News Kadaba Desk

ಸುಳ್ಯ ವಿಧಾನಸಭಾ ಚುನಾವಣೆ ► ಗುತ್ತಿಗಾರಿನಲ್ಲಿ ಗರಿಷ್ಠ 93% ಹಾಗೂ ನೂಜಿಬಾಳ್ತಿಲದಲ್ಲಿ ಕನಿಷ್ಠ 61% ಮತದಾನ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.13. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯು ಸುಸೂತ್ರವಾಗಿ ನಡೆದಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಗುತ್ತಿಗಾರಿನಲ್ಲಿ ಗರಿಷ್ಟ ಹಾಗೂ ನೂಜಿಬಾಳ್ತಿಲದಲ್ಲಿ ಕನಿಷ್ಟ ಮತದಾನವಾಗಿದೆ. ಗುತ್ತಿಗಾರಿನ ಬಳ್ಳಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 120 ರಲ್ಲಿ 93 ಶೇಕಡಾ ಗರಿಷ್ಠ ಮತದಾನವಾಗಿದ್ದು, ನೂಜಿಬಾಳ್ತಿಲ ಗ್ರಾಮದ ಮತಗಟ್ಟೆ ಸಂಖ್ಯೆ 32 ರಲ್ಲಿ 61% ಕನಿಷ್ಠ ಮತದಾನವಾಗಿದೆ. ಇನ್ನುಳಿದ ಮತಗಟ್ಟೆಗಳಲ್ಲಿ ಎಂದಿನಂತೆ ಮತದಾನವಾಗಿದೆ.

ಸುಳ್ಯ ವಿಧಾನಸಭಾ ಚುನಾವಣೆ ► ಗುತ್ತಿಗಾರಿನಲ್ಲಿ ಗರಿಷ್ಠ 93% ಹಾಗೂ ನೂಜಿಬಾಳ್ತಿಲದಲ್ಲಿ ಕನಿಷ್ಠ 61% ಮತದಾನ Read More »

ಕರಾವಳಿ

ಚುನಾವಣೋತ್ತರ ಸಮೀಕ್ಷೆ ► ಯಾವ ಪಕ್ಷ ಅಧಿಕಾರಕ್ಕೆ ಎಂದು ಗೊತ್ತೇ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.13. ರಾಜ್ಯ ವಿಧಾನಸಭೆಗೆ ಶನಿವಾರ ನಡೆದ ಮತದಾನದಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯು ಸಮ ಬಲದ ಫಲಿತಾಂಶ ಪಡೆಯಲಿದ್ದು, ಜೆಡಿಎಸ್ ನಿರ್ಣಾಯಕವಾಗಲಿದೆ ಎಂದು ವಿವಿಧ ಮಾಧ್ಯಮಗಳು ನಡೆಸಿದ ಮತದಾನೋತ್ತರ ಸಮೀಕ್ಷೆಯು ವರದಿ ಮಾಡಿದೆ. ಇಂಡಿಯಾ ಟುಡೆ ಗ್ರೂಪ್, ಆ್ಯಕ್ಸಿಸ್ ಇಂಡಿಯಾ: ಕಾಂಗ್ರೆಸ್ 106 ರಿಂದ 118 ಸ್ಥಾನಗಳನ್ನು ಪಡೆದುಕೊಂಡರೆ ಬಿಜೆಪಿಯು 79 ರಿಂದ 92, ಜೆಡಿಎಸ್ 22 ರಿಂದ 30 ಹಾಗೂ ಇತರ 1 ರಿಂದ 04 ಸ್ಥಾನಗಳನ್ನು ಪಡೆದುಕೊಳ್ಳಲಿದೆ

ಚುನಾವಣೋತ್ತರ ಸಮೀಕ್ಷೆ ► ಯಾವ ಪಕ್ಷ ಅಧಿಕಾರಕ್ಕೆ ಎಂದು ಗೊತ್ತೇ…? Read More »

