News Kadaba Desk

ಸಿಎಂ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ➤ ಹಲವು ದಿನಗಳ ರಾಜಕೀಯ ಪ್ರಹಸನಕ್ಕೆ ತೆರೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.26. ರಾಜಕೀಯ ಏಳು ಬೀಳುಗಳ ನಡುವೆ ಕೊನೆಗೂ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಘೋಷಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿಂದು ಏರ್ಪಡಿಸಿದ್ದ ಸಮಾರಂಭದಲ್ಲಿ ವಿದಾಯ ಭಾಷಣ ಮಾಡಿದ ಅವರು, ತಮ್ಮ ರಾಜಕೀಯ ಏಳು – ಬೀಳುಗಳ ಜೊತೆಗೆ ತನ್ನ ಸ್ಥಾನಕ್ಕೆ ರಾಜೀನಾಮೆಯನ್ನು ಘೋಷಿಸಿ ಭಾವುಕರಾದರು. ಅಪರಾಹ್ನ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.      

ಸಿಎಂ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ➤ ಹಲವು ದಿನಗಳ ರಾಜಕೀಯ ಪ್ರಹಸನಕ್ಕೆ ತೆರೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕನ್ನಡದ ಖ್ಯಾತ ಹಿರಿಯ ನಟಿ ಜಯಂತಿ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.26. ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ(76) ಅವರು ರವಿವಾರ ರಾತ್ರಿ ನಿಧನರಾಗಿದ್ದಾರೆ. 1945ರಲ್ಲಿ ಬಳ್ಳಾರಿಯಲ್ಲಿ ಜನಿಸಿದ್ದ ನಟಿ ಜಯಂತಿ ಅವರು ವಿಷ್ಣುವರ್ಧನ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ಶ್ರೀನಾಥ್ ಮುಂತಾದ ನಟರ ಜೊತೆ ಅಭಿನಯಿಸಿದ್ದಾರೆ. ಡಾ.ರಾಜ್ ಕುಮಾರ್ ಅವರ ಜೊತೆ 45 ಚಿತ್ರಗಳಲ್ಲಿ ನಟಿಸಿದ್ದರು. ಸುಮಾರು 500 ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಅವರು ಅಭಿನಯ ಶಾರದೆ ಎಂಬ ಬಿರುದಿಗೆ ಪಾತ್ರರಾಗಿದ್ದರು.      

ಕನ್ನಡದ ಖ್ಯಾತ ಹಿರಿಯ ನಟಿ ಜಯಂತಿ ವಿಧಿವಶ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಿಎಂ BSY ರಾಜೀನಾಮೆಗೆ ಇಂದೇ ನಿರ್ಣಾಯಕ..? ➤ ಪದತ್ಯಾಗಕ್ಕೆ ಕೌಂಟ್‌ಡೌನ್ ಸ್ಟಾರ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.25. ಬಿ.ಎಸ್. ಯಡಿಯೂರಪ್ಪರ ಸಿಎಂ ಸ್ಥಾನದ ‘ಪದತ್ಯಾಗ’ಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಇಂದು (ಜು.25) ವರಿಷ್ಠರಿಂದ ಸೂಚನೆ ಬರುವ ನಿರೀಕ್ಷೆ ಇರುವುದಾಗಿ ಸ್ವತಃ ಬಿಎಸ್‌ವೈ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ ಇಂದು ಸಂಜೆ ಹೈಕಮಾಂಡ್ ನಿಂದ ರಾಜೀನಾಮೆ ನೀಡುವಂತೆ ಆದೇಶ ಬರಲಿದ್ದು, ನಾಳೆ (ಜು.26) ಸಂಜೆ ಬಿಎಸ್‌ವೈ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಈ ನಡುವೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಇಂದು ರವಿವಾರ ಅವರು ಬೆಳಗಾವಿ ಜಿಲ್ಲೆಯಲ್ಲಿ

