News Kadaba Desk

ರೈಲು ಢಿಕ್ಕಿ- ಮಹಿಳೆ ಗಂಭೀರ

(ನ್ಯೂಸ್ ಕಡಬ) Newskadaba.com ಮುಲ್ಕಿ, ಅ. 23. ರೈಲು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಮುಲ್ಕಿಯಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ಮಹಿಳೆಯನ್ನು ಇಬ್ರಾಹೀಂ ಎಂಬವರ‌ ಮಗಳು ಸಕೀನಾ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಮುಲ್ಕಿ ರೈಲು ನಿಲ್ದಾಣದ ಬಳಿ ಈ ದುರ್ಘಟನೆ ನಡೆದಿದ್ದು, ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಹಾಗೂ ಮುಲ್ಕಿ ಠಾಣಾ ಪೊಲೀಸರು ಭೇಟಿ ನೀಡಿ […]

ರೈಲು ಢಿಕ್ಕಿ- ಮಹಿಳೆ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಹೋಟೆಲ್ ನಲ್ಲಿ ತಂಗಿದ್ದ ಅನ್ಯಕೋಮಿನ ಜೋಡಿ ➤ ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 23. ಹೋಟೆಲೊಂದರ ಮೇಲೆ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರು ಅಲ್ಲಿ ತಂಗಿದ್ದ ಅನ್ಯಕೋಮಿನ ಜೋಡಿಯೊಂದನ್ನು ಪೊಲೀಸರ ವಶಕ್ಕೊಪ್ಪಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಹಾವೇರಿಯ ಅನ್ಯಕೋಮಿನ ಯುವಕ ಹಾಗೂ ವಿಜಯಪುರದ ಹಿಂದೂ ಯುವತಿಯು ಮಂಗಳೂರಿನ ಹೋಟೆಲೊಂದರಲ್ಲಿ ತಂಗಿದ್ದು, ವಿಷಯ ತಿಳಿದ ಬಜರಂಗದಳದ ಕಾರ್ಯಕರ್ತರು ಹೋಟೆಲ್ ಮೇಲೆ ದಾಳಿ ನಡೆಸಿ, ಜೋಡಿಗೆ ಎಚ್ಚರಿಕೆ ನೀಡಿ ಯುವಕ- ಯುವತಿಯನ್ನು ಮಂಗಳೂರಿನ ಬಂದರು ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದಾರೆ.

ಮಂಗಳೂರು: ಹೋಟೆಲ್ ನಲ್ಲಿ ತಂಗಿದ್ದ ಅನ್ಯಕೋಮಿನ ಜೋಡಿ ➤ ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂಟರ್ನ್ ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ ➤ ಬಾರ್ ಕೌನ್ಸಿಲ್ ನಿಂದ ವಕೀಲ ಅಮಾನತು

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 23. ಇಂರ್ಟನ್‌ಶಿಪ್ ಗೆಂದು ಬಂದಿದ್ದ ಕಾನೂನು ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮಂಗಳೂರಿನ ಖ್ಯಾತ ವಕೀಲ ಕೆ.ಎಸ್.ಎನ್.ರಾಜೇಶ್ ಭಟ್ ಅವರನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ ನಿಂದ ಅಮಾನತು ಮಾಡಲಾಗಿದೆ. ವಕೀಲರ ಪರಿಷತ್ ಅಧ್ಯಕ್ಷ ಎಲ್. ಶ್ರೀನಿವಾಸ ಬಾಬು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜೇಶ್ ಭಟ್ ಅವರನ್ನು ಮುಂದಿನ ಆದೇಶದವರೆಗೆ ಅಮಾನತು ಮಾಡಲಾಗಿದೆ ಮತ್ತು ಅವರ ವಿರುದ್ಧ ಶಿಸ್ತು ಸಮಿತಿಯಿಂದ ವಿಚಾರಣೆ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಇಂಟರ್ನ್ ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ ➤ ಬಾರ್ ಕೌನ್ಸಿಲ್ ನಿಂದ ವಕೀಲ ಅಮಾನತು Read More »

ಕರಾವಳಿ, ಕರ್ನಾಟಕ

ಗದ್ದೆಯಲ್ಲಿ ಮೇಯುತ್ತಿದ್ದ ದನದ ಕಾಲು ಕಡಿದ ಮಹಿಳೆ..!