ಕರ್ನಾಟಕ

ಕಡಬ: ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ – ಮಳೆ ​► ಅಪಾರ ಪ್ರಮಾಣದ ಕೃಷಿ ನಾಶ, ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕಡಬ ಪರಿಸರದಲ್ಲಿ ಹಲವರ ಕೃಷಿ ನಾಶಗೊಂಡಿದ್ದು, ಕೆಲವು ಮನೆಗಳಿಗೆ ಹಾನಿಯಾಗಿವೆ. ಇಲ್ಲಿನ ಬಂಟ್ರ ಗ್ರಾಮದ ರಾತ್ರಿ ಬೀಸಿದ ಭಾರೀ ಗಾಳಿಗೆ ಐಸಮ್ಮ ಹಾಗೂ ಫೌಝಿಯಾ ಎಂಬವರ ಮನೆಯ ಶೀಟುಗಳು ಹಾರಿ ಹೋಗಿದ್ದು, ಮಳೆ ನೀರೆಲ್ಲ ಮನೆಯೊಳಗಡೆ ಸುರಿದಿದೆ. ರಾಧಾಕೃಷ್ಣ ಕೊಲ್ಲೆಸಾಗು ಎಂಬವರ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದ್ದು, 30 ಕ್ಕೂ ಅಧಿಕ ರಬ್ಬರ್ ಮರಗಳು ನೆಲಕ್ಕುರುಳಿವೆ. ಹರೀಶ್ ಕೊಲ್ಲೆಸಾಗು ಎಂಬವರ

ಕಡಬ: ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ – ಮಳೆ ​► ಅಪಾರ ಪ್ರಮಾಣದ ಕೃಷಿ ನಾಶ, ಲಕ್ಷಾಂತರ ರೂ. ನಷ್ಟ Read More »

ಕರಾವಳಿ

ಕಡಬ: ರಸ್ತೆ ದುರಸ್ತಿಯಾಗದ ಹಿನ್ನೆಲೆಯಲ್ಲಿ 140 ಜನರಿಂದ ಮತದಾನ ಬಹಿಷ್ಕರಿಸಿ ಶ್ರಮದಾನ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು-ಮಂಜೋಳಿಮಳೆ ರಸ್ತೆ ಹಲವು ವರ್ಷಗಳಿಂದ ಅಭಿವೃದ್ಧಿಯಾಗದೆ ಇರುವುದರಿಂದ ಈ ರಸ್ತೆ  ಸಂಚಾರಕ್ಕೆ ತೊಂದರೆಯಾಗಿದ್ದು ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಅಲ್ಲಿನ ಸುಮಾರು 140 ರಷ್ಟು ನಾಗರಿಕರು ಚುನಾವಣೆ ಬಹಿಷ್ಕರಿಸಿ ರಸ್ತೆಯನ್ನು ಶ್ರಮದಾನ ಮಾಡಿದ ಘಟನೆ ನಡೆದಿದೆ. ಶ್ರಮದಾನದ ನೇತೃತ್ವ ವಹಿಸಿದ್ದ ಗ್ರಾ.ಪಂ.ಮಾಜಿ ಸದಸ್ಯ ಶ್ರೀಧರ ಕಂಪ ಹೇಳಿಕೆ ನೀಡಿ, ಬದಿಬಾಗಿಲು – ಮಂಜೋಳಿಮಳೆ ರಸ್ತೆಯಲ್ಲಿ ದಿನನಿತ್ಯ ನೂರಾರು ಜನ

ಕಡಬ: ರಸ್ತೆ ದುರಸ್ತಿಯಾಗದ ಹಿನ್ನೆಲೆಯಲ್ಲಿ 140 ಜನರಿಂದ ಮತದಾನ ಬಹಿಷ್ಕರಿಸಿ ಶ್ರಮದಾನ Read More »

ಕರಾವಳಿ

ಬೆಳ್ತಂಗಡಿ: ಮತದಾನಕ್ಕೆಂದು ತೆರಳಿದ್ದ ವ್ಯಕ್ತಿಗೆ ಹೃದಯಾಘಾತ ​► ಶಾಲೆಯ ಆವರಣದಲ್ಲೇ ಕುಸಿದು ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.12. ಮತದಾನಕ್ಕೆಂದು ತೆರಳಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದಾಗಿ ಮೃತಪಟ್ಟ ಘಟನೆ ಅಂಡಿಜೆ ಎಂಬಲ್ಲಿ ಶನಿವಾರದಂದು ನಡೆದಿದೆ. ಮೃತ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ಜಾರಿಗೆದಡಿ ನಿವಾಸಿ ಅಣ್ಣಿ ಅಚಾರ್ಯ ಎಂದು ಗುರುತಿಸಲಾಗಿದೆ. ಇವರು ಮತದಾನ ಮಾಡಲೆಂದು ಅಂಡಿಂಜೆ ಸರಕಾರಿ ಶಾಲೆಗೆ ತೆರಳಿದ್ದು, ಶಾಲೆಯ ಮುಂಭಾಗದಲ್ಲಿ ಹೃದಯಘಾತವಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ, ಅದಾಗಲೇ ಮೃತಪಟ್ಟಿದ್ದರು. ವೇಣೂರು ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿ: ಮತದಾನಕ್ಕೆಂದು ತೆರಳಿದ್ದ ವ್ಯಕ್ತಿಗೆ ಹೃದಯಾಘಾತ ​► ಶಾಲೆಯ ಆವರಣದಲ್ಲೇ ಕುಸಿದು ಬಿದ್ದು ಮೃತ್ಯು Read More »

