(ನ್ಯೂಸ್ ಕಡಬ) newskadaba.com ನವದೆಹಲಿ, ಮಾ.06. ಇಲ್ಲಿಯವರೆಗೆ ಆಧಾರ್ ನೊಂದಿಗೆ ಶೇ. 80ರಷ್ಟು ಖಾತೆಗಳ ಜೋಡಣೆ ಹಾಗು ಶೇ. 60ರಷ್ಟು ಮೊಬೈಲ್-ಆಧಾರ್ ಜೋಡಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ಕೊನೆ ದಿನವಾಗಿದೆ ಎಂದು ಯುಐಡಿಎಐ ತಿಳಿಸಿದೆ.
ಕಪ್ಪುಹಣವನ್ನು ತಡೆಯುವ ಉದ್ದೇಶದಿಂದ ಪಾನ್ ಮತ್ತು ಆಧಾರ್ ಜೋಡಣೆಯನ್ನು ಆದಾಯ ಇಲಾಖೆಯು ಕಡ್ಡಾಯಗೊಳಿಸಿದ್ದು, ಮಾರ್ಚ್ 31 ಕೊನೆಯ ದಿನವಾಗಿದೆ. ಇದುವರೆಗೆ ಸುಮಾರು 87 ಕೋಟಿ ಬ್ಯಾಂಕ್ ಖಾತೆಗಳನ್ನು ಆಧಾರ್ ನೊಂದಿಗೆ ಜೋಡಣೆ ಮಾಡಲಾಗಿದ್ದು, 60 ಕೋಟಿ ಬ್ಯಾಂಕ್ ಖಾತೆಗಳ ದೃಢೀಕರಣ ಕಾರ್ಯ ಮುಗಿದಿದೆ ಎನ್ನಲಾಗಿದೆ. ಆಧಾರ್ ಲಿಂಕ್ ಮಾಡದೆ ಬಾಕಿ ಇರುವವರಲ್ಲಿ ಆದಷ್ಟು ಬೇಗ ಲಿಂಕ್ ಮಾಡಿಕೊಳ್ಳುವುದು ಒಳಿತು.