(ನ್ಯೂಸ್ ಕಡಬ) Newskadaba.com ಕಾರ್ಕಳ, ಅ. 23. ಗದ್ದೆಯಲ್ಲಿ ಮೇಯುತ್ತಿದ್ದ ದನವೊಂದರ ಕಾಲು ಕಡಿದ ಘಟನೆ ಕಾರ್ಕಳದ ಎರ್ಲಪ್ಪಾಡಿ ಗ್ರಾಮದಲ್ಲಿ ನಡೆದಿದೆ. ಎರ್ಲಪ್ಪಾಡಿ ಸಂತೋಷ್ ಹೆಗ್ಡೆ ಎಂಬವರ ದನವೊಂದು ಅಮಣ್ಣಿ ಹೆಗ್ಡೆ ಎಂಬವರ ಗದ್ದೆಗೆ ಹೋಗಿ ಮೇಯುತ್ತಿದ್ದು, ಇದರಿಂದ ಕೋಪಗೊಂಡ ಅಮಣ್ಣಿ ಹೆಗ್ಡೆ ದನದ ಕಾಲನ್ನು ಕಡಿದಿದ್ದಲ್ಲದೆ, ಇದೇ ವಿಚಾರವನ್ನು ನೆಪವಾಗಿರಿಸಿ, ಸಂತೋಷ್ ಕುಮಾರ್ ಹೆಗ್ಡೆಗೆ ಅಮಣ್ಣಿಯ ಮೂರು ಮಕ್ಕಳು ಜೀವ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ.

ಗದ್ದೆಯಲ್ಲಿ ಮೇಯುತ್ತಿದ್ದ ದನದ ಕಾಲು ಕಡಿದ ಮಹಿಳೆ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಟೆಂಪೋಗಳ ನಡುವೆ ಢಿಕ್ಕಿ ➤ ಓರ್ವ ಗಂಭೀರ

(ನ್ಯೂಸ್ ಕಡಬ) Newskadaba.com ಬಂಟ್ವಾಳ, ಅ. 23. ಎರಡು ಟೆಂಪೋಗಳ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಚಾಲಕನೋರ್ವನ ಕಾಲು ಜಖಂಗೊಂಡ ಘಟನೆ ಬಿ.ಸಿ.ರೋಡ್ -ಪೊಳಲಿ ರಸ್ತೆಯ ಕಲ್ಪನೆ ಎಂಬಲ್ಲಿ ನಡೆದಿದೆ. ಗಾಯಗೊಂಡ ಚಾಲಕನನ್ನು ಚಿಕಿತ್ಸೆಗಾಗಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಕೆಲಕಾಲ ಟ್ರಾಫಿಕ್ ಜಾಂ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯುಂಟಾಯಿತು ಎನ್ನಲಾಗಿದೆ.

