ಬುಲ್ಡೋಜರ್ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ಬ್ರೇಕ್..!

(ನ್ಯೂಸ್ ಕಡಬ) newskadaba.com ನ. 13. ಸಂವಿಧಾನದ 300 ಎ ವಿಧಿಯು ಕಾನೂನಿನ ಅಧಿಕಾರದಿಂದ ಹೊರತುಪಡಿಸಿ ಯಾವುದೇ ವ್ಯಕ್ತಿಯು ತನ್ನ ಆಸ್ತಿಯಿಂದ ವಂಚಿತನಾಗಬಾರದು ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್​,​ ದೇಶದಲ್ಲಿ ಬುಲ್ಡೋಜರ್​ ಕಾರ್ಯಾಚರಣೆಗೆ ತಡೆ ನೀಡಿ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.

ಕಾರ್ಯಾಂಗ, ಏಕಪಕ್ಷೀಯ ನಿರ್ಧಾರವು ತಪ್ಪು ಎಂದಿರುವ ಸರ್ವೋಚ್ಛ ನ್ಯಾಯಾಲಯವು, ಆರೋಪಿಗಳ ಮನೆಗಳನ್ನು ನೆಲಸಮ ಮಾಡುವಂತಿಲ್ಲ ಎಂದಿದೆ. ಬುಲ್ಡೋಜರ್ ಕ್ರಮ ಅಧಿಕಾರದ ಹಂಚಿಕೆಗೆ ವಿರುದ್ಧವಾಗಿದೆ. ದೇಶದ ಕಾನೂನನ್ನು ಗೌರವಿಸಬೇಕು ಎಂದಿರುವ ಸುಪ್ರೀಂ ಕೋರ್ಟ್​​​​ ನ ದ್ವಿಸದಸ್ಯ ಪೀಠವು ಈ ತೀರ್ಪಿನ್ನು ನೀಡಿದೆ.

Also Read  ಕಡಬ: ಮದ್ಯಪಾನ ಸಿಗದ್ದಕ್ಕೆ ಜಿಗುಪ್ಸೆ ➤ ನೇಣು ಬಿಗಿದು ಆತ್ಮಹತ್ಯೆ

ಬುಲ್ಡೋಜರ್ ಸಂಸ್ಕೃತಿ ನಾಗರಿಕ ಸಮಾಜಕ್ಕೆ ಮಾರಕವಾಗಿದೆ ಎಂದು ಈ ಹಿಂದೆಯೂ ಕೋರ್ಟ್​​ ಹೇಳಿದ್ದು, ಅಕ್ರಮ ಅತಿಕ್ರಮಣ ಅಥವಾ ಕಾನೂನುಬಾಹಿರವಾಗಿ ನಿರ್ಮಿಸಲಾದ ಕಟ್ಟಡಗಳನ್ನು ಕೆಡವಿಹಾಕಲು ಕ್ರಮ ಕೈಗೊಳ್ಳುವ ಮೊದಲು ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕು. ರಾಜ್ಯ ಮತ್ತು ಅದರ ಅಧಿಕಾರಿಗಳು ಅನಿಯಂತ್ರಿತ ಮತ್ತು ಅತಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದೆ.

error: Content is protected !!
Scroll to Top