News Kadaba Desk

‘ನಿಪಾಹ್ ವೈರಸ್’: ದಕ್ಷಿಣ ಕನ್ನಡದಾದ್ಯಂತ ಹೈ ಅಲೆರ್ಟ್ ► ದ.ಕ.ದಲ್ಲಿ ಯಾವುದೇ ಪ್ರಕರಣ ದೃಢಪಟ್ಟಿಲ್ಲ: ಯು.ಟಿ.ಖಾದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.23. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರೆಗೆ ನಿಪಾಹ್ ವೈರಸ್ ದೃಢಪಟ್ಟಿಲ್ಲವಾದರೂ ರೋಗ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಸಂಶಯದ ದೃಷ್ಟಿಯಿಂದ ಇಬ್ಬರು ರೋಗಿಗಳ ಬಗ್ಗೆ ನಿಗಾ ವಹಿಸಲಾಗಿದೆ. ಸಾರ್ವಜನಿಕರು ಈ ಬಗ್ಗೆ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ. ಖಾದರ್ ಹೇಳಿದ್ದಾರೆ. ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದು, ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಸಜ್ಜುಗೊಳಿಸುವಂತೆ ಹಾಗೂ ಕೇರಳ ಮೂಲದವರು ಮಂಗಳೂರು ಸೆಂಟ್ರಲ್ ರೈಲ್ವೇ […]

‘ನಿಪಾಹ್ ವೈರಸ್’: ದಕ್ಷಿಣ ಕನ್ನಡದಾದ್ಯಂತ ಹೈ ಅಲೆರ್ಟ್ ► ದ.ಕ.ದಲ್ಲಿ ಯಾವುದೇ ಪ್ರಕರಣ ದೃಢಪಟ್ಟಿಲ್ಲ: ಯು.ಟಿ.ಖಾದರ್ Read More »

ಕರಾವಳಿ

ಕಡಬ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

(ನ್ಯೂಸ್ ಕಡಬ) newskadaba.com ಕಡಬ, ಮೇ.22. ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಠಾಣಾ ವ್ಯಾಪ್ತಿಯ ಮೀನಾಡಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಕುಟ್ರುಪ್ಪಾಡಿ ಗ್ರಾಮದ ಮೀನಾಡಿ ನಿವಾಸಿ ಭರತ್(26) ಎಂದು ಗುರುತಿಸಲಾಗಿದೆ. ಈತ ಮಂಗಳವಾರದಂದು ತನ್ನ ಮನೆಯಲ್ಲಿ ಎಂಡೋಸಲ್ಫಾನ್ ಸೇವಿಸಿದ್ದು, ತಕ್ಷಣವೇ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಡಬ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ Read More »

ಕರಾವಳಿ

ಮಂಗಳೂರಿಗೂ ಕಾಲಿಟ್ಟ ‘ನಿಪಾಹ್’ ಮಹಾಮಾರಿ ► ಇಬ್ಬರು ರೋಗಿಗಳಲ್ಲಿ ಶಂಕಿತ ಸೋಂಕು ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.22. ಕೇರಳ ರಾಜ್ಯವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ನಿಪಾಹ್ ವೈರಸ್ ಮಂಗಳೂರಿಗೂ ಕಾಲಿಟ್ಟಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಹೈ ಅಲೆರ್ಟ್ ಘೋಷಿಸಲಾಗಿದೆ‌. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರಲ್ಲಿ ಶಂಕಿತ ನಿಪಾಹ್ ಸೋಂಕಿನ ಲಕ್ಷಣ ಕಂಡುಬಂದಿದ್ದು, ವೈರಸ್ ಪತ್ತೆಗೆ ರಕ್ತ ಮಾದರಿಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾಹಿತಿ ನೀಡಿದ್ದಾರೆ.

ಮಂಗಳೂರಿಗೂ ಕಾಲಿಟ್ಟ ‘ನಿಪಾಹ್’ ಮಹಾಮಾರಿ ► ಇಬ್ಬರು ರೋಗಿಗಳಲ್ಲಿ ಶಂಕಿತ ಸೋಂಕು ಪತ್ತೆ Read More »

ಕರಾವಳಿ

ನಡುಕ ಹುಟ್ಟಿಸುತ್ತಿರುವ ನಿಫಾ ವೈರಾಣು ಜ್ವರ ► ಪತ್ತೆಹಚ್ಚುವುದು, ಚಿಕಿತ್ಸೆ, ತಡೆಗಟ್ಟುವುದು ಹೇಗೆ..?

