ ಮಠಂದೂರು Read More »

ಕರಾವಳಿ

ಆಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಶುಭ ಸುದ್ದಿ ನೀಡಿದ ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ನವದೆಹಲಿ, ಎ.20. ಟ್ಯಾಕ್ಸಿ, ತ್ರಿಚಕ್ರ ವಾಹನಗಳು, ಇ- ರಿಕ್ಷಾಗಳನ್ನು ಚಲಾಯಿಸಲು ಇನ್ನು ಮುಂದೆ ಟೂರಿಸ್ಟ್ ಬ್ಯಾಡ್ಜ್ ಅಗತ್ಯವಿರುವಿಲ್ಲ ಎಂದು ರಸ್ತೆ ಮತ್ತು ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಹೆಚ್ಚಿನ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದಕ್ಕಾಗಿ ಲಘು ವಾಹನಗಳಾದ ಕಾರು, ರಿಕ್ಷಾ ಚಾಲಕರಿಗೆ ತಮ್ಮ ವೈಯಕ್ತಿಕ ಚಾಲನಾ ಪರವಾನಗಿಯನ್ನೇ ಉಪಯೋಗಿಸಲು ಸರಕಾರ ಅನುಮತಿ ನೀಡಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಹೊಸ ನಿಯಮವನ್ನು ಪಾಲಿಸುವಂತೆ ರಾಜ್ಯ ಸರಕಾರಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

ಆಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಶುಭ ಸುದ್ದಿ ನೀಡಿದ ಕೇಂದ್ರ ಸರಕಾರ Read More »

ರಾಷ್ಟ್ರೀಯ ನ್ಯೂಸ್

ಬಿ.ಸಿ.ರೋಡ್: ಬ್ಯಾಂಕ್‌ಗೆ ದಾಳಿ ನಡೆಸಿದ ಚುನಾವಣಾ ಆಯೋಗದ ಅಧಿಕಾರಿಗಳು ► ಲಕ್ಷಾಂತರ ಮೌಲ್ಯದ ಸೀರೆಗಳು ವಶಕ್ಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ.19. ಇಲ್ಲಿನ ಬ್ಯಾಂಕೊಂದರಲ್ಲಿ ಅಕ್ರಮವಾಗಿ ಸೀರೆಗಳನ್ನು ದಾಸ್ತಾನು ಮಾಡಲಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ಚುನಾವಣಾ ಅಧಿಕಾರಿಗಳು ಈ ದಾಳಿ ನಡೆಸಿ, ಬ್ಯಾಂಕಿನ ಕೋಣೆಯೊಂದರಲ್ಲಿ ಏಳು ಚೀಲಗಳಲ್ಲಿ ತುಂಬಿಸಿಟ್ಟಿದ್ದ ಸುಮಾರು 1,222 ಸೀರೆಗಳನ್ನು ವಶಪಡಿಸಿಕೊಂಡ ಘಟನೆ ಗುರುವಾರದಂದು ನಡೆದಿದೆ. ನವೋದಯ ಸ್ವಸಹಾಯ ಗುಂಪಿನ ಸದಸ್ಯರಿಗೆ ವಿತರಣೆಗಾಗಿ ತಂದಿಟ್ಟಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ ಸೀರೆಗಳನ್ನು ಬಿ.ಸಿ.ರೋಡ್ ಶಾಖೆಗೆ ತಂದ ದಿನವೇ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ವಿತರಿಸದೆ ದಾಸ್ತಾನು ಮಾಡಲಾಗಿತ್ತು

ಬಿ.ಸಿ.ರೋಡ್: ಬ್ಯಾಂಕ್‌ಗೆ ದಾಳಿ ನಡೆಸಿದ ಚುನಾವಣಾ ಆಯೋಗದ ಅಧಿಕಾರಿಗಳು ► ಲಕ್ಷಾಂತರ ಮೌಲ್ಯದ ಸೀರೆಗಳು ವಶಕ್ಕೆ Read More »

ಕರಾವಳಿ

ಮಂಗಳೂರು: ಗ್ಯಾಸ್ ಸಿಲಿಂಡರ್ ಸ್ಫೋಟ ► ಇಬ್ಬರು ಗಂಭೀರ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಮಂಗಳೂರು, ಎ.20. ವೆಲ್ಡಿಂಗ್ ಸೆಂಟರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ‌ಗ್ಯಾಸ್ ಸಿಲಿಂಡರೊಂದು ಸ್ಪೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡ ಘಟನೆ ನಗರದ ಹೊರವಲಯದ ತೊಕ್ಕೊಟ್ಟು ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ಗಂಭೀರ ಗಾಯಗೊಂಡ ಕಾರ್ಮಿಕರನ್ನು ಸ್ಥಳೀಯ ನಿವಾಸಿಗಳಾದ ನವೀನ್ ಆಚಾರಿ(30) ಹಾಗೂ ಲತೀಶ್ (55) ಎಂದು ಗುರುತಿಸಲಾಗಿದೆ. ಸಹ ಕಾರ್ಮಿಕ ಅರ್ಫಾಣ್ (22) ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ‌. ಇವರು ಗುರುವಾರ ಸಂಜೆ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ

ಮಂಗಳೂರು: ಗ್ಯಾಸ್ ಸಿಲಿಂಡರ್ ಸ್ಫೋಟ ► ಇಬ್ಬರು ಗಂಭೀರ Read More »

ಕರಾವಳಿ

ಕಡೂರು: ಕೆಎಸ್ಸಾರ್ಟಿಸಿ ಬಸ್ – ಟೂರಿಸ್ಟ್ ಕಾರು ನಡುವೆ ಮುಖಾಮುಖಿ ಢಿಕ್ಕಿ ► ನಾಲ್ವರು ಮೃತ್ಯು, ಮೂವರು ಗಂಭೀರ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಎ.19. ಟೂರಿಸ್ಟ್ ಕಾರು ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಕಡೂರು – ಚಿಕ್ಕಮಗಳೂರು ಹೆದ್ದಾರಿಯ ಹಿರೇಗೌಜ ಗ್ರಾಮದಲ್ಲಿ ಗುರುವಾರದಂದು ನಡೆದಿದೆ. ಮೃತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ದಾಸಪ್ಪ, ದೀಪಾ, ಶ್ರೇಯಾ ಹಾಗೂ ಕಾರು ಚಾಲಕ ಲಿಂಗೇಶ್ ಎಂದು ಗುರುತಿಸಲಾಗಿದೆ. ಭದ್ರಾವತಿ ಮೂಲದ ಒಂದೇ ಕುಟುಂಬದವರು ಶಿವಮೊಗ್ಗದಿಂದ ಬಾಡಿಗೆಯ ಕಾರಿನಲ್ಲಿ ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದು, ಹಿಂತಿರುಗುತ್ತಿದ್ದಾಗ ಹಿರೇಗೌಜ ಗ್ರಾಮದ

ಕಡೂರು: ಕೆಎಸ್ಸಾರ್ಟಿಸಿ ಬಸ್ – ಟೂರಿಸ್ಟ್ ಕಾರು ನಡುವೆ ಮುಖಾಮುಖಿ ಢಿಕ್ಕಿ ► ನಾಲ್ವರು ಮೃತ್ಯು, ಮೂವರು ಗಂಭೀರ Read More »

ಕರ್ನಾಟಕ
Scroll to Top