News Kadaba Desk

ಕಡಬ: ಧರೆ ಕುಸಿತ – ಕಟ್ಟಡಗಳು ಉರುಳುವ ಭೀತಿ ► ಸ್ಥಳೀಯ ನಿವಾಸಿಗಳ ಸ್ಥಳಾಂತರ

(ನ್ಯೂಸ್ ಕಡಬ) newskadaba.com ಕಡಬ, ಆ.20. ಇಲ್ಲಿಯ ಕಾಲೇಜು ರಸ್ತೆಯ ಅಡ್ಡಗದ್ದೆಯಲ್ಲಿ ಭೃಹತ್ ಗಾತ್ರದ ಗುಡ್ಡ ಕುಸಿದು, ಮರ ಗಿಡಗಳು, ಕಲ್ಲುಬಂಡೆಗಳು ಉರುಳಿ ಬೀಳುತ್ತಿದ್ದು ಗುಡ್ಡದ ಮೇಲಿರುವ ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದು ಧರೆಯ ಕೆಳಭಾಗದಲ್ಲಿರುವ ನಾಲ್ಕೈದು ಮನೆಗಳು ಬೀಳುವ ಭಯದಿಂದ ವಾಸ್ತವ್ಯ ಬದಲಾಯಿಸಿರುವುದಲ್ಲದೆ, ನಜಿಮುನ್ನಿಸರವರ ಕಟ್ಟಡದ ಹಿಂದಿನ ಧರೆ ಸಂಪೂರ್ಣ ಕುಸಿದಿದ್ದು ಕಟ್ಟಡ ನೆಲಸಮಗೊಂಡಿರುವುದಲ್ಲದೆ ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ಭಾನುವಾರದಂದು ನಡೆದಿದೆ. ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸುಮಾರು 15 ಅಡಿ ಎತ್ತರಕ್ಕೂ ಮೇಲ್ಪಟ್ಟ ಗುಡ್ಡ […]

ಕಡಬ: ಧರೆ ಕುಸಿತ – ಕಟ್ಟಡಗಳು ಉರುಳುವ ಭೀತಿ ► ಸ್ಥಳೀಯ ನಿವಾಸಿಗಳ ಸ್ಥಳಾಂತರ Read More »

ಕರಾವಳಿ

ಬೆಳ್ಳಾರೆ: ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಆ.19. ವಿದ್ಯುತ್ ಆಘಾತಕ್ಕೊಳಗಾಗಿ ಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕೂಡನಕಟ್ಟೆ ಎಂಬಲ್ಲಿ ಭಾನುವಾರದಂದು ನಡೆದಿದೆ. ಮೃತ ವಿದ್ಯಾರ್ಥಿಯನ್ನು ಕೂಡನಕಟ್ಟೆ ನಿವಾಸಿ ಪಕೀರ ಎಂಬವರ ಪುತ್ರ ರವಿ ಎಂದು ಗುರುತಿಸಲಾಗಿದೆ. ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ ಭಾನುವಾರದಂದು ಶಾಲೆಗೆ ರಜೆ ಇದ್ದ ಕಾರಣ ಪಕ್ಕದ ಮನೆಯವರ ಜಾಗದಲ್ಲಿ ಮರದ ಗೆಲ್ಲು ಕಡಿಯುತ್ತಿದ್ದಾಗ ಗೆಲ್ಲು ಆಕಸ್ಮಿಕವಾಗಿ ವಿದ್ಯುತ್ ಲೈನಿಗೆ ಬಿದ್ದು ಗೆಲ್ಲಿನ ಮುಖಾಂತರ ವಿದ್ಯುತ್ ಪ್ರವಹಿಸಿ ಮೃತಪಟ್ಟನೆನ್ನಲಾಗಿದೆ.

ಬೆಳ್ಳಾರೆ: ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ ಮೃತ್ಯು Read More »