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಮೇ.22. ನಿಫಾ ವೈರಸ್, ಆರ್.ಯನ್.ಎ(ಖಓಂ) ಗುಂಪಿಗೆ ಸೇರಿದ ಪಾರಾಮಿಕ್ಸೊ ವೈರಾಣು ಪ್ರಭೇಧಕ್ಕೆ ಸೇರಿದ ವೈರಾಣು ಆಗಿರುತ್ತದೆ. 1999ರಲ್ಲಿ ಮಲೇಷಿಯಾದ ಒಂದು ಸಣ್ಣ ಹಳ್ಳಿಯಾದ ಸಂಗೈ ನಿಫಾ ಎಂಬ ಜಾಗದಲ್ಲಿ ಮೊದಲು ಕಾಣಿಸಿಕೊಂಡ ಕಾರಣದಿಂದ “ನಿಫಾ ವೈರಸ್” ಎಂದು ಕರೆಯಲ್ಪಡುತ್ತದೆ. ಈ ಹಳ್ಳಿಯ ಹಂದಿ ಸಾಕುವ ರೈತರಲ್ಲಿ ಮೊದಲು ಈ ಜ್ವರ ಕಾಣಿಸಿಕೊಂಡು ಮೆದುಳಿನ ಊರಿಯೂತ ಮತ್ತು ಉಸಿರಾಟದ ತೊಂದರೆ ಉಂಟುಮಾಡಿ, ನೂರಾರು ಮಂದಿ ಅಸುನೀಗಿದ್ದರು. 300 ಮಂದಿಗೆ ರೋಗ ತಗುಲಿ

ನಡುಕ ಹುಟ್ಟಿಸುತ್ತಿರುವ ನಿಫಾ ವೈರಾಣು ಜ್ವರ ► ಪತ್ತೆಹಚ್ಚುವುದು, ಚಿಕಿತ್ಸೆ, ತಡೆಗಟ್ಟುವುದು ಹೇಗೆ..? Read More »

ಕರಾವಳಿ

ಗ್ಯಾಸ್ ಸಿಲಿಂಡರ್ ಸ್ಫೋಟ ► ಇಬ್ಬರಿಗೆ ಗಾಯ, ನಾಲ್ಕು ಮನೆಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಮೇ.22. ಎಲ್‍ಪಿಜಿ ಸಿಲಿಂಡರೊಂದು ಸ್ಫೋಟಗೊಂಡ ಪರಿಣಾಮ ನಾಲ್ಕು ಮನೆಗಳಿಗೆ ಹಾನಿಯಾಗಿ ಕಾರೊಂದು ಜಖಂಗೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ಮಂಗಳವಾರದಂದು ನಡೆದಿದೆ. ಇಲ್ಲಿನ ಎಳ್ಳುಪುರ ಗ್ರಾಮದ ಮಂಜುನಾಥ್ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ನಾಲ್ಕು ಮನೆಗಳಿಗೆ ಹಾನಿಯಾಗಿದ್ದು, ಹೊರಗಡೆ ನಿಲ್ಲಿಸಲಾಗಿದ್ದ ಸ್ವಿಫ್ಟ್ ಡಿಸೈರ್ ಕಾರು ಜಖಂಗೊಂಡಿದೆ. ಸ್ಫೋಟದ ಸಂದರ್ಭದಲ್ಲಿ ಮನೆಯಲ್ಲಿದ್ದ ಇಬ್ಬರು ಗಾಯಗೊಂಡಿದ್ದು ಸ್ಥಳೀಯ ಆಸ್ವತ್ರೆಗೆ ದಾಖಲಿಸಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,

ಗ್ಯಾಸ್ ಸಿಲಿಂಡರ್ ಸ್ಫೋಟ ► ಇಬ್ಬರಿಗೆ ಗಾಯ, ನಾಲ್ಕು ಮನೆಗಳಿಗೆ ಹಾನಿ Read More »

