ಕಣ್ಣು ಮಿಟುಕಿಸಿ ರಾತ್ರಿ ಬೆಳಗಾಗುವುದರೊಳಗೆ ದಾಖಲೆ ಸೃಷ್ಟಿಸಿದ ಮಲಯಾಳಿ ಹುಡುಗಿ ► ಪ್ರೇಮಿಗಳಲ್ಲಿ ಕಿಚ್ಚು ಎಬ್ಬಿಸಿದೆ ಸಿನಿಮಾ ಹಾಡೊಂದರ ದೃಶ್ಯ

(ನ್ಯೂಸ್ ಕಡಬ) newskadaba.com ಕೇರಳ, ಫೆ.12. ‘ಒರು ಅಡಾರ್ ಲವ್’ (Oru adaar love) ಎಂಬ ಮಲೆಯಾಳಂ ಸಿನಿಮಾದ ಒಂದು ಹಾಡಿನಿಂದ ರಾತ್ರಿ ಬೆಳೆಗಾಗುವುದರೊಳಗೆ ಮಲಯಾಳಿ ಹುಡುಗಿಯೋರ್ವಳು ಇಂಟರ್ ನೆಟ್ ಸ್ಟಾರ್ ಆಗಿ ಮಿಂಚಿದ್ದಾಳೆ.

ಮಾರ್ಚ್ 03 ಕ್ಕೆ ಬಿಡುಗಡೆಯಾಗಲಿರುವ ‘ಒರು ಅಡಾರ್ ಲವ್’ ಮಲಯಾಳಂ ಚಿತ್ರದ 18ರ ಹರೆಯದ ಯುವತಿ ಪ್ರಿಯಾ ಪ್ರಕಾಶ್ ವಾರಿಯರ್ ಳ ಕಣ್ ಮಿಟುಕಿಗೆ ಎಲ್ಲರೂ ಸೋತಿದ್ದಾರೆ. ಪ್ರೇಮಿಗಳ ದಿನ ಹತ್ತಿರವಿರುವಾಗ ಈ ಚಿತ್ರದ ನವಿರಾದ ದೃಶ್ಯವೊಂದು ಪ್ರೇಮಿಗಳಲ್ಲಿ ಕಿಚ್ಚು ಎಬ್ಬಿಸಿದೆ. ಒಂದು ಹಾಡಿನ ತುಣುಕು, ವಿದ್ಯಾರ್ಥಿಗಳ ನಡುವಿನ ಹುಬ್ಬೇರಿಸುವ ಕಣ್ ಹೊಡೆಯುವ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿದೆ. ಪ್ರಿಯಾಳ ಬಗ್ಗೆ ಹುಡುಕಾಟ ಒಂದೆಡೆಯಾದರೆ, ಪ್ರಿಯಾಳ ಸಾಮಾಜಿಕ ಜಾಲ ತಾಣ ಖಾತೆಗಳು ಹೊಸ ದಾಖಲೆ ಬರೆದಿವೆ. ಫೇಸ್​ಬುಕ್​, ವಾಟ್ಸ್​ಆ್ಯಪ್​, ಇನ್​ಸ್ಟಾಗ್ರಾಮ್ ಸೇರಿದಂತೆ ಯಾವ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದರೂ ಇದೇ ವೀಡಿಯೋ. ಇದೇ ಹುಡುಗಿಯ ವಾಟ್ಸ್​ಆ್ಯಪ್​ ಸ್ಟೇಟಸ್​.

Also Read  ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆಯಲ್ಲಿ ಭಾರೀ ಇಳಿಕೆ ➤ ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ ಸರಕಾರ

ಒಂದೇ ದಿನದಲ್ಲಿ ಇನ್​ಸ್ಟಾಗ್ರಾಮ್​ನಲ್ಲಿ 2 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಈ ಹಾಡು ಬಿಡುಗಡೆಯಾದ ಕೇವಲ 70 ಗಂಟೆಗಳ ಅವಧಿಯಲ್ಲಿ ಯ್ಯೂಟ್ಯೂಬ್ ನಲ್ಲಿ 77 ಲಕ್ಷಕ್ಕೂ ಹೆಚ್ಚು ಜನರು ಪ್ರಿಯಾ ಕಣ್ಣು ಹೊಡೆಯುವುದನ್ನು ವೀಕ್ಷಿಸಿಯಾಗಿದೆ. ಒಟ್ಟಿನಲ್ಲಿ ಹೀಗೆ ಸಣ್ಣ ದೃಶ್ಯವೊಂದರಲ್ಲಿ ಕಣ್ಣು ಹೊಡೆದ ಮಲ್ಲು ಹುಡುಗಿಯೊಬ್ಬಳು ಜಾಗತಿಕ ಮಟ್ಟದಲ್ಲಿ ರಾತ್ರಿ ಕಳೆದು ಬೆಳಗ್ಗಾಗುವಷ್ಟರಲ್ಲಿ ಸಕತ್ ಫೇಮಸ್ ಆಗಿ ಬಿಟ್ಟಿದ್ದಾಳೆ.

Also Read  ನಿರ್ಮಲಾ ಸೀತಾರಾಮನ್ ಆಸ್ಪತ್ರೆಗೆ ದಾಖಲು

error: Content is protected !!
Scroll to Top