News Kadaba Desk

ಇಂದು (ಮೇ.12) ರಾಜ್ಯ ವಿಧಾನಸಭಾ ಚುನಾವಣೆ ► ಸುಸೂತ್ರ ಮತದಾನಕ್ಕೆ ಸಕಲ‌ ಸಿದ್ಧತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.12. ಇಂದು ನಡೆಯಲಿರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನ ಸುಸೂತ್ರವಾಗಿ ನಡೆಯಲು ಬೇಕಾದ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನ ಶಾಂತಿ ಮತ್ತು ಸುಸೂತ್ರವಾಗಿ ನಡೆಯಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದ್ದು, ಜಿಲ್ಲೆಯ ಅತ್ಯಂತ ಸೂಕ್ಷ್ಮ ಮತಗಟ್ಟೆಗಳ ಮೇಲೆ ಪೊಲೀಸ್ ಇಲಾಖೆ ಕಣ್ಣಿರಿಸಿದೆ. ಜಿಲ್ಲೆಯ ವಿವಿಧೆಡೆ […]

ಇಂದು (ಮೇ.12) ರಾಜ್ಯ ವಿಧಾನಸಭಾ ಚುನಾವಣೆ ► ಸುಸೂತ್ರ ಮತದಾನಕ್ಕೆ ಸಕಲ‌ ಸಿದ್ಧತೆ Read More »

ಕರಾವಳಿ

ಬಲ್ಯ: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಮೇ.11. ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವರು ರಬ್ಬರ್ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ಬಲ್ಯದಲ್ಲಿ ಶುಕ್ರವಾರದಂದು ನಡೆದಿದೆ.   ಆತ್ಮಹತ್ಯೆ ಮಾಡಿಕೊಂಡವರನ್ನು ಬಲ್ಯ ಗ್ರಾಮದ ಮತ್ರಾಡಿ‌ ನಿವಾಸಿ ಅಬ್ರಹಾಂ(49) ಎಂದು ಗುರುತಿಸಲಾಗಿದೆ. ಮಾನಸಿಕ ಖನ್ನತೆಗೊಳಗಾಗಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಶೆರ್ಲಿ ಅಬ್ರಹಾಂ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಲ್ಯ: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ

ಕಡಬ: ಪಿಕಪ್ ಹರಿದು ವ್ಯಕ್ತಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಮೇ.11. ಕಾಲಿನ ಮೇಲೆ ಪಿಕಪ್ ವಾಹನವೊಂದು ಚಲಿಸಿದ ಪರಿಣಾಮ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಕಡಬದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಗಾಯಾಳುವನ್ನು ಕಡಬ ತಾಲೂಕಿನ ಕೋಡಿಂಬಾಳ ನಿವಾಸಿ ಸತೀಶ್ (30) ಎಂದು ಗುರುತಿಸಲಾಗಿದೆ. ಇವರು ರಸ್ತೆ ದಾಟುತ್ತಿದ್ದಾಗ ಪಿಕಪ್ ವಾಹನದ ಹಿಂಬದಿಯ ಚಕ್ರ ಇವರ ಕಾಲಿನ ಮೇಲೆ ಚಲಿಸಿದ್ದು, ಪರಿಣಾಮ ಕಾಲಿಗೆ ಗಾಯವಾಗಿದೆ. ಇವರಿಗೆ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯಲಾಗಿದೆ.

ಕಡಬ: ಪಿಕಪ್ ಹರಿದು ವ್ಯಕ್ತಿಗೆ ಗಾಯ Read More »

ಕರಾವಳಿ

ಅರ್ಕುಳ: ಬೈಕ್ – ಲಾರಿ ನಡುವೆ ಅಪಘಾತ ► ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರನ ಮೇಲೆ ಕಾರು ಚಲಿಸಿ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಫರಂಗಿಪೇಟೆ, ಮೇ.11. ಬೈಕ್‌ ಸವಾರನೋರ್ವನ ಮೇಲೆ ಕಾರು ಚಲಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅರ್ಕುಳ ಎಂಬಲ್ಲಿ ಶುಕ್ರವಾರದಂದು ನಡೆದಿದೆ. ಮೃತ ಸವಾರನನ್ನು ಫರಂಗಿಪೇಟೆ ನಿವಾಸಿ ಉಮರ್ (52) ಎಂದು ಗುರುತಿಸಲಾಗಿದೆ. ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯ ತೀವ್ರತೆಗೆ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟರೆನ್ನಲಾಗಿದೆ. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಕಾರು ಬೈಕ್ ಸವಾರನ ಮೇಲೆ ಚಲಿಸಿದ ಪರಿಣಾಮ ಗಂಭೀರ ಗಾಯಗೊಂಡ

