News Kadaba Desk

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಸೈಂಟ್ ಆನ್ಸ್ ಶಾಲೆ ಕಡಬದ ವಿದ್ಯಾರ್ಥಿಗಳು ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಆ. 11. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರಿನಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಮೂವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಆಶ್ವಿ ಶೆಟ್ಟಿ ಹಾಗೂ 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಗೌತಮ ಪ್ರಸಾದ ಹಾಗೂ ಅದ್ವಿತ್ ಆಯ್ಕೆಯಾಗಿದ್ದಾರೆ. ಕುಮಾರಿ ಸಾನ್ವಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ವಿಜೇತರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಚಾಲಕರಾದ ವಂದನೀಯ ಪ್ರಕಾಶ್ ಪೌಲ್ […]

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಸೈಂಟ್ ಆನ್ಸ್ ಶಾಲೆ ಕಡಬದ ವಿದ್ಯಾರ್ಥಿಗಳು ಆಯ್ಕೆ Read More »

ಕರಾವಳಿ, ಕ್ರೀಡಾ ನ್ಯೂಸ್

EPFO Alert: PF ಖಾತೆದಾರರೇ ಎಚ್ಚರ! ಸಣ್ಣ ತಪ್ಪಿನಿಂದ ಖಾತೆ ಖಾಲಿಯಾದೀತು!

(ನ್ಯೂಸ್‌ ಕಡಬ) newskadaba.com,  ಆ.11 : ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಕೋಟ್ಯಂತರ ಸದಸ್ಯರಿಗೆ ಆನ್‌ಲೈನ್ ಹಾಗೂ ಸೈಬರ್ ವಂಚನೆಗಳ ಕುರಿತು ಮಹತ್ವದ ಎಚ್ಚರಿಕೆ ನೀಡಿದೆ.ವಂಚಕರು ನಕಲಿ ಲಿಂಕ್, SMS, WhatsApp ಮತ್ತು ಇ-ಮೇಲ್ ಮೂಲಕ “ಖಾತೆ ಬಂದ್ ಆಗುತ್ತದೆ” ಅಥವಾ “KYC ಅಪ್‌ಡೇಟ್ ಮಾಡಿ” ಎಂದು ಹೆದರಿಸಿ ಮಾಹಿತಿ ಕದಿಯುತ್ತಿದ್ದಾರೆ. ನಕಲಿ ವೆಬ್‌ಸೈಟ್‌ಗಳ ಮೂಲಕ ನಿಮ್ಮ UAN, OTP, ಆಧಾರ್, PAN ಮತ್ತು ಬ್ಯಾಂಕ್ ವಿವರಗಳನ್ನು ಪಡೆಯಲು ಯತ್ನಿಸಲಾಗುತ್ತಿದೆ.EPFO ಅಥವಾ ಯಾವುದೇ ಸರ್ಕಾರಿ ಅಧಿಕಾರಿಗಳು

EPFO Alert: PF ಖಾತೆದಾರರೇ ಎಚ್ಚರ! ಸಣ್ಣ ತಪ್ಪಿನಿಂದ ಖಾತೆ ಖಾಲಿಯಾದೀತು! Read More »

ಕರಾವಳಿ

ಸ್ಮಾರ್ಟ್ ಸಿಟಿ ಯೋಜನೆ: ಐತಿಹಾಸಿಕ ಟಾಗೋರ್ ಪಾರ್ಕ್‌ನಲ್ಲಿ ₹75 ಲಕ್ಷ ವೆಚ್ಚದ ಬೃಹತ್ ಧ್ವಜಸ್ತಂಭ ಸಿದ್ಧ

(ನ್ಯೂಸ್‌ ಕಡಬ) newskadaba.com,  ಆ.11 : ಮಂಗಳೂರಿನ ಐತಿಹಾಸಿಕ ಬಾವುಟಗುಡ್ಡೆಯ ಟಾಗೋರ್ ಪಾರ್ಕ್ನಲ್ಲಿ ₹75 ಲಕ್ಷ ವೆಚ್ಚದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ 14 ಟನ್ ತೂಕದ, 78 ಮೀಟರ್ (ಜಿಐ ಲೋಹದ) ಎತ್ತರದ ಬೃಹತ್ ಧ್ವಜಸ್ತಂಭ ನಿರ್ಮಿಸಲಾಗಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜ ಹಾರಿಸಲು ಸಿದ್ಧತೆ ನಡೆಸಲಾಗಿದೆ. ಮೋಟರೀಕೃತ ಧ್ವಜಾರೋಹಣ ವ್ಯವಸ್ಥೆ, ಮಿಂಚುಬಂಧಕ, ವಿಮಾನಗಳಿಗೆ ಸಂಕೇತ ನೀಡಲು ಕೆಂಪು ಮಾರ್ಗಸೂಚಿ ದೀಪಗಳು ಹಾಗೂ ಬಿರುಸಿನ ಗಾಳಿಗೆ ತಡೆಯಬಲ್ಲ 30×45 ಅಡಿ ಗಾತ್ರದ ವಿಶೇಷ ಪಾಲಿಸ್ಟರ್

