News Kadaba Desk

ಕಡಬ: ಹಾಲು ಸೊಸೈಟಿಯಲ್ಲಿ ಶಾರ್ಟ್ ಸರ್ಕ್ಯೂಟ್ ➤ ಕಂಪ್ಯೂಟರ್ ಸೇರಿದಂತೆ ಹಲವು ವಸ್ತುಗಳು ಸುಟ್ಟು ಭಸ್ಮ

(ನ್ಯೂಸ್ ಕಡಬ) newskadaba.com ಕಡಬ, ಅ.22. ಶಾರ್ಟ್ ಸರ್ಕ್ಯೂಟ್ ಕಾರಣದಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಹಾಲಿನ ಸೊಸೈಟಿಯಲ್ಲಿನ ಪರಿಕರಗಳು ಸುಟ್ಟು ಭಸ್ಮವಾದ ಘಟನೆ ಗುರುವಾರ ರಾತ್ರಿ ಕಡಬ ಸಮೀಪದ ಪೇರಡ್ಕ ಎಂಬಲ್ಲಿ ನಡೆದಿದೆ. ಹಾಲು ಉತ್ಪಾದಕರ ಸಹಕಾರಿ ಸಂಘದ ಪೇರಡ್ಕ ಶಾಖೆಯಲ್ಲಿ ಗುರುವಾರ ರಾತ್ರಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕಂಪ್ಯೂಟರ್ ಸೇರಿದಂತೆ ಸಾವಿರಾರು ರೂ. ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.      

ಕಡಬ: ಹಾಲು ಸೊಸೈಟಿಯಲ್ಲಿ ಶಾರ್ಟ್ ಸರ್ಕ್ಯೂಟ್ ➤ ಕಂಪ್ಯೂಟರ್ ಸೇರಿದಂತೆ ಹಲವು ವಸ್ತುಗಳು ಸುಟ್ಟು ಭಸ್ಮ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ನಾಳೆ(ಅ.21) ‘ನ್ಯೂ ಕೆನರಾ ಫರ್ನೀಚರ್ಸ್’ ಶುಭಾರಂಭ ➤ ಉದ್ಘಾಟನೆಯ ಪ್ರಯುಕ್ತ ವಿಶೇಷ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಅ.20. ಕಳೆದ 15 ವರ್ಷಗಳಿಂದ ಕಡಬದಲ್ಲಿ ಕಾರ್ಯಾಚರಿಸುತ್ತಿರುವ ಕೆನರಾ ಫರ್ನೀಚರ್ಸ್ ಸಂಸ್ಥೆಯು 16 ನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿರುವ ಶುಭ ಸಂದರ್ಭದಲ್ಲಿ ನೂತನ ಸಹ ಸಂಸ್ಥೆ ‘ನ್ಯೂ ಕೆನರಾ ಫರ್ನೀಚರ್ಸ್’ ಕಡಬದ ಪಂಜ ರಸ್ತೆಯ ಓಂಕಾರ್ ಟವರ್‌ನಲ್ಲಿ ನಾಳೆ (ಗುರುವಾರ) ಅದ್ದೂರಿಯಾಗಿ ಶುಭಾರಂಭಗೊಳ್ಳಲಿದೆ. ಉತ್ತಮ ಗುಣಮಟ್ಟದ ಫರ್ನೀಚರ್ ಗಳನ್ನು ಒದಗಿಸಿ ಗ್ರಾಹಕರ ವಿಶ್ವಾಸಗಳಿಸಿರುವ ಕೆನರಾ ಫರ್ನೀಚರ್ಸ್ ನ ಸಹ ಸಂಸ್ಥೆ ನ್ಯೂ ಕೆನರಾ ಫರ್ನೀಚರ್ಸ್ ಶುಭಾರಂಭದ ಪ್ರಯುಕ್ತ ಎಲ್ಲಾ ಮಾದರಿಯ ಸ್ಟೀಲ್