ಕರಾವಳಿ

ಕುಮಾರಧಾರ ನದಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಆಲಂಕಾರು, ಆ.19. ಅಪರಿಚಿತ ಗಂಡಸಿನ ಮೃತ ದೇಹವೊಂದು ಕುಮಾರಧಾರ ನದಿಯ ನೆರೆ ನೀರಿನಲ್ಲಿ ಕೊಚ್ಚಿ ಬಂದಿದ್ದು, ಆದಿತ್ಯವಾರ ಸಂಜೆ ಆರಲಂಕಾರಿನಲ್ಲಿ ಪತ್ತೆಯಾಗಿದೆ. ಆಲಂಕಾರು ಗ್ರಾಮದ ಪಜ್ಜಡ್ಕ ನಿವಾಸಿ ಈಶ್ವರ ಗೌಡ ಎಂಬವರ ತೋಟದ ಬದಿಯಲ್ಲಿ ಕುಮಾರಧಾರ ನದಿಯಲ್ಲಿ ಸುಮಾರು 50 ವಯಸ್ಸಿನ ಗಂಡಸಿನ ಮೃತದೇಹವೊಂದು ಪತ್ತೆಯಾಗಿದೆ. ಮೃತ ದೇಹದಲ್ಲಿ ಯಾವುದೇ ಬಟ್ಟೆ ಬರೆಗಳು ಇಲ್ಲದಿದ್ದು ಶವವು ಗುರುತು ಹಿಡಿಯಲಾಗದ ರೀತಿಯಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ. ಸುಮಾರು ನಾಲ್ಕು ಅಥವಾ ಐದು ದಿನದ ಹಿಂದೆ

ಕುಮಾರಧಾರ ನದಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆ Read More »

ಕರಾವಳಿ

ಕೇರಳ ನೆರೆ ಹಾವಳಿಗೆ ನಲುಗುವ ಬಗ್ಗೆ ಭವಿಷ್ಯ ನುಡಿದಿದ್ದ ಮಾನಸಿಕ ಅಸ್ವಸ್ಥ ► ನೆರೆಯನ್ನು ಎಚ್ಚರಿಸುವ ವ್ಯಂಗ್ಯ ಮಾತುಗಳು ಇದೀಗ ವೈರಲ್

(ನ್ಯೂಸ್ ಕಡಬ) newskadaba.com ಕೇರಳ, ಆ.19. ಭಾರೀ ಮಳೆ ಹಾಗೂ ನೆರೆಯಿಂದ ತತ್ತರಿಸಿರುವ ಕೇರಳದಲ್ಲಿ ತಿಂಗಳ ಹಿಂದೆ ಮಾನಸಿಕ ಅಸ್ವಸ್ಥ ರೀತಿಯಲ್ಲಿರುವ ವ್ಯಕ್ತಿಯೊಬ್ಬರು ನೆರೆಯನ್ನು ನೆನಪಿಸುವ ಮಾತೊಂದನ್ನು ಆಡಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿರ್ಮಾಣ ಹಂತದ ಮನೆಯ ಮುಂಭಾಗದಲ್ಲಿ ನಿಂತು ಮಲಯಾಳಂ ಭಾಷೆಯಲ್ಲಿ ಮಾತನಾಡುವ ಆ ವ್ಯಕ್ತಿಯು ‘ಸಮಯವಿಲ್ಲ, ಯಾರಿಗೂ ಸಮಯವಿಲ್ಲ, ಎಲ್ಲರೂ ಬ್ಯುಸಿ ಆಗಿದ್ದಾರೆ. ದುಡ್ಡು ಮಾಡಿ ದೊಡ್ಡ ಬಂಗಲೆಗಳನ್ನು ಕಟ್ಟಿ ಅದರಲ್ಲಿ ದುಡ್ಡನ್ನು ಕೂಡಿಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಆ ಬಂಗಲೆಗಳು ಒಡೆದು

ಕೇರಳ ನೆರೆ ಹಾವಳಿಗೆ ನಲುಗುವ ಬಗ್ಗೆ ಭವಿಷ್ಯ ನುಡಿದಿದ್ದ ಮಾನಸಿಕ ಅಸ್ವಸ್ಥ ► ನೆರೆಯನ್ನು ಎಚ್ಚರಿಸುವ ವ್ಯಂಗ್ಯ ಮಾತುಗಳು ಇದೀಗ ವೈರಲ್ Read More »

ಕರಾವಳಿ

ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ರೈಲು ಮಾರ್ಗದಲ್ಲಿ ಗುಡ್ಡ, ಕಲ್ಲು ಬಂಡೆ ಕುಸಿತ ► ಮಂಗಳೂರು – ಬೆಂಗಳೂರು ರೈಲು ಸಂಚಾರ ಮತ್ತಷ್ಟು ವಿಳಂಬ ಸಾಧ್ಯತೆ

