News Kadaba Desk

ಉಪ್ಪಿನಂಗಡಿ: ಅಕ್ರಮ ಗೋಮಾಂಸ ಸಾಗಾಟ ಪತ್ತೆ – ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು.30. ಅಕ್ರಮವಾಗಿ ಜಾನುವಾರು ಮಾಂಸ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಉಪ್ಪಿನಂಗಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ  ಭಾನುವಾರದಂದು ನಡೆದಿದೆ. ಬಂಧಿತ ಆರೋಪಿಗಳನ್ನು ತಣ್ಣೀರುಪಂಥ ನಿವಾಸಿಗಳಾದ ಬಶೀರ್ (32) ಹಾಗೂ ಜೈನುದ್ದೀನ್ (28) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಇಳಂತಿಲ ಕ್ರಾಸ್ ಬಳಿ ಮಾರುತಿ ಓಮ್ನಿಯೊಂದನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ 300 ಕೆ.ಜಿ. ಜಾನುವಾರು ಮಾಂಸ ಪತ್ತೆಯಾಗಿದೆ. ಓಮ್ನಿ ಕಾರು ಹಾಗೂ ಜಾನುವಾರು ಮಾಂಸವನ್ನು ವಶಕ್ಕೆ ತೆಗೆದುಕೊಂಡ […]

ಉಪ್ಪಿನಂಗಡಿ: ಅಕ್ರಮ ಗೋಮಾಂಸ ಸಾಗಾಟ ಪತ್ತೆ – ಇಬ್ಬರ ಬಂಧನ Read More »

ಕರಾವಳಿ

ಬಲ್ಯ: ಅಪರಿಚಿತ ಮಹಿಳೆಯ ಶವ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಜು.30. ಇಲ್ಲಿನ ಬಲ್ಯ ಗ್ರಾಮದ ಕೆಮ್ಮತ ಕೂಟೇಲು ಎಂಬಲ್ಲಿ ಗುಂಡ್ಯ ಹೊಳೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆವೊಂದು ತೇಲಾಡುವ ಸ್ಥಿತಿಯಲ್ಲಿ ಭಾನುವಾರ ಅಪರಾಹ್ನ ಪತ್ತೆಯಾಗಿದೆ. ಮಹಿಳೆಯು ಕೆಂಪು ಬಣ್ಣದ ಚೂಡಿದಾರ್ ಟಾಪ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕಳೆದೆರಡು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ಸ್ಥಳೀಯ ವ್ಯಕ್ತಿಯೋರ್ವರು ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಲ್ಯ: ಅಪರಿಚಿತ ಮಹಿಳೆಯ ಶವ ಪತ್ತೆ Read More »

ಕರಾವಳಿ

ಇನ್ನೂ ಪತ್ತೆಯಾಗದ ಪುಳಿಕುಕ್ಕು ಸೇತುವೆಯಿಂದ ನದಿಗೆ ಹಾರಿದ ವ್ಯಕ್ತಿ ► ಶೋಧ ಕಾರ್ಯದಲ್ಲಿ ತೊಡಗಿದ ಅಗ್ನಿಶಾಮಕ ದಳ

(ನ್ಯೂಸ್ ಕಡಬ) newskadaba.com ಕಡಬ, ಜು.30. ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಸೇತುವೆಯಿಂದ ಕುಮಾರಧಾರ ನದಿಗೆ ವ್ಯಕ್ತಿಯೋಬ್ಬರು ಹಾರಿದ್ದು, ಅವರು ನದಿ ನೀರಿನಲ್ಲಿ ನಾಪತ್ತೆಯಾದ ಘಟನೆ ಜು.29ರಂದು ಮಧ್ಯಾಹ್ನ ವೇಳೆ ನಡೆದಿತ್ತು. ಮೂಲತಃ ಎಡಮಂಗಲ ಗ್ರಾಮದ ಕೂಟಾಜೆ ನಿವಾಸಿ ದಿ.ಕುಶಾಲಪ್ಪ ಗೌಡರ ಪುತ್ರ ಧರ್ಮಪಾಲ(43ವ.) ಎಂಬವರೇ ನದಿಗೆ ಹಾರಿದ ವ್ಯಕ್ತಿ. ಈ ಬಗ್ಗೆ ಅವರ ಪತ್ನಿ ವಿಶಾಲಾಕ್ಷಿಯವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧರ್ಮಪಾಲರವರು ಬೆಂಗಳೂರಿನಲ್ಲಿ ಗಾರ್ಮೆಂಟ್ಸ್‌ ಒಂದರಲ್ಲಿ ಉದ್ಯೋಗದಲ್ಲಿದ್ದು ಒಂದು ವಾರದ ಹಿಂದೆಯಷ್ಟೆ ಊರಿಗೆ ಬಂದಿದ್ದರು.

