News Kadaba Desk

ದಕ್ಷಿಣ ಕನ್ನಡದಲ್ಲಿ ನಿಫಾಃ ಪತ್ತೆಯಾಗಿಲ್ಲ: ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ► ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.24. ಕೇರಳ ರಾಜ್ಯವನ್ನೇ ತಲ್ಲಣಗೊಳಿಸಿದ್ದ ನಿಪಾಹ್ ವೈರಸ್ ಕರ್ನಾಟಕಕ್ಕೆ ಕಾಲಿಟ್ಟಿಲ್ಲ. ಕೇವಲ ವದಂತಿ ಮಾತ್ರವಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಸ್ಪಷ್ಟಪಡಿಸಿದ್ದಾರೆ. ಶಂಕಿತ ನಿಪಾಃ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಿಬ್ಬರ ವೈದ್ಯಕೀಯ ಪರೀಕ್ಷೆಯ ವರದಿ ಬಂದಿದ್ದು, ಎರಡೂ ಪ್ರಕರಣಗಳಲ್ಲಿ ಋಣಾತ್ಮಕ ಫಲಿತಾಂಶ ಕಂಡುಬಂದಿದೆ. ಆದುದರಿಂದ ಯಾರೂ ಈ ಬಗ್ಗೆ ಭಯಪಡುವ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ಯಾರೂ ನಂಬಬಾರದೆಂದು ಸೆಂಥಿಲ್‌ ತಿಳಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ನಿಫಾಃ ಪತ್ತೆಯಾಗಿಲ್ಲ: ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ► ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ Read More »

ಕರಾವಳಿ

ಕುಂತೂರು: ಶಾಲೆಗೆಂದು ತೆರಳಿದ ಬಾಲಕ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಮೇ.24. ಶಾಲೆಗೆಂದು ತೆರಳಿದ ಬಾಲಕನೋರ್ವ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಕುಂತೂರಿನಲ್ಲಿ ಬುಧವಾರದಂದು ನಡೆದಿದೆ. ನಾಪತ್ತೆಯಾಗಿರುವ ಬಾಲಕನನ್ನು ಕುಂತೂರು ಗ್ರಾಮದ ಕಂಡತ್ತಡ್ಕ ನಿವಾಸಿ ಜಯಂತಿ ಎಂಬವರ ಪುತ್ರ, ಪದವು ಸೈಂಟ್ ಜಾರ್ಜ್ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಶರತ್ ಕುಮಾರ್ ಎಂದು‌ ಗುರುತಿಸಲಾಗಿದೆ. ಈತ ಬುಧವಾರದಂದು ಶಾಲೆಗೆಂದು ಮನೆಯಿಂದ ತೆರಳಿದ್ದು, ಆ ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ. ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿದ್ದು, ಪತ್ತೆಯಾಗದ ಕಾರಣ ಆತನ ತಾಯಿ

ಕುಂತೂರು: ಶಾಲೆಗೆಂದು ತೆರಳಿದ ಬಾಲಕ ನಾಪತ್ತೆ Read More »

ಕರಾವಳಿ

85 ರ ಗಡಿ ದಾಟಿ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್‌ ಲೀಟರಿಗೆ 73 ರೂ. ► ಮೌನಕ್ಕೆ ಶರಣಾದ ಎನ್‌ಡಿಎ ಮಿತ್ರಪಕ್ಷ, ಸಾರ್ವಜನಿಕರಿಂದ ಆಕ್ರೋಶ

