ಶಂಕಿತ ಉಗ್ರರ ಖಾತೆಗೆ ವಿದೇಶದಿಂದ ಹಣ ವರ್ಗಾವಣೆ – ಪೊಲೀಸ್ ಮೂಲಗಳಿಂದ ಮಹತ್ವದ ಮಾಹಿತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 28. ಬೆಂಗಳೂರು, ಮೈಸೂರು ಹಾಗೂ ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಬಾಂಬ್‌ ಸ್ಪೋಟಿಸಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರಿಗೆ ವಿದೇಶದಿಂದ ಸುಮಾರು 15 ಲಕ್ಷ ರೂ. ಬಂದಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಪುರಾವೆ ಸಹಿತ ಮಾಹಿತಿ ಲಭಿಸಿರುವ ಕುರಿತು ವರದಿಯಾಗಿದೆ.

ದುಬೈ ಮತ್ತು ಇತರೆ ದೇಶಗಳಲ್ಲಿರುವ ವಿದೇಶಿಯರು ಪ್ರಕರಣದ ಪ್ರಮುಖ ಆರೋಪಿ ಜುನೇದ್‌ ಅಹಮ್ಮದ್‌ ಮೂಲಕ ಶಂಕಿತರ ಖಾತೆಗಳಿಗೆ ಹಣ ಜಮೆ ಮಾಡಿದ್ದಾರೆ. ಶಂಕಿತ ಉಗ್ರರಾದ ಸೈಯದ್‌, ಜಾಹೀದ್‌, ಸೈಯದ್‌ ಮುದಾಸೀರ್‌, ಫೈಜಲ್‌ ಹಾಗೂ ಮೊಹಮ್ಮದ್‌ ಉಮರ್‌ ಖಾತೆಗೆ ಹಣ ಬಂದಿರುವುದಕ್ಕೆ ದಾಖಲೆಗಳು ಲಭಿಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

Scroll to Top