ಸ್ಮಾರ್ಟ್ ಸಿಟಿ ಯೋಜನೆ: ಐತಿಹಾಸಿಕ ಟಾಗೋರ್ ಪಾರ್ಕ್‌ನಲ್ಲಿ ₹75 ಲಕ್ಷ ವೆಚ್ಚದ ಬೃಹತ್ ಧ್ವಜಸ್ತಂಭ ಸಿದ್ಧ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುರತ್ಕಲ್ ರೈಲು ನಿಲ್ದಾಣದಲ್ಲಿ ಚಲಿಸುವ ರೈಲು ಹತ್ತಲು ಹೋಗಿ ಬಿದ್ದ ವೃದ್ಧ

(ನ್ಯೂಸ್‌ ಕಡಬ) newskadaba.com,  ಆ.11: ಸೋಮವಾರ ಮುಂಬೈನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ರೈಲಿನಲ್ಲಿ ಘಟನೆ ನಡೆದಿದೆ. ಸುರತ್ಕಲ್ ನಿಲ್ದಾಣದಲ್ಲಿ ರೈಲು ನಿಂತಾಗ ಕೆಳಗಿಳಿದಿದ್ದ ವೃದ್ಧ ಪ್ರಯಾಣಿಕರೊಬ್ಬರು, ರೈಲು ಹೊರಟಾಗ ಅವಸರದಲ್ಲಿ ಚಲಿಸುವ ರೈಲನ್ನು ಹತ್ತಲು ಯತ್ನಿಸಿ ಆಯತಪ್ಪಿ ಹಳಿಗೆ ಬಿದ್ದಿದ್ದಾರೆ ಕರ್ತವ್ಯದಲ್ಲಿದ್ದ ರೈಲ್ವೆ ಪಾಯಿಂಟ್ಸ್‌ಮ್ಯಾನ್ ಸಂದೀಪ್ ನಾಯಕ್ ಅವರು ತಕ್ಷಣವೇ ಸ್ಪಂದಿಸಿ, ಹಳಿಗೆ ಬಿದ್ದ ವೃದ್ಧರನ್ನು ರೈಲಿನಿಂದ ದೂರಕ್ಕೆ ಎಳೆದು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ಸಮಯಪ್ರಜ್ಞೆಯಿಂದ ಪ್ರಾಣಾಪಾಯ ತಪ್ಪಿಸಿದ ಪಾಯಿಂಟ್ಸ್‌ಮ್ಯಾನ್ ಸಂದೀಪ್ ನಾಯಕ್ ಅವರ ಸಾಹಸಕ್ಕೆ ರೈಲ್ವೆ ಇಲಾಖೆ ಹಾಗೂ

ಸುರತ್ಕಲ್ ರೈಲು ನಿಲ್ದಾಣದಲ್ಲಿ ಚಲಿಸುವ ರೈಲು ಹತ್ತಲು ಹೋಗಿ ಬಿದ್ದ ವೃದ್ಧ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂಡೇನ್ ಗ್ಯಾಸ್ ಗ್ರಾಹಕರ ಗಮನಕ್ಕೆ: ಆ.14 ಇ-ಕೆವೈಸಿ ಪೂರ್ಣಗೊಳಿಸಲು ಕೊನೆಯ ದಿನ!

(ನ್ಯೂಸ್‌ ಕಡಬ) newskadaba.com, ಆ.10: ಇಂಡೇನ್ ಗ್ಯಾಸ್ ಗ್ರಾಹಕರು ತಮ್ಮ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಗಸ್ಟ್ 14 ಕೊನೆಯ ದಿನವಾಗಿದೆ. ಇ-ಕೆವೈಸಿ ಮಾಡಿಸುವುದು ಬಾಕಿ ಇರುವ ಬಳಕೆದಾರರು ನಿಗದಿತ ದಿನಾಂಕದೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ನಿಗದಿತ ಸಮಯದೊಳಗೆ ಇ-ಕೆವೈಸಿ ಮಾಡಿಸದಿದ್ದಲ್ಲಿ ಗ್ಯಾಸ್ ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.ಅರ್ಹ ಬಳಕೆದಾರರು ಹೆಚ್ಚಿನ ವಿವರಗಳಿಗಾಗಿ ಕಚೇರಿ ವೇಳೆಯಲ್ಲಿ ರೈ ಇಂಡೇನ್ ಗ್ಯಾಸ್ ಕಚೇರಿಯನ್ನು ಸಂಪರ್ಕಿಸಬಹುದು.