ಇನ್ನೂ ಪತ್ತೆಯಾಗದ ಪುಳಿಕುಕ್ಕು ಸೇತುವೆಯಿಂದ ನದಿಗೆ ಹಾರಿದ ವ್ಯಕ್ತಿ ► ಶೋಧ ಕಾರ್ಯದಲ್ಲಿ ತೊಡಗಿದ ಅಗ್ನಿಶಾಮಕ ದಳ Read More »

ಕರಾವಳಿ

ಸುಬ್ರಹ್ಮಣ್ಯದ ಅಧ್ಯಾಪಕನ ಕಾಮ ಪುರಾಣವನ್ನು ಬಿಚ್ಚಿಟ್ಟ ವಿದ್ಯಾರ್ಥಿನಿ ► ತನ್ನ ಕರ್ಮಕಾಂಡ ಬಯಲಾಗುತ್ತಲೇ ರಜೆಯಲ್ಲಿ ತೆರಳಿದ ಪುಷ್ಪರಾಜ್

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು.29. ಗುರು ದೇವೋಭವ ಎನ್ನುವ ಮಾತಿಗೆ ಬಹಳ ಮಹತ್ವವಿದೆ. ಗುರು ಎನ್ನುವವನು ತನ್ನಲ್ಲಿರುವ ಉತ್ತಮ ಗುಣ ನಡತೆಯನ್ನು ಶಿಷ್ಯಂದಿರಿಗೆ ಕಲಿಸಿಕೊಡುವ ಕಾರಣಕ್ಕಾಗಿ ಗುರುವನ್ನು ಶ್ರೇಷ್ಠ ಭಾವನೆಯಿಂದ ಕಾಣುತ್ತಾರೆ. ಆದರೆ ಅದೇ ಗುರು ಕೀಚಕನಾದ್ರೆ ಎಂತಹ ಅಸಹ್ಯ ಅಲ್ವಾ? ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದ ಕಾಲೇಜೊಂದರ ಪ್ರಾಧ್ಯಾಪಕನ ಅಸಲಿತನ ಇದೀಗ ಬಯಲಾಗಿದೆ. ಇಲ್ಲಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಕಳೆದ ಸುಮಾರು ಹದಿನೈದು ವರ್ಷಗಳಿಂದ ಪೊಲಿಟಿಕಲ್ ಸೈನ್ಸ್ ಪ್ರಾಧ್ಯಾಪಕನಾಗಿರುವ ಪುಷ್ಪರಾಜ್ ಕೆ. ಎಂಬಾತ

ಸುಬ್ರಹ್ಮಣ್ಯದ ಅಧ್ಯಾಪಕನ ಕಾಮ ಪುರಾಣವನ್ನು ಬಿಚ್ಚಿಟ್ಟ ವಿದ್ಯಾರ್ಥಿನಿ ► ತನ್ನ ಕರ್ಮಕಾಂಡ ಬಯಲಾಗುತ್ತಲೇ ರಜೆಯಲ್ಲಿ ತೆರಳಿದ ಪುಷ್ಪರಾಜ್ Read More »

ಕರಾವಳಿ

ಪುಳಿಕುಕ್ಕು: ಸೇತುವೆಯಿಂದ ಬಿದ್ದು ವ್ಯಕ್ತಿ ನೀರುಪಾಲು

(ನ್ಯೂಸ್ ಕಡಬ) newskadaba.com ಕಡಬ, ಜು.29. ಠಾಣಾ ವ್ಯಾಪ್ತಿಯ ಪುಳಿಕುಕ್ಕು ಎಂಬಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿಗೆ ಸೇತುವೆಯ ಮೇಲಿನಿಂದ ಬಿದ್ದ ವ್ಯಕ್ತಿಯೋರ್ವರು ನೀರುಪಾಲಾದ ಘಟನೆ ಶನಿವಾರ ಅಪರಾಹ್ನ ನಡೆದಿದೆ‌. ನೀರುಪಾಲಾದವರನ್ನು ಎಡಮಂಗಲ ಗ್ರಾಮದ ಕೂಟಾಜೆ ನಿವಾಸಿ ಧರ್ಮಪಾಲ(43) ಎಂದು ಗುರುತಿಸಲಾಗಿದೆ. ಇವರು ಇಂದು ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೆಂಡತಿಗೆ ಕರೆ ಮಾಡಿ ಹೇಳಿದ್ದು, ನಂತರ ಸೇತುವೆಯ ಮೇಲಿನಿಂದ ಕೆಳಗಡೆ ಬಿದ್ದಿದ್ದಾರೆ‌ ಎನ್ನಲಾಗಿದೆ. ಈ ಬಗ್ಗೆ ಧರ್ಮಪಾಲರವರ ಪತ್ನಿ ವಿಶಾಲಾಕ್ಷಿ ಎಂಬವರು ಕಡಬ ಠಾಣೆಗೆ ದೂರು