ಕರ್ನಾಟಕ

ಧರ್ಮಸ್ಥಳದಲ್ಲಿ ಬಂದಿಳಿದ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಮೇ.22. ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಇಂದು ಬೆಳಗ್ಗೆ ಧರ್ಮಸ್ಥಳಕ್ಕೆ ಆಗಮಿಸಿದ್ದು, ಜಿಲ್ಲಾ ಎಸ್ಪಿ ಡಾ.ಬಿ.ಆರ್.ರವೀಕಾಂತೇ ಗೌಡ ಸ್ವಾಗತಿಸಿದರು. ರಾಜ್ಯದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಳಕ್ಕೆ ಆಗಮಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳದ ವಸಂತ ಮಹಲ್ ಹೆಲಿಪ್ಯಾಡಿಗೆ ಬಂದಿಳಿದ ಕುಮಾರಸ್ವಾಮಿ ಅವರನ್ನು ದೇವಸ್ಥಾನದ ವತಿಯಿಂದ ರಸ್ತೆ ಮಾರ್ಗವಾಗಿ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ಈ

ಧರ್ಮಸ್ಥಳದಲ್ಲಿ ಬಂದಿಳಿದ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ Read More »

ಕರಾವಳಿ

►► ಮರೆಯಲಾಗದ ನೆನಪು ► ಮಂಗಳೂರು ಭೀಕರ ವಿಮಾನ ದುರಂತಕ್ಕೆ ಇಂದಿಗೆ ಎಂಟು ವರ್ಷ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.22. ಇಲ್ಲಿನ ಬಜ್ಪೆ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತ ನಡೆದು ಇಂದಿಗೆ ಎಂಟು ವರ್ಷ ಸಂದಿದೆ. ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಗೀಡಾಗಿ 159 ಜೀವಗಳನ್ನು ಬಲಿತೆಗೆದುಕೊಂಡಿತ್ತು. 2010 ರ ಮೇ 22 ರಂದು ಮುಂಜಾನೆ ಬಜ್ಪೆ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಡೆ ಇಳಿದ ಏರ್ ಇಂಡಿಯಾ ವಿಮಾನ 6:14 ರ ಸಮಯದಲ್ಲಿ ಪೈಲಟ್ ನ ಸಣ್ಣ ತಪ್ಪಿನಿಂದಾಗಿ ಕೆಂಜಾರು ಗುಡ್ಡೆಯಲ್ಲಿ

►► ಮರೆಯಲಾಗದ ನೆನಪು ► ಮಂಗಳೂರು ಭೀಕರ ವಿಮಾನ ದುರಂತಕ್ಕೆ ಇಂದಿಗೆ ಎಂಟು ವರ್ಷ Read More »

ಕರಾವಳಿ

ನಿಪಾಹ್’ ಮಾರಕ‌ ಸೋಂಕಿಗೆ ಬೆಚ್ಚಿಬಿದ್ದ ಕೇರಳ ► 16 ರ ಗಡಿ ದಾಟಿದೆ ಮೃತರ ಸಂಖ್ಯೆ

(ನ್ಯೂಸ್ ಕಡಬ) newskadaba.com ಕೇರಳ, ಮೇ.21. ಅಪರಿಚಿತ ವೈರಸ್ ಸೋಂಕಿನಿಂದ ಬೆಚ್ಚಿಬಿದ್ದಿದ್ದ ಕೇರಳ ವೈದ್ಯಕೀಯ ಕ್ಷೇತ್ರವು ಕೊನೆಗೂ ಮಾರಕ ಸೋಂಕನ್ನು ಪತ್ತೆಹಚ್ಚಿದೆ. ಕೇರಳದಲ್ಲಿ ಈಗಾಗಲೇ 16 ಕ್ಕಿಂತಲೂ ಅಧಿಕ ಜನರನ್ನು ಬಲಿ ಪಡೆದು ಇಡೀ ದೇಶವನ್ನೇ ತಲ್ಲಣಗೊಳಿಸಿರುವ ವೈರಾಣುವನ್ನು ‘ನಿಪಾಹ್’ ಎಂದು ಗುರುತಿಸಲಾಗಿದ್ದು, ಈ ಮಾರಕ ಸೋಂಕಿನ ಕುರಿತಂತೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸೇರಿದಂತೆ ಇಡೀ ವೈದ್ಯಕೀಯ ಲೋಕವೇ ಆತಂಕಕ್ಕೆ ಒಳಗಾಗಿದೆ. ನಿಪಾಹ್ ವೈರಾಣು1998 ರಲ್ಲೇ ಮಲೇಷಿಯಾದಲ್ಲಿ ಪತ್ತೆಯಾಗಿದ್ದರೂ, ಈ ಸೋಂಕಿಗೆ ಇದುವರೆಗೆ ಲಸಿಕೆ‌ ಕಂಡು

