News Kadaba Desk

ಕಡಬ ಪರಿಸರದಲ್ಲಿ ವ್ಯಾಪಿಸಿದ ಡೆಂಗ್ಯೂ ಪ್ರಕರಣ ➤ ಸ್ಥಳಕ್ಕೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಭೇಟಿ

ಕಡಬ, ಜೂ.27. ಇಲ್ಲಿನ ಕೋಡಿಂಬಾಳ ಗ್ರಾಮದ ಕುಕ್ಕರೆಬೆಟ್ಟು ಪ್ರದೇಶದ ಎಲ್ಲಾ ಮನೆಗಳಿಗೆ ತೆರಳಿ ಪರಿಸರದಲ್ಲಿ ಸ್ವಚ್ಚತೆ ಜಾಗೃತಿ ಮೂಡಿಸಲಾಗುತ್ತಿದೆ. ಫಾಗಿಂಗ್ ಕಾರ್ಯ ಆರಂಭಿಸಲಾಗಿದೆ. ಜ್ವರ ನಿಯಂತ್ರಣವಾಗುವ ವರೆಗೆ ಫಾಗಿಂಗ್ ಮುಂದುವರಿಸಲಾಗುವುದು ಎಂದು ಆರೋಗ್ಯ ಇಲಾಖಾ ಸರ್ವೇಕ್ಷಣಾ ಪ್ರಭಾರ ಅಧಿಕಾರಿ ಡಾ. ನವೀನ್‍ ಚಂದ್ರ ಹೇಳಿದರು. ಅವರು ಶಂಕಿತ ಡೆಂಗ್ಯೂ ಜ್ವರದಿಂದ ಮೃತಪಟ್ಟ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಕುಕ್ಕೆರೆಬೆಟ್ಟು ನಿವಾಸಿ ಆನಂದ ನಾೈಕ್ ಎಂಬವರ ಪತ್ನಿ ವೀಣಾ ಅವರ ಮನೆಗೆ ಆರೋಗ್ಯ ಇಲಾಖಾ ಅಧಿಕಾರಿಗಳು ಗುರುವಾರ ಭೇಟಿ […]

ಕಡಬ ಪರಿಸರದಲ್ಲಿ ವ್ಯಾಪಿಸಿದ ಡೆಂಗ್ಯೂ ಪ್ರಕರಣ ➤ ಸ್ಥಳಕ್ಕೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಭೇಟಿ Read More »

ಕರಾವಳಿ

ನೀವು ಡಿಗ್ರಿ ಮುಗಿಸಿ ಕೆಲಸಕ್ಕಾಗಿ ಅಲೆದಾಡುತ್ತಿದ್ದೀರಾ..? ➤ ಕಡಬದ ರತ್ನಶ್ರೀ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಮ್ಯಾನೇಜರ್ ಮತ್ತು ಕ್ಲರ್ಕ್ ಬೇಕಾಗಿದ್ದಾರೆ

(ನ್ಯೂಸ್ ಕಡಬ) newskadaba.com ಕಡಬ, ಜೂ.27. ಇಲ್ಲಿನ ಮುಖ್ಯ ರಸ್ತೆಯ ರತ್ನಶ್ರೀ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ರತ್ನಶ್ರೀ ಸೌಹಾರ್ದ ಸಹಕಾರಿ ನಿಯಮಿತ (ರಿ.) ಸಂಸ್ಥೆಗೆ ಮ್ಯಾನೇಜರ್ ಮತ್ತು ಕ್ಲರ್ಕ್ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಕಂಪ್ಯೂಟರ್ ಪರಿಣತಿಯೊಂದಿಗೆ ಸಹಕಾರಿ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ ಅನುಭವವಿರುವ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಯಾವುದೇ ಡಿಗ್ರಿ ಮುಗಿಸಿರುವ ಆಸಕ್ತ ಅಭ್ಯರ್ಥಿಗಳು ಜುಲೈ 05 ರ ಒಳಗಾಗಿ ಸ್ವ-ವಿವರಗಳೊಂದಿಗೆ ರತ್ನಶ್ರೀ ಸೌ.ಸ.ನಿ. ಅಧ್ಯಕ್ಷ ರಾಧಾಕೃಷ್ಣ ಕೆ.ಎಸ್. 9448125133, ಇಮೇಲ್ – rathnashree11@gmail.com

ನೀವು ಡಿಗ್ರಿ ಮುಗಿಸಿ ಕೆಲಸಕ್ಕಾಗಿ ಅಲೆದಾಡುತ್ತಿದ್ದೀರಾ..? ➤ ಕಡಬದ ರತ್ನಶ್ರೀ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಮ್ಯಾನೇಜರ್ ಮತ್ತು ಕ್ಲರ್ಕ್ ಬೇಕಾಗಿದ್ದಾರೆ Read More »

