ಸಂಪ್ಯ: ಖಾಸಗಿ ಬಸ್ – ರಿಕ್ಷಾ ಢಿಕ್ಕಿ ► ಮಹಿಳೆ‌ ಮೃತ್ಯು, ನಾಲ್ವರು ಗಂಭೀರ



(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.25. ಖಾಸಗಿ ಬಸ್ ಮತ್ತು ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಸಂಪ್ಯದಲ್ಲಿ ಭಾನುವಾರದಂದು ನಡೆದಿದೆ.







ಮೃತ ಮಹಿಳೆಯನ್ನು ಆರ್ಯಾಪು ಗ್ರಾಮದ ನಿವಾಸಿ ಮೋಹನ್ ಗೌಡ ಎಂಬವರ ಪತ್ನಿ ಲೀಲಾವತಿ (50) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ಸಂಪ್ಯದ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಮಹಿಳೆ‌ ಮೃತಪಟ್ಟಿದ್ದಾರೆ‌. ಗಂಭೀರ ಗಾಯಗೊಂಡ ಬಾಬು ಗೌಡ, ಸುಶೀಲ, ಮೋಹನ ಗೌಡ ಹಾಗೂ ಕಮಲರನ್ನು ಪುತ್ತೂರು ಹಾಗೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.






error: Content is protected !!
Scroll to Top