News Kadaba Desk

ಕೈಕಂಬ: ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ➤ ಮಗು ಸೇರಿದಂತೆ ಮೂವರು ಗಂಭೀರ, ಎಂಟು ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಜೂ.19. ಕಾರುಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಎಂಟು ಮಂದಿ ಗಾಯಗೊಂಡ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೈಕಂಬದಲ್ಲಿ ಬುಧವಾರ ಅಪರಾಹ್ನ ಸಂಭವಿಸಿದೆ. ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಕಾರು ಹಾಗೂ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ಕಾರುಗಳ ಮಧ್ಯೆ ಕೈಕಂಬ ಸಮೀಪ ಮುಖಾಮುಖಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಮಗು ಸೇರಿದಂತೆ ಮೂವರು ಗಂಭೀರ ಗಾಯಗಳೊಂದಿಗೆ ಒಟ್ಟು ಎಂಟು ಮಂದಿ ಗಾಯಾಳುಗಳನ್ನು ಕಡಬ, ಸುಬ್ರಹ್ಮಣ್ಯ, ನೆಲ್ಯಾಡಿ ಹಾಗೂ ಶಿರಾಡಿಯ 108 ಆಂಬ್ಯುಲೆನ್ಸ್ […]

ಕೈಕಂಬ: ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ➤ ಮಗು ಸೇರಿದಂತೆ ಮೂವರು ಗಂಭೀರ, ಎಂಟು ಮಂದಿಗೆ ಗಾಯ Read More »

ಕರಾವಳಿ

ಕಡಬ: ಲಾರಿ – ಕಾರು – ಸ್ಕೂಟರ್ ಮಧ್ಯೆ ಸರಣಿ ಅಪಘಾತ ➤ ಮೂವರು ಗಂಭೀರ, ಆರು ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಜೂ.19. ಲಾರಿ, ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿ ಆರು ಮಂದಿ ಗಾಯಗೊಂಡ ಘಟನೆ ಕಡಬದ ಹಳೇಸ್ಟೇಷನ್ ಸಮೀಪದ ತಿರುವಿನಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಕಡಬದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಲಾರಿ ಹಾಗೂ ವಿರುದ್ಧ ದಿಕ್ಕಿನಿಂದ ಸಾಗುತ್ತಿದ್ದ ಮಹೀಂದ್ರಾ ಮರಾಝ್ಝೋ ಕಾರು, ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಐವರು ಗಂಭೀರ ಗಾಯಗೊಂಡಿದ್ದು, ದ್ವಿಚಕ್ರ ವಾಹನ ಸವಾರರೂ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡ ಗಾಯಾಳುಗಳನ್ನು ಬಳ್ಳಾರಿ ಮೂಲದವರೆಂದು

ಕಡಬ: ಲಾರಿ – ಕಾರು – ಸ್ಕೂಟರ್ ಮಧ್ಯೆ ಸರಣಿ ಅಪಘಾತ ➤ ಮೂವರು ಗಂಭೀರ, ಆರು ಮಂದಿಗೆ ಗಾಯ Read More »

ಕರಾವಳಿ

ಕಡಬದ ‘ಮೈಸೂರ್ ಗಾರ್ಮೆಂಟ್ಸ್’ ನಲ್ಲಿ ಮಾನ್ಸೂನ್ ಸೇಲ್ ➤ ಜೂನ್ 30 ರ ವರೆಗೆ ಎಲ್ಲಾ ಬ್ರಾಂಡೆಡ್ ವಸ್ತ್ರಗಳಲ್ಲಿ 25% ಕಡಿತ

