ಸುಳ್ಯ: ಹಬ್ಬಕ್ಕೆ ಬಟ್ಟೆ ಖರೀದಿಸುವ ವಿಚಾರದಲ್ಲಿ ಪತಿ – ಪತ್ನಿಯ ನಡುವೆ ಜಗಳ ► ಪತ್ನಿಯ ಕೊಲೆಯಲ್ಲಿ ಅಂತ್ಯ

(ನ್ಯೂಸ್ ಕಡಬ) newskadaba.com ಸುಳ್ಯ, ಆ.17. ಹಬ್ಬಕ್ಕೆ ಬಟ್ಟೆ ಖರೀದಿಸುವ ವಿಚಾರದಲ್ಲಿ ಪತಿ – ಪತ್ನಿಯ ನಡುವೆ ಜಗಳವುಂಟಾಗಿ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಸುಳ್ಯದಲ್ಲಿ ಬುಧವಾರ ರಾತ್ರಿ ನಡೆದಿದೆ.

ಸುಳ್ಯದ ಜ್ಯೋತಿ ಸರ್ಕಲ್ ನಿವಾಸಿ ಇಸ್ಮಾಯಿಲ್‌ ಎಂಬವರ ಪುತ್ರ ಫಿರೋಜ್‌ ಹಾಗೂ ಕಾರ್ಕಳದ ಅಬ್ದುಲ್ ರಶೀದ್‌ರ ಪುತ್ರಿ ಆಯಿಶಾ ನಡುವೆ ಹಬ್ಬಕ್ಕೆ ಬಟ್ಟೆ ಖರೀದಿಸುವ ವಿಚಾರದಲ್ಲಿ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತೆರಳಿ ಗಂಡ ಫಿರೋಜ್ ಆಯಿಶಾಳನ್ನು ಶಾಲಿನಿಂದ ಗಂಟಲಿಗೆ ಬಿಗಿದಿದ್ದು, ಆ ವೇಳೆ ಆಯಿಶಾ ಮೃತಪಟ್ಟಿದ್ದಾರೆ. ಈ ಬಗ್ಗೆ ಆಯಿಶಾ ಮನೆಯವರು ನೀಡಿದ ದೂರಿನ ಮೇರೆಗೆ ಆರೋಪಿ ಫಿರೋಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Scroll to Top