ನಿಪಾಹ್’ ಮಾರಕ‌ ಸೋಂಕಿಗೆ ಬೆಚ್ಚಿಬಿದ್ದ ಕೇರಳ ► 16 ರ ಗಡಿ ದಾಟಿದೆ ಮೃತರ ಸಂಖ್ಯೆ Read More »

ರಾಷ್ಟ್ರೀಯ ನ್ಯೂಸ್

ಕಡಬ ಗ್ರಾ.ಪಂ.ಸದಸ್ಯ ಕೃಷ್ಣಪ್ಪ ಪೂಜಾರಿಯವರ ಸಹೋದರ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಮೇ.21. ಇಲ್ಲಿನ ಕೆದಂಬಾಡಿ ಬೈಲಂಗಡಿ ದಿ.ಪದ್ಯಯ್ಯ ಪೂಜಾರಿಯವರ ಪುತ್ರ ,ಕಡಬ ಗ್ರಾ.ಪಂ.ಸದಸ್ಯ ಕ್ರಷ್ಣಪ್ಪ ಪೂಜಾರಿಯವರ ಸಹೋದರ ಸುರೇಶ್(34ವ) ಸೋಮವಾರದಂದು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಸುರೇಶ್ ರವರು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ಇತ್ತೀಚೆಗಷ್ಟೇ ಮನೆಗೆ ಬಂದಿದ್ದ ಅವರಿಗೆ ಶನಿವಾರ ರಾತ್ರಿ ಮೆದುಳಿನಲ್ಲಿ ತೊಂದರೆ ಉಂಟಾಗಿದ್ದು ಬಳಿಕ ಅವರನ್ನು ಮಂಗಳೂರಿನ ಕೆ.ಎಂ.ಸಿ ಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟಿದ್ದಾರೆ. ಮೃತರು ತಾಯಿ ವೆಂಕಮ್ಮ ಸಹೋದರರಾದ ಶೇಖರ, ಕ್ರಷ್ಣಪ್ಪ, ಸಹೋದರಿಯರಾದ ಯಶೋದಾ,

ಕಡಬ ಗ್ರಾ.ಪಂ.ಸದಸ್ಯ ಕೃಷ್ಣಪ್ಪ ಪೂಜಾರಿಯವರ ಸಹೋದರ ಹೃದಯಾಘಾತದಿಂದ ನಿಧನ Read More »

ಕರಾವಳಿ

ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಳೆ ಧರ್ಮಸ್ಥಳಕ್ಕೆ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಮೇ.21. ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮೇ 22 ಮಂಗಳವಾರದಂದು ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಮಂಗಳವಾರ ಬೆಳಿಗ್ಗೆ 8.30 ಕ್ಕೆ ಧರ್ಮಸ್ಥಳ ವಸಂತ ಮಹಲ್ ಹೆಲಿಪ್ಯಾಡ್ ನಲ್ಲಿ ಬಂದಿಳಿಯಲಿರುವ ಕುಮಾರಸ್ವಾಮಿ ಶ್ರೀ ಕ್ಷೇತ್ರ ಮಂಜುನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. 11.45 ಕ್ಕೆ ವಸಂತ ಮಹಲ್ ಹೆಲಿಪ್ಯಾಡ್ ನಿಂದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೆಣಸೆ ಹೆಲಿಪ್ಯಾಡ್ ಗೆ ಹೆಲಿಕಾಪ್ಟರ್ ನಲ್ಲಿ ತೆರಳಿ ಶೃಂಗೇರಿ ಶಾರದಾಂಬಾ ದೇವಿಯ ದರ್ಶನ ಪಡೆದು ವಿಶೇಷ

ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಳೆ ಧರ್ಮಸ್ಥಳಕ್ಕೆ Read More »

ಕರಾವಳಿ
Scroll to Top