ಕಡಬ: ನಾಳೆ(ಅ.21) ‘ನ್ಯೂ ಕೆನರಾ ಫರ್ನೀಚರ್ಸ್’ ಶುಭಾರಂಭ ➤ ಉದ್ಘಾಟನೆಯ ಪ್ರಯುಕ್ತ ವಿಶೇಷ ಆಫರ್ Read More »

ಕರಾವಳಿ

ಉಪ್ಪಿನಂಗಡಿ: ಬೈಕ್ – ಮಿನಿ ಟೆಂಪೋ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.19. ಮೀನು ಸಾಗಾಟದ ಟೆಂಪೋ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತೊಟ್ಟು ಸಮೀಪದ ಸನ್ನಂಪಾಡಿಯಲ್ಲಿ ನಡೆದಿದೆ. ಮೃತ ಸವಾರನನ್ನು ಮಂಗಳೂರು ಸಮೀಪದ ಕುಂಟಲ್ಪಾಡಿ ಪದವು ನಿವಾಸಿ ಸಚಿನ್(29ವ.) ಎಂದು ಗುರುತಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರನ ತಲೆಯ ಮೇಲೆ ಮೀನು ಸಾಗಾಟದ ಟೆಂಪೋ ಹರಿದಿದ್ದು, ಘಟನೆಯಲ್ಲಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು

ಉಪ್ಪಿನಂಗಡಿ: ಬೈಕ್ – ಮಿನಿ ಟೆಂಪೋ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

“ನಮಗೆ ಎಲ್ಲೂ ಹೆಣ್ಣು ಸಿಗುತ್ತಿಲ್ಲ, ನಮಗೆ ಮದುವೆ ಮಾಡಿಸಿ..!” ➤ 7 ಯುವಕರಿಂದ ಜಿಲ್ಲಾಧಿಕಾರಿಗೆ ಪತ್ರ

(ನ್ಯೂಸ್ ಕಡಬ) Newskadaba.com ತುಮಕೂರು, ಅ. 17. ರೈತ ಎಂಬ ಕಾರಣಕ್ಕೆ ನಮ್ಮನ್ನು ಮದುವೆ ಮಾಡಿಕೊಳ್ಳಲು ಯಾರೂ ಒಪ್ಪುತ್ತಿಲ್ಲ, ಹಾಗಾಗಿ ನಮಗೆ ಮದುವೆ ಮಾಡಿಸಿ ಎಂದು ಏಳು ಮಂದಿ ಯುವ ರೈತರು ಜಿಲ್ಲಾಧಿಕಾರಿಗೆ ಪತ್ರ ಬರೆದ ವಿಚಿತ್ರ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ನಡೆದಿದೆ. ತಿಮ್ಲಾಪುರ ಗ್ರಾಮದ ಏಳು ರೈತ ಯುವಕರು ಜಿಲ್ಲಾಧಿಕಾರಿಗೆ ಪತ್ರ ಬರೆದು, ನಾವು ರೈತರಾದುದರಿಂದ ನಮಗೆ ಎಲ್ಲೂ ಹೆಣ್ಣು ಸಿಗುತ್ತಿಲ್ಲ. ಆದ್ದರಿಂದ ನಮ್ಮ ಸಮಸ್ಯೆಯನ್ನು ಪರಿಗಣಿಸಿ ಮದುವೆ ಮಾಡಿಸಬೇಕು

“ನಮಗೆ ಎಲ್ಲೂ ಹೆಣ್ಣು ಸಿಗುತ್ತಿಲ್ಲ, ನಮಗೆ ಮದುವೆ ಮಾಡಿಸಿ..!” ➤ 7 ಯುವಕರಿಂದ ಜಿಲ್ಲಾಧಿಕಾರಿಗೆ ಪತ್ರ Read More »

