ಯುವಕನಿಂದ ಅನುಚಿತ ವರ್ತನೆ – ದೂರು ದಾಖಲು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಆ.07. ಮನೆಯ ಕೋಣೆಯಲ್ಲಿ ಕಿಟಕಿಯ ಬಳಿ ಕುಳಿತು ಓದುತ್ತಿರುವಾಗ ವೇಳೆ ಆರೋಪಿಯೋರ್ವ ಮನೆಯ ಹೊರಗೆ ನಿಂತು ಕಿಟಕಿಯ ಮೂಲಕ ಮೈಗೆ ಕೈ ಹಾಕಿ ಅನುಚಿತವಾಗಿ ವರ್ತಿಸಿದ ಘಟನೆ ವರದಿಯಾಗಿದೆ.


ಆರೋಪಿಯು ಕೆಲವು ಸಮಯಗಳಿಂದ ದೂರದಾರರನ್ನು ಪ್ರೀತಿಸುವುದಾಗಿ ಹೇಳುತ್ತಾ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದು, ಕಿಟಕಿಯ ಮೂಲಕ ಮೈಗೆ ಕೈಹಾಕಿ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಈ ಕುರಿತು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top