News Kadaba Desk

ನೆಲ್ಯಾಡಿ: ವಿಷ ಸೇವಿಸಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು.31. ವಿಷ ಸೇವಿಸಿದ ವ್ಯಕ್ತಿಯೋರ್ವರು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟ ಘಟನೆ ಶನಿವಾರ ರಾತ್ರಿ ನೆಲ್ಯಾಡಿಯಿಂದ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ನೆಲ್ಯಾಡಿ ಸಮೀಪದ ದೋಂತಿಲ‌ ನಿವಾಸಿ ರಾಮಕೃಷ್ಣ (38) ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ತನ್ನ ಮನೆಯಲ್ಲಿ ವಿಷ ಸೇವಿಸಿದ್ದ ಇವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಹಾದಿ ಮಧ್ಯೆ ಮೃತಪಟ್ಟಿದ್ದಾರೆ‌. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.      

ನೆಲ್ಯಾಡಿ: ವಿಷ ಸೇವಿಸಿ ಆತ್ಮಹತ್ಯೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ➤ ದಕ್ಷಿಣ ಕನ್ನಡದಲ್ಲಿ ಆಗಸ್ಟ್ 10 ರ ವರೆಗೆ ಟಫ್ ರೂಲ್ಸ್ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.31. ಜಿಲ್ಲೆಯಲ್ಲಿ ಕೊರೋನಾ ಎರಡನೇ ಅಲೆ ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಆಗಸ್ಟ್ 10 ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ಮಾಸ್ಕ್ ಧರಿಸದಿದ್ದಲ್ಲಿ ದಂಡ ವಿಧಿಸುವಂತೆ ಆದೇಶದಲ್ಲಿ ತಿಳಿಸಲಾಗಿದ್ದು, ಮದುವೆ ಕಾರ್ಯಕ್ರಮಗಳಲ್ಲಿ ಕೇವಲ 50 ಜನ ಮಾತ್ರ ಸೇರುವಂತೆ ತಿಳಿಸಲಾಗಿದೆ. ಕಲ್ಯಾಣ ಮಂಟಪದಲ್ಲಿ ಹೆಚ್ಚಿನ

ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ➤ ದಕ್ಷಿಣ ಕನ್ನಡದಲ್ಲಿ ಆಗಸ್ಟ್ 10 ರ ವರೆಗೆ ಟಫ್ ರೂಲ್ಸ್ ಜಾರಿ Read More »

ಕರಾವಳಿ

ನಾಳೆಯಿಂದ ಆಗಸ್ಟ್ 08 ರವರೆಗೆ ಕಡಬದ ಮೈಸೂರು ಗಾರ್ಮೆಂಟ್ಸ್ ನಲ್ಲಿ ಸ್ಟಾಕ್ ಕ್ಲಿಯರೆನ್ಸ್ ಸೇಲ್

(ನ್ಯೂಸ್ ಕಡಬ) newskadaba.com ಕಡಬ, ಜು.31. ಕಡಬದ ಮುಖ್ಯ ರಸ್ತೆಯ ಶಿವ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮೈಸೂರು ಗಾರ್ಮೆಂಟ್ಸ್ ನಲ್ಲಿ (ನಾಳೆ) ಆಗಸ್ಟ್ 01 ರಿಂದ 08 ರ ವರೆಗೆ ಸ್ಟಾಕ್ ಕ್ಲಿಯರೆನ್ಸ್ ಸೇಲ್ ನಡೆಯಲಿದೆ. ಟಾಪ್ ರೂ.149, ಸಾರಿ 299 ರೂ., ಡ್ರೆಸ್ ಮೆಟೀರಿಯಲ್ಸ್ 100 ರೂ., ಶರ್ಟ್ 249. ರೂ., ಜೀನ್ಸ್ ಪ್ಯಾಂಟ್ 199 ರೂ., ಕಿಡ್ಸ್ ಪ್ಯಾಂಟ್ 199 ರೂ., ಬೇಬಿ ಡ್ರೆಸ್ 299 ರೂ., ಟಿ-ಶರ್ಟ್

