ಬಲ್ಯ: ಕೈಕೊಟ್ಟ ವಿವಿಪ್ಯಾಟ್ ► ಒಂದೂವರೆ ತಾಸು ಮತದಾನ ಸ್ಥಗಿತ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ಬಲ್ಯ ಮತದಾನ ಕೇಂದ್ರದ ಬೂತ್‌ ಸಂಖ್ಯೆ 50 ರಲ್ಲಿ ವಿವಿಪ್ಯಾಟ್ ಕೈಕೊಟ್ಟ ಪರಿಣಾಮ ಸುಮಾರು ಒಂದೂವರೆ ಗಂಟೆಗಳ ಕಾಲ ಸ್ಥಗಿತಗೊಂಡ ಘಟನೆ ನಡೆದಿದೆ.

11 ಗಂಟೆಯಿಂದ ಮತದಾನ ಸ್ಥಗಿತಗೊಂಡಿದ್ದು, ಮತದಾರರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದುದು ಕಂಡುಬಂದಿತು. ಆ ಬಳಿಕ ಸ್ಥಳಕ್ಕಾಗಮಿಸಿದ ಮತಯಂತ್ರ ತಜ್ಞರು ವಿವಿಪ್ಯಾಟನ್ನು ದುರಸ್ತಿಗೊಳಿಸಿದ ಬಳಿಕ ಮತದಾನ ಆರಂಭವಾಯಿತು.

Scroll to Top