ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನ- ಮಹಿಳೆಯನ್ನು ರಕ್ಷಿಸಿದ ಟ್ಯಾಕ್ಸಿ ಚಾಲಕ

(ನ್ಯೂಸ್ ಕಡಬ) newskadaba.com ಮುಂಬೈ, ಆ. 17. ಸೇತುವೆಯಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೋರ್ವರನ್ನು ಕ್ಯಾಬ್‌ ಚಾಲಕ ಮತ್ತು ಪೊಲೀಸರು ಸಮಯಪ್ರಜ್ಞೆ ಮೆರೆದು ರಕ್ಷಣೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.

 

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನುಮುಂಬೈನ ಈಶಾನ್ಯ ಭಾಗದಲ್ಲಿರುವ ಮುಲುಂಡ್‌ ಪ್ರದೇಶದ ರೀಮಾ ಮುಖೇಶ್ ಪಟೇಲ್(56) ಎಂದು ಗುರುತಿಸಲಾಗಿದೆ. ಸೇತುವೆ ಮೇಲೆ ಹತ್ತಿದ ಮಹಿಳೆ ರೀಮಾ, ಏಕಾಏಕಿ ನೀರಿಗೆ ಹಾರಲು ಯತ್ನಿಸಿದ್ದು ಇದನ್ನು ಗಮನಿಸಿದ ಟ್ಯಾಕ್ಸಿ ಚಾಲಕ ಆಕೆ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಗಸ್ತು ನಿರತ ಪೊಲೀಸರು ಜೀವ ಪಣಕ್ಕಿಟ್ಟು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸುತ್ತಿರುವ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

Scroll to Top