News Kadaba Desk

ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿರುವ ಕರಾವಳಿಯ ನದಿಗಳು ► ನಾಳೆ ಕಡಬ, ಪುತ್ತೂರು, ಸುಳ್ಯ, ಬೆಳ್ತಂಗಡಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ಆ.16. ಕರಾವಳಿಯಲ್ಲಿ ಗುರುವಾರವೂ ಮಳೆ ಮುಂದುವರಿದಿರುವುದರಿಂದ ಪುತ್ತೂರು ಸುಳ್ಯ, ಬೆಳ್ತಂಗಡಿ ಹಾಗೂ ಕಡಬ ತಾಲೂಕಿನ ಶಾಲೆಗಳಿಗೆ ಆಗಸ್ಟ್ 17 ಶುಕ್ರವಾರದಂದು ರಜೆ ಘೋಷಿಸಲಾಗಿದೆ.   ನದಿಗಳಲ್ಲಿ ನೆರೆ ನೀರಿನ ಮಟ್ಟ ವಿಪರೀತ ಏರಿಕೆಯಾಗಿದ್ದು, ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುರುವಾರದಂದು ರಜೆ ಘೋಷಿಸಿ ಪುತ್ತೂರು ಸಹಾಯಕ ಆಯುಕ್ತರು ಆದೇಶಿಸಿದ್ದಾರೆ.

ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿರುವ ಕರಾವಳಿಯ ನದಿಗಳು ► ನಾಳೆ ಕಡಬ, ಪುತ್ತೂರು, ಸುಳ್ಯ, ಬೆಳ್ತಂಗಡಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಕರಾವಳಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿಧಿವಶ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆ.16. ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರದಂದು ನಿಧನರಾದರು. 1924ರ ಡಿಸೆಂಬರ್ 25 ರಂದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಜನಿಸಿದ್ದ ವಾಜಪೇಯಿ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಜೂನ್ 11ರಂದು ಅವರನ್ನು ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿಧಿವಶ Read More »

ರಾಷ್ಟ್ರೀಯ ನ್ಯೂಸ್

ಭಾರೀ ಮಳೆಯ ಹಿನ್ನೆಲೆ ► ಕಡಬ, ಉಪ್ಪಿನಂಗಡಿ ಪರಿಸರದ ಶಾಲೆಗಳಿಗೆ ರಜೆ

(ನ್ಯೂಸ್ ಕಡಬ) newskadaba.com ಪುತ್ತೂರು, ಆ.16. ಕರಾವಳಿಯಲ್ಲಿ ಗುರುವಾರವೂ ಮಳೆ ಮುಂದುವರಿದಿರುವುದರಿಂದ ನದಿ ಹಾಗೂ ಹೊಳೆಯ ಹತ್ತಿರ ಇರುವ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಜವಾಬ್ದಾರಿಯನ್ನು ಸ್ಥಳೀಯ ತಹಶೀಲ್ದಾರರಿಗೆ ವಹಿಸಲಾಗಿದೆ. ಪುತ್ತೂರು ತಾಲೂಕು ವ್ಯಾಪ್ತಿಯ ಉಪ್ಪಿನಂಗಡಿ, ಗುಂಡ್ಯ, ಕಡಬ ಹಾಗೂ ಕಾಣಿಯೂರು ಪರಿಸರದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಭಾರೀ ಮಳೆಯ ಹಿನ್ನೆಲೆ ► ಕಡಬ, ಉಪ್ಪಿನಂಗಡಿ ಪರಿಸರದ ಶಾಲೆಗಳಿಗೆ ರಜೆ Read More »