ಕರ್ನಾಟಕ

ಮೀನು ಪ್ರಿಯರಿಗೆ ಸಂತಸದ ಸುದ್ದಿ ➤ ನಾಳೆ ಕಡಬದಲ್ಲಿ ವಿಶೇಷ ದರ ಕಡಿತ ಮೀನು ಮಾರಾಟ

(ನ್ಯೂಸ್ ಕಡಬ) newskadaba.com ಕಡಬ, ಅ.16. ಮೀನು ಪ್ರಿಯರಿಗೆ ಸಂತಸದ ಸುದ್ದಿಯೊಂದಿದ್ದು, ಕಡಬದಲ್ಲಿ ಭಾನುವಾರದಂದು ಹವಾನಿಯಂತ್ರಿತ ಮೀನು ಮಾರಾಟ ಮಳಿಗೆ ಶುಭಾರಂಭದ ಪ್ರಯುಕ್ತ ಭಾರೀ ದರ ಕಡಿತ ಮೀನು ಮಾರಾಟ ನಡೆಯಲಿದೆ. ಕಡಬದ ಸೈಂಟ್ ಜೋಕಿಮ್ಸ್ ಕಾಲೇಜಿನ ಮುಂಭಾಗದಲ್ಲಿ ಹವಾನಿಯಂತ್ರಿತ ಮೀನು ಮಾರಾಟ ಮಳಿಗೆ ‘ಮತ್ಸ್ಯದರ್ಶಿನಿ’ ಅಕ್ಟೋಬರ್ 08 ರಂದು ಸಾಂಕೇತಿಕವಾಗಿ ಉದ್ಘಾಟನೆಗೊಂಡಿದ್ದು, ದಸರಾ ಹಿನ್ನೆಲೆಯಲ್ಲಿ ನಾಳೆ (ಅ.17) ಶುಭಾರಂಭಗೊಳ್ಳಲಿದೆ. ಈ ಪ್ರಯುಕ್ತ ನಾಳೆ ಒಂದು ದಿನ ದರಕಡಿತ ಮಾರಾಟ ನಡೆಯಲಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ

ಮೀನು ಪ್ರಿಯರಿಗೆ ಸಂತಸದ ಸುದ್ದಿ ➤ ನಾಳೆ ಕಡಬದಲ್ಲಿ ವಿಶೇಷ ದರ ಕಡಿತ ಮೀನು ಮಾರಾಟ Read More »

ಕರಾವಳಿ

ಕಡಬ: ಸಾಫ್ಟ್ ಡ್ರಿಂಕ್ಸ್ ಹೋಲ್ ಸೇಲ್ ಮಾರಾಟ ಸಂಸ್ಥೆ ರೋಯಲ್ ಟ್ರೇಡರ್ಸ್ ಶುಭಾರಂಭ ➤ ಮದುವೆ, ಶುಭ ಸಮಾರಂಭಗಳ ಖರೀದಿಗೆ ವಿಶೇಷ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಅ.16. ಎಲ್ಲಾ ತರಹದ ಸಾಫ್ಟ್ ಡ್ರಿಂಕ್ಸ್ ಮತ್ತು ನೀರಿನ ಬಾಟಲಿ ಮಾರಾಟ ಸಂಸ್ಥೆ ರೋಯಲ್ ಟ್ರೇಡರ್ಸ್ ಕಡಬದಲ್ಲಿ ಶುಭಾರಂಭಗೊಂಡಿತು. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಬೇಕಾದ ಹನಾ, ಕೊಕಕೋಲಾ, ಪೆಪ್ಸಿ, ಸ್ಪ್ರೈಟ್ ಸೇರಿದಂತೆ ವಿವಿಧ ಬ್ರ್ಯಾಂಡ್ ಗಳ ಸಾಫ್ಟ್ ಡ್ರಿಂಕ್ಸ್, ನೀರಿನ ಬಾಟಲಿಗಳು ಹೋಲ್ ಸೇಲ್ ಹಾಗೂ ರಿಟೇಲ್ ಆಗಿ ಗ್ರಾಹಕರಿಗೆ ದೊರೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 9008691557 ಅಥವಾ 7619515429 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕಡಬ: ಸಾಫ್ಟ್ ಡ್ರಿಂಕ್ಸ್ ಹೋಲ್ ಸೇಲ್ ಮಾರಾಟ ಸಂಸ್ಥೆ ರೋಯಲ್ ಟ್ರೇಡರ್ಸ್ ಶುಭಾರಂಭ ➤ ಮದುವೆ, ಶುಭ ಸಮಾರಂಭಗಳ ಖರೀದಿಗೆ ವಿಶೇಷ ಆಫರ್ Read More »