ಪುಳಿಕುಕ್ಕು: ಸೇತುವೆಯಿಂದ ಬಿದ್ದು ವ್ಯಕ್ತಿ ನೀರುಪಾಲು Read More »

ಕರಾವಳಿ

ಬೈಕ್ – ಬಸ್ ಢಿಕ್ಕಿ: ರಸ್ತೆಗೆಸೆಯಲ್ಪಟ್ಟ ಸವಾರ ಮೃತ್ಯು ► ಅಪಘಾತದ ತೀವ್ರತೆಗೆ ಬಸ್ಸಿನೊಳಗೆ ಸಿಲುಕಿಕೊಂಡ ಬೈಕ್

(ನ್ಯೂಸ್ ಕಡಬ) newskadaba.com ಪಡುಬಿದ್ರೆ, ಜು. 29. ಬೈಕೊಂದು ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಮೃತಪಟ್ಟ ಘಟನೆ ಶನಿವಾರದಂದು ಮಂಗಳೂರು – ಕುಂದಾಪುರ ಹೆದ್ದಾರಿಯ ಪಡುಬಿದ್ರೆ ಸಮೀಪದ ಬೀಡು ಎಂಬಲ್ಲಿ ನಡೆದಿದೆ. ಮೃತ ಬೈಕ್  ಸವಾರನನ್ನು ಮುಲ್ಕಿಯ ಕಿಲ್ಪಾಡಿ ನಿವಾಸಿ ಅವಿನಾಶ್ ದೇವಾಡಿಗ (28) ಎಂದು ಗುರುತಿಸಲಾಗಿದೆ. ಅವಿನಾಶ್ ಚಲಾಯಿಸುತ್ತಿದ್ದ ಯಮಹಾ FZ ಬೈಕ್ ಖಾಸಗಿ ಬಸ್‍ಗೆ ಢಿಕ್ಕಿ ಹೊಡೆದ ತೀವ್ರತೆಗೆ ಬಸ್ಸಿನ ಮುಂಭಾಗ ಜಖಂಗೊಂಡಿದ್ದು, ಬೈಕ್ ಬಸ್ಸಿನ ಒಳಗಡೆ ಸಿಲುಕಿಕೊಂಡಿದೆ. ಸವಾರನ ನಿಯಂತ್ರಣ

ಬೈಕ್ – ಬಸ್ ಢಿಕ್ಕಿ: ರಸ್ತೆಗೆಸೆಯಲ್ಪಟ್ಟ ಸವಾರ ಮೃತ್ಯು ► ಅಪಘಾತದ ತೀವ್ರತೆಗೆ ಬಸ್ಸಿನೊಳಗೆ ಸಿಲುಕಿಕೊಂಡ ಬೈಕ್ Read More »

ಕರ್ನಾಟಕ

ಸೋಮವಾರದಂದು ಕಡಬದಲ್ಲಿ ಕಾಂಗ್ರೆಸ್ ತಾಲೂಕು ಮಟ್ಟದ ಕಾರ್ಯಕರ್ತರ ಸಮಾವೇಶ ► ರಾಜ್ಯದ ವಿವಿಧ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತಿ

(ನ್ಯೂಸ್ ಕಡಬ) newskadaba.com ಕಡಬ, ಜು.29. ಕಡಬ ಬ್ಲಾಕ್ ಕಾಂಗ್ರೇಸ್ ಸಮಿತಿ ಆಶ್ರಯದಲ್ಲಿ ತಾಲೂಕು ಮಟ್ಟದ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶವು ಜುಲೈ 31 ನೇ ಸೋಮವಾರ ಬೆಳಿಗ್ಗೆ ಕಡಬ ಅನುಗ್ರಹ ಸಭಾಭವನದಲ್ಲಿ ನಡೆಯಲಿದೆ ಎಂದು ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದಿವಾಕರ ಗೌಡ ಶೀರಾಡಿ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಮಾವೇಶದಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ

ಸೋಮವಾರದಂದು ಕಡಬದಲ್ಲಿ ಕಾಂಗ್ರೆಸ್ ತಾಲೂಕು ಮಟ್ಟದ ಕಾರ್ಯಕರ್ತರ ಸಮಾವೇಶ ► ರಾಜ್ಯದ ವಿವಿಧ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತಿ Read More »