ಸಿಎಂ BSY ರಾಜೀನಾಮೆಗೆ ಇಂದೇ ನಿರ್ಣಾಯಕ..? ➤ ಪದತ್ಯಾಗಕ್ಕೆ ಕೌಂಟ್‌ಡೌನ್ ಸ್ಟಾರ್ಟ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹದಿಹರೆಯದ ಬಾಯ್ ಫ್ರೆಂಡ್ಸ್ ಜೊತೆಗೆ 38ರ ಆಂಟಿಯ ಲವ್ವಿಡವ್ವಿ ➤ ಸೋಮಾರಿ ಪತಿ ಮರ್ಡರ್

(ನ್ಯೂಸ್ ಕಡಬ) newskadaba.com ಅಹಮದಾಬಾದ್, ಜು.25. ಪತ್ನಿಯ ದುಡಿಮೆಯಲ್ಲಿ ಜೀವನ‌ ಸಾಗಿಸುತ್ತಿದ್ದ ಸೋಂಬೇರಿ ಗಂಡನನ್ನು 19 ವರ್ಷ ಪ್ರಾಯದ ತನ್ನಿಬ್ಬರು ಬಾಯ್ ಫ್ರೆಂಡ್ಸ್ ಜೊತೆ ಸೇರಿ ಕೊಲೆಗೈದ ಆರೋಪಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ. ಅಹಮದಾಬಾದ್ ನಲ್ಲಿ ಚಿಂದಿ ಆಯುತ್ತಿದ್ದ 35 ವರ್ಷದ ರೇಖಾ ಸೋಲಂಕಿ ಎಂಬಾಕೆಯು ತನ್ನ ಗಂಡ ಜಿಗ್ನೇಶ್ ನನ್ನು ಜುಲೈ 17 ರಂದು ತನ್ನಿಬ್ಬರು ಸ್ನೇಹಿತರ ಸಹಾಯದಿಂದ ಕೊಲೆಗೈದು ಮೃತದೇಹವನ್ನು ವಿಕ್ಟೋರಿಯಾ ಗಾರ್ಡನ್ ಬಳಿ ಎಸೆದಿದ್ದರು. ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ

ಹದಿಹರೆಯದ ಬಾಯ್ ಫ್ರೆಂಡ್ಸ್ ಜೊತೆಗೆ 38ರ ಆಂಟಿಯ ಲವ್ವಿಡವ್ವಿ ➤ ಸೋಮಾರಿ ಪತಿ ಮರ್ಡರ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

9ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ ➤ ಪೊಲೀಸರಿಂದ ಲುಕ್ಔಟ್ ನೋಟೀಸ್

(ನ್ಯೂಸ್ ಕಡಬ) newskadaba.com ಉಡುಪಿ, ಜು.25. ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿರುವ 9ನೇ ತರಗತಿ ವಿದ್ಯಾರ್ಥಿನಿ ಉಡುಪಿ ಜಿಲ್ಲೆಯ ಪೆರಂಪಳ್ಳಿ ನಿವಾಸಿ ಅವೀನಾ (16) ಎಂಬಾಕೆಯ ಪತ್ತೆಗಾಗಿ ಮಣಿಪಾಲ ಪೊಲೀಸರು ಲುಕ್ ಔಟ್ ನೋಟೀಸ್ ಜಾರಿಗೊಳಿಸಿದ್ದಾರೆ. 2021ರ ಏಪ್ರಿಲ್ 13 ರಂದು ಪೆರಂಪಲ್ಲಿಯಲ್ಲಿರುವ ತನ್ನ ಮನೆಯಿಂದ ಅವೀನಾ ಕಾಣೆಯಾಗಿದ್ದಳು. ಒಂಬತ್ತನೆಯ ತರಗತಿ ಓದುತ್ತಿದ್ದ ಈಕೆ ಕನ್ನಡ ಭಾಷೆ ಬಲ್ಲವಳಾಗಿದ್ದಾಳೆ. ಅವೀನಾ ನಾಪತ್ತೆಯಾದ ಬಗ್ಗೆ ಆಕೆಯ ತಾಯಿ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಾಲಕಿಯ ಬಗ್ಗೆ ಸುಳಿವು

9ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ ➤ ಪೊಲೀಸರಿಂದ ಲುಕ್ಔಟ್ ನೋಟೀಸ್ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಹುಚ್ಚು ನಾಯಿ ಕಡಿತ ➤ ವ್ಯಕ್ತಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಜು.23. ಹುಚ್ಚು ನಾಯಿಯೊಂದು ವ್ಯಕ್ತಿಯೋರ್ವರಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಿಂದ ವರದಿಯಾಗಿದೆ. ಕಲ್ಲುಗುಡ್ಡೆ ಪೇಟೆಯಲ್ಲಿ ಗುರುವಾರ ರಾತ್ರಿಯಿಂದಲೇ ಹುಚ್ಚು ನಾಯಿಯೊಂದು ಓಡಾಟ ನಡೆಸುತ್ತಿದ್ದು, ಪೇಟೆ, ಕಾಲೋನಿ ಸಹಿತ ಇತರೆಡೆ ಓಡಾಟ ನಡೆಸಿ ಆತಂಕ ಸೃಷ್ಟಿ ಮಾಡಿತ್ತು. ಮನೆಯಲ್ಲಿನ ಸಾಕು ನಾಯಿಗಳ ಮೇಲೆಯೂ ದಾಳಿ ನಡೆಸಿದ್ದು, ಶುಕ್ರವಾರ ಬೆಳಗ್ಗೆ ಹುಚ್ಚು ನಾಯಿಯು ಪೇಟೆಯಲ್ಲಿ ಸುತ್ತಾಡುತ್ತಾ ವ್ಯಕ್ತಿಯೋರ್ವರ ಕಾಲಿಗೆ ಕಚ್ಚಿದ ಪರಿಣಾಮ ಗಾಯಗೊಂಡ ವ್ಯಕ್ತಿಯು ಚಿಕಿತ್ಸೆಗಾಗಿ ಆಸ್ಪತ್ರೆಗೆ

ಕಡಬ: ಹುಚ್ಚು ನಾಯಿ ಕಡಿತ ➤ ವ್ಯಕ್ತಿಗೆ ಗಾಯ Read More »

ಕರಾವಳಿ

ಸುಳ್ಯ: ಮರ ಬಿದ್ದು ರಸ್ತೆ ತಡೆ- ವಿದ್ಯುತ್ ಕಂಬಗಳಿಗೆ ಹಾನಿ

(ನ್ಯೂಸ್ ಕಡಬ) Newskadaba.com ಅರಂತೋಡು, ಜು. 23. ಬೃಹತ್ ಮರವೊಂದು ರಸ್ತೆಗೆ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾದ ಘಟನೆ ಪೆತ್ತಾಜೆ ಎಂಬಲ್ಲಿ ನಡೆದಿದೆ. ಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ವೇಣು, ತೊಡಿಕಾನ ದೇವಸ್ಥಾನ ಮ್ಯಾನೇಜರ್ ಆನಂದ ಕಲ್ಲಗದ್ದೆ, ತೊಡಿಕಾನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಗುರು ನಾರ್ಕೋಡು ಸೇರಿದಂತೆ ಕಲ್ಲಗದ್ದೆ ಜನರು ಸಹಕರಿಸಿದರು.