ಕರಾವಳಿ

ಬಲ್ಯ: ಕೈಕೊಟ್ಟ ವಿವಿಪ್ಯಾಟ್ ► ಒಂದೂವರೆ ತಾಸು ಮತದಾನ ಸ್ಥಗಿತ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ಬಲ್ಯ ಮತದಾನ ಕೇಂದ್ರದ ಬೂತ್‌ ಸಂಖ್ಯೆ 50 ರಲ್ಲಿ ವಿವಿಪ್ಯಾಟ್ ಕೈಕೊಟ್ಟ ಪರಿಣಾಮ ಸುಮಾರು ಒಂದೂವರೆ ಗಂಟೆಗಳ ಕಾಲ ಸ್ಥಗಿತಗೊಂಡ ಘಟನೆ ನಡೆದಿದೆ. 11 ಗಂಟೆಯಿಂದ ಮತದಾನ ಸ್ಥಗಿತಗೊಂಡಿದ್ದು, ಮತದಾರರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದುದು ಕಂಡುಬಂದಿತು. ಆ ಬಳಿಕ ಸ್ಥಳಕ್ಕಾಗಮಿಸಿದ ಮತಯಂತ್ರ ತಜ್ಞರು ವಿವಿಪ್ಯಾಟನ್ನು ದುರಸ್ತಿಗೊಳಿಸಿದ ಬಳಿಕ ಮತದಾನ ಆರಂಭವಾಯಿತು.

ಬಲ್ಯ: ಕೈಕೊಟ್ಟ ವಿವಿಪ್ಯಾಟ್ ► ಒಂದೂವರೆ ತಾಸು ಮತದಾನ ಸ್ಥಗಿತ Read More »

ಕರಾವಳಿ

ಮತಗಟ್ಟೆಯತ್ತ ಒಲವು ತೋರುತ್ತಿರುವ ಮತದಾರರು ► ಮಡ್ಯಡ್ಕ ಮತಗಟ್ಟೆಯಲ್ಲಿ 59% ಮತ ಚಲಾವಣೆ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ಗ್ರಾಮೀಣ ಭಾಗದಲ್ಲಿ ಬಿರುಸಿನ ಚಲಾವಣೆಯಾಗುತ್ತಿದ್ದು, ಮತದಾರರು ಮತದಾನ ಕೇಂದ್ರದತ್ತ ಒಲವನ್ನು ತೋರಿಸುತ್ತಿದ್ದಾರೆ. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಓಂತ್ರಡ್ಕ ಸರಕಾರಿ ಶಾಲೆಯ ಮತಗಟ್ಟೆ 96 ರಲ್ಲಿ 12 ಗಂಟೆಯ ವೇಳೆಗೆ 59 ಶೇಕಡಾ ಮತದಾನವಾಗಿದೆ. ಮಡ್ಯಡ್ಕ ಸರಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 93 ರಲ್ಲಿ ಮತಯಂತ್ರವು ಎರಡು ಮೂರು ಸಲ ಕೈಕೊಟ್ಟಿದ್ದರಿಂದಾಗಿ ಮತದಾನ ವಿಳಂಬವಾದ ಬಗ್ಗೆ ವರದಿಯಾಗಿದೆ.

ಮತಗಟ್ಟೆಯತ್ತ ಒಲವು ತೋರುತ್ತಿರುವ ಮತದಾರರು ► ಮಡ್ಯಡ್ಕ ಮತಗಟ್ಟೆಯಲ್ಲಿ 59% ಮತ ಚಲಾವಣೆ Read More »

ಕರಾವಳಿ

ರಾಜ್ಯದಲ್ಲೆಡೆ ಬಿರುಸಿನ ಮತದಾನ ​► ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 11 ಗಂಟೆ ವೇಳೆಗೆ 30.25% ಮತದಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.12. ರಾಜ್ಯದಲ್ಲೆಡೆ ಬಿರುಸಿನ ಮತದಾನವಾಗುತ್ತಿದ್ದು, ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವುದು ಕಂಡುಬಂದಿದೆ. ರಾಜ್ಯದ ವಿವಿಧೆಡೆ ಕಳೆದೆರಡು ದಿನಗಳಿಂದ ಸಂಜೆ ವೇಳೆಗೆ ಮಳೆಯಾಗುತ್ತಿರುವುದರಿಂದ ಮತದಾರರು ಅಪರಾಹ್ನಕ್ಕೂ ಮೊದಲೇ ಮತಗಟ್ಟೆಯತ್ತ ಧಾವಿಸಿ ಬರುತ್ತಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 11 ಗಂಟೆಯ ವೇಳೆಗೆ 30.25 ಶೇಕಡಾ ಮತದಾನವಾಗಿದೆ.  