ಕರಾವಳಿ

ಶಿರಾಡಿ ಘಾಟ್: ಮಣ್ಣು ಕುಸಿದು 75 ಅಡಿ ಆಳಕ್ಕುರುಳಿದ ಗ್ಯಾಸ್ ಟ್ಯಾಂಕರ್ ► ಇಬ್ಬರು ಮೃತ್ಯು, ನಾಲ್ಕು ದಿನಗಳ ಕಾಲ ಸಂಚಾರ ನಿಷೇಧ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.15. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶಿರಾಡಿ ಘಾಟಿಯ ಮಾರನಹಳ್ಳಿ ಸಮೀಪದ ದೊಡ್ಡತಪ್ಲೆ ಎಂಬಲ್ಲಿ ಗುಡ್ಡ ಕುಸಿತಕ್ಕೊಳಗಾಗಿದ್ದು, ಆ ಸಮಯದಲ್ಲಿ ಸ್ಥಳದಿಂದಾಗಿ ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರೊಂದು ರಸ್ತೆಯಿಂದ ಕೆಳಕ್ಕೆ ದೂಡಲ್ಪಟ್ಟು ಮಣ್ಣಿನ ಕುಸಿತದ ನಡುವೆ ಬಿದ್ದ ಪರಿಣಾಮ ಚಾಲಕ ಹಾಗೂ ನಿರ್ವಾಹಕರಿಬ್ಬರು ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ. ಮೃತರನ್ನು ಟ್ಯಾಂಕರ್ ಚಾಲಕ ರಾಯಚೂರು ನಿವಾಸಿ ಬಸವರಾಜ್ ಹಾಗೂ ನಿರ್ವಾಹಕ ಕೆ.ಆರ್.ಪೇಟೆಯ ಕಿಕ್ಕೇರಿ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ.

ಶಿರಾಡಿ ಘಾಟ್: ಮಣ್ಣು ಕುಸಿದು 75 ಅಡಿ ಆಳಕ್ಕುರುಳಿದ ಗ್ಯಾಸ್ ಟ್ಯಾಂಕರ್ ► ಇಬ್ಬರು ಮೃತ್ಯು, ನಾಲ್ಕು ದಿನಗಳ ಕಾಲ ಸಂಚಾರ ನಿಷೇಧ Read More »

ಕರಾವಳಿ

ಭಾರೀ ಮಳೆಗೆ ಘಾಟ್ ರಸ್ತೆಗಳು ಕುಸಿಯುತ್ತಿರುವ ಹಿನ್ನೆಲೆ ► ಶಿರಾಡಿ, ಸಂಪಾಜೆ ಘಾಟ್ ರಸ್ತೆಗಳಲ್ಲಿ ಸಂಚಾರ ನಿಷೇಧ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.15. ಭಾರೀ ಮಳೆಯಿಂದಾಗಿ ತತ್ತರಿಸಿರುವ ಶಿರಾಡಿ ಘಾಟ್ ಹಾಗೂ ಸಂಪಾಜೆ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಘಾಟ್ ಪ್ರದೇಶದ ಅಲ್ಲಲ್ಲಿ ಗುಡ್ಡು ಕುಸಿತದಂತಹ ಅಪಾಯಕಾರಿ ಸನ್ನಿವೇಶಗಳು ಉಂಟಾಗುತ್ತಿರುವ ಮತ್ತು ಹಲವು ವಾಹನಗಳ ಪ್ರಯಾಣಿಕರು ರಸ್ತೆ ತಡೆಯಿಂದಾಗಿ ಪರದಾಡಿದ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನಗಳನ್ನು ನಿಷೇಧಿಸಿ, ಮುಂದಿನ ಆದೇಶದ ವರೆಗೆ ವಾಹನಗಳು ಚಾರ್ಮಾಡಿ ಘಾಟಿಯಲ್ಲಿ ಮಾತ್ರ ಸಂಚರಿಸಬಹುದು ಎಂದು

ಭಾರೀ ಮಳೆಗೆ ಘಾಟ್ ರಸ್ತೆಗಳು ಕುಸಿಯುತ್ತಿರುವ ಹಿನ್ನೆಲೆ ► ಶಿರಾಡಿ, ಸಂಪಾಜೆ ಘಾಟ್ ರಸ್ತೆಗಳಲ್ಲಿ ಸಂಚಾರ ನಿಷೇಧ Read More »

ಕರ್ನಾಟಕ

ಸ್ವಾತಂತ್ರ್ಯೋತ್ಸವ ವಿಶೇಷ ► ಇಂದಿನಿಂದ ಕಡಬದ ದುರ್ಗಾಂಬಾ ಮೊಬೈಲ್ ಸ್ಟೋರ್ ನಲ್ಲಿ ‘ಫ್ರೀಡಂ ಸೇಲ್’