ಕರಾವಳಿ

ಆಸ್ತಿ ವಿಚಾರದಲ್ಲಿ ವಿವಾದ ➤ 5 ಲಕ್ಷ ರೂ. ಸುಪಾರಿ ನೀಡಿ ತಾಯಿಯನ್ನೇ ಕೊಂದ ಪಾಪಿ ಪುತ್ರ

(ನ್ಯೂಸ್ ಕಡಬ) Newskadaba.com ಚಿಕ್ಕಬಳ್ಳಾಪುರ, ಅ. 16. ಇಬ್ಬರು ಸುಪಾರಿ ಕಿಲ್ಲರ್ ಗಳಿಬ್ಬರು ಸೇರಿ ಮಹಿಳೆಯೋರ್ವರನ್ನು ಬರ್ಬರವಾಗಿ ಹತ್ಯೆಗೈದ ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಬಂಧಿತರನ್ನು ಆಂಧ್ರಪ್ರದೇಶದ ವಿಜಯವಾಡದ ಮುಖೇಶ್ ಹಾಗೂ ಹರಿ ಎಂದು ಗುರುತಿಸಲಾಗಿದೆ. ಹತ್ಯೆಯಾದವರನ್ನು ನಳಿನಿ(55) ಎಂದು ಗುರುತಿಸಲಾಗಿದೆ. ಮಹಿಳೆಯ ಮನೆಗೆ ನುಗ್ಗಿ ಕತ್ತು ಕುಯ್ದು ಮಹಿಳೆಯನ್ನು ಹತ್ಯೆಗೈದು, ಪರಾರಿಯಾಗುತ್ತಿದ್ದ ಆರೋಪಿಗಳನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ತಿ ವಿಚಾರದಲ್ಲಿ ಸ್ವತಃ ಮಗನೇ ತಾಯಿಯನ್ನು ಕೊಲೆ ಮಾಡಲು 5

ಆಸ್ತಿ ವಿಚಾರದಲ್ಲಿ ವಿವಾದ ➤ 5 ಲಕ್ಷ ರೂ. ಸುಪಾರಿ ನೀಡಿ ತಾಯಿಯನ್ನೇ ಕೊಂದ ಪಾಪಿ ಪುತ್ರ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪತಿಗೆ ಅಕ್ರಮ ಸಂಬಂಧ..! ➤ ಶೂಟ್ ಮಾಡಿ ಕೊಂದು ಮೃತದೇಹವನ್ನು ತುಂಡರಿಸಿ 3 ಸೂಟ್ ಕೇಸ್ ನಲ್ಲಿ ಸಾಗಾಟ- ದೃಶ್ಯ ಸಿಸಿಟಿವಿಯಲ್ಲಿ ಸೆರೆ ➤➤ ಪತ್ನಿ ಅರೆಸ್ಟ್