ರಾಜ್ಯದಲ್ಲೆಡೆ ಬಿರುಸಿನ ಮತದಾನ ​► ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 11 ಗಂಟೆ ವೇಳೆಗೆ 30.25% ಮತದಾನ Read More »

ಕರ್ನಾಟಕ

ಉಪ್ಪಿನಂಗಡಿ, ಮುಂಡಾಜೆಯಲ್ಲಿ ತಡವಾಗಿ ಆರಂಭವಾದ ಮತದಾನ ​► ಹೆಚ್ಚುವರಿ ಸಮಯಾವಕಾಶ‌ ನೀಡಲು ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.12. ಜಿಲ್ಲೆಯ ಕೆಲವೆಡೆ ಮತ ಯಂತ್ರಗಳಲ್ಲಿ ದೋಷ ಕಂಡುಬಂದಿದ್ದು, ತಡವಾಗಿ ಮತದಾನ ಆರಂಭವಾಗಿದೆ. ಉಪ್ಪಿನಂಗಡಿ ಒಂದನೇ ವಾರ್ಡ್‌ನ ಮತಗಟ್ಟೆಯಲ್ಲಿ ಮತಯಂತ್ರ ದೋಷದಿಂದಾಗಿ ಮತ ಯಂತ್ರವನ್ನು ಬದಲಾಯಿಸಲಾಗಿದ್ದು, ಒಂದು ಗಂಟೆ ವಿಳಂಬವಾಗಿ ಮತದಾನ ಆರಂಭವಾಯಿತು. ಮತದಾರರು ಕಾದು ಕಾದು ಮತಗಟ್ಟೆಯಿಂದ ಹಿಂತಿರುಗುತ್ತಿರುವ ದೃಶ್ಯ ಕಂಡುಬಂತು. ವಿಳಂಬವಾಗಿ ಮತದಾನ ಆರಂಭವಾಗಿದ್ದರಿಂದ ಮತದಾರರು ಒಂದು ಗಂಟೆ ಹೆಚ್ಚುವರಿ ಸಮಯಾವಕಾಶ ನೀಡಲು ಆಗ್ರಹಿಸಿದರು. ಮುಂಡಾಜೆ ಮೂರನೇ ವಾರ್ಡ್‌ನಲ್ಲೂ ಮತಯಂತ್ರದ ತೊಂದರೆಯಿಂದಾಗಿ ಅರ್ಧ ಗಂಟೆ ತಡವಾಗಿ ಮತದಾನವಾಯಿತು.

ಉಪ್ಪಿನಂಗಡಿ, ಮುಂಡಾಜೆಯಲ್ಲಿ ತಡವಾಗಿ ಆರಂಭವಾದ ಮತದಾನ ​► ಹೆಚ್ಚುವರಿ ಸಮಯಾವಕಾಶ‌ ನೀಡಲು ಆಗ್ರಹ Read More »

ಕರಾವಳಿ

ಐತ್ತೂರು: ಕಾಂಗ್ರೆಸ್, ಬಿಜೆಪಿಗೆ ಒಟ್ಟಿಗೆ ಬೂತ್ ► ಚುನಾವಣೆಯಲ್ಲೂ ಸೌಹಾರ್ದತೆ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ಎಲ್ಲೆಡೆ ವಿವಿಧ ಪಕ್ಷಗಳು ಅಬ್ಬರದ ಪ್ರಚಾರ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದರೂ, ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ವಿಭಿನ್ನ ಪ್ರಸಂಗ ಕಂಡುಬಂದಿದೆ. ಐತ್ತೂರು ಗ್ರಾಮದ ಮತಗಟ್ಟೆ ಸಮೀಪದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಒಂದೇ ಸ್ಥಳದಲ್ಲಿ ಬೂತ್ ಹಾಕಿದ್ದು, ಯಾವುದೇ ಪಕ್ಷ ಭೇದವಿಲ್ಲದೆ ಸೌಹಾರ್ದಯುತವಾಗಿ ಕುಳಿತಿರುವುದು ಕಂಡುಬಂದಿದೆ.

ಐತ್ತೂರು: ಕಾಂಗ್ರೆಸ್, ಬಿಜೆಪಿಗೆ ಒಟ್ಟಿಗೆ ಬೂತ್ ► ಚುನಾವಣೆಯಲ್ಲೂ ಸೌಹಾರ್ದತೆ Read More »

ಕರಾವಳಿ
Scroll to Top