(ನ್ಯೂಸ್ ಕಡಬ) newskadaba.com ಕಡಬ, ಆ.15. ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಡಬದ ಶ್ರೀ ದುರ್ಗಾಂಬಾ ಮೊಬೈಲ್ ಸ್ಟೋರ್ ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಫ್ರೀಡಂ ಸೇಲ್ ಆರಂಭಗೊಂಡಿದೆ. ಆಗಸ್ಟ್ 15 ರಿಂದ 17 ರವರೆಗೆ ನಡೆಯಲಿರುವ ಈ ಫ್ರೀಡಂ ಸೇಲ್ ನಲ್ಲಿ ಅತೀ ಕಡಿಮೆ ದರದಲ್ಲಿ ವಿವಿಧ ಕಂಪೆನಿಗಳ ಮೊಬೈಲ್ ಹಾಗೂ ಬಿಡಿಭಾಗಗಳು ಗ್ರಾಹಕರಿಗೆ ದೊರೆಯಲಿದ್ದು, ಲಕ್ಕೀ ಕೂಪನ್ ಸಿಗಲಿದೆ. ಪ್ರತಿಯೊಂದು ಸ್ಮಾರ್ಟ್ ಫೋನ್ ಖರೀದಿಯೊಂದಿಗೆ 8 ಜಿಬಿ ಮೆಮೊರಿ ಕಾರ್ಡ್ ಗಳು ಉಚಿತವಾಗಿ ಸಿಗಲಿದ್ದು, ಗ್ರಾಹಕರು

ಸ್ವಾತಂತ್ರ್ಯೋತ್ಸವ ವಿಶೇಷ ► ಇಂದಿನಿಂದ ಕಡಬದ ದುರ್ಗಾಂಬಾ ಮೊಬೈಲ್ ಸ್ಟೋರ್ ನಲ್ಲಿ ‘ಫ್ರೀಡಂ ಸೇಲ್’ Read More »

ಕರಾವಳಿ

ಪೆರಿಯಶಾಂತಿ: ಭಾರೀ ಗಾಳಿಗೆ ಕಾರಿನ ಮೇಲೆ ಬಿದ್ದ ಬೃಹತ್ ಮರ ► ಮುಂದೇನಾಯಿತು ಗೊತ್ತೇ..?

(ನ್ಯೂಸ್ ಕಡಬ) newskadaba.com ಕಡಬ, ಆ.13. ಕರಾವಳಿ ಪ್ರದೇಶದಲ್ಲಿ ಮಳೆಯ ಅಬ್ಬರ ತೀವ್ರಗೊಂಡಿರುವುದರ ನಡುವೆಯೇ ಟೂರಿಸ್ಟ್ ಕಾರೊಂದರ ಮೇಲೆ ಮರ ಬಿದ್ದು ಐವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಪೆರಿಯಶಾಂತಿ ಸಮೀಪ ಸೋಮವಾರ ಸಂಜೆ ನಡೆದಿದೆ. ಬೆಂಗಳೂರು ಮೂಲದ ಯಾತ್ರಾರ್ಥಿಗಳಿದ್ದ ಟೊಯೋಟಾ ಇಟಿಯೋಸ್ ಕಾರು ಸುಬ್ರಹ್ಮಣ್ಯದಿಂದ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ಸಮಯ ಪೆರಿಯಶಾಂತಿ ತಲುಪಿದಾಗ ಬೃಹತ್ ಗಾತ್ರದ ಮರವೊಂದು ಕಾರಿನ ಮೇಲೆ ಬಿದ್ದಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು,

ಪೆರಿಯಶಾಂತಿ: ಭಾರೀ ಗಾಳಿಗೆ ಕಾರಿನ ಮೇಲೆ ಬಿದ್ದ ಬೃಹತ್ ಮರ ► ಮುಂದೇನಾಯಿತು ಗೊತ್ತೇ..? Read More »

ಕರಾವಳಿ

ಕರಾವಳಿಯಲ್ಲಿ ಮುಂದುವರಿದ ಮಳೆಯ ಅಬ್ಬರ ► ನಾಳೆ ಶಾಲಾ ಕಾಲೇಜುಗಳಿಗೆ ಮತ್ತೆ ರಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.13. ಕರಾವಳಿಯಲ್ಲಿ ಮಳೆಯ ಅಬ್ಬರ ಜೋರಾಗಿರುವ ಹಿನ್ನೆಲೆಯಲ್ಲಿ ಆಗಸ್ಟ್ 14ರಂದು ದ.ಕ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಡಾ.ಸಸಿಕಾಂತ್ ಸೆಂಥಿಲ್ ರಜೆ ಘೋಷಿಸಿ ಆದೇಶಿಸಿದ್ದಾರೆ. ಮಳೆಯ ಅಬ್ಬರ ಜೋರಾಗಿದ್ದು, ನದಿ ತೊರೆಗಳು ತುಂಬಿ ತುಳುಕುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.

