ಐತ್ತೂರು: ಕಾಂಗ್ರೆಸ್, ಬಿಜೆಪಿಗೆ ಒಟ್ಟಿಗೆ ಬೂತ್ ► ಚುನಾವಣೆಯಲ್ಲೂ ಸೌಹಾರ್ದತೆ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ಎಲ್ಲೆಡೆ ವಿವಿಧ ಪಕ್ಷಗಳು ಅಬ್ಬರದ ಪ್ರಚಾರ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದರೂ, ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ವಿಭಿನ್ನ ಪ್ರಸಂಗ ಕಂಡುಬಂದಿದೆ.

ಐತ್ತೂರು ಗ್ರಾಮದ ಮತಗಟ್ಟೆ ಸಮೀಪದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಒಂದೇ ಸ್ಥಳದಲ್ಲಿ ಬೂತ್ ಹಾಕಿದ್ದು, ಯಾವುದೇ ಪಕ್ಷ ಭೇದವಿಲ್ಲದೆ ಸೌಹಾರ್ದಯುತವಾಗಿ ಕುಳಿತಿರುವುದು ಕಂಡುಬಂದಿದೆ.

Scroll to Top