ಇನ್ನುಮುಂದೆ ಜಿಮೇಲ್’ನಲ್ಲಿ ಏಕಕಾಲಕ್ಕೆ 50 ಮೇಲ್ ಡಿಲೀಟ್..! ಆಂಡ್ರಾಯ್ಡ್ ಜಿಮೇಲ್’ನಲ್ಲಿ “ಸೆಲೆಕ್ಟ್ ಆಲ್” ಸೇರ್ಪಡೆ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 24. ಇನ್ನು ಮುಂದೆ ಗೂಗಲ್, ಆಂಡ್ರಾಯ್ಡ್​​ ಫೋನ್ ಗಳಲ್ಲಿ ಜಿಮೇಲ್​’ಗೆ “Select all” ಬಟನ್ ಅನ್ನು ಸೇರಿಸುತ್ತಿದ್ದು, ಸದ್ಯ ಕೊನೆಗೂ ಈ ಆಪ್ಷನ್ ಜಿಮೇಲ್​ನಲ್ಲಿ ಲಭ್ಯವಾಗಲಿದೆ. ಈ Select all ಆಪ್ಷನ್ ಮೂಲಕ ಮೇಲ್ ನ ಇನ್​ಬಾಕ್ಸ್​​ನಲ್ಲಿರುವ 50 ಮೇಲ್​ಗಳನ್ನು ಏಕಕಾಲಕ್ಕೆ ಸೆಲೆಕ್ಟ್​ ಮಾಡಿ ಎಲ್ಲವನ್ನೂ ಒಮ್ಮೆಲೇ ಡಿಲೀಟ್ ಮಾಡಬಹುದು.

ಕಳೆದ ಹಲವು ವರ್ಷಗಳಿಂದ ಈ ಆವೃತ್ತಿ ವೆಬ್ ವರ್ಷನ್​​ನಲ್ಲಿ ಲಭ್ಯವಿದ್ದು, ಆದರೆ ಆಂಡ್ರಾಯ್ಡ್​ ನಲ್ಲಿ ಇರಲಿಲ್ಲ. ಆಂಡ್ರಾಯ್ಡ್​ ಡಿವೈಸ್​ ಮೂಲಕ ಜಿಮೇಲ್​ ಗಳನ್ನು ಡಿಲೀಟ್ ಮಾಡಬೇಕಾದರೆ ಒಂದೊಂದೇ ಮೇಲ್​ಗಳನ್ನು ಸೆಲೆಕ್ಟ್​ ಮಾಡಬೇಕಿತ್ತು. ಇದು ತುಂಬಾ ಸಮಯ ಹಿಡಿಯುವ ಕೆಲಸವಾಗಿತ್ತು. ಸದ್ಯ 50 ಜಿಮೇಲ್​ಗಳನ್ನು ಒಮ್ಮೆಲೇ ಸೆಲೆಕ್ಟ್​ ಮಾಡುವ ಆಪ್ಷನ್​ ಲಭ್ಯವಾಗುತ್ತಿರುವುದು ಬಳಕೆದಾರರಿಗೆ ಅನುಕೂಲವಾಗಲಿದೆ. ಜಿಮೇಲ್ ಅಕೌಂಟ್ ಫುಲ್ ಆದಾಗ ಅದರಲ್ಲಿನ ಮೇಲ್​ಗಳನ್ನು ಡಿಲೀಟ್​ ಮಾಡುವುದು ಅನಿವಾರ್ಯ. ಇಲ್ಲದಿದ್ದರೆ ನಿಮಗೆ ಹೊಸ ಮೇಲ್​ಗಳು ಬರುವುದಿಲ್ಲ. ಇಂಥ ಸಂದರ್ಭದಲ್ಲಿ ಅನೇಕ ಬಾರಿ ಮೊಬೈಲ್ ಮೂಲಕವೇ ಮೇಲ್​ಗಳನ್ನು ಡಿಲೀಟ್ ಮಾಡಬೇಕಾಗುತ್ತದೆ. ಆದರೆ ಹೀಗೆ ಮಾಡುವಾಗ ಒಂದೊಂದೇ ಮೇಲ್​ ಅನ್ನು ಪ್ರತ್ಯೇಕವಾಗಿ ಸೆಲೆಕ್ಟ್ ಮಾಡಬೇಕಿತ್ತು. ಈಗ ಹೊಸ ವೈಶಿಷ್ಟ್ಯ ಜಾರಿಯಾದ ನಂತರ ನೀವು ಒಮ್ಮೆಲೇ 50 ಮೇಲ್​ಗಳನ್ನು ಸೆಲೆಕ್ಟ್ ಮಾಡಿಕೊಂಡು ಏಕಕಾಲಕ್ಕೆ ಅವುಗಳನ್ನು ಡಿಲೀಟ್ ಮಾಡಬಹುದು.

Also Read  ಮೀನು ಮುಟ್ಟಿದ ಬಳಿಕ ಕೈ ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿ ➤ ವೈದ್ಯರ ಮಾತು ಕೇಳಿ ಕುಸಿದುಬಿದ್ದ!

error: Content is protected !!
Scroll to Top