(ನ್ಯೂಸ್ ಕಡಬ) newskadaba.com ಹಾಸನ, ಆ.19. ಪ್ರಕೃತಿ ವಿಕೋಪದಿಂದಾಗಿ ಸಕಲೇಶಪುರ – ಸುಬ್ರಹ್ಮಣ್ಯ ನಡುವಿನ ರೈಲ್ವೇ ಹಳಿಯ ಮೇಲೆ ವಿವಿಧ ಕಡೆ ಗುಡ್ಡ ಮತ್ತು ಭಾರೀ ಗಾತ್ರದ ಕಲ್ಲು ಬಂಡೆ ಕುಸಿದಿರುವ ಕಾರಣ ಬೆಂಗಳೂರು – ಮಂಗಳೂರು ನಡುವೆ ರೈಲು ಸಂಚಾರ ಪುನರಾರಂಭ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಸಕಲೇಶಪುರ ತಾಲೂಕಿನ ಎಡಕುಮೇರಿ ಪರಿಸರದ ಸುಮಾರು ಐವತ್ತಕ್ಕೂ ಹೆಚ್ಚಿನ ಕಡೆ ಗುಡ್ಡ ಕುಸಿದು, ನೂರಾರು ಎಕರೆ ಕಾಫಿ ತೋಟ ನಾಶವಾಗಿದ್ದರೆ, ಅನೇಕ ಗ್ರಾಮಗಳ ಸಂಪರ್ಕ ರಸ್ತೆ ಬಂದ್ ಆಗಿವೆ.

ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ರೈಲು ಮಾರ್ಗದಲ್ಲಿ ಗುಡ್ಡ, ಕಲ್ಲು ಬಂಡೆ ಕುಸಿತ ► ಮಂಗಳೂರು – ಬೆಂಗಳೂರು ರೈಲು ಸಂಚಾರ ಮತ್ತಷ್ಟು ವಿಳಂಬ ಸಾಧ್ಯತೆ Read More »

ರಾಷ್ಟ್ರೀಯ ನ್ಯೂಸ್

ಬಿಳಿನೆಲೆ: ಮನೆಯ ಹಿಂಬದಿಯ ಗುಡ್ಡ ಕುಸಿತ ► ತೆಂಗು – ಅಡಿಕೆ ಮರಗಳಿಗೆ ಹಾನಿ, ಮನೆಯವರ ಸ್ಥಳಾಂತರ

(ನ್ಯೂಸ್ ಕಡಬ) newskadaba.com ಕಡಬ, ಆ.18. ಠಾಣಾ ವ್ಯಾಪ್ತಿಯ ಬಿಳಿನೆಲೆ ಗ್ರಾಮದ ಪುತ್ತಿಲ ಎಂಬಲ್ಲಿ ಗುಡ್ಡೆ ಕುಸಿದ ಪರಿಣಾಮ ಎರಡು ತೆಂಗು ಹಾಗೂ ಹತ್ತು ಅಡಿಕೆ ಮರಗಳಿಗೆ ಹಾನಿಯಾದ ಘಟನೆ ಶನಿವಾರದಂದು ನಡೆದಿದೆ. ಪುತ್ತಿಲ ನಿವಾಸಿ ಗುಣಪಾಲ ಗೌಡ ಎಂಬವರ ಮನೆಯ ಸಮೀಪದ ಗುಡ್ಡ ಕುಸಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ ಭೇಟಿ ನೀಡಿ ಪರಿಶೀಲಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಗುಣಪಾಲ ಗೌಡರ ಮನೆಯವರನ್ನು ಸಂಬಂಧಿಕರ ಮನೆಗೆ ಕಳುಹಿಸಿಕೊಡಲಾಗಿದೆ.  

ಬಿಳಿನೆಲೆ: ಮನೆಯ ಹಿಂಬದಿಯ ಗುಡ್ಡ ಕುಸಿತ ► ತೆಂಗು – ಅಡಿಕೆ ಮರಗಳಿಗೆ ಹಾನಿ, ಮನೆಯವರ ಸ್ಥಳಾಂತರ Read More »

ಕರಾವಳಿ

ನೆರೆ ಹಾವಳಿಯ ಸಂತ್ರಸ್ತರಿಗೆ ನೆರವು ನೀಡಲು ಬಯಸುತ್ತೀರಾ…? ► ಅವಶ್ಯಕ ಸಾಮಾಗ್ರಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲು ಜಿಲ್ಲಾಡಳಿತದಿಂದ ತಂಡ ರಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.18. ದಕ್ಷಿಣ ಕನ್ನಡ, ಕೊಡಗು ಜಿಲ್ಲೆ ಹಾಗೂ ನೆರೆ ರಾಜ್ಯ ಕೇರಳದಲ್ಲಿ ಭಾರೀ ಮಳೆಯಿಂದಾಗಿ ನೆರೆ ಹಾವಳಿಗೆ ಒಳಗಾದ ಸಂತ್ರಸ್ತರಿಗೆ ನೀಡಲು ತುರ್ತು ಅವಶ್ಯಕ ಸಾಮಾಗ್ರಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲು ತಂಡವನ್ನು ರಚಿಸಿ ನೇಮಿಸಲಾಗಿದೆ. ಸ್ವೀಕರಿಸಲಾಗುವ ಕೇಂದ್ರ, ಹೆಸರು ಮತ್ತು ಪದನಾಮ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜು ಸಭಾಭವನ ಕದ್ರಿ, ಜಂಟಿ ಆಯುಕ್ತರು, ಮ.ನ.ಪಾ – ಗೋಕುಲ್ ದಾಸ್ ನಾಯಕ್, 9448951722, ಕಾರ್ಖಾನೆಗಳ ಉಪ ನಿರ್ದೇಶಕರು-ಹೆಚ್. ಎಸ್. ನರೇಂದ್ರಬಾಬು, 9663374033 ಪೋಬೆಷನರಿ ಎ.ಸಿ. ಜಿಲ್ಲಾಧಿಕಾರಿ