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.24. ಪೆಟ್ರೋಲಿಯಂ ಉತ್ಪನ್ನಗಳು ಬೆಲೆಯು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಮುಂಬಯಿಯಲ್ಲಿ ಪೆಟ್ರೋಲ್ ಲೀಟರೊಂದಕ್ಕೆ 85 ರ ಗಡಿಯನ್ನು ದಾಟಿದೆ. ಇದು ಭಾರತದಲ್ಲಿ ಇಲ್ಲಿಯವರೆಗೆ ದಾಖಲಾದ ಅತೀ ಗರಿಷ್ಟ ದರವಾಗಿದೆ. ಕಳೆದ ಹತ್ತು ದಿನಗಳಿಂದ ಸತತ ಏರಿಕೆ ಕಾಣುತ್ತಿದ್ದು, ಹಾಗಾಗಿ ಗರಿಷ್ಟ ದಾಖಲೆಯ ಬೆಲೆಯನ್ನು ಮುಟ್ಟಿದೆ‌. ಹಿಂದೆಂದೂ ಭಾರತದಲ್ಲಿ ಇಷ್ಟೊಂದು ಗರಿಷ್ಟ ದರ ದಾಖಲಾಗಿರಲಿಲ್ಲ. ಇಂದು ಮುಂಬಯಿಯಲ್ಲಿ ಪೆಟ್ರೋಲ್ ಲೀಟರೊಂದಕ್ಕೆ 85.29 ರೂ. ಹಾಗೂ ಡೀಸೆಲ್‌ ಲೀಟರೊಂದಕ್ಕೆ 72.96 ರೂ. ಗಳಾಗಿದ್ದು, ಬೆಂಗಳೂರಿನಲ್ಲಿ

85 ರ ಗಡಿ ದಾಟಿ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್‌ ಲೀಟರಿಗೆ 73 ರೂ. ► ಮೌನಕ್ಕೆ ಶರಣಾದ ಎನ್‌ಡಿಎ ಮಿತ್ರಪಕ್ಷ, ಸಾರ್ವಜನಿಕರಿಂದ ಆಕ್ರೋಶ Read More »

ರಾಷ್ಟ್ರೀಯ ನ್ಯೂಸ್

ಚಂಡಮಾರುತದ ಭೀತಿಯಲ್ಲಿ ಕರಾವಳಿ..!! ► ಹವಾಮಾನ ಇಲಾಖೆ ಮುನ್ಸೂಚನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.24. ಯೆಮನ್ ನ ಏಡೆನ್ ನಗರದ ಈಶಾನ್ಯ ಮತ್ತು 560 ಕಿಮೀ ಸೊಕೊಟ್ರಾ ದ್ವೀಪಗಳ ಗಡಿ ಭಾಗದಲ್ಲಿ ನೆಲೆಯಾಗಿರುವ ಚಂಡಮಾರುತವು ಭಾರತದ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಡೆನ್ ಕೊಲ್ಲಿಯಲ್ಲಿ ಕೇಂದ್ರಿಕೃತವಾಗಿರುವ ಸಾಗರ್ ಚಂಡಮಾರುತವು ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ದ್ವೀಪ ಸಮೂಹಗಳಿಗೆ ಹಾಗೂ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸುವ ಸಾಧ್ಯತೆ ಇದ್ದು, ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.

ಚಂಡಮಾರುತದ ಭೀತಿಯಲ್ಲಿ ಕರಾವಳಿ..!! ► ಹವಾಮಾನ ಇಲಾಖೆ ಮುನ್ಸೂಚನೆ Read More »

ಕರಾವಳಿ

ಸಮ್ಮಿಶ್ರ ಸರಕಾರ ಅಧಿಕಾರ ವಹಿಸಿಕೊಂಡ ನಡುವೆಯೇ ಕಾಂಗ್ರೆಸ್‌ನಲ್ಲಿ ಭಿನ್ನಮತ..? ► ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಹೊರಹಾಕಿದ ಕಾಂಗ್ರೆಸ್‌ನ ಕಿಂಗ್ ಮೇಕರ್..!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.24. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರದ ಪದಗ್ರಹಣ ಸಮಾರಂಭದ ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ನಲ್ಲಿ ಅಸಮಾಧಾನದ ಹೊಗೆಯಾವರಿಸಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಯ ಸೂತ್ರಧಾರ, ಕಾಂಗ್ರೆಸ್‌ನ ಕಿಂಗ್ ಮೇಕರ್ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡದಿರುವ ಹಿನ್ನೆಲೆಯಲ್ಲಿ ಪಕ್ಷದ ನಾಯಕರ ವಿರುದ್ಧ ಡಿ.ಕೆ. ಸಹೋದರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಬಿಜೆಪಿಯ ಆಪರೇಷನ್ ಕಮಲಕ್ಕೆ ಬಲಿಯಾಗದಂತೆ ಹಗಲು ರಾತ್ರಿ ಬಕಪಕ್ಷಿಯಂತೆ ಕಾದು ಕಾಂಗ್ರೆಸ್