(ನ್ಯೂಸ್ ಕಡಬ) Newskadaba.com ಬ್ರೆಸಿಲಿಯಾ, ಅ. 16. ತನ್ನ ಗಂಡನನ್ನೇ ಕೊಂದು ಮೃತ ದೇಹವನ್ನು ಸೂಟ್‍ಕೇಸ್‍ನಲ್ಲಿರಿಸಿ ಸಾಗಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ. ಕೊಲೆಯಾದವರನ್ನು ಮಾರ್ಕೋಸ್ ಮಟ್ಸುನಾಗಾ ಎಂದು ಗುರುತಿಸಲಾಗಿದೆ. ಪತ್ನಿ ಎಲೀಟ್ ಮುಟ್ಸುನಾಗಾ ಪತಿಯನ್ನು ಕೊಲೆ ಮಾಡಿದ್ದಾಳೆ. ಆಕೆ ತನ್ನ ಪತಿಯ ಮೇಲಿನ ಸಿಟ್ಟು ತೀರಿಸಲು ಕೊಲೆ ಮಾಡಿದ್ದು, ನಂತರ ಮೃತದೇಹವನ್ನು ತುಂಡು ತುಂಡು ಮಾಡಿ ಸೂಟ್‍ ಕೇಸ್‍ನಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ ಎನ್ನಲಾಗಿದೆ. ಎಲೀಟ್ ಮನೆಯವರ ಹಾಗೂ ತನ್ನಿಚ್ಛೆಯಂತೆ

ಪತಿಗೆ ಅಕ್ರಮ ಸಂಬಂಧ..! ➤ ಶೂಟ್ ಮಾಡಿ ಕೊಂದು ಮೃತದೇಹವನ್ನು ತುಂಡರಿಸಿ 3 ಸೂಟ್ ಕೇಸ್ ನಲ್ಲಿ ಸಾಗಾಟ- ದೃಶ್ಯ ಸಿಸಿಟಿವಿಯಲ್ಲಿ ಸೆರೆ ➤➤ ಪತ್ನಿ ಅರೆಸ್ಟ್ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಪತ್ರಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ ಗೆ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 16. ಕೋರೋನಾ ಸೋಂಕಿನಿಂದ ಮೃತಪಟ್ಟ ಯಶವಂತ ಐಕಳ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು, ಪತ್ರಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು,

ಪತ್ರಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ ಗೆ ಮನವಿ Read More »

ಕರಾವಳಿ, ಕರ್ನಾಟಕ

ನೀರಿನಲ್ಲಿ ಮುಳುಗಿ ನಾಲ್ವರು ದುರ್ಮರಣ ➤ ದುರ್ಗಾದೇವಿ ವಿಗ್ರಹ ವಿಸರ್ಜನೆಯ ವೇಳೆ ನಡೆದ ಘಟನೆ

(ನ್ಯೂಸ್ ಕಡಬ) Newskadaba.com ನವದೆಹಲಿ, ಅ. 16. ದುರ್ಗಾ ದೇವಿಯ ವಿಗ್ರಹ ವಿಸರ್ಜನೆಯ ವೇಳೆ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರಾಜಸ್ಥಾನದ ಧೋಲ್ಪುರ ಜಿಲ್ಲೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ಜಯಪ್ರಕಾಶ್(22), ಶ್ರೀಕೃಷ್ಣ(23), ರಾಜೇಶ್ (26) ಹಾಗೂ ಅವರ ಸಹೋದರ ರಣವೀರ್ ಸಿಂಗ್ (24) ಎಂದು ಗುರುತಿಸಲಾಗಿದೆ. ಇವರೆಲ್ಲ ಇಲ್ಲಿನ ಭೂತೇಶ್ವರ ದೇವಾಲಯ ಸಮೀಪದ ಪಾರ್ವತಿ ನದಿಯಲ್ಲಿ ದುರ್ಗಾದೇವಿಯ ವಿಗ್ರಹ ವಿಸರ್ಜನೆಗೆಂದು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನೀರಿನಲ್ಲಿ ಮುಳುಗಿ ನಾಲ್ವರು ದುರ್ಮರಣ ➤ ದುರ್ಗಾದೇವಿ ವಿಗ್ರಹ ವಿಸರ್ಜನೆಯ ವೇಳೆ ನಡೆದ ಘಟನೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top