ಕರಾವಳಿ

ಕಡಬ: ಡೆಂಗ್ಯೂ ಜ್ವರಕ್ಕೆ ಮಹಿಳೆ ಬಲಿ ➤ ಪರಿಸರದಲ್ಲಿ ವ್ಯಾಪಕವಾಗಿ ಹರಡಿದ ಡೆಂಗ್ಯೂ

(ನ್ಯೂಸ್ ಕಡಬ) newskadaba.com ಕಡಬ, ಜೂ.26. ಡೆಂಗ್ಯೂ ಜ್ವರಕ್ಕೆ ತುತ್ತಾದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ. ಮೃತ ಮಹಿಳೆಯನ್ನು ಕೋಡಿಂಬಾಳ ಗ್ರಾಮದ ಕುಕ್ಕರೆಬೆಟ್ಟು ನಿವಾಸಿ ಆನಂದ ನಾಯ್ಕ್ ಎಂಬವರ ಪತ್ನಿ ವೀಣಾ (43) ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ವೀಣಾ ರವರಿಗೆ ಕಡಬದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮಹಿಳೆಯ ದೇಹದಲ್ಲಿ ಬಿಳಿರಕ್ತದ ಕಣ ಕಡಿಮೆಯಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಸೋಮವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಡಬ: ಡೆಂಗ್ಯೂ ಜ್ವರಕ್ಕೆ ಮಹಿಳೆ ಬಲಿ ➤ ಪರಿಸರದಲ್ಲಿ ವ್ಯಾಪಕವಾಗಿ ಹರಡಿದ ಡೆಂಗ್ಯೂ Read More »

ಕರಾವಳಿ

ಕಡಬದ ಪ್ರೇಮ್ ಫ್ಯಾಷನ್ ನಲ್ಲಿ ಮಾನ್ಸೂನ್ ‘ಸಾರಿ ಮೇಳ – 2019’ ಆರಂಭ ➤ ಫ್ಯಾನ್ಸಿ, ಕಾಟನ್, ಪೂನಂ ಸೀರೆಗಳ ಬೃಹತ್ ಸಂಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಜೂ.25. ಇಲ್ಲಿನ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪಂಚಾಯತ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಪ್ರೇಮ್ ಫ್ಯಾಷನ್ ನಲ್ಲಿ ‘ಸಾರೀ ಫೆಸ್ಟ್ – 2019’ ಮಾನ್ಸೂನ್ ಸಾರಿ ಮೇಳ ಆರಂಭಗೊಂಡಿದೆ. ಬದಲಾಗುತ್ತಿರುವ ಫ್ಯಾಶನ್ ಲೋಕಕ್ಕೆ ಹೊಂದಿಕೊಳ್ಳುವಂತಹ ಉನ್ನತ ಗುಣಮಟ್ಟದ ಫ್ಯಾನ್ಸಿ, ಕಾಟನ್, ಪೂನಂ ಸೀರೆಗಳ ಬೃಹತ್ ಸಂಗ್ರಹದೊಂದಿಗೆ ಟಾಪ್ಸ್ ಮತ್ತು ಲೆಗ್ಗಿನ್ಸ್ ಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದ್ದು, ಪುರುಷ ಉಡುಪಿನ ಮೇಲೂ ಭಾರೀ ದರಕಡಿತ ಮಾರಾಟ ಲಭ್ಯವಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನವನ್ನು

ಕಡಬದ ಪ್ರೇಮ್ ಫ್ಯಾಷನ್ ನಲ್ಲಿ ಮಾನ್ಸೂನ್ ‘ಸಾರಿ ಮೇಳ – 2019’ ಆರಂಭ ➤ ಫ್ಯಾನ್ಸಿ, ಕಾಟನ್, ಪೂನಂ ಸೀರೆಗಳ ಬೃಹತ್ ಸಂಗ್ರಹ Read More »

ಕರಾವಳಿ

ಉಪ್ಪಿನಂಗಡಿ: ಜೀಪು – ಟ್ಯಾಂಕರ್ ಢಿಕ್ಕಿ ➤ ಚರಂಡಿಗೆ ಬಿದ್ದ ಜೀಪು, ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ.25. ಟ್ಯಾಂಕರ್ ಹಾಗೂ ಜೀಪು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಜೀಪು ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ನೀರಕಟ್ಟೆ ಎಂಬಲ್ಲಿ ಮಂಗಳವಾರದಂದು ಸಂಭವಿಸಿದೆ. ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ತೆರಳುತ್ತಿದ್ದ ಖಾಸಗಿ ಜೀಪು ಹಾಗೂ ವಿರುದ್ಧ ದಿಕ್ಕಿನಿಂದ ಆಗಮಿಸುತ್ತಿದ್ದ ಆಯಿಲ್ ಸಾಗಾಟದ ಟ್ಯಾಂಕರ್ ನಡುವೆ ನೀರಕಟ್ಟೆ ಸಮೀಪ ಢಿಕ್ಕಿಯಾಗಿದೆ. ಘಟನೆಯಲ್ಲಿ ಜೀಪು ನೀರಕಟ್ಟೆ ಕಿರು ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಜೀಪು

ಉಪ್ಪಿನಂಗಡಿ: ಜೀಪು – ಟ್ಯಾಂಕರ್ ಢಿಕ್ಕಿ ➤ ಚರಂಡಿಗೆ ಬಿದ್ದ ಜೀಪು, ಚಾಲಕನಿಗೆ ಗಾಯ Read More »

ಕರಾವಳಿ

ಮಾಣಿ: ಖಾಸಗಿ ಬಸ್ಸುಗಳಿಗೆ ಕಲ್ಲೆಸೆದ ದುಷ್ಕರ್ಮಿಗಳು ➤ ಮೂರು ಬಸ್ಸುಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.25. ಖಾಸಗಿ ಬಸ್ಸುಗಳಿಗೆ ದುಷ್ಕರ್ಮಿಗಳು ಕಲ್ಲು ತೂರಿ ಹಾನಿಗೈದ ಘಟನೆ ಮಂಗಳವಾರ ಬೆಳಿಗ್ಗೆ ಮಾಣಿ ಪರಿಸರದಲ್ಲಿ ನಡೆದಿದೆ. ಪುತ್ತೂರು – ಮಂಗಳೂರು ನಡುವೆ ಸಂಚರಿಸುತ್ತಿದ್ದ ಸೆಲೀನಾ ಸಂಸ್ಥೆಗೆ ಸೇರಿದ ಎರಡು ಬಸ್ ಗಳು ಹಾಗೂ ಸೇಫ್ ವೇ ಸಂಸ್ಥೆಯ ಒಂದು ಬಸ್ ಗೆ ಮಾಣಿ ಸಮೀಪದ ಸೂರಿಕುಮೇರ್ ಹಾಗೂ ಕುದ್ರೆಬೆಟ್ಟು ಎಂಬಲ್ಲಿ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ‌. ಘಟನೆಯಲ್ಲಿ ಬಸ್ಸಿನ ಗಾಜು ಸಂಪೂರ್ಣ ಹಾನಿಗೀಡಾಗಿದ್ದು, ಚಾಲಕರು ಸೇರಿದಂತೆ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ‌. ಸ್ಥಳಕ್ಕೆ

ಮಾಣಿ: ಖಾಸಗಿ ಬಸ್ಸುಗಳಿಗೆ ಕಲ್ಲೆಸೆದ ದುಷ್ಕರ್ಮಿಗಳು ➤ ಮೂರು ಬಸ್ಸುಗಳಿಗೆ ಹಾನಿ Read More »

ಕರಾವಳಿ

‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ನೋಂದಣಿಗೆ ನಾಳೆ ಕೊನೆಯ ದಿನ ➤ ಹೊಸ ಯೋಜನೆಯಡಿ ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂ. ಜಮೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ.24. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಎಲ್ಲಾ ರೈತರಿಗೆ ವರ್ಷಕ್ಕೆ 6000 ರೂಪಾಯಿ ನೀಡಲಾಗುತ್ತಿದ್ದು, ಈ ಯೋಜನೆಯ ನೋಂದಾಣಿಗೆ 25 ಜೂನ್ 2019 ಕೊನೆಯ ದಿನವಾಗಿದೆ. ಎಲ್ಲ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ಮೊದಲ ಪುಟದ ಪ್ರತಿ ಹಾಗೂ ಆಧಾರ್ ಅನುಮತಿ ಪತ್ರ (ಕಚೇರಿಯಲ್ಲಿ ಪಡೆದು ಅಲ್ಲೇ ಸಹಿ ಮಾಡಿ ನೀಡುವುದು), ಸರ್ವೇ ನಂಬರ್ ವಿವರಗಳನ್ನು ಆಧಾರ್ ಪ್ರತಿ

‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ನೋಂದಣಿಗೆ ನಾಳೆ ಕೊನೆಯ ದಿನ ➤ ಹೊಸ ಯೋಜನೆಯಡಿ ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂ. ಜಮೆ Read More »