ಸಮ್ಮಿಶ್ರ ಸರಕಾರ ಅಧಿಕಾರ ವಹಿಸಿಕೊಂಡ ನಡುವೆಯೇ ಕಾಂಗ್ರೆಸ್‌ನಲ್ಲಿ ಭಿನ್ನಮತ..? ► ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಹೊರಹಾಕಿದ ಕಾಂಗ್ರೆಸ್‌ನ ಕಿಂಗ್ ಮೇಕರ್..!! Read More »

ಕರ್ನಾಟಕ

ಕಬಕ: ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ► ನಗ, ನಗದಿನೊಂದಿಗೆ ಪರಾರಿ

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ.23. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮುಂಬಾಗಿಲ ಚಿಲಕ ಒಡೆದು ಒಳನುಗ್ಗಿದ ಕಳ್ಳರು ನಗ, ನಗದನ್ನು ದೋಚಿರುವ ಘಟನೆ ಪುತ್ತೂರಿನ ಕಬಕದಲ್ಲಿ ಮಂಗಳವಾರದಂದು ನಡೆದಿದೆ. ಕಬಕ ಗ್ರಾಮದ ಪೋಳ್ಯದಕಟ್ಟೆ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಮನೆಯಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನದ ನಡುವೆ ಯಾರೂ ಇಲ್ಲದ ವೇಳೆ ಒಳನುಗ್ಗಿದ ಕಳ್ಳರು ಮನೆಯಲ್ಲಿಟ್ಟಿದ್ದ ಮೂರೂವರೆ ಪವನ್ ಚಿನ್ನಾಭರಣ ಹಾಗೂ ಅರುವತ್ತು ಸಾವಿರ ರೂ. ನಗದನ್ನು ದೋಚಿದ್ದಾರೆ. ಮನೆಯವರು ಅಪರಾಹ್ನ ಮನೆಗೆ ಬಂದಾಗ ಘಟನೆ

ಕಬಕ: ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ► ನಗ, ನಗದಿನೊಂದಿಗೆ ಪರಾರಿ Read More »

ಕರಾವಳಿ

ಕುಂತೂರು: ಬಾವಿಗೆ ಬಿದ್ದು ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಮೇ.23. ಮಹಿಳೆಯೋರ್ವರು ನೀರು ಸೇದುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವುಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ಅಪರಾಹ್ನ ಕುಂತೂರಿನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಪೆರಾಬೆ ಗ್ರಾಮದ ಕುಂತೂರು ಅನ್ನಡ್ಕ ನಿವಾಸಿ ವಿಶ್ವನಾಥ್ ಗೌಡ ಎಂಬವರ ಪತ್ನಿ ಶಶಿಕಲಾ (46) ಎಂದು ಗುರುತಿಸಲಾಗಿದೆ. ಇವರು ಬುಧವಾರ ಅಪರಾಹ್ನ ತನ್ನ ಮನೆಯ ಅಂಗಳದಲ್ಲಿದ್ದ ಆವರಣ ಗೋಡೆಯಿಲ್ಲದ ಬಾವಿಯಿಂದ ನೀರು ಸೇದುತ್ತಿದ್ದಾಗ ಆಕಸ್ಮಿಕವಾಗಿ ಇಪ್ಪತ್ರೈದು ಅಡಿ ಆಳದ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಡಬ

ಕುಂತೂರು: ಬಾವಿಗೆ ಬಿದ್ದು ಮಹಿಳೆ ಮೃತ್ಯು Read More »