ಅರ್ಕುಳ: ಬೈಕ್ – ಲಾರಿ ನಡುವೆ ಅಪಘಾತ ► ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರನ ಮೇಲೆ ಕಾರು ಚಲಿಸಿ ಸವಾರ ಮೃತ್ಯು Read More »

ಕರಾವಳಿ

ಕಟ್ಟಡ ನಿರ್ಮಾಣಕ್ಕೆಂದು ತೋಡಿದ ಪಾಯದ ಗುಂಡಿಯಲ್ಲಿ ನೀರು ಸಂಗ್ರಹ ► ನೀರಿನ ಹೊಂಡಕ್ಕೆ ಬಿದ್ದು ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಮೇ.11. ಕಟ್ಟಡ ನಿರ್ಮಾಣಕ್ಕೆಂದು ತೆಗೆದಿಟ್ಟ ಪಾಯದಲ್ಲಿ ಮಳೆ ನೀರು ತುಂಬಿದ್ದು, ನಿಂತ ನೀರಲ್ಲಿ ಆಡಲೆಂದು ಇಳಿದ ಇಬ್ಬರು ಮಕ್ಕಳ ಪೈಕಿ ಒಂದು ಮಗು ಮೃತಪಟ್ಟ ಘಟನೆ ಗುರುವಾರ ಸಂಜೆ ಮಲ್ಪೆಯಲ್ಲಿ ನಡೆದಿದೆ. ಮೃತ ಮಗುವನ್ನು ಮಲ್ಪೆಯ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದ ನಿವಾಸಿ ಮಾಲಿನಿ ಎಂಬವರ ಮೂರುವರೆ ವರ್ಷ ಪ್ರಾಯದ ಪುತ್ರ ರಾಘವೇಂದ್ರ ಎಂದು ಗುರುತಿಸಲಾಗಿದೆ. ಅವರ ಸಹೋದರಿ ಪ್ರಫುಲ್ಲ ಎಂಬವರ ನಾಲ್ಕು ವರ್ಷ ಪ್ರಾಯದ ಪ್ರವೀಣ್ ನನ್ನು

ಕಟ್ಟಡ ನಿರ್ಮಾಣಕ್ಕೆಂದು ತೋಡಿದ ಪಾಯದ ಗುಂಡಿಯಲ್ಲಿ ನೀರು ಸಂಗ್ರಹ ► ನೀರಿನ ಹೊಂಡಕ್ಕೆ ಬಿದ್ದು ಮಗು ಮೃತ್ಯು Read More »

ಕರಾವಳಿ

ತಮಿಳು ಕಾರ್ಮಿಕರು ಬಿಜೆಪಿ ಪರವಾಗಿದ್ದಾರೆ ಎಂಬ ಹೇಳಿಕೆಗೆ ಖಂಡನೆ ​► ತಮಿಳರು ಎಂದೆಂದಿಗೂ ಕಷ್ಟಕಾಲದಲ್ಲಿ ನೆರವಾಗಿರುವ ಕಾಂಗ್ರೆಸ್ ಪರ: ರಾಜಕೃಷ್ಣ ಎಸ್.

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ತೋಟಗಳಲ್ಲಿ ದುಡಿಯುತ್ತಿರುವ ತಮಿಳು ಕಾರ್ಮಿಕರು ತಮ್ಮ  ಕಷ್ಟಕಾಲದಲ್ಲಿ ನೆರವಾಗಿರುವ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿಯನ್ನು ಬೆಂಬಲಿಸುವುದು ಸಾಧ್ಯವೇ ಇಲ್ಲ. ನಾವು ಎಂದೆಂದಿಗೂ ಕಾಂಗ್ರೆಸ್ ಬೆಂಬಲಿಗರು ಎಂದು ತಮಿಳು ಕಾರ್ಮಿಕರ ಕಾಂಗ್ರೆಸ್ ಘಟಕದ ಕಡಬ ತಾಲೂಕು ಸಮಿತಿಯ ಅಧ್ಯಕ್ಷ ರಾಜಕಷ್ಣ  ಎಸ್. ಅವರು ಹೇಳಿದರು. ಅವರು ಗುರುವಾರ ಕಡಬದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ತಮಿಳು ಕಾರ್ಮಿಕರು ಬಿಜೆಪಿ ಪರವಾಗಿದ್ದಾರೆ. ಬಿಜೆಪಿಯಿಂದಾಗಿ