ಇಂಡೇನ್ ಗ್ಯಾಸ್ ಗ್ರಾಹಕರ ಗಮನಕ್ಕೆ: ಆ.14 ಇ-ಕೆವೈಸಿ ಪೂರ್ಣಗೊಳಿಸಲು ಕೊನೆಯ ದಿನ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬ್ರೇಕಪ್ ಸಿಟ್ಟಿಗೆ ಪ್ರಿಯತಮೆಯ ಭೀಕರ ಹತ್ಯೆ: ಜರ್ಮನಿಯಿಂದ ಭಾರತಕ್ಕೆ ಎಸ್ಕೇಪ್ ಆಗಲು ನೋಡ್ತಿದ್ದ ಆರೋಪಿ ಬಂಧನ

(ನ್ಯೂಸ್‌ ಕಡಬ) newskadaba.com, ಆ.10:ಅರಿಝೋನಾ ವಿಶ್ವವಿದ್ಯಾಲಯದ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಕಾಲೇಜು ವಿದ್ಯಾರ್ಥಿನಿ ಜುಲಿಸ್ಸಾ ರೂಬಿ ಸಲಾಜರ್ ಶವವಾಗಿ ಪತ್ತೆಯಾಗಿದ್ದು, ಆಕೆಯ ಪ್ರಿಯಕರ ಭಾರತೀಯ ಮೂಲದ ವರುಣ್ ಬಚ್ಚಿಗಾರಿ ಎಂಬಾತನನ್ನು ಜರ್ಮನಿಯಲ್ಲಿ ಬಂಧಿಸಲಾಗಿದೆ. ಸಲಾಜರ್ ಮೇಲೆ ವರುಣ್ ನಿರಂತರ ಹಲ್ಲೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಆಕೆ ಆತನಿಂದ ಬ್ರೇಕಪ್ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಕೊಲೆಗೂ ಮುನ್ನ ಆಕೆಯ ಕೊಠಡಿಯಿಂದ ಕಿರುಚಾಟ ಕೇಳಿಸಿತ್ತು ಎಂದು ರೂಮ್‌ಮೇಟ್‌ಗಳು ಮಾಹಿತಿ ನೀಡಿದ್ದಾರೆ. ಮೃತದೇಹದ ಮೇಲೆ ಗಾಯದ ಗುರುತುಗಳಿದ್ದು, ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಹತ್ಯೆ

ಬ್ರೇಕಪ್ ಸಿಟ್ಟಿಗೆ ಪ್ರಿಯತಮೆಯ ಭೀಕರ ಹತ್ಯೆ: ಜರ್ಮನಿಯಿಂದ ಭಾರತಕ್ಕೆ ಎಸ್ಕೇಪ್ ಆಗಲು ನೋಡ್ತಿದ್ದ ಆರೋಪಿ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಇಬ್ಬರು ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ

(ನ್ಯೂಸ್‌ ಕಡಬ) newskadaba.com, ಆ.10: ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಉಡುಪಿ ನ್ಯಾಯಾಲಯವು ಇಬ್ಬರು ಆರೋಪಿಗಳನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಉತ್ತರಾಖಂಡ ಮೂಲದ ಆಕಾಶ್ (ಅಲಿಯಾಸ್ ಅನ್ಮೋಲ್ ರಸ್ತೋಗಿ) ಹಾಗೂ ಬಿಹಾರದ ಜಿಯಾವುಲ್ಲಾ (ಅಲಿಯಾಸ್ ದೀಪಕ್) ಬಂಧಿತ ಆರೋಪಿಗಳಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದ ಇವರನ್ನು ಪ್ರಕರಣದ ತನಿಖಾಧಿಕಾರಿ, ಕಾಪು ಇನ್ಸ್‌ಪೆಕ್ಟರ್ ಅಜ್ಮತ್ ಅಲಿ ಸೋಮವಾರ ಕೋರ್ಟ್‌ಗೆ ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆ

ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಇಬ್ಬರು ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ನಿಯಮ ಮೀರಿ ಶಾಲಾ ಮಕ್ಕಳ ಸಾಗಾಟ; 13 ವಾಹನಗಳ ವಿರುದ್ಧ ಸಂಚಾರ ಪೊಲೀಸರ ತಪಾಸಣೆ, ಕೇಸ್ ದಾಖಲು

