ರೌಡಿಶೀಟರ್ ಮದುವೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಗಳು ➤ ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್, ಎಸ್ಐ ಸಸ್ಪೆಂಡ್
(ನ್ಯೂಸ್ ಕಡಬ) newskadaba.com ಕೊಪ್ಪಳ, ಜು.21. ಕೊಲೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ರೌಡಿ ಶೀಟರ್ ಓರ್ವನ ಮದುವೆಯಲ್ಲಿ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿ ಹಾರ ಹಾಕಿಸಿಕೊಂಡಿರುವ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಮೂವರು ಅಧಿಕಾರಿಗಳನ್ನು ಸುದೀರ್ಘ ರಜೆಯಲ್ಲಿ ಕಳುಹಿಸಲಾಗಿದೆ. 2015ರ ಜನವರಿಯಲ್ಲಿ ಕೊಪ್ಪಳ ರೇಲ್ವೆ ನಿಲ್ದಾಣದ ಬಳಿ ವಿದ್ಯಾರ್ಥಿಯೋರ್ವನ ಕೊಲೆಯಾಗಿತ್ತು. ಹತ್ಯೆ ಪ್ರಕರಣದಲ್ಲಿ ರೌಡಿಶೀಟರ್ ಹನುಮೇಶ್ ನಾಯಕ್ ಮತ್ತು ಇವರ ಪುತ್ರ ಮಹಾಂತೇಶ ನಾಯಕ್ ಸೇರಿದಂತೆ 9 ಮಂದಿ ಆರೋಪಿಗಳು ಜೈಲಿಗೆ ಹೋಗಿ ಜಾಮೀನು […]