ತಮಿಳು ಕಾರ್ಮಿಕರು ಬಿಜೆಪಿ ಪರವಾಗಿದ್ದಾರೆ ಎಂಬ ಹೇಳಿಕೆಗೆ ಖಂಡನೆ ​► ತಮಿಳರು ಎಂದೆಂದಿಗೂ ಕಷ್ಟಕಾಲದಲ್ಲಿ ನೆರವಾಗಿರುವ ಕಾಂಗ್ರೆಸ್ ಪರ: ರಾಜಕೃಷ್ಣ ಎಸ್. Read More »

ಕರಾವಳಿ

ಸುಳ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ|ರಘು 15 ಸಾವಿರ ಮತಗಳ ಅಂತರದ ಗೆಲುವು ನಿಶ್ಚಿತ ► ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶೀರಾಡಿ

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಸುಳ್ಯ ವಿಧಾನಸಭಾ ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆಯನ್ನು ಬಯಸಿದ್ದು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ|ರಘು ಅವರು 15 ಸಾವಿರ ಮತಗಳ ಅಂತರದಲ್ಲಿ ಅಭೂತಪೂರ್ವ ವಿಜಯ ಸಾಧಿಸಲಿದ್ದಾರೆ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ ಅವರು ಭರವಸೆ ವ್ಯಕ್ತಪಡಿಸಿದರು. ಅವರು ಗುರುವಾರ ಕಡಬ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ತಯಾರಿಯು ಈ ಬಾರಿ

ಸುಳ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ|ರಘು 15 ಸಾವಿರ ಮತಗಳ ಅಂತರದ ಗೆಲುವು ನಿಶ್ಚಿತ ► ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶೀರಾಡಿ Read More »

ಕರಾವಳಿ

ಸುಳ್ಯದಲ್ಲಿ ಎಸ್.ಅಂಗಾರ 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ​► ವಾಡ್ಯಪ್ಪ ಗೌಡ ಎರ್ಮಾಯಿಲ್

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಬಿಜೆಪಿಯ ಭದ್ರಕೋಟೆಯಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಶಾಸಕ ಎಸ್.ಅಂಗಾರ ಅವರು 20 ಸಾವಿರ ಮತಗಳ ಅಂತರದಿಂದ ಜಯ ಸಾಸಲಿದ್ದಾರೆ ಎಂದು ಬಿಜೆಪಿ ಕಡಬ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ಅವರು ಗುರುವಾರ ಕಡಬದ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕಡಬ ಮಹಾಶಕ್ತಿಕೇಂದ್ರದ ವ್ಯಾಪ್ತಿಯಲ್ಲಿ ಸಂಘಟಿತ ರೀತಿಯಲ್ಲಿ ವ್ಯವಸ್ಥಿತ ಪ್ರಚಾರ ಕಾರ್ಯ ನಡೆದಿದ್ದು, ಈ ಬಾರಿ ಈ ಹಿಂದಿಗಿಂತ

ಸುಳ್ಯದಲ್ಲಿ ಎಸ್.ಅಂಗಾರ 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ​► ವಾಡ್ಯಪ್ಪ ಗೌಡ ಎರ್ಮಾಯಿಲ್ Read More »

