ಏಷ್ಯನ್ ಗೇಮ್ಸ್- ಮೊದಲ ದಿನವೇ ಭಾರತಕ್ಕೆ ಚಿನ್ನದ ಪದಕ ತಂದ ಶೂಟಿಂಗ್ ತಂಡ

(ನ್ಯೂಸ್ ಕಡಬ) newskadaba.com ಹಾಂಗ್ ಝೌ, ಸೆ. 25. ಚೀನಾದ ಹಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದ ಮೊದಲ ದಿನವೇ ಬೆಳ್ಳಿ ಪದಕದ ಜೊತೆಗೆ ಭಾರತಕ್ಕೆ ಮೊದಲ ಚಿನ್ನ ಬಂದಿದೆ. ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ್ದ ಭಾರತದ ಏರ್ ರೈಫಲ್ ಶೂಟಿಂಗ್ ತಂಡಕ್ಕೆ 10 ಮೀಟರ್ ಏರ್ ರೈಫಲ್ ಶೂಟಿಂಗ್ ನಲ್ಲಿ ಚಿನ್ನದ ಪದಕ ಬಂದಿದೆ.


ಪುರುಷರ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ರುದ್ರಾಂಕ್ಷ್ ಪಾಟೀಲ್, ಐಶ್ವರಿ ತೋಮರ್ ಮತ್ತು ದಿವ್ಯಾಂಶ್ ಪನ್ವಾರ್ ತಂಡವು ಭಾರತಕ್ಕೆ ಚಿನ್ನದ ಪದಕವನ್ನು ತಂದು ಕೊಡುವಲ್ಲಿ ಯಶಸ್ವಿಯಾಗಿದೆ. 10 ಮೀಟರ್ ಏರ್ ರೈಫಲ್ ತಂಡವು ಫೈನಲ್‌ನಲ್ಲಿ ವಿಶ್ವ ದಾಖಲೆಯ ಸ್ಕೋರ್ ಗಳಿಸಿದೆ.

Also Read  ದೇಶದ ಜನತೆಗೆ ಸಿಹಿ ಸುದ್ದಿ ➤ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುವ ಸಾಧ್ಯತೆ !

error: Content is protected !!
Scroll to Top