ಕರಾವಳಿ

ಓಲಾ ಕ್ಯಾಬ್ ಲಾರಿಗೆ ಢಿಕ್ಕಿ: ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.29. ಓಲಾ ಕ್ಯಾಬೊಂದು ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರ ಚಾಲಕ ಹಾಗೂ ಪ್ರಯಾಣಿಕನೋರ್ವ ಮೃತಪಟ್ಟ ಘಟನೆ ಬೆಂಗಳುರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಕ್ಯಾಬ್ ಚಾಲಕ ಶಂಕರ್ ಹಾಗೂ ಪ್ರಯಾಣಿಕ ದೆಹಲಿಯ ಉಮೇಶ್ ಕುಮಾರ್ ಮಿಶ್ರಾ ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಬೆಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಜಿಕೆವಿಕೆ ಮೇಲ್ಸೇತುವೆಯಲ್ಲಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿಗೆ ಓಲಾ ಕ್ಯಾಬ್ ಹಿಂದಿನಿಂದ ಢಿಕ್ಕಿ

ಓಲಾ ಕ್ಯಾಬ್ ಲಾರಿಗೆ ಢಿಕ್ಕಿ: ಇಬ್ಬರು ಮೃತ್ಯು Read More »

ಕರ್ನಾಟಕ

ಇಚಿಲಂಪಾಡಿ ಚರ್ಚ್ ಸೇರಿದಂತೆ 30ಕ್ಕೂ ಅಧಿಕ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು ► ಆರೋಪಿಗಳಿಬ್ಬರ ಸೆರೆ – ಪ್ರಮುಖ ಆರೋಪಿ ಪರಾರಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು.29. ಕಳೆದ ಕೆಲವು ದಿನಗಳ ಹಿಂದೆ ಪುತ್ತೂರು ತಾಲೂಕಿನ ಇಚಿಲಂಪಾಡಿ ಸೈಂಟ್ ಜಾರ್ಜ್ ಸಿರಿಯನ್ ಜಾಕೋಬೈಟ್ ಚರ್ಚಿನ ಕಳ್ಳತನ ಪ್ರಕರಣವನ್ನು ಬೇಧಿಸಿರುವ ಬೆಳ್ತಂಗಡಿ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ ಘಟನೆ ಶುಕ್ರವಾರದಂದು ನಡೆದಿದೆ. ಆರೋಪಿಗಳನ್ನು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಬಾನಸಂದ್ರ ಪಾಳ್ಯ ನಿವಾಸಿ ಉಮೇಶ್ ಬಿ.ಎನ್(30) ಮತ್ತು ಬೆಂಗಳೂರಿನ ಕುಂಬಳಗೋಡು ಗೇರುಪಾಳ್ಯ ನಿವಾಸಿ ವೆಂಕಟೇಶ್(38) ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ಬೆಂಗಳೂರು ನಿವಾಸಿ ನವೀನ್ ಪರಾರಿಯಾಗಿದ್ದಾನೆ. ಕಳ್ಳರಿಂದ ಬುಲೆಟ್, ಕೆಟಿಎಂ ಡ್ಯೂಕ್,

ಇಚಿಲಂಪಾಡಿ ಚರ್ಚ್ ಸೇರಿದಂತೆ 30ಕ್ಕೂ ಅಧಿಕ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು ► ಆರೋಪಿಗಳಿಬ್ಬರ ಸೆರೆ – ಪ್ರಮುಖ ಆರೋಪಿ ಪರಾರಿ Read More »

ರಾಷ್ಟ್ರೀಯ ನ್ಯೂಸ್

ಕಡಬ: ವೃತ್ತಿ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ

(ನ್ಯೂಸ್ ಕಡಬ) newskadaba.com ಕಡಬ, ಜು.29. ಉದ್ಯೋಗ ಖಾತರಿ ಯೋಜನೆ ಬಂದ ಬಳಿಕ ಸಮಾಜದಲ್ಲಿ ಬಹಳಷ್ಟು ಅಭಿವೃದ್ದಿ ಕಾರ್ಯಗಳು ನಡೆದಿದ್ದು ಇದು ಬಡವರಿಗೆ ವರದಾನವಿದ್ದಂತೆ ಎಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮಾಜಿ ಓಂಬುಡ್ಸ್‌ಮೆನ್ ಶೀನಶೆಟ್ಟಿ ಹೇಳಿದರು. ಅವರು ಕಡಬ ಸಮೀಪದ ಕೊರುಂದೂರು ಅಂಗನವಾಡಿ ಕೇಂದ್ರದಲ್ಲಿ ನಡೆದ ಮಹಿಳೆಯರ ವೃತ್ತಿ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಉದ್ಯೋಗ ಖಾತರಿ ಯೋಜನೆ ಬಂದ ಬಳಿಕ ಗ್ರಾಮ ಮಟ್ಟದ ಅಭಿವೃದ್ದಿಯಲ್ಲಿ ಬದಲಾವಣೆ ಕಂಡಿದೆ,

ಕಡಬ: ವೃತ್ತಿ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ Read More »

ಕರಾವಳಿ
Scroll to Top