ನಾಳೆಯಿಂದ ಆಗಸ್ಟ್ 08 ರವರೆಗೆ ಕಡಬದ ಮೈಸೂರು ಗಾರ್ಮೆಂಟ್ಸ್ ನಲ್ಲಿ ಸ್ಟಾಕ್ ಕ್ಲಿಯರೆನ್ಸ್ ಸೇಲ್ Read More »

ಕರಾವಳಿ

ಸೊಪ್ಪು ತರಲೆಂದು ತೆರಳಿದ ಮಹಿಳೆ ಗುಂಡ್ಯ ಹೊಳೆಗೆ ಹಾರಿದ ಶಂಕೆ ➤ ಅಗ್ನಿಶಾಮಕ ಸಿಬ್ಬಂದಿಗಳಿಂದ ನದಿಯಲ್ಲಿ ಹುಡುಕಾಟ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು.31. ಸೊಪ್ಪು ತರಲೆಂದು ತೆರಳಿದ ಮಹಿಳೆಯೋರ್ವರು ನಾಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ರೆಖ್ಯಾ ಗ್ರಾಮದ ನೇಲ್ಯಡ್ಕ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ನಾಪತ್ತೆಯಾದ ಮಹಿಳೆಯನ್ನು ನೇಲ್ಯಡ್ಕ‌ ಸಮೀಪದ ಉರ್ನಡ್ಕ ನಿವಾಸಿ ಸುಂದರ ಗೌಡ ಎಂಬವರ ಪತ್ನಿ ಶಕುಂತಲಾ ಎಂದು ಗುರುತಿಸಲಾಗಿದೆ. ಶಕುಂತಲಾ ಅವರು ಶನಿವಾರ ಬೆಳಿಗ್ಗೆ ಸೊಪ್ಪು ತರಲೆಂದು ಮನೆಯಿಂದ ತೆರಳಿದ್ದು, ಮನೆಯ ಪಕ್ಕದಲ್ಲಿ ಹರಿಯುವ ಗುಂಡ್ಯ ಹೊಳೆಯ ಸಮೀಪ ಅವರ ಚಪ್ಪಲಿ ದೊರೆತಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಅದಕ್ಕೂ ಮೊದಲು

ಸೊಪ್ಪು ತರಲೆಂದು ತೆರಳಿದ ಮಹಿಳೆ ಗುಂಡ್ಯ ಹೊಳೆಗೆ ಹಾರಿದ ಶಂಕೆ ➤ ಅಗ್ನಿಶಾಮಕ ಸಿಬ್ಬಂದಿಗಳಿಂದ ನದಿಯಲ್ಲಿ ಹುಡುಕಾಟ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ರೈಲ್ವೇ ಹಳಿಯಲ್ಲಿ ಯುವಕನ ಮೃತದೇಹ ಪತ್ತೆ

(ನ್ಯೂಸ್ ಕಡಬ) Newskadaba.com ಬಂಟ್ವಾಳ, ಜು. 30. ರೈಲ್ವೆ ಹಳಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ ತಾಲೂಕಿನ ದೇವಂದಬೆಟ್ಟು ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಕಳ್ಳಿಗೆ ಗ್ರಾಮದ ಲಕ್ಷಣ ಎಂಬವರ ಮಗ ಕಾರ್ತಿಕ್ (25) ಎಂದು ಗುರುತಿಸಲಾಗಿದೆ. ಈತ ಗುರುವಾರದಂದು ಸಂಜೆ ಮನೆಯಿಂದ ಹೊರಟಿದ್ದು, ರಾತ್ರಿ 11 ಗಂಟೆಯವರೆಗೆ ಮನೆಗೆ ಬಾರದಿರುವ ಹಿನ್ನೆಲೆ ಮನೆಯವರು ಆತನಿಗಾಗಿ ಹುಡುಕಾಟ ಆರಂಭಿಸಿದ್ದರು. ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಕಾರ್ತಿಕ್ ನ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಈ ಕುರಿತು