ಬಂಟ್ವಾಳ: ಟೆಂಪೋಗಳ ನಡುವೆ ಢಿಕ್ಕಿ ➤ ಓರ್ವ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ ➤ 3ಚಿನ್ನ, 1 ಬೆಳ್ಳಿ ಗೆದ್ದ ಕರಾವಳಿಯ ಕುವರಿ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 23. ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ಅಪೇಕ್ಷಾ ಫೆರ್ನಾಂಡೀಸ್‌ 3ಚಿನ್ನ ಹಾಗೂ 1 ಬೆಳ್ಳಿ ಪದಕ ಗೆದ್ದಿದ್ದಾರೆ. ಪ್ರಸ್ತುತ ಮುಂಬೈನಲ್ಲಿ ವಾಸವಾಗಿರುವ ಮಂಗಳೂರಿನ ಬಾವ್ಲಾನ್ ಹಾಗೂ ಶಾಲೇಟ್ ಫೆರ್ನಾಂಡೀಸ್ ದಂಪತಿಯ ಪುತ್ರಿ 16 ವರ್ಷದ ಅಪೇಕ್ಷಾ ಫೆರ್ನಾಂಡೀಸ್‌ ಬಂಟ್ಸ್ ಸಂಘದ ಎಸ್.ಎಂ. ಶೆಟ್ಟಿ ಇಂಟರ್ ನ್ಯಾಷನಲ್ ಸ್ಕೂಲ್ ಹಾಗೂ ಪೂವಾಯಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ. ಅಪೇಕ್ಷಾ ಐಐಟಿ ಬಾಂಬೆ ಪೂಲ್ ಹಾಗೂ ಹಿರಾನಂದನಿ ಫಾರೆಸ್ಟ್ ಕ್ಲಬ್‍ನಲ್ಲಿ

ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ ➤ 3ಚಿನ್ನ, 1 ಬೆಳ್ಳಿ ಗೆದ್ದ ಕರಾವಳಿಯ ಕುವರಿ Read More »

ಕರ್ನಾಟಕ

ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ದಾಳಿ ➤ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಗ್ರಾ.ಪಂ. ಅಧ್ಯಕ್ಷೆ..!

(ನ್ಯೂಸ್ ಕಡಬ) Newskadaba.com ಶಿವಮೊಗ್ಗ, ಅ. 23. ಕಾಮಗಾರಿಯ ಬಿಲ್ಲಿನ ಮೊತ್ತವನ್ನು ಮಂಜೂರು ಮಾಡುವ ವಿಚಾರಕ್ಕೆ ಸಂಬಂಧಿಸಿ ಗ್ರಾಮ ಪಂಚಾಯತ್ ಅಧ್ಯಕ್ಷೆಯೋರ್ವರು ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದ ಘಟನೆ ನಡೆದಿದೆ. ಆರೋಪಿ ಶಿವಮೊಗ್ಗದ ಮುದ್ದಿನಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ವೇಣಿ ಕಣ್ಣನ್ (47) ಎಂದು ಗುರುತಿಸಲಾಗಿದೆ. ಮುದ್ದಿನಕೊಪ್ಪ ಗ್ರಾಮದ ನಿವಾಸಿ, ಓರ್ವ ಗುತ್ತಿಗೆದಾರರ ಪರವಾಗಿ ಕಟ್ಟಡ ಕಾಮಗಾರಿಯೊಂದನ್ನು 2020 ರ ಜನವರಿಯಲ್ಲೇ ಪೂರ್ತಿಗೊಳಿಸಿದ್ದು, ಈ ಕಾಮಗಾರಿಯ ಬಿಲ್ ಮೊತ್ತವನ್ನು

ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ದಾಳಿ ➤ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಗ್ರಾ.ಪಂ. ಅಧ್ಯಕ್ಷೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅಬಕಾರಿ ಇಲಾಖೆಯಿಂದ ದಾಳಿ ➤ 25 ಕೆ.ಜಿ ಹಸಿ ಗಾಂಜಾ ಗಿಡ ವಶಕ್ಕೆ

(ನ್ಯೂಸ್ ಕಡಬ) Newskadaba.com ಗದಗ, ಅ. 23. ಅಬಕಾರಿ ಇಲಾಖೆ ಪೊಲೀಸರು ದಾಳಿ ನಡೆಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಂಡ ಘಟನೆ ಗದಗ ತಾಲೂಕಿನ ಮದಗನಾರು, ಬೆಳವಡ ಗ್ರಾಮದಲ್ಲಿ ನಡೆದಿದೆ. ಆರೋಪಿಗಳಾದ ಹುಚ್ಚಪ್ಪ ಬಸಪ್ಪ ತಳ್ವಾರ್, ಅಯ್ಯನಗೌಡ ರಾಮೇಗೌಡ ಗೌಡಪ್ಪಗೌಡ ಮತ್ತು ತಿಪ್ಪನಗೌಡ ನಿಂಗನಗೌಡ ಇನಾಮತಿ ಇವರುಗಳಿಗೆ ಸೇರಿದ ಕೃಷಿ ಹೊಲಗಳಲ್ಲಿ ಗಾಂಜಾ ದೊರೆತಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಂದಾಜು ಎರಡು ಲಕ್ಷ ನಲವತ್ತೈದು ಸಾವಿರ ಮೌಲ್ಯದ 25 ಕೆ.ಜಿ. ಹಸಿ ಗಾಂಜಾ