ಕರಾವಳಿ

ತಮಿಳು ಕಾರ್ಮಿಕರ ಬೆಂಬಲ ಬಿಜೆಪಿಗೆ ​► ತಮಿಳು ಬಿಜೆಪಿ ಮುಖಂಡ ತಿರುಪತಿ

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿರುವ ತಮಿಳು ಕಾರ್ಮಿಕರು ಬಿಜೆಪಿಗೆ ಮತ ನೀಡಿ ಸುಳ್ಯ ಕ್ಷೇತ್ರದ ಅಭ್ಯರ್ಥಿ ಎಸ್.ಅಂಗಾರರವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಲಿದ್ದಾರೆ ಎಂದು ಸುಳ್ಯ ಬಿಜೆಪಿ ತಮಿಳು ಘಟಕದ ಕಡಬ ವಲಯದ ಅಧ್ಯಕ್ಷ ತಿರುಪತಿ ಎನ್.ಕೂಪ್ ಹೇಳಿದರು. ಅವರು ಬುಧವಾರ ಕಡಬ ಬಿಜೆಪಿ ಚುನಾವಣಾ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೇಸ್ ತಮಿಳು ಕಾರ್ಮಿಕರಿಗೆ ಸದಾ ಸುಳ್ಳು ಭರವಸೆಗಳನ್ನು ನೀಡುತ್ತಾ ವಂಚಿಸುತ್ತಾ ಬರುತ್ತಿದೆ, ಈ ಬಾರಿ ಕಾಂಗ್ರೇಸ್ ಆಟ ನಡೆಯುವುದಿಲ್ಲ, ಈ ಬಾರೀ ಬಿಜೆಪಿಗೆ ಎಲ್ಲಾ

ತಮಿಳು ಕಾರ್ಮಿಕರ ಬೆಂಬಲ ಬಿಜೆಪಿಗೆ ​► ತಮಿಳು ಬಿಜೆಪಿ ಮುಖಂಡ ತಿರುಪತಿ Read More »

ಕರಾವಳಿ

ಕಾಂಗ್ರೆಸ್ ಮುಕ್ತ ಭಾರತಕ್ಕೆ ಕರ್ನಾಟಕ ಮತ್ತೊಂದು ವೇದಿಕೆಯಾಗಲಿದೆ ► ಕೇರಳ ಬಿಜೆಪಿ ಕಾರ್ಯದರ್ಶಿ ಸುರೇಂದ್ರನ್

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಪ್ರಧಾನಿ ನರೇಂದ್ರ ಮೋದಿಯವರ ಕಾಂಗ್ರೇಸ್ ಮುಕ್ತ ಅಭಿಯಾನಕ್ಕೆ ಕರ್ನಾಟಕ ರಾಜ್ಯ ಮತ್ತೊಂದು ವೇದಿಕೆಯಾಗಲಿದೆ ಎಂದು ಕೇರಳ ರಾಜ್ಯದ ಬಿಜೆಪಿ ಕಾರ್ಯದರ್ಶಿ ಸುರೇಂದ್ರನ್ ಹೇಳಿದರು. ಅವರು ಬುಧವಾರ ಕಡಬದಲ್ಲಿ ಸಂಜೆ ಸುಳ್ಯ ಬಿಜೆಪಿ ಅಭ್ಯರ್ಥಿ ಎಸ್.ಅಂಗಾರ ಪರ ಮತಯಾಚನೆ ಮಾಡುವ ಬಿಜೆಪಿ ಸಭೆಯಲ್ಲಿ ಮಾತನಾಡುತ್ತಿದ್ದರು. ದೇಶದ ಜನರ ಹೃದಯದಲ್ಲಿ ನರೇಂದ್ರ ಮೋದಿಯವರ ಪ್ರತಿಷ್ಠಾಪನೆಯಾಗಿದ್ದಾರೆ, ಇದರಿಂದಾಗಿ ದೇಶದಲ್ಲೆಡೆ ಕಾಂಗ್ರೇಸ್ ಬಾಗಿಲು ಮುಚ್ಚುತ್ತಿದೆ, ಈ ಬಾರಿ ಕರ್ನಾಟಕದ ಬಾಗಿಲು ಕೂಡಾ ಮುಚ್ಚಲಿದ್ದು, ಇದಕ್ಕೆ ವೇದಿಕೆ

ಕಾಂಗ್ರೆಸ್ ಮುಕ್ತ ಭಾರತಕ್ಕೆ ಕರ್ನಾಟಕ ಮತ್ತೊಂದು ವೇದಿಕೆಯಾಗಲಿದೆ ► ಕೇರಳ ಬಿಜೆಪಿ ಕಾರ್ಯದರ್ಶಿ ಸುರೇಂದ್ರನ್ Read More »

ಕರಾವಳಿ
Scroll to Top