(ನ್ಯೂಸ್ ಕಡಬ) newskadaba.com ಕಡಬ, ಜೂ.17. ಕಡಬದ ಮುಖ್ಯ ರಸ್ತೆಯ ಶಿವ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ವಸ್ತ್ರ ಮಳಿಗೆ ‘ಮೈಸೂರ್ ಗಾರ್ಮೆಂಟ್ಸ್’ ನಲ್ಲಿ ಮಾನ್ಸೂನ್ ಸೇಲ್ ವಿಶೇಷ ಆಫರ್ ನೀಡಲಾಗಿದೆ. ಕಾಂಜೀವರಂ ಸೀರೆಗಳು, ಫ್ಯಾನ್ಸಿ ಸೀರೆಗಳು, ಸೂಟಿಂಗ್, ಶರ್ಟಿಂಗ್, ಮಕ್ಕಳ ಉಡುಪುಗಳು ಸೇರಿದಂತೆ ಎಲ್ಲಾ ರೀತಿಯ ಡ್ರೆಸ್ ಮೆಟೀರಿಯಲ್ಸ್ ಗಳಿಗೆ ಮಾನ್ಸೂನ್ ಸೇಲ್ ಅಂಗವಾಗಿ ಜೂನ್ 16 ರಿಂದ 30 ರ ವರೆಗೆ ಫ್ಲ್ಯಾಟ್ 25% ಡಿಸ್ಕೌಂಟ್ ಸೇಲ್ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ

ಕಡಬದ ‘ಮೈಸೂರ್ ಗಾರ್ಮೆಂಟ್ಸ್’ ನಲ್ಲಿ ಮಾನ್ಸೂನ್ ಸೇಲ್ ➤ ಜೂನ್ 30 ರ ವರೆಗೆ ಎಲ್ಲಾ ಬ್ರಾಂಡೆಡ್ ವಸ್ತ್ರಗಳಲ್ಲಿ 25% ಕಡಿತ Read More »

ಕರಾವಳಿ

ನೆಲ್ಯಾಡಿ: ಸಿಡಿಲು ಬಡಿದು ಯುವತಿಗೆ ಗಾಯ ➤ ಮೂರು ಮನೆಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ.14. ಸಿಡಿಲು ಬಡಿದು ಯುವತಿಯೋರ್ವಳು ಗಾಯಗೊಂಡು ಮೂರು ಮನೆಗಳಿಗೆ ಹಾನಿಯಾದ ಘಟನೆ ಗೋಳಿತೊಟ್ಟು ಸಮೀಪದ ಮರ್ಲಾಪು ಎಂಬಲ್ಲಿ ಗುರುವಾರದಂದು ನಡೆದಿದೆ. ಮರ್ಲಾಪು ನಿವಾಸಿಗಳಾದ ಆದಮ್, ಅಬ್ದುಲ್ ಲತೀಫ್, ಆಸಿಯಮ್ಮ ಎಂಬವರ ಮನೆಗೆ ಸಿಡಿಲು ಬಡಿದಿದ್ದು ಮನೆ ಹಾನಿಗೊಂಡಿದೆ. ಆಸಿಯಮ್ಮ ಎಂಬವರ ಪುತ್ರಿ ರಹೀಮತ್ ಎಂಬವರು ಗಾಯಗೊಂಡು ನೆಲ್ಯಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೆಲ್ಯಾಡಿ: ಸಿಡಿಲು ಬಡಿದು ಯುವತಿಗೆ ಗಾಯ ➤ ಮೂರು ಮನೆಗಳಿಗೆ ಹಾನಿ Read More »

ಕರಾವಳಿ

ಉಪ್ಪಿನಂಗಡಿ: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ.13. ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರದಂದು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರಿಯಡ್ಕ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಕೂವೆಚ್ಚಾರು ನಿವಾಸಿ ಮೋನಪ್ಪ ಗೌಡರ ಪುತ್ರಿ ತೇಜ(18) ಎಂದು ಗುರುತಿಸಲಾಗಿದೆ. ತೇಜ ಇಂದು ಬೆಳಿಗ್ಗೆ ಪೆರಿಯಡ್ಕದ ಹಾಲಿನ ಸೊಸೈಟಿಗೆ ಹಾಲು ತೆಗೆದುಕೊಂಡು ಹೋಗಿದ್ದು, ವಾಪಸ್ ಮನೆಗೆ ಬಾರದೆ ಇದ್ದ ಕಾರಣ ಮನೆಯವರು ಹುಡುಕಾಡಿದಾಗ ಕುಂಟಿನಿ ಎಂಬಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ಜಾಗದಲ್ಲಿ ಮರವೊಂದಕ್ಕೆ ನೇಣು ಬಿಗಿದು

