ಉಪ್ಪಿನಂಗಡಿ: ಜೀಪು – ಟ್ಯಾಂಕರ್ ಢಿಕ್ಕಿ ➤ ಚರಂಡಿಗೆ ಬಿದ್ದ ಜೀಪು, ಚಾಲಕನಿಗೆ ಗಾಯ



(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ.25. ಟ್ಯಾಂಕರ್ ಹಾಗೂ ಜೀಪು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಜೀಪು ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ನೀರಕಟ್ಟೆ ಎಂಬಲ್ಲಿ ಮಂಗಳವಾರದಂದು ಸಂಭವಿಸಿದೆ.







ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ತೆರಳುತ್ತಿದ್ದ ಖಾಸಗಿ ಜೀಪು ಹಾಗೂ ವಿರುದ್ಧ ದಿಕ್ಕಿನಿಂದ ಆಗಮಿಸುತ್ತಿದ್ದ ಆಯಿಲ್ ಸಾಗಾಟದ ಟ್ಯಾಂಕರ್ ನಡುವೆ ನೀರಕಟ್ಟೆ ಸಮೀಪ ಢಿಕ್ಕಿಯಾಗಿದೆ. ಘಟನೆಯಲ್ಲಿ ಜೀಪು ನೀರಕಟ್ಟೆ ಕಿರು ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಜೀಪು ಚಾಲಕನನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top