ಸುಳ್ಯ: ಮರ ಬಿದ್ದು ರಸ್ತೆ ತಡೆ- ವಿದ್ಯುತ್ ಕಂಬಗಳಿಗೆ ಹಾನಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಾರನಹಳ್ಳಿ: ಹೆದ್ದಾರಿ ಕುಸಿತ ➤ ಗುಂಡ್ಯ- ಸಕಲೇಶಪುರ ಸಂಚಾರ ಸ್ಥಗಿತ

(ನ್ಯೂಸ್ ಕಡಬ) newskadaba.com ಸಕಲೇಶಪುರ, ಜು.22. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಕಲೇಶಪುರ ಸಮೀಪದ ದೋಣಿಗಲ್ ಎಂಬಲ್ಲಿ ಹೆದ್ದಾರಿ ಕುಸಿದಿದೆ. ಹೆದ್ದಾರಿಯ ಒಂದು ಭಾಗ ಕುಸಿದಿದ್ದು, ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ. ರಸ್ತೆ ದುರಸ್ತಿ ಆಗುವವರೆಗೂ ಧರ್ಮಸ್ಥಳದಿಂದ ಬೆಂಗಳೂರು ಕಡೆಗೆ ಹೋಗುವ ವಾಹನ ಚಾಲಕರು ಚಾರ್ಮಾಡಿ ಅಥವಾ ಬೇರೆ ಬದಲಿ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.      

ಮಾರನಹಳ್ಳಿ: ಹೆದ್ದಾರಿ ಕುಸಿತ ➤ ಗುಂಡ್ಯ- ಸಕಲೇಶಪುರ ಸಂಚಾರ ಸ್ಥಗಿತ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಲಾರಿ – ಬೈಕ್ ನಡುವೆ ಢಿಕ್ಕಿ ➤ ಖ್ಯಾತ ಜಾದೂಗಾರ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಜು.22. ಲಾರಿ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಜೆ ಬೇಕಲ ಸೇತುವೆ ಬಳಿ ನಡೆದಿದೆ. ಮೃತ ಸವಾರನನ್ನು ಬೇಕಲ ಸಮೀಪದ ಚಿರಮ್ಮಲ್ ನಿವಾಸಿ ಬಾಬುರಾಜ್ (45) ಎಂದು ಗುರುತಿಸಲಾಗಿದೆ. ಜಾದೂಗಾರರಾಗಿ ಹೆಸರು ಗಳಿಸಿದ್ದ ಬಾಬುರಾಜ್ ತನ್ನ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಹೊಂಡವನ್ನು ತಪ್ಪಿಸುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರುವುದಾಗಿ ಎಂದು ತಿಳಿದುಬಂದಿದೆ. ಈ

ಲಾರಿ – ಬೈಕ್ ನಡುವೆ ಢಿಕ್ಕಿ ➤ ಖ್ಯಾತ ಜಾದೂಗಾರ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಫಿಕ್ಸ್..? ➤ ಸುಳಿವು ಬಿಟ್ಟುಕೊಟ್ಟ BSY

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.22. ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬದಲಾವಣೆ ಮಾಡುವ ಬಗ್ಗೆ ಚರ್ಚೆ ತಾರಕಕ್ಕೆ ಏರಿರುವ ನಡುವೆಯೇ ಯಾವುದೇ ಕಾರಣಕ್ಕೂ ಯಡಿಯೂರಪ್ಪರನ್ನು ಬದಲಾವಣೆ ಮಾಡಬಾರದೆಂದು ಹಲವು ಮಾಠಾಧೀಶರು ಆಗ್ರಹಿಸುತ್ತಿದ್ದಾರೆ. ಆದರೆ ರಾಜಕೀಯ ಬೆಳವಣಿಗೆಗಳನ್ನು ಆಧರಿಸಿ ನನ್ನ ಪರವಾಗಿ ಹೇಳಿಕೆ ಅಥವಾ ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ವಿನಂತಿಸುತ್ತೇನೆ ಟ್ವೀಟ್ ಮೂಲಕ ಮನವಿ

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಫಿಕ್ಸ್..? ➤ ಸುಳಿವು ಬಿಟ್ಟುಕೊಟ್ಟ BSY Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top