ಕರಾವಳಿಯಲ್ಲಿ ಮುಂದುವರಿದ ಮಳೆಯ ಅಬ್ಬರ ► ನಾಳೆ ಶಾಲಾ ಕಾಲೇಜುಗಳಿಗೆ ಮತ್ತೆ ರಜೆ Read More »

ಕರಾವಳಿ

ಇಂದು ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.13. ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಇಂದು ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಆ.13 ರಂದು ಮಧ್ಯಾಹ್ನ 1:30ಕ್ಕೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಿಂದ ಹೊರಟು ರಸ್ತೆಯ ಮೂಲಕ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳಕ್ಕೆ ಸಂಜೆ 4:30ಕ್ಕೆ ಮುಖ್ಯಮಂತ್ರಿ ಆಗಮಿಸಲಿದ್ದಾರೆ. ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆಯಲಿದ್ದಾರೆ. ಸಂಜೆ 6 ಗಂಟೆಗೆ ಧರ್ಮಸ್ಥಳದಿಂದ ಹೊರಟು ರಾತ್ರಿ 7 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಆ.14 ರಂದು

ಇಂದು ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ Read More »

ಕರ್ನಾಟಕ

ಹೊಸ್ಮಠ ಸೇತುವೆಯ ಮೇಲೆ ನೆರೆ ನೀರು ಇರುವಾಗಲೇ ವಾಹನ ದಾಟಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ► ಪೊಲೀಸರಿಗೊಂದು ನ್ಯಾಯ, ನಮಗೊಂದು ನ್ಯಾಯವೇ..?ಸಾರ್ವಜನಿಕರ ಆಕ್ರೋಶ..!!

ಕಡಬ: ಹೊಸಮಠ ಸೇತುವೆಯ ಮೇಲೆ ನೆರೆ ನೀರು ಹರಿಯುತ್ತಿದ್ದ ಸಂದರ್ಭದಲ್ಲಿ ಸೇತುವೆ ಬಳಿ ಕಾವಲು ನಿರತರಾಗಿದ್ದ ಗೃಹ ರಕ್ಷಕ ಸಿಬ್ಬಂದಿಗಳನ್ನು ದಬಾಯಿಸಿ, ಮುಚ್ಚಲಾಗಿದ್ದ ರಕ್ಷಣಾ ಗೇಟುಗಳನ್ನು ತೆರೆದು ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರು ಅಪಾಯಕಾರಿ ರೀತಿಯಲ್ಲಿ ತನ್ನ ಇಲಾಖಾ ವಾಹನವನ್ನು ಸೇತುವೆಯ ಮೇಲಿನ ನೆರೆ ನೀರಿನಲ್ಲಿ ದಾಟಿಸಿದ ಘಟನೆ ಆ.12ರಂದು ಸಂಜೆ 6.30ರ ಸುಮಾರಿಗೆ ಸಂಭವಿಸಿದೆ. ರವಿವಾರ ಮಧ್ಯಾಹ್ನದಿಂದಲೇ ಸೇತುವೆಯ ಮೇಲೆ ನೆರೆ ನೀರು ಹರಿಯುತ್ತಿದ್ದುದರಿಂದ ಯಾವುದೇ ವಾಹನಗಳು ಸೇತುವೆ ಮೇಲೆ ಸಂಚರಿಸಿ ಅವಘಡ ಸಂಭವಿಸಬಾರದೆಂಬ

ಹೊಸ್ಮಠ ಸೇತುವೆಯ ಮೇಲೆ ನೆರೆ ನೀರು ಇರುವಾಗಲೇ ವಾಹನ ದಾಟಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ► ಪೊಲೀಸರಿಗೊಂದು ನ್ಯಾಯ, ನಮಗೊಂದು ನ್ಯಾಯವೇ..?ಸಾರ್ವಜನಿಕರ ಆಕ್ರೋಶ..!! Read More »

ಕರ್ನಾಟಕ
Scroll to Top