ಬಂಟ್ವಾಳ: ರೈಲ್ವೇ ಹಳಿಯಲ್ಲಿ ಯುವಕನ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ ಪರಿಸರದಲ್ಲಿ ಮುಂದುವರಿದ ಹುಚ್ಚುನಾಯಿ ಹಾವಳಿ ➤ ಸ್ಥಳೀಯರಲ್ಲಿ ಆತಂಕ

(ನ್ಯೂಸ್ ಕಡಬ) newskadaba.com ಕಡಬ, ಜು.29. ತಾಲೂಕಿನ ನೂಜಿಬಾಳ್ತಿಲ ವ್ಯಾಪ್ತಿಯಲ್ಲಿ ಹುಚ್ಚುನಾಯಿ ಹಾವಳಿ ಮುಂದುವರಿದಿದ್ದು, ಸ್ಥಳೀಯ ನಿವಾಸಿಗಳು, ಸಾರ್ವಜನಿಕರು ಆತಂಕ ಸ್ಥಿತಿಯಲ್ಲಿ ಓಡಾಟ ನಡೆಸುವಂತಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಹುಚ್ಚುನಾಯಿ ರಾದ್ಧಾಂತ ಸೃಷ್ಟಿಸಿ ವ್ಯಕ್ತಿಯೊಬ್ಬರಿಗೆ ಕಚ್ಚಿತ್ತು. ಜೊತೆಗೆ ಸಾಕುನಾಯಿಗಳ ಮೇಲೆ ದಾಳಿ ನಡೆಸಿ ಸಾಯಿಸಿತ್ತು. ಆದರೆ ಇದೀಗ ಬುಧವಾರದಿಂದ ಮತ್ತೆ ಹುಚ್ಚುನಾಯಿ ರಾದ್ಧಾಂತ ಮುಂದುವರಿದಿದೆ. ಎರಡು ಹುಚ್ಚುನಾಯಿಗಳು ಊರಿಡೀ ತಿರುಗಾಡುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಾತ್ರಿ ವೇಳೆ ಹಾಗೂ ಹಗಲು ಜನ ವಸತಿ ಸ್ಥಳ, ಕಾಲೋನಿ

ಕಡಬ ಪರಿಸರದಲ್ಲಿ ಮುಂದುವರಿದ ಹುಚ್ಚುನಾಯಿ ಹಾವಳಿ ➤ ಸ್ಥಳೀಯರಲ್ಲಿ ಆತಂಕ Read More »

ಕರಾವಳಿ

BIG NEWS: ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ..? ➤ ಅಂತಿಮ ಆದೇಶ ಬಾಕಿ..

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.27. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಹೆಸರು ಅಂತಿಮವಾಗಿದ್ದು, ಅಧಿಕೃತ ಘೋಷಣೆ ಬಾಕಿಯಿದೆ. ಇಂದು ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಮುಖ್ಯಮಂತ್ರಿಯ ಆಯ್ಕೆ ಕಸರತ್ತು ನಡೆದಿದ್ದು, ಬಸವರಾಜ್ ಬೊಮ್ಮಾಯಿಯವರ ಹೆಸರು ಅಂತಿಮವಾಗಿರುವುದಾಗಿ ಪ್ರಮುಖ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಕೆಲವೇ ಕ್ಷಣಗಳಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರಬೀಳಲಿದೆ.        

BIG NEWS: ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ..? ➤ ಅಂತಿಮ ಆದೇಶ ಬಾಕಿ.. Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನೆಲ್ಯಾಡಿ: ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ ಕಳವು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು.27. ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಲಾರಿಗಳಿಂದ ಬ್ಯಾಟರಿಗಳನ್ನು ಕಳವುಗೈದ ಘಟನೆ ನೆಲ್ಯಾಡಿ ಸಮೀಪದ ದೋಂತಿಲದಲ್ಲಿ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ದೋಂತಿಲ ಎಂಬಲ್ಲಿ ಅಬ್ಬಾಸ್ ಹಾಗೂ ಅಶ್ರಫ್ ಎಂಬವರಿಗೆ ಸೇರಿದ ಎರಡು ಲಾರಿಗಳಿಂದ ಬ್ಯಾಟರಿಗಳನ್ನು ಕಳವು ಮಾಡಲಾಗಿದೆ. ಕಳೆದ ಹಲವು ಸಮಯಗಳ ಹಿಂದೆ ನೆಲ್ಯಾಡಿ ಪರಿಸರದಲ್ಲಿ ಬ್ಯಾಟರಿ ಕಳವು ಜಾಲ ಸಕ್ರಿಯವಾಗಿತ್ತು. ತದನಂತರ ಸುಮ್ಮನಿದ್ದ ಕಳ್ಳರು ಇದೀಗ ಮತ್ತೆ ತಮ್ಮ ಕೈಚಳಕವನ್ನು ತೋರಿಸಿದ್ದಾರೆ.      

ನೆಲ್ಯಾಡಿ: ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ ಕಳವು Read More »

ಕರಾವಳಿ, ಕ್ರೈಮ್ ನ್ಯೂಸ್
Nalin Kumar kateel

Breaking: ನೂತನ ಮುಖ್ಯಮಂತ್ರಿಯಾಗಿ ನಳಿನ್ ಕುಮಾರ್ ಕಟೀಲ್..??

(ನ್ಯೂಸ್ ಕಡಬ) newskadaba.com ನವದೆಹಲಿ, ಜು.26. ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿರುವ ಬೆನ್ನಲ್ಲೇ ಇದೀಗ ಆ ಸ್ಥಾನಕ್ಕೆ ಕರಾವಳಿಯ ಪ್ರಭಾವಿ ಮುಖಂಡರ ಹೆಸರು ಕೇಳಿ ಬರುತ್ತಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೆಸರು ಬಲವಾಗಿ ಕೇಳಿ ಬಂದಿದೆ. ಯಡಿಯೂರಪ್ಪ ರವರು ರಾಜೀನಾಮೆ ನೀಡುವ ಮಾಹಿತಿಯಿದ್ದ ಹಿನ್ನೆಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಭಾನುವಾರದಂದು ದಿಢೀರ್ ಆಗಿ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ

Breaking: ನೂತನ ಮುಖ್ಯಮಂತ್ರಿಯಾಗಿ ನಳಿನ್ ಕುಮಾರ್ ಕಟೀಲ್..?? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು‌‌..? ➤ ಈ ಬಗ್ಗೆ ಯಡಿಯೂರಪ್ಪ ಹೇಳಿದ್ದೇನು..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.26. ರಾಜಕೀಯ ಏಳು ಬೀಳುಗಳ ನಡುವೆ ಕೊನೆಗೂ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಘೋಷಿಸಿದ್ದಾರೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬಿಎಸ್ವೈ, ಈ ಬಗ್ಗೆ ನಾನು ಯಾರ ಹೆಸರನ್ನು ಕೂಡಾ ಸೂಚಿಸಿಲ್ಲ. ಮುಂದಿನ ಮುಖ್ಯಮಂತ್ರಿಯ ಬಗ್ಗೆ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿಂದು ಏರ್ಪಡಿಸಿದ್ದ ಸಮಾರಂಭದಲ್ಲಿ ವಿದಾಯ ಭಾಷಣ ಮಾಡಿದ ಅವರು, ತಮ್ಮ ರಾಜಕೀಯ

ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು‌‌..? ➤ ಈ ಬಗ್ಗೆ ಯಡಿಯೂರಪ್ಪ ಹೇಳಿದ್ದೇನು..? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top