(ನ್ಯೂಸ್‌ ಕಡಬ) newskadaba.com, ಆ.10: ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಬಂಟ್ವಾಳ ಸಂಚಾರ ಪೊಲೀಸರು ನಡೆಸಿದ ವಿಶೇಷ ತಪಾಸಣಾ ಕಾರ್ಯಾಚರಣೆಯಲ್ಲಿ ನಿಯಮ ಉಲ್ಲಂಘಿಸಿ ಮಕ್ಕಳನ್ನು ಸಾಗಿಸುತ್ತಿದ್ದ ವಾಹನಗಳ ವಿರುದ್ಧ ಒಟ್ಟು 13 ಪ್ರಕರಣಗಳನ್ನು ದಾಖಲಿಸಲಾಗಿದೆ.ಬಂಟ್ವಾಳ ಟ್ರಾಫಿಕ್ ಎಸ್ಐ ಆದರ್ಶ್ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು. ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ 8 ವಾಹನಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ.ಅಗತ್ಯ ದಾಖಲೆಗಳನ್ನು ಹೊಂದಿರದಿರುವುದು ಹಾಗೂ ನಿಯಮ ಉಲ್ಲಂಘನೆಗಾಗಿ 5 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  

ಬಂಟ್ವಾಳ: ನಿಯಮ ಮೀರಿ ಶಾಲಾ ಮಕ್ಕಳ ಸಾಗಾಟ; 13 ವಾಹನಗಳ ವಿರುದ್ಧ ಸಂಚಾರ ಪೊಲೀಸರ ತಪಾಸಣೆ, ಕೇಸ್ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಬೀಸಿ ದಾಂಧಲೆ: ಕುಖ್ಯಾತ ರೌಡಿಶೀಟರ್ ಸೇರಿ ಇಬ್ಬರ ಬಂಧನ

(ನ್ಯೂಸ್‌ ಕಡಬ) newskadaba.com, ಆ.10 :ತೊಕ್ಕೊಟ್ಟಿನ ವಿನಮ್ರ ಬಾರ್‌ನಲ್ಲಿ ತಲವಾರು ಬೀಸಿ ಸಾರ್ವಜನಿಕರಿಗೆ ಹಾಗೂ ಬಾರ್ ಸಿಬ್ಬಂದಿಗೆ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಕುಖ್ಯಾತ ರೌಡಿಶೀಟರ್ ಸೇರಿದಂತೆ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.ಉಳ್ಳಾಲದ ಮಾರ್ಗತಲೆ ನಿವಾಸಿ ಮೊಹಮ್ಮದ್ ಶಾಕಿರ್ (31) ಹಾಗೂ ಮಂಚಿಲ ನಿವಾಸಿ, ಆಟೋರಿಕ್ಷಾ ಚಾಲಕ ಅಶ್ಫಾಕ್ (28) ಭಾನುವಾರ ರಾತ್ರಿ ಸುಮಾರು 12:00 ರಿಂದ 12:20 ರ ನಡುವೆ ಅಶ್ಫಾಕ್‌ನ ರಿಕ್ಷಾದಲ್ಲಿ ಬಂದ ಶಾಕಿರ್, ತಲವಾರು ಹಿಡಿದು ಸಾರ್ವಜನಿಕರನ್ನು ಭಯಭೀತಗೊಳಿಸಿದ್ದಾನೆ. ಬಾರ್‌ಗೆ ನುಗ್ಗಿ ಮಾರಕಾಸ್ತ್ರ

ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಬೀಸಿ ದಾಂಧಲೆ: ಕುಖ್ಯಾತ ರೌಡಿಶೀಟರ್ ಸೇರಿ ಇಬ್ಬರ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿದ್ಯಾಭಾರತಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ: ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಗೆ ಪ್ರಶಸ್ತಿ

(ನ್ಯೂಸ್‌ ಕಡಬ) newskadaba.com, ಆ.10 : ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಶ್ರೀದೇವಿ ವಿದ್ಯಾ ಕೇಂದ್ರ, ಪುಣಚ ಇಲ್ಲಿ ನಡೆಸಿದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆ ಕಡಬ ಇಲ್ಲಿಯ ವಿದ್ಯಾರ್ಥಿಗಳು ಭಾಗವಹಿಸಿ, ಪ್ರಶಸ್ತಿ ಪಡೆದಿರುತ್ತಾರೆ. 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಹವನ್ ಎ.ವೈ. (9ನೇ ತರಗತಿ) ಮತ್ತು ಲೋಹಿತ್ ಪಿ. (9ನೇ ತರಗತಿ) ಇವರು ಪ್ರಥಮ ಸ್ಥಾನವನ್ನು ಪಡೆದು ಮುಂದೆ ನಡೆಯುವ ಪ್ರಾಂತ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ವಿದ್ಯಾಭಾರತಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ: ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಗೆ ಪ್ರಶಸ್ತಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top