ಕರಾವಳಿ

ಕುಮಾರಸ್ವಾಮಿ ಪ್ರಮಾಣ ವಚನ ಸಮಾರಂಭಕ್ಕೆ‌ ಅಡ್ಡಿಯಾದ ಮಳೆ ► ಮಳೆಗೆ ನೆನೆದು ಸಮಾರಂಭಕ್ಕಾಗಿ ಕಾಯುತ್ತಿರುವ ಜೆಡಿಎಸ್ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.23. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕುಮಾರಸ್ವಾಮಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮಳೆ ಅಡ್ಡಿಯಾಗಿದೆ. ಸಂಜೆ‌ 4.30 ಕ್ಕೆ ಹೆಚ್.ಡಿ. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಮಳೆಯ ಸಿಂಚನ ಅಡ್ಡಿಯಾಗಿದ್ದು, ಜೆಡಿಎಸ್ ಕಾರ್ಯಕರ್ತರ ಉತ್ಸಾಹ ಕುಗ್ಗಿಸಿದೆ. ಆದರೂ ವಿಧಾನಸೌಧದ ಬಳಿ ಹೆಚ್​ಡಿಕೆ ಪದಗ್ರಹಣ ಕಾರ್ಯಕ್ರಮಕ್ಕಾಗಿ ಸಾವಿರಾರು ಕಾರ್ಯಕರ್ತರು ಕಾಯುತ್ತಿರುವ ದೃಶ್ಯ ಕಂಡುಬಂದಿದ್ದು, ವಿಧಾನಸೌಧದ ಮೆಟ್ರೋ ಸ್ಟೇಷನ್​ನಲ್ಲಿ ಮಳೆಯಿಂದ ಆಶ್ರಯ ಪಡೆಯುತ್ತಿದ್ದಾರೆ.

ಕುಮಾರಸ್ವಾಮಿ ಪ್ರಮಾಣ ವಚನ ಸಮಾರಂಭಕ್ಕೆ‌ ಅಡ್ಡಿಯಾದ ಮಳೆ ► ಮಳೆಗೆ ನೆನೆದು ಸಮಾರಂಭಕ್ಕಾಗಿ ಕಾಯುತ್ತಿರುವ ಜೆಡಿಎಸ್ ಕಾರ್ಯಕರ್ತರು Read More »

ಕರ್ನಾಟಕ

ಇಂದು ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣ ವಚನ ► ಉತ್ತರದಿಂದ ದಕ್ಷಿಣದವರೆಗಿನ ಗಣ್ಯಾತಿಗಣ್ಯರು ಭಾಗಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.23. ರಾಜ್ಯದ 24 ನೆಯ ಮುಖ್ಯಮಂತ್ರಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಮುಖಂಡ ಡಾ.ಜಿ. ಪರಮೇಶ್ವರ್ ಇಂದು ಸಂಜೆ 4.30 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪದಗ್ರಹಣ ಸಮಾರಂಭಕ್ಕೆ ವಿಧಾನ ಸೌಧದ ಮುಂಭಾಗದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದ್ದು, ಬಿಜೆಪಿ ವಿರೋಧಿ ಬಣ ಹಾಗೂ ತೃತೀಯ ರಂಗದ ನಾಯಕರು ಸೇರಿದಂತೆ ಉತ್ತರದಿಂದ ದಕ್ಷಿಣದವರೆಗಿನ ಗಣ್ಯಾತಿಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಸ್ಪೀಕರ್ ಆಗಿ ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್

ಇಂದು ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣ ವಚನ ► ಉತ್ತರದಿಂದ ದಕ್ಷಿಣದವರೆಗಿನ ಗಣ್ಯಾತಿಗಣ್ಯರು ಭಾಗಿ Read More »

ಕರಾವಳಿ

ಜಿಲ್ಲೆಯಾದ್ಯಂತ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಮುಂದುವರಿಕೆ ► ಕಾರಣವೇನು ಗೊತ್ತೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.23. ಇಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ಸ್ವೀಕಾರ ಹಿನ್ನೆಲೆಯಲ್ಲಿ ಕಮಿಷನರೇಟ್ ವ್ಯಾಪ್ತಿ ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೇ 25ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಮುಂದುವರಿಕೆಯಾಗಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತ್ತು. ನಿಷೇಧಾಜ್ಞೆಯ ನಡುವೆಯೂ ಬಂಟ್ವಾಳ ತಾಲೂಕಿನ ವಿಟ್ಲ ಭಾಗದಲ್ಲಿ ಘರ್ಷಣೆ ನಡೆದಿತ್ತು.

ಜಿಲ್ಲೆಯಾದ್ಯಂತ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಮುಂದುವರಿಕೆ ► ಕಾರಣವೇನು ಗೊತ್ತೇ..? Read More »

ಕರಾವಳಿ
Scroll to Top