ಅಬಕಾರಿ ಇಲಾಖೆಯಿಂದ ದಾಳಿ ➤ 25 ಕೆ.ಜಿ ಹಸಿ ಗಾಂಜಾ ಗಿಡ ವಶಕ್ಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕೂಳೂರು ನಾಗನಕಟ್ಟೆ ದ್ವಂಸಗೈದ ದುಷ್ಕರ್ಮಿಗಳು ➤ ಕಿಡಿಗೇಡಿಗಳ ಪತ್ತೆಗೆ ಆಗ್ರಹ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 23. ಇಲ್ಲಿನ ಕೂಳೂರು ವಿ ಆರ್ ಎಲ್ ಬಳಿಯಿರುವ ನಾಗನ ಕಟ್ಟೆಯನ್ನು ಯಾರೋ ದುಷ್ಕರ್ಮಿಗಳು ದ್ವಂಸಗೈದಿರುವ ಘಟನೆ ಬೆಳಕಿಗೆ ಬಂದಿದೆ. ಇತ್ತೀಚೆಗೆ ಕೆಲ ದಿನಗಳಿಂದ ಇಂತಹ ಶಾಂತಿ ಕದಡುವ ದುಷ್ಕೃತ್ಯಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಈ ಕೃತ್ಯದ ಹಿಂದಿನ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಬಂಧಿಸಲು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

ಕೂಳೂರು ನಾಗನಕಟ್ಟೆ ದ್ವಂಸಗೈದ ದುಷ್ಕರ್ಮಿಗಳು ➤ ಕಿಡಿಗೇಡಿಗಳ ಪತ್ತೆಗೆ ಆಗ್ರಹ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪ ನಿರ್ದೇಶಕರಾಗಿ ಡಾ.ಧರ್ಮಪಾಲ್ ನೇಮಕ

(ನ್ಯೂಸ್ ಕಡಬ) Newskadaba.com ಕಡಬ, ಅ. 23. ತಾಲೂಕಿನ ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪ ನಿರ್ದೇಶಕರಾಗಿ ಡಾ. ಧರ್ಮಪಾಲ್ ಕರಂದ್ಲಾಜೆಯವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಎರಡು ಬಾರಿ ಪ್ರಭಾರ ಉಪನಿರ್ದೇಶಕರಾಗಿ ಕೊಯಿಲ ಫಾರ್ಮ್ ನಲ್ಲಿ ಸೇವೆ ಸಲ್ಲಿಸಿದ್ದ ಸಂದರ್ಭ ಪ್ರಥಮ ಬಾರಿಗೆ ದೇಶೀ ತಳಿಯ ಮಲೆನಾಡು ಗಿಡ್ಡ ತಳಿಗಳನ್ನು ಫಾರ್ಮ್‌ಗೆ ನಿಯೋಜಿಸಿದ್ದರು. ಧರ್ಮಪಾಲ್ ಕರಂದ್ಲಾಜೆಯವರು ಪಶು ವೈದ್ಯ ಸೇವಾ ಇಲಾಖೆ ಹಾಗೂ ಪಶು ಆಸ್ಪತ್ರೆ ಪುತ್ತೂರು ಇಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ

ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪ ನಿರ್ದೇಶಕರಾಗಿ ಡಾ.ಧರ್ಮಪಾಲ್ ನೇಮಕ Read More »

ಕರಾವಳಿ
Scroll to Top