ಮಂಗಳೂರು: ಹೋಟೆಲ್ ನಲ್ಲಿ ತಂಗಿದ್ದ ಅನ್ಯಕೋಮಿನ ಜೋಡಿ ➤ ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 23. ಹೋಟೆಲೊಂದರ ಮೇಲೆ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರು ಅಲ್ಲಿ ತಂಗಿದ್ದ ಅನ್ಯಕೋಮಿನ ಜೋಡಿಯೊಂದನ್ನು ಪೊಲೀಸರ ವಶಕ್ಕೊಪ್ಪಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಹಾವೇರಿಯ ಅನ್ಯಕೋಮಿನ ಯುವಕ ಹಾಗೂ ವಿಜಯಪುರದ ಹಿಂದೂ ಯುವತಿಯು ಮಂಗಳೂರಿನ ಹೋಟೆಲೊಂದರಲ್ಲಿ ತಂಗಿದ್ದು, ವಿಷಯ ತಿಳಿದ ಬಜರಂಗದಳದ ಕಾರ್ಯಕರ್ತರು ಹೋಟೆಲ್ ಮೇಲೆ ದಾಳಿ ನಡೆಸಿ, ಜೋಡಿಗೆ ಎಚ್ಚರಿಕೆ ನೀಡಿ ಯುವಕ- ಯುವತಿಯನ್ನು ಮಂಗಳೂರಿನ ಬಂದರು ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದಾರೆ.

Scroll to Top