ಉಪ್ಪಿನಂಗಡಿ: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ

ರಾಮಕುಂಜ: ಶಾಲಾ ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ➤ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಜೂ.13. ಖಾಸಗಿ ಶಾಲಾ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಗುರುವಾರ ಸಂಜೆ ರಾಮಕುಂಜದಲ್ಲಿ ಸಂಭವಿಸಿದೆ. ಗಾಯಾಳು ಸವಾರನನ್ನು ಕೊೈಲ ಗ್ರಾಮದ ನೆಲ್ಯೊಟ್ಟು ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ, ಇರ್ಫಾನ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಇರ್ಫಾನ್ ಇತ್ತೀಚೆಗೆ ಊರಿಗೆ ಬಂದಿದ್ದು, ಇಂದು ಬೆಂಗಳೂರಿಗೆ ಹೋಗುವವರಿದ್ದರು. ಗುರುವಾರ ಸಂಜೆ ತನ್ನ ದ್ವಿಚಕ್ರ ವಾಹನದಲ್ಲಿ ಉಪ್ಪಿನಂಗಡಿಗೆ ತೆರಳಿದ್ದು, ಮನೆಗೆ ಹಿಂತಿರುಗುತ್ತಿದ್ದಾಗ ರಾಮಕುಂಜ

ರಾಮಕುಂಜ: ಶಾಲಾ ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ➤ ಸವಾರ ಗಂಭೀರ Read More »

ಕರಾವಳಿ

ಕೊಣಾಜೆ: ಖಾಸಗಿ ಬಸ್ – ಬೈಕ್ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.13. ಖಾಸಗಿ ಬಸ್ ಹಾಗೂ ಸುಝುಕಿ ಜಿಕ್ಸರ್‌ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕೋಣಾಜೆ ಸಮೀಪದ ಅಸೈಗೋಳಿ ಎಂಬಲ್ಲಿ ಗುರುವಾರದಂದು ಸಂಭವಿಸಿದೆ. ಮೃತ ಸವಾರನನ್ನು ಪಜೀರ್ ನಿವಾಸಿ ಹರ್ಷಿತ್ ಎಂದು ಗುರುತಿಸಲಾಗಿದೆ. ಸ್ಟೇಟ್ ಬ್ಯಾಂಕ್ ನಿಂದ ಕೊಣಾಜೆ ಮಾರ್ಗವಾಗಿ ವಿಟ್ಲಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಹರ್ಷಿತ್ ಚಲಾಯಿಸುತ್ತಿದ್ದ ಬೈಕ್ ಅಸೈಗೋಳಿ ಸಮೀಪದ ತಿಬ್ಲೆಪದವು ತಿರುವಿನಲ್ಲಿ ಪರಸ್ಪರ ಢಿಕ್ಕಿಯಾಗಿ ಈ ದುರ್ಘಟನೆ

ಕೊಣಾಜೆ: ಖಾಸಗಿ ಬಸ್ – ಬೈಕ್ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಕಡಬ: ಕೆಎಸ್ಸಾರ್ಟಿಸಿ ಬಸ್ – ಬೈಕ್ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜೂ.13. ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯದಲ್ಲಿ ಸಂಭವಿಸಿದೆ. ಮೃತ ಸವಾರನನ್ನು ಬಲ್ಯ ಮದ್ರಾಡಿ ನಿವಾಸಿ ರಾಮಚಂದ್ರ ಗೌಡ ಎಂಬವರ ಪುತ್ರ ಮೋಕ್ಷಿತ್(21) ಎಂದು ಗುರುತಿಸಲಾಗಿದೆ. ಮೋಕ್ಷಿತ್ ತನ್ನ ಪಲ್ಸರ್ ಬೈಕಿನಲ್ಲಿ ಬಲ್ಯದಿಂದ ಕಡಬಕ್ಕೆ ತೆರಳುತ್ತಿದ್ದಾಗ ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿಯುಂಟಾಗಿ ಈ ದುರ್ಘಟನೆ ಸಂಭವಿಸಿದೆ‌. ಮೃತದೇಹವನ್ನು ಕಡಬ ಸಮುದಾಯ