ರಾಷ್ಟ್ರೀಯ ನ್ಯೂಸ್

ಇಡ್ಯಡ್ಕ ಸರಕಾರಿ ಶಾಲೆಯಲ್ಲಿ ಪರಿಸರ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ ➤ ಶಾಲಾ ಆವರಣದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಜೂ.24. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಇಡ್ಯಡ್ಕ ಶಾಲೆಯಲ್ಲಿ ಪರಿಸರ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮವು ಶಾಲಾ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ಉಮೇಶ ಬಿ. ಮಾತನಾಡಿ, ಪೂಜ್ಯ ಖಾವಂದರ ಆಶಯದಂತೆ ಪ್ರತಿಯೊಬ್ಬರು ತಿಂಗಳಿಗೊಂದರಂತೆ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಸುಮಾಧರ ಇಡ್ಯಡ್ಕ

ಇಡ್ಯಡ್ಕ ಸರಕಾರಿ ಶಾಲೆಯಲ್ಲಿ ಪರಿಸರ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ ➤ ಶಾಲಾ ಆವರಣದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಚಾಲನೆ Read More »

ಕರಾವಳಿ

ಕಡಬ: ಪಿಕಪ್ ವಾಹನದಲ್ಲಿ ಅಕ್ರಮ ದನ ಸಾಗಾಟ ➤ ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಸಂಘ ಪರಿವಾರದ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ಕಡಬ, ಜೂ.22. ಪಿಕಪ್ ವಾಹನವೊಂದರಲ್ಲಿ ದನ ಸಾಗಾಟುತ್ತಿದ್ದುದನ್ನು ಪತ್ತೆ ಹಚ್ಚಿರುವ ಸಂಘ ಪರಿವಾರದ ಕಾರ್ಯಕರ್ತರು ಕಡಬ ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ಮುಂಜಾನೆ ಕೋಡಿಂಬಾಳದಲ್ಲಿ ನಡೆದಿದೆ. ಕಡಬದ ವಿದ್ಯಾನಗರ ನಿವಾಸಿ ಶೇಖರ್ ಎಂಬವರಿಗೆ ಸೇರಿದ ಗಜಕೇಸರಿ ಹೆಸರಿನ ಪಿಕಪ್ ವಾಹನದಲ್ಲಿ ದನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂಬ ಮಾಹಿಯಿಯ ಮೇರೆಗೆ ತಡೆಹಿಡಿದ ಸಂಘ ಪರಿವಾರದ ಕಾರ್ಯಕರ್ತರು ಪಿಕಪ್ ವಾಹನ, ದನ ಸಹಿತ ಚಾಲಕ ಶೇಖರ್ ಹಾಗೂ ತಂಗಚ್ಚನ್ ಎಂಬವರನ್ನು ಕಡಬ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಡಬ: ಪಿಕಪ್ ವಾಹನದಲ್ಲಿ ಅಕ್ರಮ ದನ ಸಾಗಾಟ ➤ ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಸಂಘ ಪರಿವಾರದ ಕಾರ್ಯಕರ್ತರು Read More »

ಕರಾವಳಿ

ಸುಬ್ರಹ್ಮಣ್ಯದಿಂದ ಕಡಬ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಬಸ್ ಅಪಘಾತ ➤ ಚಾಲಕನ ಸಮಯ ಪ್ರಜ್ಞೆಯಿಂದ ಬದುಕಿತು 40 ಬಡ ಜೀವ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ.19. ಕೆಎಸ್ಸಾರ್ಟಿಸಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಟ್ಯಾಂಕರೊಂದು ಓವರ್ ಟೇಕ್ ಮಾಡುವ ಭರದಲ್ಲಿ ಬಸ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಿದರಾದರೂ ಬಸ್ ರಸ್ತೆ ಬದಿಯ ಚರಂಡಿಗೆ ವಾಲಿದ ಘಟನೆ ಬುಧವಾರದಂದು ಮಾಣಿಯಲ್ಲಿ ಸಂಭವಿಸಿದೆ. ಸುಬ್ರಹ್ಮಣ್ಯದಿಂದ ಕಡಬ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮಾಣಿ ಸಮೀಪದ ಅಳೀರ ಎಂಬಲ್ಲಿ ವಿರುದ್ಧ ದಿಕ್ಕಿನಿಂದ ಬೇರೊಂದು ವಾಹನವನ್ನು ಒವರ್ ಟೇಕ್ ಮಾಡುತ್ತಿದ್ದ ಟ್ಯಾಂಕರ್ ಬಸ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ಚರಂಡಿಗೆ

ಸುಬ್ರಹ್ಮಣ್ಯದಿಂದ ಕಡಬ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಬಸ್ ಅಪಘಾತ ➤ ಚಾಲಕನ ಸಮಯ ಪ್ರಜ್ಞೆಯಿಂದ ಬದುಕಿತು 40 ಬಡ ಜೀವ Read More »

ಕರಾವಳಿ
Scroll to Top