ನೆರೆ ಹಾವಳಿಯ ಸಂತ್ರಸ್ತರಿಗೆ ನೆರವು ನೀಡಲು ಬಯಸುತ್ತೀರಾ…? ► ಅವಶ್ಯಕ ಸಾಮಾಗ್ರಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲು ಜಿಲ್ಲಾಡಳಿತದಿಂದ ತಂಡ ರಚನೆ Read More »

ಕರಾವಳಿ

ಸುಳ್ಯ: ಮೇಲಿನಿಂದ ಕೆಳಕ್ಕೆ ಜಾರಿದ ಗುಡ್ಡ, ಬೃಹತ್ ಕಲ್ಲುಗಳೊಂದಿಗೆ ಹೊರಬರುತ್ತಿರುವ ನೀರು ► ಓರ್ವ ಮೃತ್ಯು – ಐವರು ನಾಪತ್ತೆ, ಮುಂದುವರಿದ ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಸುಳ್ಯ, ಆ.17. ಗುಡ್ಡವೊಂದು ಮೇಲಿನಿಂದ ಕೆಳಕ್ಕೆ ಜಾರುತ್ತಿರುವ ಪರಿಣಾಮ ಓರ್ವ ಮೃತಪಟ್ಟು ಐವರು ನಾಪತ್ತೆಯಾಗಿರುವ ಘಟನೆ ಸಂಪಾಜೆ -ಮಡಿಕೇರಿ ಮಧ್ಯದ ಜೋಡುಪಾಲ ಎಂಬಲ್ಲಿ ಶುಕ್ರವಾರ ನಡೆದಿದೆ. ಮೃತರನ್ನು ಜೋಡುಪಾಲ ನಿವಾಸಿ ಬಸಪ್ಪ ಎಂದು ಗುರುತಿಸಲಾಗಿದೆ. ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಹಮೀದ್ ಎಂಬವರ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದು, ಪತ್ತೆ ಕಾರ್ಯಾಚರಣೆ ಮುಂದುವರಿದಿದೆ. ನೂರಕ್ಕೂ ಅಧಿಕ ಮಂದಿ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದು, ಸುಮಾರು ಅರುವತ್ತರಷ್ಟು ಮಂದಿಯನ್ನು ಹಗ್ಗದ ಸಹಾಯದಿಂದ ಕರೆತಂದು ಕಲ್ಲುಗುಂಡಿ ಶಾಲೆ

ಸುಳ್ಯ: ಮೇಲಿನಿಂದ ಕೆಳಕ್ಕೆ ಜಾರಿದ ಗುಡ್ಡ, ಬೃಹತ್ ಕಲ್ಲುಗಳೊಂದಿಗೆ ಹೊರಬರುತ್ತಿರುವ ನೀರು ► ಓರ್ವ ಮೃತ್ಯು – ಐವರು ನಾಪತ್ತೆ, ಮುಂದುವರಿದ ಕಾರ್ಯಾಚರಣೆ Read More »

ಕರಾವಳಿ

ಸುಳ್ಯ: ಹಬ್ಬಕ್ಕೆ ಬಟ್ಟೆ ಖರೀದಿಸುವ ವಿಚಾರದಲ್ಲಿ ಪತಿ – ಪತ್ನಿಯ ನಡುವೆ ಜಗಳ ► ಪತ್ನಿಯ ಕೊಲೆಯಲ್ಲಿ ಅಂತ್ಯ

