ಕಂಬಳದ ವಿರುದ್ಧ ಪೇಟಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ► ಕಂಬಳ ನಿಷೇಧ ಹೋರಾಟಕ್ಕೆ ಪೇಟಾಗೆ ಹಿನ್ನಡೆ

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ.13. ಕಂಬಳ ನಿಷೇಧಿಸಬೇಕೆಂಬ ಪ್ರಾಣಿ ದಯಾ ಸಂಘ (ಪೇಟಾ)ದ ಹೋರಾಟಕ್ಕೆ ಹಿನ್ನಡೆಯಾಗಿದ್ದು, ಪೇಟಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಕಂಬಳ ಪರವಾದ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸುಪ್ರಿಂ ಕೋರ್ಟ್‌ಗೆ ಮಾಹಿತಿ ನೀಡಿತ್ತು. ಈ ಹಿನ್ನಲೆಯಲ್ಲಿ ಪೇಟಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಈ ಹಿಂದಿನ ಅರ್ಜಿಯನ್ನು ಮುಂದುವರಿಸಲು ಸಾಧ್ಯವಿಲ್ಲ. ಬೇಕಿದ್ದರೆ ನೂತನ ಕಾನೂನನ್ನು ಪ್ರಶ್ನಿಸಿ ಹೊಸದಾಗಿ ಮನವಿ ಸಲ್ಲಿಸಿ ಎಂದು ಪೇಟಾಗೆ ನಿರ್ದೇಶನ ನೀಡಿ ಈ ಹಿಂದಿನ ಅರ್ಜಿಯನ್ನು ವಜಾಗೊಳಿಸಿದೆ. ಇದರಿಂದಾಗಿ ಪೇಟಾದ ಕಂಬಳ ವಿರೋಧಿ ಹೋರಾಟಕ್ಕೆ ಬಹು ದೊಡ್ಡ ಹಿನ್ನಡೆಯಾಗಿದೆ.

Also Read  ಬೆಂಗಳೂರು ಕಟ್ಟಡ ಕುಸಿತ- ಮೃತರ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

error: Content is protected !!
Scroll to Top