ಕಡಬ: ಕೆಎಸ್ಸಾರ್ಟಿಸಿ ಬಸ್ – ಬೈಕ್ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಉಪ್ಪಿನಂಗಡಿ: ವಿದ್ಯುತ್ ಶಾಕ್ ಹೊಡೆದು ಲೈನ್ ಮ್ಯಾನ್ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.12. ವಿದ್ಯುತ್ ಶಾಕ್ ಗೆ ತುತ್ತಾಗಿ ಲೈನ್ ಮ್ಯಾನ್ ಓರ್ವರು ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ ಸಮೀಪದ ಬೇರಿಕೆ ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಮೃತ ಲೈನ್ ಮ್ಯಾನ್‌ ನನ್ನು ಮೂಲತಃ ದಾವಣಗೆರೆ ನಿವಾಸಿ ಉಪ್ಪಿನಂಗಡಿ ಮೆಸ್ಕಾಂ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಿಟ್ಯಾ ನಾಯಕ್(35) ಎಂದು ಗುರುತಿಸಲಾಗಿದೆ. ಬುಧವಾರದಂದು ಮೈನ್ ಲೈನ್ ದುರಸ್ಥಿಯ ಹಿನ್ನಲೆಯಲ್ಲಿ ಬೇರಿಕೆ ಪೊಲೀಸ್ ವಸತಿ ಗೃಹದ ಬಳಿ ಲೈನ್ ಆಫ್ ಮಾಡಿದ್ದು, ಸಂಜೆ ವೇಳೆಗೆ ದುರಸ್ತಿ ಮುಗಿಸಿ

ಉಪ್ಪಿನಂಗಡಿ: ವಿದ್ಯುತ್ ಶಾಕ್ ಹೊಡೆದು ಲೈನ್ ಮ್ಯಾನ್ ಮೃತ್ಯು Read More »

ಕರಾವಳಿ

➤➤ Breaking News ಕುಮಾರಧಾರ ನದಿಯಲ್ಲಿ ಸ್ನಾನಕ್ಕಿಳಿದ ಬಾಲಕ ನೀರುಪಾಲು

(ನ್ಯೂಸ್ ಕಡಬ) newskadaba.com ಕಡಬ, ಜೂ.12. ಸ್ನೇಹಿತರೊಂದಿಗೆ ಸ್ನಾನಕ್ಕೆಂದು ತೆರಳಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಆಲಂಕಾರು ಸಮೀಪದ ಶಾಂತಿಮೊಗರು ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಮೃತ ಬಾಲಕನನ್ನು ಸವಣೂರು ಸಮೀಪದ ಪರಣೆ ನಿವಾಸಿ ಹಮೀದ್ ಎಂಬವರ ಪುತ್ರ ಸವಣೂರು ಸ.ಪ.ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿ ಅಶ್ಫಾಕ್ ಎಂದು ಗುರುತಿಸಲಾಗಿದೆ. ಅಶ್ಫಾಕ್ ತನ್ನ ಸ್ನೇಹಿತರೊಂದಿಗೆ ಶಾಂತಿಮೊಗರು ಸೇತುವೆಯ ಬಳಿ ಸ್ನಾನಕ್ಕೆಂದು ಇಳಿದಿದ್ದು, ಈ ವೇಳೆ ನೀರಿನ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಆ ಬಳಿಕ

➤➤ Breaking News ಕುಮಾರಧಾರ ನದಿಯಲ್ಲಿ ಸ್ನಾನಕ್ಕಿಳಿದ ಬಾಲಕ ನೀರುಪಾಲು Read More »

ಕರಾವಳಿ
Scroll to Top