(ನ್ಯೂಸ್ ಕಡಬ) newskadaba.com ಸುಳ್ಯ, ಆ.17. ಹಬ್ಬಕ್ಕೆ ಬಟ್ಟೆ ಖರೀದಿಸುವ ವಿಚಾರದಲ್ಲಿ ಪತಿ – ಪತ್ನಿಯ ನಡುವೆ ಜಗಳವುಂಟಾಗಿ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಸುಳ್ಯದಲ್ಲಿ ಬುಧವಾರ ರಾತ್ರಿ ನಡೆದಿದೆ. ಸುಳ್ಯದ ಜ್ಯೋತಿ ಸರ್ಕಲ್ ನಿವಾಸಿ ಇಸ್ಮಾಯಿಲ್‌ ಎಂಬವರ ಪುತ್ರ ಫಿರೋಜ್‌ ಹಾಗೂ ಕಾರ್ಕಳದ ಅಬ್ದುಲ್ ರಶೀದ್‌ರ ಪುತ್ರಿ ಆಯಿಶಾ ನಡುವೆ ಹಬ್ಬಕ್ಕೆ ಬಟ್ಟೆ ಖರೀದಿಸುವ ವಿಚಾರದಲ್ಲಿ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತೆರಳಿ ಗಂಡ ಫಿರೋಜ್ ಆಯಿಶಾಳನ್ನು ಶಾಲಿನಿಂದ ಗಂಟಲಿಗೆ ಬಿಗಿದಿದ್ದು, ಆ ವೇಳೆ ಆಯಿಶಾ ಮೃತಪಟ್ಟಿದ್ದಾರೆ.

ಸುಳ್ಯ: ಹಬ್ಬಕ್ಕೆ ಬಟ್ಟೆ ಖರೀದಿಸುವ ವಿಚಾರದಲ್ಲಿ ಪತಿ – ಪತ್ನಿಯ ನಡುವೆ ಜಗಳ ► ಪತ್ನಿಯ ಕೊಲೆಯಲ್ಲಿ ಅಂತ್ಯ Read More »

ಕರಾವಳಿ

ಶಿರಾಡಿ, ಸಂಪಾಜೆ ಘಾಟ್ ರಸ್ತೆ ತಡೆಯಿಂದಾಗಿ ಹೆಚ್ಚಿದ ವಾಹನ ದಟ್ಟಣೆ ► ಕರಾವಳಿ ಸಂಪರ್ಕದ ಏಕೈಕ ಸಂಪರ್ಕ ರಸ್ತೆ ಚಾರ್ಮಾಡಿ ಘಾಟ್ ಕುಸಿತ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ.17. ತೀವ್ರ ಮಳೆಯಿಂದಾಗಿ ತತ್ತರಿಸಿರುವ ಕರಾವಳಿಗೆ ರಾಜ್ಯ ರಾಜಧಾನಿಗೆ ಸಂಪರ್ಕಕ್ಕಾಗಿ ಇದ್ದ ಶಿರಾಡಿ ಹಾಗೂ ಚಾರ್ಮಾಡಿ ಘಾಟ್ ರಸ್ತೆಯ ಅಲ್ಲಲ್ಲಿ ಕುಸಿತಗೊಂಡು ಸಂಪರ್ಕ ಕಡಿತಗೊಂಡಿರುವುದರ ನಡುವೆ ಇದೀಗ ಸಂಪರ್ಕಕ್ಕಾಗಿ ಇರುವ ಏಕೈಕ ರಸ್ತೆಯು ಕುಸಿತದ ಭೀತಿಯಲ್ಲಿದೆ. ಚಾರ್ಮಾಡಿ ಘಾಟ್ ನ ಐದನೇ ತಿರುವಿನಲ್ಲಿ ಗುಡ್ಡ ಕುಸಿಯುವ ಸನ್ನಿವೇಶ ನಿರ್ಮಾಣವಾಗಿದ್ದು, ಇಲ್ಲಿ ಸಂಪೂರ್ಣ ಕುಸಿತವುಂಟಾದರೆ ಚಾರ್ಮಾಡಿ ಘಾಟ್ ರಸ್ತೆಯೂ ಹಲವಾರು ದಿನಗಳ ಕಾಲ ಬಂದ್ ಆಗುವ ಭೀತಿ ಎದುರಾಗಿದೆ. ಶಿರಾಡಿ ಮತ್ತು ಸಂಪಾಜೆ

ಶಿರಾಡಿ, ಸಂಪಾಜೆ ಘಾಟ್ ರಸ್ತೆ ತಡೆಯಿಂದಾಗಿ ಹೆಚ್ಚಿದ ವಾಹನ ದಟ್ಟಣೆ ► ಕರಾವಳಿ ಸಂಪರ್ಕದ ಏಕೈಕ ಸಂಪರ್ಕ ರಸ್ತೆ ಚಾರ್ಮಾಡಿ ಘಾಟ್ ಕುಸಿತ Read More »

ಕರ್ನಾಟಕ
Scroll to Top